Asianet Suvarna News Asianet Suvarna News

Amazing Facts: ಬಬಲ್ ಗಮ್ಮಿಗ್ಯಾಕೆ ಸಾಮಾನ್ಯವಾಗಿ ಪಿಂಕ್ ಕಲರ್ ಇರುತ್ತೆ?

ಇಡೀ ದಿನ ಅದೇನು ಜಗಿತಿರ್ತೀಯಾ ಅಂತಾ ದೊಡ್ಡವರು ಕೇಳ್ತಿರ್ತಾರೆ. ಮಕ್ಕಳಿಂದ ಹಿಡಿದು ಯುವಕರವರೆಗೆ ಎಲ್ಲರನ್ನು ಸೆಳೆದಿರೋದು ಈ ಬಬಲ್ ಗಮ್. ಗುಳ್ಳೆ ಮಾಡ್ತಾ ಟೈಂ ಪಾಸ್ ಮಾಡುವ ಜನರು ಚೂಯಿಂಗ್ ಗಮ್ ಹಾಗೂ ಬಬಲ್ ಗಮ್ ಬಗ್ಗೆ ಒಂದಿಷ್ಟು ತಿಳಿದಿರಬೇಕು. 
 

Amazing Facts About Bubble Gum History roo
Author
First Published Jun 6, 2023, 12:30 PM IST

ಅನೇಕರು ಬಾಯನ್ನು ಖಾಲಿ ಬಿಡೋದಿಲ್ಲ. ಬಾಯಲ್ಲಿ ಸದಾ ಬಬಲ್ ಗಮ್ ಆಡ್ತಾ ಇರಬೇಕು. ಮಾರುಕಟ್ಟೆಯಲ್ಲಿ ಕೂಡ ಸಾಕಷ್ಟು ವೆರೈಟಿ ಬಬಲ್ ಗಮ್ ಗಳನ್ನು ನೀವು ನೋಡ್ಬಹುದು. ಎಲ್ಲ ಬಬಲ್ ಗಮ್ ರುಚಿಯನ್ನು ಕೂಡ ನೀವು ನೋಡಿರಬಹುದು. ನಿಮ್ಮಿಷ್ಟದ ಈ ಬಬಲ್ ಗಮ್ ಯಾವಾಗ ಶುರುವಾಯ್ತು? ಅದ್ರ ಬಣ್ಣ ಯಾವಾಗ್ಲೂ ಗುಲಾಬಿಯಾಗಿಯೇ ಏಕೆ ಇರುತ್ತೆ ಅನ್ನೋದನ್ನು ನಾವಿಂದು ಹೇಳ್ತೇವೆ.

ಬಬಲ್ ಗಮ್ (Bubble Gum) ಇತಿಹಾಸ :  ಬಬಲ್ ಗಮ್ ಶುರುವಾಗಿದ್ದು 1928ರಲ್ಲಿ. ಬಬಲ್  ಗಮ್ ತಯಾರಿಸುವ ಕಲ್ಪನೆ ಮೊದಲ ಬಾರಿ ಫಿಲಡೆಲ್ಫಿಯಾದ ಫ್ಲೇರ್ (Flair) ಕಾರ್ಪೊರೇಶನ್‌ನ ಸಂಸ್ಥಾಪಕ ಫ್ರಾಂಕ್ ಎಚ್. ಫ್ಲೇರ್ ಅವರ ಮನಸ್ಸಿಗೆ ಬಂದಿತ್ತು. ತಾನು ತಯಾರಿಸುವ ವಸ್ತುವಿನ ಮೇಲೆ ಜನರಿಗೆ ಕುತೂಹಲ ಹುಟ್ಟಬೇಕು ಎನ್ನುವ ಬಯಕೆ ಫ್ರಾಂಕ್ ಎಚ್ ಪ್ಲೇರ್ ನದ್ದಾಗಿತ್ತು. ಆತನೇ ಮೊದಲ ಬಾರಿ ಬಬಲ್ ಗಮ್ ತಯಾರಿಸಿದಾಗ ಆತನ ಆಸೆ ಈಡೇರಿತು. ಜನರನ್ನು ಆಕರ್ಷಿಸಲು ಅದು ಯಶಸ್ವಿಯಾಯ್ತು. ಫ್ರಾಂಕ್ ಮೊದಲ ಬಬಲ್ ಗಮ್ ಅನ್ನು 1906 ರಲ್ಲಿ ತಯಾರಿಸಿದ್ದ. ಆದ್ರೆ ಅದು ಯಶಸ್ವಿಯಾಗಿರಲಿಲ್ಲ. ಎರಡನೇ ಬಾರಿ ತಯಾರಿಸಿದ ಬಬಲ್ ಗಮ್  ಎಲ್ಲರ ಗಮನ ಸೆಳೆದಿತ್ತು. ಫ್ರಾಂಕ್ ಎಚ್ ಫ್ಲೇರ್ ಈ ಬಬಲ್ ಗಮ್ ಗೆ ಡಬಲ್ ಬಬಲ್ ಎಂದು ನಾಮಕರಣ ಮಾಡಿದ್ದ. 

ಊಟ ಮಾಡಿದ ನಂತರ ಈ ತಪ್ಪುಗಳನ್ನು ಮಾಡಲೇಬೇಡಿ!

ಒಂದೇ ದಿನದಲ್ಲಿ ಖಾಲಿಯಾಗಿದ್ದು ಡಬಲ್ ಬಬಲ್ : ಬಬಲ್ ಗಮ್ ಅನ್ನು ಯಶಸ್ವಿಯಾಗಿ ತಯಾರಿಸಿದ ನಂತರ ಫ್ಲೇರ್ ಅದರ ಮೊದಲ ಬ್ಯಾಚ್ ಅನ್ನು 1928 ರಲ್ಲಿ ಸ್ಥಳೀಯ ಅಂಗಡಿಗೆ ಕಳುಹಿಸಿದ್ದ. ಅಚ್ಚರಿಯ ಸಂಗತಿ ಎಂದರೆ ಒಂದೇ ದಿನದಲ್ಲಿ ಇಡೀ ಬ್ಯಾಚ್ ಸೋಲ್ಡ್ ಔಟ್ ಆಗಿತ್ತು. ಬಬಲ್ ಗಮ್ ಮಾರಾಟವನ್ನು ಹೆಚ್ಚಿಸಲು ಮಾರಾಟಗಾರನಿಗೆ ಬಬಲ್ ಗಮ್ ಗುಳ್ಳೆ ಮಾಡುವುದನ್ನು ಕಲಿಸಲಾಗಿತ್ತು. ಅದನ್ನು ಆತ ಗ್ರಾಹಕರಿಗೆ ತಿಳಿಸಿದ್ದ. 

ಗುಲಾಬಿ (Pink) ಬಣ್ಣದಲ್ಲೇ ಬಬಲ್ ಗಮ್ ಇರೋಕೆ ಕಾರಣವೇನು? : ನೀವು ಯಾವುದೇ ಕಂಪನಿ ಬಬಲ್ ಗಮ್ ಖರೀದಿ ಮಾಡಿ, ಅದ್ರ ಬಣ್ಣ ಗುಲಾಬಿಯಾಗಿರುತ್ತದೆ. ಇದಕ್ಕೆ ವಿಶೇಷ ಕಾರಣವೇನಿಲ್ಲವಾದ್ರೂ ಹಿಂದಿನಿಂದ ಬಂದ ಪದ್ಧತಿಯನ್ನು ಜನರು ಈಗ್ಲೂ ಪಾಲಿಸ್ತಿದ್ದಾರೆ. ಹಿಂದೆ ಕಾರ್ಖಾನೆಗಳಲ್ಲಿ ಕೆಂಪು ಬಣ್ಣ ಬಿಟ್ಟರೆ ಮತ್ತೆ ಯಾವುದೇ ಕೃತಕ ಆಹಾರದ ಬಣ್ಣ ಲಭ್ಯವಿರಲಿಲ್ಲ. ಮೊದಲ ಬಾರಿ ಬಬಲ್ ಗಮ್ ಗೆ ಬೂದು ಬಣ್ಣದ್ದಾಗಿತ್ತು. ಅದು ನೋಡಲು ಚೆನ್ನಾಗಿ ಕಾಣ್ತಿರಲಿಲ್ಲ. ಅದಕ್ಕೆ ಕೃತಕ ಕೆಂಪು ಬಣ್ಣವನ್ನು ಸೇರಿಸಲಾಯ್ತು. ಆಗ ಅದು ಗುಲಾಬಿ ಬಣ್ಣಕ್ಕೆ ತಿರುಗಿತ್ತು. ಹಾಗಾಗಿ ಅವರು ಗುಲಾಬಿ ಬಣ್ಣವನ್ನು ಬಬಲ್ ಗಮ್ ಗೆ ಹಾಕಿದ್ದರು. ಈಗ ಸಾಕಷ್ಟು ಬಣ್ಣ ಸಿಗ್ತಿದ್ದರೂ ಬಬಲ್ ಗಮ್ ಬಣ್ಣವನ್ನು ಬದಲಾಯಿಸಲಾಗಿಲ್ಲ.

Healthy Food : ಶರೀರ ಕೂಲ್ ಆಗಿರಬೇಕಂದ್ರೆ ಈ ಜ್ಯೂಸ್ ಕುಡಿರಿ

ಬಬಲ್ ಗಮ್ ಹಾಗೂ ಚೂಯಿಂಗ್ ಗಮ್ ಎರಡೂ ಭಿನ್ನ ಹೇಗೆ? : ಬಬಲ್ ಗಮ್ ಹಾಗೂ ಚೂಯಿಂಗ್ ಗಮ್ ಬಗ್ಗೆ ಬಹುತೇಕರು ಕನ್ಫೂಸ್ ಮಾಡಿಕೊಳ್ತಾರೆ. ಎರಡನ್ನೂ ಜಗಿಯಬೇಕು. ಎರಡೂ ಸಿಹಿಯಾಗಿರುತ್ತದೆ. ಹಾಗಾಗಿ ಎರಡಕ್ಕೂ ಒಂದೇ ಹೆಸರು ಹೇಳ್ತಾರೆ. ಆದ್ರೆ ಇದು ತಪ್ಪು. ಬಬಲ್ ಗಮ್ ಹಾಗೂ ಚೂಯಿಂಗ್ ಗಮ್ ತಯಾರಿಸುವ ವಿಧಾನ ಬೇರೆ ಬೇರೆ. ಬಬಲ್ ಗಮ್, ಚೂಯಿಂಗ್ ಗಮ್ ಗಿಂತ ಹೆಚ್ಚು ಗಮ್ ಬೇಸ್ ಹೊಂದಿರುತ್ತದೆ. ಬಾಯಿಂದ ಗುಳ್ಳೆಯನ್ನು ಊದಲು ಸಹಾಯ ಆಗುವಂತೆ ಬಬಲ್ ಗಮ್ ವಿನ್ಯಾಸಗೊಳಿಸಲಾಗಿದೆ. ನೀವು ಗಮ್ ಅಗೆದು, ಬಾಯಿಂದ ಗುಳ್ಳೆಗಳನ್ನು ಮಾಡ್ತಾ ಆನಂದಿಸಬೇಕೆಂದ್ರೆ ಚೂಯಿಂಗ್ ಗಮ್ ಖರೀದಿ ಮಾಡ್ಬೇಡಿ. ಬಬಲ್ ಗಮ್ ಖರೀದಿ ಮಾಡಿ. 
 

Follow Us:
Download App:
  • android
  • ios