ಭಾರತೀಯರ ಸಾಮಾನ್ಯ ಆಹಾರ ಚಪಾತಿ. ಪ್ರತಿ ಮನೆಯಲ್ಲಿಯೂ ಇದನ್ನು ಮಾಡುತ್ತಾರೆ. ಅದರಲ್ಲಿಯೂ ಮನೆಯಲ್ಲಿ ಮಧುಮೇಹವಿದ್ದರೆ ಇದೇ ಫುಡ್. ಗೋಧಿಯಲ್ಲಿ ಹಲವಾರು ಪೌಷ್ಟಿಕಾಂಶವಿದ್ದು, ಆರೋಗ್ಯಕ್ಕೆ ಒಳಿತೆನ್ನುತ್ತಾರೆ. 

  • ಚಪಾತಿಯಲ್ಲಿ ವಿಟಮಿನ್ ಬಿ, ಇ, ಸತು, ಅಯೋಡಿನ್, ಮ್ಯಾಗ್ನೀಸ್, ಸಿಲಿಕಾನ್, ಪೊಟ್ಯಾಷಿಯಮ್, ಕ್ಯಾಲ್ಸಿಯಂ ಮತ್ತು ಇನ್ನಿತರ ಅಂಶಗಳಿವೆ. ಇವು ಮನುಷ್ಯ ಆರೋಗ್ಯದಿಂದಿರಲು ಸಹಕರಿಸುತ್ತದೆ. 
  • ಸ್ಕಿನ್‌ಗೂ ಗೋಧಿ ಬೇಕು. ಇದರಲ್ಲಿರುವ ಸತು ಮತ್ತು ಇನ್ನಿತರ ಅಂಶಗಳು ಸ್ಕಿನ್ ಆರೋಗ್ಯದಿಂದ ಇರಲು ಸಹಕರಿಸುತ್ತದೆ. ಇದರಿಂದ ಸ್ಕಿನ್ ಗ್ಲೋ ಆಗುತ್ತದೆ. 
  • ಪ್ರತಿದಿನ ಮುಂಜಾನೆ 2 ಮೊದಲಿನ ದಿನ ಉಳಿದ ಚಪಾತಿಯನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಬೇಕು. ಇದು ರಕ್ತದೊತ್ತಡವನ್ನು ನಿವಾರಿಸುತ್ತದೆ. 

  • ಚಪಾತಿ ಮತ್ತು ಹಾಲು ಸೇವನೆ ಗ್ಯಾಸ್ಟ್ರಿಕ್‌ಗೆ ಒಳ್ಳೆ ಮದ್ದು. 
  • ಚಪಾತಿಯ ಪೌಷ್ಟಿಕಾಂಶಗಳು ಫಿಟ್ ಆಗಿರಲು ಸಹಕರಿಸುತ್ತದೆ. ಅಲ್ಲದೆ ಹೆಚ್ಚು ಸುಸ್ತು, ಆಯಾಸ ಉಂಟಾಗುವುದಿಲ್ಲ. 
  • ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಆರೋಗ್ಯದಿಂದಿರಲು ಸಹಕರಿಸುತ್ತದೆ. 
  • ಗೋಧಿ ಚಪಾತಿ ಸೇವಿಸಿದರೆ ಬೇಗ ಹಸಿವಾಗುವುದಿಲ್ಲ. ಜೊತೆಗೆ ಕೊಲೆಸ್ಟ್ರಾಲ್ ದೇಹ ಸೇರುವುದಿಲ್ಲ. 

ತ್ವಚೆಗೂ, ಹೃದಯಕ್ಕೂ ಮೀನೆಂಬ ಮದ್ದು....