20 year old pure ghee: ಅಜ್ಜನ ಹಳೆಯ ಮನೆಯಲ್ಲಿ ಬರೋಬ್ಬರಿ 20 ವರ್ಷಗಳ ಹಿಂದಿನ ತುಪ್ಪದ ಡಬ್ಬಿಯೊಂದು ಪತ್ತೆಯಾಗಿದೆ. ಇಷ್ಟು ವರ್ಷಗಳಾದರೂ ಈ ತುಪ್ಪ ಕೆಡದೆ ಇರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಶುದ್ಧ ತುಪ್ಪವನ್ನು ಸರಿಯಾಗಿ ಸಂರಕ್ಷಿಸಿದರೆ ದಶಕಗಳ ಕಾಲ ಕೆಡುವುದಿಲ್ಲ ಎಂದು ಎಐ ಕೂಡ ಸ್ಪಷ್ಟನೆ.

ತಾತ-ಮುತ್ತಾನ ಕಾಲದಲ್ಲಿ ತುಪ್ಪಕ್ಕೆ ಬರವಿರಲಿಲ್ಲ. ಅನ್ನ, ರೊಟ್ಟಿ ಜೊತೆಗೆ ಧಾರಾಳವಾಗಿ ತುಪ್ಪ ಹಾಕಿ ಬಡಿಸುತ್ತಿದ್ದರು. ನೀವು ಎಂಭತ್ತು ತೊಂಭತ್ತರ ದಶಕದಲ್ಲಿ ಹುಟ್ಟಿದವರಾಗಿದ್ದರೆ ಅಂದು ತುಪ್ಪ ಎಷ್ಟೊಂದು ಯೆಥೇಚ್ಛವಾಗಿ ಸಿಗುತ್ತಿತ್ತು ಎಂಬುದು ನೆನಪು ಬಾರದೆ ಇರದು. ಅಜ್ಜಿಯ ಕಾಲದ ತುಪ್ಪ ಎಂದರೆ ಈಗಿನಂತ ಕಲಬೆರಕೆಯದ್ದಲ್ಲ. ಬೆಳಗಿನ ಜಾವ ತುಪ್ಪ ಕಾಯಿಸಿದಾಗ ಬಂಗಾರ ಬಣ್ಣದ ತುಪ್ಪದ ವಾಸನೆ ಅಡುಗೆ ಮನೆ ದಾಟಿ ನೆರೆಮನೆಗಳಿಗೆಲ್ಲ ಘಮ ತಲುಪುತ್ತಿತ್ತು. ಇನ್ನು ಹಬ್ಬದ ಸಮಯದಲ್ಲಿ ಹೋಳಿಗೆ ಹಾಕಿದರಂತೂ ಅದರ ರುಚಿಯೇ ಬೇರೆ. ಎಷ್ಟು ವರ್ಷವಾದರೂ ತುಪ್ಪ ಕೆಡುತ್ತಿರಲಿಲ್ಲ. ಹಿರಿಯರು ತುಪ್ಪವನ್ನು ಮಣ್ಣಿನ ಪಾತ್ರೆಯಲ್ಲಿ ಭದ್ರವಾಗಿ ಮುಚ್ಚಿಡುತ್ತಿದ್ದರು. ಹಾಗೆ ಮುಚ್ಚಿಟ್ಟ ತುಪ್ಪದ ಗಡಿಗೆಯೊಂದು ಬರೋಬ್ಬರಿ 20 ವರ್ಷಗಳ ನಂತರ ಪತ್ತೆಯಾಗಿದೆ! ಅದರೆ ಇಷ್ಟು ವರ್ಷಗಳ ನಂತರವೂ ತುಪ್ಪ ಒಂಚೂರು ಕೆಡದೆ ಇರುವುದು ಅಚ್ಚರಿಗೆ ಕಾರಣವಾಗಿದೆ.

ಇದನ್ನೂ ಓದಿ:ಹಳತಾದಷ್ಟೂ ಮಹೌಷಧ, ಎಕ್ಸ್‌ಪೈರಿ ಡೇಟ್ ಇಲ್ಲದ ಅಮೃತ, ತುಪ್ಪದ ಬಗ್ಗೆ ರಾಘವೇಶ್ವರ ಸ್ವಾಮೀಜಿ ಅಚ್ಚರಿಯ ಮಾಹಿತಿ!

ಅಜ್ಜನ ಹಳೆಯ ಮನೆಗೆ ಬಂದ ಕುಟುಂಬಸ್ಥರಿಗೆ ತುಪ್ಪದ ಡಬ್ಬ ಕಂಡು ಅಚ್ಚರಿ

ಹೌದು. ಇಂಥದ್ದೊಂದು ಅಚ್ಚರಿ ಹುಟ್ಟಿಸುವ ಘಟನೆಗೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಚರ್ಚೆಗೆ ಕಾರಣವಾಗಿದೆ. ವ್ಯಕ್ತಿಯೊಬ್ಬರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಹೇಳಿದಂತೆ, ಅಜ್ಜನ ಮನೆಯಲ್ಲಿ ಸಿಕ್ಕಿರುವ ತುಪ್ಪದ ಡಬ್ಬಿ ಬರೋಬ್ಬರಿ ಇಪ್ಪತ್ತು ವರ್ಷದ ಹಿಂದಿನದ್ದು ಎನ್ನಲಾಗಿದೆ. 2006ರಲ್ಲಿ ಅಜ್ಜ ತೀರಿಕೊಂಡಿದ್ದರು. ಕುಟುಂಬದವರು ಮತ್ತೆ ಆ ಮನೆಗೆ ಹೋಗಿರಲಿಲ್ಲ. ಇತ್ತೀಚೆಗೆ ಹೋದಾಗ ಅಜ್ಜನ ಹಳೆಯ ಮನೆಯಲ್ಲಿ ಈ ಡಬ್ಬ ಸಿಕ್ಕಿದೆ. ಮೊದಲಿಗೆ ಇದೊಂದು ಯಾವುದಾದರೂ ಚಟ್ನಿ ಡಬ್ಬ ಆಗಿರಬಹುದು ಎಂದುಕೊಂಡಿದ್ದರು. ಆದರೆ ಕುತೂಹಲಕ್ಕೆ ಡಬ್ಬ ತೆಗೆದು ನೋಡಿದಾಗ ಅಚ್ಚರ, ಡಬ್ಬದಲ್ಲಿ ತುಪ್ಪ ಕಂಡುಬಂದಿದೆ. ಇಷ್ಟು ವರ್ಷವಾದರೂ ಒಂಚೂರು ಕೆಡದೆ ಇದ್ದಿದ್ದೂ ಅಚ್ಚರಿ ಮೂಡಿಸಿದೆ.

Scroll to load tweet…

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟಿಜನ್ ಇದಕ್ಕೆ ತರಹೇವಾರಿ ಪ್ರತಿಕ್ರಿಯಿಸಿದ್ದಾರೆ. ಕೆಲವರು, 'ಸಾಂಪ್ರದಾಯಿಕ ಆಹಾರ ಪದಾರ್ಥಗಳು ಎಷ್ಟು ವರ್ಷಗಳ ಕಾಲ ಬಾಳಿಕೆ ಬರುತ್ತವೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ' ಎಂದಿದ್ದಾರೆ. ಇನ್ನು ಕೆಲವರು ಡಬ್ಬದಲ್ಲಿರುವುದು ನಿಜವಾಗಿಯೂ ತುಪ್ಪವೇ? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಖಾಲಿ ಹೊಟ್ಟೆಗೆ ತುಪ್ಪ ತಿನ್ನುವ ಅಭ್ಯಾಸ ನಿಮಗಿದೆಯಾ? ದೇಹಕ್ಕೆ ಸಿಗುತ್ತಂತೆ ಸಿಕ್ಕಾಪಟ್ಟೆ ಲಾಭ!

ಷ್ಟು ವರ್ಷಗಳಾದರೂ ತುಪ್ಪ ಹಾಳಾಗುವುದಿಲ್ಲವೇ?

ಈ ಬಗ್ಗೆ ವ್ಯಕ್ತಿಯೊಬ್ಬರು ತಕ್ಷಣ ಗ್ರೋಕ್ ಎಐಗೆ, 'ಇಷ್ಟು ವರ್ಷಗಳಾದರೂ ತುಪ್ಪ ಹಾಳಾಗುವುದಿಲ್ಲವೇ?' ಎಂದು ಪ್ರಶ್ನಿಸಿಯೇ ಬಿಟ್ಟಿದ್ದಾರೆ.

Scroll to load tweet…

ಇದಕ್ಕೆ ಉತ್ತರಿಸಿದ Grok AI ಶುದ್ಧ ತುಪ್ಪದಲ್ಲಿ ನೀರಿನ ಅಂಶ ಹಾಲಿನ ಘನ ಪದಾರ್ಥಗಳು ಇರುವುದಿಲ್ಲ. ಹೀಗಾಗಿ ತುಪ್ಪದಲ್ಲಿ ಬ್ಯಾಕ್ಟಿರಿಯಾ, ಶೀಲಿಂಧ್ರ ಬೆಳೆಯುವ ಸಾಧ್ಯತೆ ಕಡಿಮೆ, ಗಾಳಿಯಾಡದಂತೆ ಡಬ್ಬದಲ್ಲಿ ಮುಚ್ಚಿ, ತಂಪಾದ, ಕತ್ತಲೆಯ ಸ್ಥಳದಲ್ಲಿಟ್ಟರೆ ತುಪ್ಪ 10-20 ವರ್ಷಗಳವರೆಗೆ ಅಥವಾ ಅದಕ್ಕಿಂತಲೂ ಹೆಚ್ಚುವರ್ಷಗಳವರೆಗೂ ಕೆಡುವುದಿಲ್ಲ. ಆಯುರ್ವೇದದಲ್ಲಿ ಹತ್ತು ವರ್ಷಕ್ಕಿಂತ ಹಳೆಯ ತುಪ್ಪವನ್ನು ಪುರಾಣಘೃತ ಎಂದು ಕರೆಯಲಾಗುತ್ತದೆ. ಇದನ್ನು ಔಷಧೀಯ ಉದ್ದೇಶಗಳಿಗೆ ಬಳಸಲಾಗುತ್ತದೆ. ಆದರೆ ತಿನ್ನುವ ಮೊದಲು ಅದರ ರುಚಿ, ವಾಸನೆಯನ್ನ ಪರೀಕ್ಷಿಸಬೇಕು. ಕೆಟ್ಟ ವಾಸನೆ, ಅಥವಾ ಅಸಹಜ ರುಚಿ ಇದ್ದರೆ ತಿನ್ನಬಾರದು.

ವಿಡಿಯೋದಲ್ಲಿ ತೋರಿಸಿರುವಂತೆ ಡಬ್ಬಿಯ ಮೇಲ್ಭಾಗದಲ್ಲಿ ಕಾಣುವ ಅಚ್ಚು ಹೊರಗಿನಿಂದ ಬಂದಿರಬಹುದು. ಒಳಗಿನ ತುಪ್ಪ ಗಟ್ಟಿಯಾಗಿ, ಶುದ್ಧವಾಗಿ ಕಾಣುತ್ತಿದೆ ಎಂದು ತಿಳಿಸಿದೆ.