ಹಾಲಿನ ಬದಲು ಬಾದಾಮಿ, ಅಕ್ಕಿ, ಸೋಯಾ ನೀರು ಮಾರಾಟ: ಅಮುಲ್ ಗರಂ
ಹಾಲು ಎಂದು ಹೇಳಿ ಬಾದಾಮಿ, ಸೋಯಾ, ಓಟ್ಸ್ ಮತ್ತು ಅಕ್ಕಿಯ ರಸವನ್ನು ಮಾರಾಟ ಮಾಡುವ ಕಂಪನಿಗಳ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ ಅಮುಲ್
ನವದೆಹಲಿ(ನ.10): ಬಾದಾಮಿ, ಸೋಯಾ, ಓಟ್ಸ್ ಮತ್ತು ಅಕ್ಕಿಯ ರಸವನ್ನೇ ಹಾಲೆಂದು ಮಾರಾಟ ಮಾಡುತ್ತಿರುವ ಕಂಪನಿಗಳ ವಿರುದ್ಧ ಅಮುಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಂತಹ ಅಕ್ರಮ ತಡೆಯಲು ಕೋರ್ಟ್ ಮೊರೆ ಹೋಗುವುದಾಗಿ ಹೇಳಿದೆ.
10 ಕೋಟಿ ಡೈರಿ ಕೈಷಿಕರು ಸಾಮಾಜಿಕ ಮತ್ತು ಆರ್ಥಿಕ ಬದುಕಿಗೆ ಹಾಲನ್ನೇ ಅವಲಂಬಿಸಿದ್ದಾರೆ. ಅವರೆಲ್ಲರೂ ಈ ತಪ್ಪು ಮಾಹಿತಿಯ ವಿರುದ್ಧ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ. ಕೆಲವು ಎನ್‌ಜಿಒಗಳು ಇದರಲ್ಲಿ ಭಾಗಿಯಾಗಲಿದೆ ಎಂದು ಅಮುಲ್ ಎಂಡಿ ಆರ್.ಎಸ್. ಸೋಧಿ ಹೇಳಿದ್ದಾರೆ.
ಅನ್ನ, ಬೇಳೆ ಸಾರು ಜೊತೆ ಒಂದಿಷ್ಟು ತುಪ್ಪ ಸವಿದರೆ?
ರಾಸಾಯನಿಕವಾಗಿ ಬಲವರ್ಧಿತ ಪಾನೀಯಗಳನ್ನು ತಯಾರಿಸಿ ಹಾಲು ಎಂದು ಮಾರಾಟ ಮಾಡಲಾಗುತ್ತಿದೆ. ಆದರೆ ಅವು ಹಾಲಿಗಿಂತ ಉತ್ತಮ ಎಂದು ಸಾಬೀತುಪಡಿಸುವ ಯಾವುದೇ ಕ್ಲಿನಿಕಲ್ ಟೆಸ್ಟ್‌ಗಳಿಲ್ಲ ಎಂದಿದ್ದಾರೆ.
ಆಗಸ್ಟ್‌ನಲ್ಲಿ ಇಂತ ಕೃತಕ ಪಾನೀಯಗಳಿಗೆ ಹಾಲು ಎಂಬ ಮದ ಬಳಸುವುದನ್ನು ನಿಷೇಧಿಸಿ ಭಾರತದ ಆಹಾರ ಸುರಕ್ಷಾ ಪ್ರಾಧಿಕಾರ ಕರಡು ಸೂಚನೆಗಳನ್ನು ಸಲ್ಲಿಸಿತ್ತು. ಭಾರತದಲ್ಲಿ ಬಹಳಷ್ಟು ದೇಶೀಯ ಮತ್ತು ಫಾರಿನ್ ಕಂಪನಿಗಳು ಪ್ಲಾಂಟ್ ಬೇಸ್ಡ್ ಪಾನೀಯಗಳಿಗೆ ಹಾಲಿನ ಹೆಸರನ್ನು ನೀಡಿ ಮಾರಾಟ ಮಾಡುತ್ತಿವೆ ಎಂದು ಸೋಧಿ ತಿಳಿಸಿದ್ದಾರೆ.