FIFA ವಿಶ್ವಕಪ್ ಟ್ರೋಫಿ ತಬ್ಬಿಕೊಂಡೇ ಮಲಗಿದ ಲಿಯೋನೆಲ್ ಮೆಸ್ಸಿ..!
ಐತಿಹಾಸಿಕ ಗೆಲುವಿನಿಂದಾಗಿ, ಲಿಯೋನೆಲ್ ಮೆಸ್ಸಿ ವಿಶ್ವಕಪ್ ವಿಜಯೋತ್ಸವವನ್ನು ಆಚರಿಸುತ್ತಿರುವ ಕೆಲವು ಅದ್ಭುತ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಲೇ ಇದ್ದು, ಮತ್ತು ಹಲವು ಜನರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಅರ್ಜೆಂಟೀನಾ (Argentina) ಫಿಫಾ ವಿಶ್ವಕಪ್ (FIFA World Cup) ಗೆದ್ದು ಸಂಭ್ರಮಿಸುತ್ತಿದೆ. ಈ ಹಿನ್ನೆಲೆ, ನಿಸ್ಸಂದೇಹವಾಗಿ ಲಿಯೋನೆಲ್ ಮೆಸ್ಸಿ (Lionel Messi) ಪ್ರಸ್ತುತ ವಿಶ್ವದ ಅತ್ಯಂತ ಸಂತೋಷದಾಯಕ ವ್ಯಕ್ತಿ ಎಂದು ಹೇಳಬಹುದು. ಭಾನುವಾರದಂದು ಅರ್ಜೆಂಟೀನಾ FIFA ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವುದರೊಂದಿಗೆ, ಸ್ಟಾರ್ ಫುಟ್ಬಾಲ್ ಆಟಗಾರ ಅತೀವ ಸಂತೋಷ ಮತ್ತು ಭಾವಪರವಶರಾಗಿದ್ದಾರೆ. ಮತ್ತು ಅವರ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ (Instagram) ಚಿತ್ರಗಳು ಅದಕ್ಕೆ ಪುರಾವೆಯಾಗಿದೆ. ಐತಿಹಾಸಿಕ ಗೆಲುವಿನಿಂದಾಗಿ, ಲಿಯೋನೆಲ್ ಮೆಸ್ಸಿ ವಿಶ್ವಕಪ್ ವಿಜಯೋತ್ಸವವನ್ನು ಆಚರಿಸುತ್ತಿರುವ ಕೆಲವು ಅದ್ಭುತ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಲೇ ಇದ್ದು, ಮತ್ತು ಹಲವು ಜನರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಅರ್ಜೆಂಟೀನಾದ ಸ್ಟಾರ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಂಗಳವಾರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 2 ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ, ಅವರು ಟ್ರೋಫಿ ಹಿಡಿದುಕೊಂಡೇ ಕಂಬಳಿ ಹೊದ್ದುಕೊಂಡು ಹಾಸಿಗೆ ಮೇಲೆ ಮಲಗಿದ್ದಾರೆ. ಇನ್ನು, ಎರಡನೇ ಚಿತ್ರದಲ್ಲಿ, ಅವರು ಹಾಸಿಗೆಯಲ್ಲಿರುವಾಗಲೇ ಫಿಫಾ ಟ್ರೋಫಿಯೊಂದಿಗೆ ಸಂತೋಷದಿಂದ ಪೋಸ್ ನೀಡುತ್ತಿದ್ದಾರೆ. ಈ ಚಿತ್ರಗಳನ್ನು ಹಂಚಿಕೊಂಡ ಲಿಯೋನೆಲ್ ಮೆಸ್ಸಿ, ಸ್ಪ್ಯಾನಿಷ್ ಭಾಷೆಯಲ್ಲಿ "ಗುಡ್ ಮಾರ್ನಿಂಗ್" ಎಂದು ಬರೆದಿದ್ದು, ಜೊತೆಗೆ ನಗುವ ಕಣ್ಣುಗಳ ಎಮೋಜಿಯನ್ನೂ ಹಾಕಿದ್ದಾರೆ.
ಇದನ್ನು ಓದಿ: ಮೆಸ್ಸಿ ಹುಟ್ಟಿದ್ದು ಅಸ್ಸಾಂನಲ್ಲಿ ಎಂದು ಟ್ವೀಟ್ ಮಾಡಿ ಡಿಲೀಟ್ ಮಾಡಿದ ಕಾಂಗ್ರೆಸ್ ಸಂಸದ: ನೆಟ್ಟಿಗರಿಂದ ಟ್ರೋಲ್
ಈ ಪೋಸ್ಟ್ ಅನ್ನು ಇಲ್ಲಿ ನೋಡಿ:
ಈ ಪೋಸ್ಟ್ ಈಗಾಗಲೇ ಸುಮಾರು 1 ಕೋಟಿ 80 ಲಕ್ಷ ಲೈಕ್‌ಗಳನ್ನು ಗಳಿಸಿದೆ. ಇನ್ನು, ಇಂಟರ್ನೆಟ್ ಬಳಕೆದಾರರು ಹೃದಯ, ಬೆಂಕಿ ಮತ್ತು GOAT ಎಮೋಜಿಗಳನ್ನು ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರ, ''ಲೆಜೆಂಡ್ಸ್ ಸ್ಲೀಪ್ ವಿತ್ ಟ್ರೋಫೀಸ್'' ಎಂದು ಬರೆದಿದ್ದಾರೆ.
ಇದಕ್ಕೂ ಮೊದಲು, ಅರ್ಜೆಂಟೀನಾ ತಾರೆ ಅರ್ಜೆಂಟೀನಾಕ್ಕೆ ಹಿಂತಿರುಗುವ ವಿಮಾನದಲ್ಲಿ ಅಮೂಲ್ಯ ಟ್ರೋಫಿಯೊಂದಿಗೆ ತಮ್ಮ ಫೋಟೋ ಹಂಚಿಕೊಂಡಿದ್ದರು. ಫೈನಲ್‌ನಲ್ಲಿ 2 ಗೋಲು ಗಳಿಸಿದ ಮೆಸ್ಸಿ, ವಿಮಾನದಲ್ಲೂ ಫಿಫಾ ವಿಶ್ವಕಪ್ ಟ್ರೋಪಿ ಹಿಡಿದುಕೊಂಡು ಪೋಸ್ ನೀಡಿದ್ದರು.
ಅಲ್ಲದೆ, ಟ್ರೋಫಿ ಹಿಡಿದುಕೊಂಡೇ ವಿಮಾನದಿಂದ ಹೊರಹೋದ ಮೊದಲ ಆಟಗಾರ ಎನಿಸಿಕೊಂಡಿದ್ದು, ಅರ್ಜೆಂಟೀನಾ ತಂಡದ ಕೋಚ್ ಅವರ ಹಿಂದೆಯೇ ಇದ್ದರು.
ಸ್ಕಾ ಬ್ಯಾಂಡ್ ಲಾ ಮೊಸ್ಕಾ ಅವರ ವಿಶ್ವಕಪ್ ಥೀಮ್ ಹಾಡು "ಮುಚಾಚೋಸ್" ಮೊಳಗುತ್ತಿದ್ದ ನಡುವೆಯೇ, ಆಟಗಾರರು ರೆಡ್ ಕಾರ್ಪೆಟ್‌ನ ಉದ್ದಕ್ಕೂ ವಿಮಾನದಿಂದ ನೇರವಾಗಿ "ವಿಶ್ವ ಚಾಂಪಿಯನ್‌ಗಳು" ಮತ್ತು ಅದರ ಬದಿಯಲ್ಲಿ ಮೂರು ನಕ್ಷತ್ರಗಳೊಂದಿಗೆ ತೆರೆದ-ಮೇಲ್ಭಾಗದ ಬಿಳಿ ಬಣ್ಣದ ಬಸ್‌ಗೆ ತೆರಳಿದರು. ವಿಶ್ವಕಪ್ ವಿಜೇತರಿಗೆ ಅದ್ದೂರಿ ಸ್ವಾಗತ ನೀಡಲು ಸಾವಿರಾರು ಜನರು ಬೀದಿಗಿಳಿದಿದ್ದರು.
ಇದನ್ನೂ ಓದಿ: FIFA World Cup: ಲಿಯೋನೆಲ್ ಮೆಸ್ಸಿಗೆ ಗೋಲ್ಡನ್ ಬಾಲ್, ಎಂಬಾಪೆಗೆ ಗೋಲ್ಡನ್ ಬೂಟ್..!
ಕತಾರ್‌ನ ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ ಫೈನಲ್ ಪಂದ್ಯವನ್ನು ಅರ್ಜೆಂಟೀನಾ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವುದರೊಂದಿಗೆ FIFA ವಿಶ್ವಕಪ್ 2022 ಭಾನುವಾರ ಮುಕ್ತಾಯಗೊಂಡಿದೆ. ಪಂದ್ಯವು ಪೆನಾಲ್ಟಿ ಶೂಟೌಟ್ ಹಂತ ತಲುಪಿದ್ದು, 36 ವರ್ಷಗಳ ನಂತರ ಅರ್ಜೆಂಟೀನಾ ಗೆಲುವಿಗೆ ಕಾರಣವಾಯಿತು. ದೋಹಾದಲ್ಲಿ ನಡೆದ ಫೈನಲ್‌ನಲ್ಲಿ ಮೆಸ್ಸಿ 2 ಬಾರಿ ಗೋಲು ಗಳಿಸಿದರು ಮತ್ತು ಒಟ್ಟಾರೆ ವಿಶ್ವಕಪ್‌ನಲ್ಲಿ 7 ಕಪ್ ಗೆದ್ದರು. ಪ್ಲೇಯರ್ ಆಫ್ ದಿ ಟೂರ್ನಮೆಂಟ್‌ಗೆ ನೀಡುವ ಗೋಲ್ಡನ್ ಬಾಲ್ ಅನ್ನು ಸಹ ಪಡೆದರು. ಇನ್ನು, ಇದನ್ನು 2 ಬಾರಿ ಪಡೆದ ಮೊದ ಆಟಗಾರ ಎಂ ಕೀರ್ತಿಗೂ ಮೆಸ್ಸಿ ಪಾತ್ರರಾಗಿದ್ದಾರೆ. 2014ರಲ್ಲಿ ಅರ್ಜೆಂಟೀನಾ ಜರ್ಮನಿ ವಿರುದ್ಧ ಫೈನಲ್‌ನಲ್ಲಿ ಸೋಲನುಭವಿಸಿತ್ತು.
ಇದನ್ನೂ ಓದಿ: FIFA World Cup: ಫೈನಲ್ ಪಂದ್ಯದಲ್ಲಿ ವಿಶ್ವದಾಖಲೆ ನಿರ್ಮಿಸಿದ ಲಿಯೋನೆಲ್ ಮೆಸ್ಸಿ!