Asianet Suvarna News Asianet Suvarna News

FIFA World Cup: ಮೊರೊಕ್ಕೊ ವಿರುದ್ಧ ಸೋಲು; ಬೆಲ್ಜಿಯಂನಲ್ಲಿ ಹಿಂಸಾಚಾರ; ಹಲವರು ವಶಕ್ಕೆ

ಬೆಲ್ಜಿಯಂನ ಹಲವು ನಗರಗಳಲ್ಲಿರುವ ಮೊರೊಕ್ಕೊ ಮೂಲದ ಜನರು ಸಂಭ್ರಮಿಸಿದ್ದು ಸಹ ಸ್ಥಳೀಯ ಅಭಿಮಾನಿಗಳನ್ನು ಕೆರಳಿಸಿತು ಎನ್ನಲಾಗಿದೆ. ಹಿಂಸಾಚಾರ ತಡೆಯಲು ಸ್ಥಳೀಯ ಆಡಳಿತ ಕೆಲ ಪ್ರದೇಶಗಳಲ್ಲಿ ಕರ್ಫ್ಯೂ ಸಹ ಜಾರಿ ಮಾಡಿದೆ.

riots in brussels over belgiums world cup loss to morocco many detained ash
Author
First Published Nov 28, 2022, 11:54 AM IST

ಬ್ರಸೆಲ್ಸ್‌: ಮೊರೊಕ್ಕೊ (Morocco) ವಿರುದ್ಧ ಬೆಲ್ಜಿಯಂ (Belgium) ತಂಡ ಕತಾರ್‌ನಲ್ಲಿ (Qatar) ನಡೆಯುತ್ತಿರುವ ಫುಟ್ಬಾಲ್‌ ವಿಶ್ವಕಪ್‌ನಲ್ಲಿ (FIFA World Cup) ಆಘಾತಕಾರಿ ಸೋಲು ಅನುಭವಿಸಿದ ಬಳಿಕ, ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್‌ನಲ್ಲಿ (Brussels) ಸಿಟ್ಟಿಗೆದ್ದ ಅಭಿಮಾನಿಗಳು ರಸ್ತೆಗಿಳಿದು ಹಿಂಸಾಚಾರದಲ್ಲಿ (Riots) ಭಾಗಿಯಾಗಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿದ್ದಾರೆ. ಕಾರು ಮತ್ತು ಕೆಲವು ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೆಂಕಿ ಹಚ್ಚಿ ಗಲಭೆಗೆ ಪ್ರಚೋದಿಸಿದ್ದು, ಈ ಸಂಬಂಧ ಬೆಲ್ಜಿಯಂ ಪೊಲೀಸರು 1 ಡಜನ್‌ ಜನರನ್ನು ವಶಕ್ಕೆ ಪಡೆದಿದ್ದು, ಒಬ್ಬರನ್ನು ಬಂಧಿಸಿದ್ದಾರೆ. 

ಬೆಲ್ಜಿಯಂ ರಾಜಧಾನಿಯಾದ್ಯಂತ ಹಲವಾರು ಸ್ಥಳಗಳಲ್ಲಿ ಹಿಂಸಾಚಾರ ವರದಿಯಾಗಿದ್ದು, ಅಲ್ಲಿ ಡಜನ್‌ಗಟ್ಟಲೆ ಫುಟ್ಬಾಲ್‌ ಅಭಿಮಾನಿಗಳು (Football Fans) ಘರ್ಷಣೆ ನಡೆಸಿದ್ದಾರೆ. ಈ ಪೈಕಿ ಕೆಲವರು ಮೊರೊಕ್ಕೊ ಧ್ವಜವನ್ನು (Flag) ಹೊತ್ತುಕೊಂಡಿದ್ದರು ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಪೊಲೀಸರು ಗಲಭೆ ನಿಯಂತ್ರಿಸಲು ಜಲ ಫಿರಂಗಿ ಮತ್ತು ಅಶ್ರುವಾಯು ಪ್ರಯೋಗ ಮಾಡಿದ್ದಾರೆ.

ಇದನ್ನು ಓದಿ: FIFA WORLD CUP ಅರ್ಜೆಂಟೀನಾ ಬಳಿಕ ಮತ್ತೊಂದು ಶಾಕ್, 2ನೇ ಶ್ರೇಯಾಂಕಿತ ಬೆಲ್ಜಿಯಂ ತಂಡ ಮಣಿಸಿದ ಮೊರಕ್ಕೊ!

ರಸ್ತೆಯಲ್ಲಿದ್ದ ಕಾರುಗಳ ಮೇಲೆ ಇಟ್ಟಿಗೆಗಳನ್ನು ಎಸೆದ ಕಿಡಿಗೇಡಿಗಳು, ಅಂಗಡಿಗಳಿಗೆ ಬೆಂಕಿ ಹಚ್ಚುವ ಪ್ರಯತ್ನ ನಡೆಸಿದರು. ಹಿಂಸಾಚಾರ ತಡೆಯಲು ಸ್ಥಳೀಯ ಆಡಳಿತ ಕೆಲ ಪ್ರದೇಶಗಳಲ್ಲಿ ಕರ್ಫ್ಯೂ ಸಹ ಜಾರಿ ಮಾಡಿದೆ. ಬೆಲ್ಜಿಯಂನ ಹಲವು ನಗರಗಳಲ್ಲಿರುವ ಮೊರೊಕ್ಕೊ ಮೂಲದ ಜನರು ಸಂಭ್ರಮಿಸಿದ್ದು ಸಹ ಸ್ಥಳೀಯ ಅಭಿಮಾನಿಗಳನ್ನು ಕೆರಳಿಸಿತು ಎನ್ನಲಾಗಿದೆ.

ಇನ್ನು, ಈ ಹಿಂಸಾಚಾರದ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದು, ಸಂಜೆ 7 ಗಂಟೆಯ ಸುಮಾರಿಗೆ ಶಾಂತತೆ ಮರಳಿತು ಮತ್ತು ಸಂಬಂಧಪಟ್ಟ ವಲಯಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಗಸ್ತುಗಳು ಜಾರಿಯಲ್ಲಿವೆ ಎಂದು ಪೊಲೀಸ್ ವಕ್ತಾರ ಇಲ್ಸೆ ವ್ಯಾನ್ ಡಿ ಕೀರೆ ಹೇಳಿದರು.

ಇದನ್ನೂ ಓದಿ: Penguin Toby: ಅರ್ಜೆಂಟೀನಾದ ವಿರುದ್ಧ ಸೌದಿಯ ಗೆಲುವನ್ನು ಪ್ರೆಡಿಕ್ಟ್‌ ಮಾಡಿದ್ದ ಪೆಂಗ್ವಿನ್‌!

ಹಾಗೂ ಗಲಭೆಕೋರರು ಪೈರೋಟೆಕ್ನಿಕ್ ವಸ್ತುಗಳು, ಸ್ಪೋಟಕಗಳು, ಕೋಲುಗಳನ್ನು ಬಳಸಿದರು ಮತ್ತು ಸಾರ್ವಜನಿಕ ಹೆದ್ದಾರಿಯಲ್ಲಿ ಬೆಂಕಿ ಹಚ್ಚಿದರು ಎಂದೂ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಪಟಾಕಿಯಿಂದ ಪತ್ರಕರ್ತರೊಬ್ಬರ ಮುಖಕ್ಕೆ ಗಾಯವಾಗಿದೆ. ಈ ಕಾರಣಗಳಿಗಾಗಿ ಪೊಲೀಸರ ಮಧ್ಯಸ್ಥಿಕೆಯಲ್ಲಿ ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗದೊಂದಿಗೆ ಮುಂದುವರಿಯಲು ನಿರ್ಧರಿಸಲಾಯಿತು ಎಂದೂ ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್‌ ಪೊಲೀಸರು ತಿಳಿಸಿದ್ದಾರೆ.

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಎಲ್ಲರ ಲೆಕ್ಕಾಚಾರ ತಲೆಕೆಳಗಾಗುತ್ತಿದ್ದು, ಅಗ್ರ ಸ್ಥಾನದಲ್ಲಿರುವ ಬಲಿಷ್ಠ ತಂಡಗಳು ಮಕಾಡೆ ಮಲಗುತ್ತಿದೆ. ಕೆಲ ದಿನಗಳ ಹಿಂದೆ ಅರ್ಜೆಂಟೀನಾ ತಂಡ ಸೌದಿ ಅರೇಬಿಯಾ ವಿರುದ್ಧ ಮುಗ್ಗರಿಸಿ ತೀವ್ರ ಆಘಾತಕ್ಕೆ ಒಳಗಾಗಿದೆ.  ಇದರ ಬೆನ್ನಲ್ಲೇ ನಿನ್ನೆ ವಿಶ್ವದ 2ನೇ ಶ್ರೇಯಾಂಕಿತ ಬೆಲ್ಜಿಯಂ ತಂಡಕ್ಕೆ ಶಾಕ್ ಎದುರಾಗಿದ್ದು, ಮೊರೊಕ್ಕೊ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ 0-2 ಅಂತರದಲ್ಲಿ ಸೋಲು ಕಂಡಿತ್ತು ಸದ್ಯ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೊರಕ್ಕೊ 22ನೇ ಸ್ಥಾನ ಗಳಿಸಿದೆ. ಈ ಆಘಾತಕಾರಿ ಸೋಲಿನ ಬೆನ್ನಲ್ಲೇ ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್‌ನಲ್ಲಿ ಹಲವೆಡೆ ಹಿಂಸಾಚಾರ ಸಂಭವಿಸಿದ್ದು, ಈ ಹಿನ್ನೆಲೆ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ. 

ಇದನ್ನೂ ಓದಿ: ಅರ್ಜೆಂಟೀನಾ ಮಣಿಸಿದ ಸೌದಿಗೆ ಭರ್ಜರಿ ಗಿಫ್ಟ್, ತಂಡದ ಪ್ರತಿಯೊಬ್ಬರಿಗೆ 9 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರು!

Follow Us:
Download App:
  • android
  • ios