Healthy Foods: ರಾತ್ರಿ ಹೊತ್ತು ತಿನ್ನೋ ಆಹಾರದ ಕಡೆ ಇರಲಿ ಗಮನ!
ಉತ್ತಮ ಆರೋಗ್ಯಕ್ಕೆ ಬೆಳಗಿನ ಉಪಹಾರದ ಜೊತೆ ರಾತ್ರಿ ಊಟ ಕೂಡ ಬಹಳ ಮುಖ್ಯ. ರಾತ್ರಿ ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡಬೇಕು. ಜೊತೆಗೆ ಯಾವ ಆಹಾರ ತಿನ್ಬೇಕು ಎಂಬುದು ಗೊತ್ತಿರಬೇಕು. ಎಲ್ಲ ರೀತಿಯ ಆಹಾರ ಸೇವನೆ ಮಾಡಲು ರಾತ್ರಿ ಸೂಕ್ತವಲ್ಲ.
ಬೆಳಿಗ್ಗೆ ರಾಜನಂತೆ, ಮಧ್ಯಾಹ್ನ ಮಂತ್ರಿಯಂತೆ ಹಾಗೂ ಸಂಜೆ ಭಿಕ್ಷುಕನಂತೆ ಆಹಾರ ಸೇವನೆ ಮಾಡ್ಬೇಕು ಎಂಬ ಸಂಗತಿ ಬಹುತೇಕರಿಗೆ ತಿಳಿದಿದೆ. ಬೆಳಿಗ್ಗೆ ಉಪಹಾರ ಸೇವನೆ ಅತ್ಯಗತ್ಯ. ಇದು ಇಡೀ ದಿನ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಹಾಗೆಯೇ ರಾತ್ರಿ ಕಡಿಮೆ ಆಹಾರ ಸೇವನೆ ಅಥವಾ ಆಹಾರ ಸೇವನೆ ಮಾಡದಿರುವುದು ಬಹಳ ಒಳ್ಳೆಯದು ಎನ್ನಲಾಗುತ್ತದೆ. ಆದ್ರೆ ಇದು ತಪ್ಪು. ರಾತ್ರಿ ಆಹಾರ ಸೇವನೆ ಕೂಡ ಬಹಳ ಮುಖ್ಯ. ಸಂಜೆ 7 ಗಂಟೆಯೊಳಗೆ ಆಹಾರ ತಿನ್ನಲು ಆದ್ಯತೆ ನೀಡ್ಬೇಕು. ತಜ್ಞರ ಪ್ರಕಾರ, ರಾತ್ರಿ ಆಹಾರ ಸೇವನೆ ಮಾಡುವವರು ಕೆಲ ಸಂಗತಿಯನ್ನು ತಿಳಿದಿರಬೇಕು. ರಾತ್ರಿ ಹೊಟ್ಟೆ ತುಂಬ ಆಹಾರ ತಿನ್ನುವುದು ಒಳ್ಳೆಯದಲ್ಲ. ಹಾಗೆಯೇ ರಾತ್ರಿ ಬೇಗ ಜೀರ್ಣವಾಗಬಲ್ಲ ಆಹಾರವನ್ನೇ ತಿನ್ನಬೇಕು. ಕೆಲ ಆಹಾರ ಸೇವನೆಯಿಂದ ಆರೋಗ್ಯ ಹಾಳಾಗುತ್ತದೆ.
ರಾತ್ರಿ (Night) ಏನನ್ನು ತಿನ್ನಬಾರದು ಎಂಬುದು ಪ್ರತಿಯೊಬ್ಬರಿಗೂ ತಿಳಿದಿರಬೇಕು. ಕೆಲವರು ರಾತ್ರಿ ಊಟದಲ್ಲಿ ಮಾಂಸ, ಚಿಕನ್, ಮೊಸರು ಮತ್ತು ಪರಾಠಾ ಸೇವಿಸುತ್ತಾರೆ. ಇದು ಸಂಪೂರ್ಣವಾಗಿ ತಪ್ಪು. ಆಯುರ್ವೇದ (Ayurveda) ತಜ್ಞರ ಪ್ರಕಾರ, ರಾತ್ರಿ ಆಹಾರ ಲಘುವಾಗಿರಬೇಕು. ಕಫ ದೋಷಕ್ಕೆ ಕಾರಣವಾಗುವ ಕೆಲ ಆಹಾರವನ್ನು ರಾತ್ರಿ ತಿನ್ನಬಾರದು. ನಾವಿಂದು ಕಫ ದೋಷದ ಅಸಮತೋಲನಕ್ಕೆ ಕಾರಣವಾಗುವ ಆಹಾರ (Food) ಯಾವುದು ಎಂಬುದನ್ನು ಹೇಳ್ತೇವೆ.
ರಾತ್ರಿ ಈ ಆಹಾರ ಸೇವಿಸ್ಬೇಡಿ :
ಮೊಸರು (Curd): ಊಟವೆಂದ್ಮೇಲೆ ಮೊಸರು ಇರ್ಲೇಬೇಕು ಎನ್ನುವವರಿದ್ದಾರೆ. ರಾತ್ರಿ ಅನ್ನದ ಜೊತೆ, ಪರಾಠ ಜೊತೆ ಇಲ್ಲವೆ ರೊಟ್ಟಿ ಜೊತೆ ಕೂಡ ಮೊಸರನ್ನು ಸೇವನೆ ಮಾಡ್ತಾರೆ. ಹೊಟ್ಟೆ ತಂಪಾಗಿರುತ್ತೆ ಎನ್ನುವ ಕಾರಣಕ್ಕೆ ಮೊಸರು ಬಳಸುವವರು ಹೆಚ್ಚು. ಆಯುರ್ವೇದದ ಪ್ರಕಾರ, ಮೊಸರು ಕಫ ಮತ್ತು ಪಿತ್ತವನ್ನು ಹೆಚ್ಚಿಸುತ್ತದೆ. ಮೊಸರಿನ ಸೇವನೆಯಿಂದ ಕೆಮ್ಮು, ಗಂಟಲು ನೋವು, ಗಂಟಲಿನಲ್ಲಿ ಕಿರಿಕಿರಿಯಂತಹ ಸಮಸ್ಯೆ ಜಾಸ್ತಿಯಾಗುತ್ತದೆ. ರಾತ್ರಿ ಮೊಸರು ತಿನ್ನುವ ಬದಲು ಮಜ್ಜಿಗೆ ಸೇವನೆ ಮಾಡಿದ್ರೆ ಒಳ್ಳೆಯದು ಎನ್ನುತ್ತಾರೆ ಆಯುರ್ವೇದ ತಜ್ಞರು.
Healthy Food: ಕೆಮ್ಮು ಕಮ್ಮಿ ಆಗ್ತಿಲ್ವಾ? ಹುರಿದ ಈರುಳ್ಳಿ ಆಗುತ್ತೆ ಮದ್ದು
ಮೈದಾ ಪದಾರ್ಥ : ಮೈದಾವನ್ನು ಸಿಹಿ ವಿಷ ಎಂದು ಕರೆಯಲಾಗುತ್ತದೆ. ಏಕೆಂದರೆ ಇದರಲ್ಲಿ ಫೈಬರ್ ಹೆಚ್ಚಾಗಿ ಕಂಡು ಬರುತ್ತದೆ. ಮೈದಾ ಅತಿಯಾದ ಸೇವನೆಯಿಂದ ಮಲಬದ್ಧತೆ, ಪೈಲ್ಸ್ ಮುಂತಾದ ಕೆಲ ಸಮಸ್ಯೆ ಎದುರಾಗುತ್ತದೆ. ರಾತ್ರಿ ಮೈದಾ ಜೀರ್ಣವಾಗುವುದು ಕಷ್ಟ. ಹಾಗಾಗಿ ಯಾವುದೇ ಕಾರಣಕ್ಕೂ ರಾತ್ರಿ ಮೈದಾ ಆಹಾರವನ್ನು ಸೇವಿಸಲು ಹೋಗ್ಬೇಡಿ.
ಗೋಧಿ (Wheat) ಆಹಾರ : ನಮ್ಮಲ್ಲಿ ರಾತ್ರಿ ಗೋಧಿ ರೊಟ್ಟಿ ತಿನ್ನುವವರ ಸಂಖ್ಯೆ ಹೆಚ್ಚಿದೆ. ಆಯುರ್ವೇದದ ಪ್ರಕಾರ ಗೋಧಿ ಭಾರ. ಗೋಧಿ ಜೀರ್ಣವಾಗಲು ಸಮಯ ಬೇಕು. ರಾತ್ರಿ ಸಮಯದಲ್ಲಿ ನೀವು ಗೋಧಿ ಸೇವನೆ ಮಾಡಿದ್ರೆ ಅದು ವಿಷಕಾರಿ. ಹಾಗೆಯೇ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.
ಸಲಾಡ್ (Salad) : ತೂಕ ಇಳಿಸಿಕೊಳ್ಳುವುದ್ರಿಂದ ಹಿಡಿದು ಆರೋಗ್ಯ ವೃದ್ಧಿಯವರೆಗೆ ಎಲ್ಲ ವಿಷ್ಯದಲ್ಲಿ ತಜ್ಞರು ಸಲಾಡ್ ಸೇವನೆ ಮಾಡುವಂತೆ ಸಲಹೆ ನೀಡ್ತಾರೆ ನಿಜ. ಆದ್ರೆ ಈ ಸಲಾಡನ್ನು ರಾತ್ರಿ ಸೇವನೆ ಮಾಡಬಾರದು. ಯಾಕೆದ್ರೆ ಹಸಿ ತರಕಾರಿಗಳು ಶೀತ ಸಮಸ್ಯೆಯನ್ನು ಹೆಚ್ಚಿಸುತ್ತದೆ. ವಾತ ಸಮಸ್ಯೆಗೆ ಕಾರಣವಾಗುತ್ತದೆ.
ಎಣ್ಣೆ ಅಥವಾ ಬೆಣ್ಣೆ: ಹಾರ್ಟ್ ಪೇಷೆಂಟ್ಸ್‌ಗೆ ಯಾವುದು ಉತ್ತಮ?
ಸಿಹಿ ಪದಾರ್ಥದಿಂದ (Sweets) ದೂರವಿರಿ : ಊಟದ ನಂತ್ರ ಸಿಹಿ ಬೇಕು ಎನ್ನುವವರಿದ್ದಾರೆ. ಹಾಗಾಗಿಯೇ ಅನೇಕರು ರಾತ್ರಿ ಊಟದ ನಂತ್ರ ಸಿಹಿ ತಿಂಡಿ ಅಥವಾ ಚಾಕೋಲೇಟ್ ತಿನ್ನುತ್ತಾರೆ. ಸಿಹಿ ಪದಾರ್ಥ ಕೂಡ ಭಾರವಾಗಿರುತ್ತದೆ. ಇದು ಸುಲಭವಾಗಿ ಜೀರ್ಣವಾಗುವುದಿಲ್ಲ. ಕಫದ ಸಮಸ್ಯೆಯನ್ನು ಇದು ಹೆಚ್ಚು ಮಾಡುತ್ತದೆ. ಹಾಗಾಗಿ ರಾತ್ರಿ ಸಿಹಿ ಆಹಾರ ಸೇವನೆ ಮಾಡಬಾರದು.