ಸಾಗರೋಪಾದಿಯಲ್ಲಿ ಅರ್ಜೆಂಟೀನಾ ಆಟಗಾರರಿದ್ದ ಬಸ್ ಮುತ್ತಿದ ಫ್ಯಾನ್ಸ್, ಕೊನೆಗೆ ಹೆಲಿಕಾಪ್ಟರ್ ಬಳಸಿ ಸ್ಥಳಾಂತರ..!

ಫಿಫಾ ವಿಶ್ವಕಪ್ ಟೂರ್ನಿ ಗೆದ್ದು ಬೀಗಿದ ಅರ್ಜೆಂಟೀನಾಗೆ ತವರಿನಲ್ಲಿ ಭರ್ಜರಿ ಸ್ವಾಗತ
ಮುಂಜಾನೆ ಮೂರು ಗಂಟೆಯಿಂದಲೇ ಮೆಸ್ಸಿ ಪಡೆಯ ವಿಜಯಯಾತ್ರೆ ಆರಂಭ
ಸಾಗರೋಪಾದಿಯಲ್ಲಿ ರಸ್ತೆಗಿಳಿದು ಅರ್ಜೆಂಟೀನಾ ತಂಡವನ್ನು ಸ್ವಾಗತಿಸಿದ ಫುಟ್ಬಾಲ್ ಫ್ಯಾನ್ಸ್

Lionel Messi and Argentina Team Evacuated By Helicopter After Crowds Swarm Team Bus At 3 am video goes viral kvn

ಬ್ಯೂನಸ್ ಐರಿಸ್‌(ಡಿ.21): ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಫ್ರಾನ್ಸ್ ತಂಡವನ್ನು ಬಗ್ಗುಬಡಿದ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೀಗ ವಿಶ್ವ ಚಾಂಪಿಯನ್‌ ಅರ್ಜೆಂಟೀನಾಗೆ ತವರಿನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಅರ್ಜೆಂಟೀನಾ ತಂಡವನ್ನು ವಿಜಯಯಾತ್ರೆ ನಡೆಸುವಾಗ ರಸ್ತೆಯ ತುಂಬೆಲ್ಲಾ ಜನರು ಕಿಕ್ಕಿರಿದು ತುಂಬಿದ್ದರು. ಕೊನೆಗೆ ಲಿಯೋನೆಲ್ ಮೆಸ್ಸಿ ಹಾಗೂ ಅರ್ಜೆಂಟೀನಾ ತಂಡದ ಆಟಗಾರರನ್ನು ಹೆಲಿಕ್ಯಾಪ್ಟರ್ ಬಳಸಿ ಸ್ಥಳಾಂತರ ಮಾಡಲಾಯಿತು ಎಂದು ವರದಿಯಾಗಿದೆ.

ಹೌದು, ಮಂಗಳವಾರ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಬ್ಯೂಸನ್‌ ಐರಿಸ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಂಡಕ್ಕೆ ಕೆಂಪು ಹಾಸು ಹಾಸಿ ಸ್ವಾಗತಿಸಲಾಯಿತು. ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳತ್ತ ಕೈಬೀಸುತ್ತಾ ತೆರೆದ ವಾಹನ ಹತ್ತಿದ ಅರ್ಜೆಂಟೀನಾ ಆಟಗಾರರು ವಿಜಯ ಯಾತ್ರೆ ನಡೆಸಿದರು. ಬ್ಯೂನಸ್‌ ಐರಿಸ್‌ನ ಪ್ರಮುಖ ರಸ್ತೆಗಳಲ್ಲಿ ಯಾತ್ರೆ ಸಾಗಿತು. ಲಕ್ಷಾಂತರ ಮಂದಿ ಚಾಂಪಿಯನ್ನರನ್ನು ಭರಮಾಡಿಕೊಂಡರು. ಸಂಭ್ರಮಾಚರಣೆಗಾಗಿ ಮಂಗಳವಾರ ಅರ್ಜೆಂಟೀನಾದಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿತ್ತು.

FIFA World Cup: ಕತಾರ್‌ ವಿಶ್ವಕಪ್‌ ಸ್ಪೆಷನ್‌ ಎನಿಸಿದ್ದೇಕೆ?

ಫುಟ್ಬಾಲ್‌ ಕ್ರೀಡೆಯ ಆರಾಧಕರ ನಾಡಾದ ಅರ್ಜೆಂಟೀನಾದಲ್ಲಿ ಕಳೆದ ಮೂರುವರೆ ದಶಕಗಳಿಂದ ವಿಶ್ವಕಪ್‌ ಗೆಲ್ಲುವ ಕನಸು ಮರಿಚಿಕೆಯಾಗಿತ್ತು. ಆದರೆ ಈ ಬಾರಿ ನಡೆದ ಫಿಫಾ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಫ್ರಾನ್ಸ್ ವಿರುದ್ದ 4-2 ಅಂತರದ ಪೆನಾಲ್ಟಿ ಶೂಟೌಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಬರೋಬ್ಬರಿ 36 ವರ್ಷಗಳ ಬಳಿಕ ಫ್ರಾನ್ಸ್‌ ತಂಡವು ಫಿಫಾ ವಿಶ್ವಕಪ್ ಜಯಿಸುವಲ್ಲಿ ಯಶಸ್ವಿಯಾಗಿತ್ತು. ತವರಿನಲ್ಲಿ ಮೆಸ್ಸಿ ಪಡೆ ವಿಜಯಯಾತ್ರೆ ಆರಂಭಿಸುತ್ತಿದ್ದಂತೆಯೇ ಸಮರೋಪಾದಿಯಲ್ಲಿ ಅಭಿಮಾನಿಗಳು ಅರ್ಜೆಂಟೀನಾ ತಂಡವಿದ್ದ ಬಸ್‌ ಅನ್ನು ಸುತ್ತುವರೆದಿದ್ದರು. ಕೊನೆಗೆ ಬ್ರಿಡ್ಜ್‌ ಬಳಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಅಭಿಮಾನಿಯೊಬ್ಬ ಕೆಳಗೆ ಬಿದ್ದ ಘಟನೆಯನ್ನು ಬೆಳಕಿಗೆ ಬಂದಿತು. ಪರಿಸ್ಥಿತಿ ಕೈ ಮೀರುವ ಮುನ್ನ ಎಚ್ಚೆತ್ತುಕೊಂಡ ಅರ್ಜೆಂಟೀನಾ ಫುಟ್ಬಾಲ್ ಸಂಸ್ಥೆಯು ಹೆಲಿಕ್ಯಾಪ್ಟರ್ ಮೂಲಕ ಆಟಗಾರರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಿತು.

ತಪ್ಪಿದ ಅನಾಹುತ: ವಿಜಯ ಯಾತ್ರೆ ವೇಳೆ ಬಸ್‌ನ ಮೇಲ್ಭಾಗದಲ್ಲಿ ಕುಳಿತಿದ್ದ ಮೆಸ್ಸಿ ಹಾಗೂ ಇನ್ನೂ ಕೆಲ ಆಟಗಾರರು ಭಾರೀ ಅನಾಹುತದಿಂದ ಪಾರಾದರು. ಆಟಗಾರರ ತಲೆಗೆ ವಿದ್ಯುತ್‌ ತಂತಿ ತಗುಲುವ ಸಾಧ್ಯತೆ ಇತ್ತು. ಆಟಗಾರನೊಬ್ಬನ ಸಮಯಪ್ರಜ್ಞೆಯಿಂದಾಗಿ ಅನಾಹುತ ತಪ್ಪಿತು.

ನಿವೃತ್ತಿ ಇಲ್ಲ, ಚಾಂಪಿಯನ್‌ ಆಗಿಯೇ ಆಡುತ್ತೇನೆ: ಮೆಸ್ಸಿ

ದೋಹಾ: ಬಹುತೇಕ ಕೊನೆ ವಿಶ್ವಕಪ್‌ ಆಡಿದ ಲಿಯೋನೆಲ್‌ ಮೆಸ್ಸಿ, ವಿಶ್ವಕಪ್‌ ಬಳಿಕ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸುತ್ತಾರೆ ಎಂದು ಉಹಾಪೋಹ ಹರಡಿತ್ತು. ಇದನ್ನು ಸ್ವತಃ ಮೆಸ್ಸಿ ಅಲ್ಲಗಳೆದಿದ್ದು, ಈಗಲೇ ನಿವೃತ್ತಿ ಘೋಷಿಸಲ್ಲ. ಚಾಂಪಿಯನ್‌ ಆಗಿ ಅರ್ಜೆಂಟೀನಾ ಪರ ಇನ್ನಷ್ಟು ದಿನ ಆಡಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. 

‘ವಿಶ್ವಕಪ್‌ ಗೆಲ್ಲುವ ಕನಸು ನನಸಾಗಿದೆ. ಇದಕ್ಕಿಂತ ಇನ್ನೇನು ಬೇಕು. ಕೋಪಾ ಅಮೆರಿಕದ ಜೊತೆಗೆ ವಿಶ್ವಕಪ್‌ ಕೂಡಾ ಗೆದ್ದಿದ್ದೇನೆ. ದೇವರು ನನಗೆ ಈ ಉಡುಗೊರೆ ನೀಡುತ್ತಾರೆಂದು ಗೊತ್ತಿತ್ತು. ಇದೊಂದು ಅದ್ಭುತ ಕ್ಷಣ. ರಾಷ್ಟ್ರೀಯ ತಂಡದ ಭಾಗವಾಗಿರಲು ತುಂಬಾ ಸಂತೋಷವಾಗುತ್ತಿದೆ’ ಎಂದು ಫೈನಲ್‌ ಬಳಿಕ ಮೆಸ್ಸಿ ಪ್ರತಿಕ್ರಿಯಿಸಿದ್ದಾರೆ.

Latest Videos
Follow Us:
Download App:
  • android
  • ios