ಈ zodiacs ಸಂಬಂಧದಲ್ಲಿ ಹೊಣೆಗಾರಿಕೆ ತೆಗೆದುಕೊಳ್ಳುವಲ್ಲಿ ಮೊದಲಿಗರು!
ಸಂಬಂಧದಲ್ಲಿ ಏರುಪೇರುಗಳು ಉಂಟಾದಾಗ ತಮ್ಮ ತಪ್ಪುಗಳ ಬಗ್ಗೆ ಅಥವಾ ಸಂಬಂಧ ಉಳಿಸಿಕೊಳ್ಳುವ ಕುರಿತಾಗಿ ಜವಾಬ್ದಾರಿಯನ್ನು ಹೊಂದುವುದು ಮುಖ್ಯವಾಗುತ್ತದೆ. ಅಂತಹ ಗುಣವುಳ್ಳ ರಾಶಿ ಚಕ್ರಗಳು ಇಲ್ಲಿವೆ. ಇವರು ಸ್ವಭಾವತಹ ಹೊಣೆಗಾರಿಕೆಯನ್ನು ಹೊಂದುವ ಗುಣದವರಾಗಿರುತ್ತಾರೆ.
ಪ್ರತಿ ಸಂಬಂಧವು ಸುಸೂತ್ರವಾಗಿ ಮುನ್ನಡೆಯಲು ಮುಖ್ಯವಾಗಿ ಹೊಂದಿರಬೇಕಾದ ಗುಣವೆಂದರೆ ಹೊಣೆಗಾರಿಕೆ. ಒಬ್ಬರು ಇನ್ನೊಬ್ಬರ ಭಾವನೆಗಳಿಗೆ ಗೌರವ ನೀಡುವುದು, ಇನ್ನೊಬ್ಬರ ಧನಾತ್ಮಕ ಮತ್ತು ಋಣಾತ್ಮಕ ಎರಡನ್ನೂ ಸಮಾನವಾಗಿ ಜವಾಬ್ದಾರಿಯಿಂದ ಸ್ವೀಕರಿಸುವುದು ಎಲ್ಲವನ್ನೂ ಸರಿಯಾಗಿ ನಿಭಾಯಿಸುವ ಹೊಣೆಯನ್ನು ಇಬ್ಬರು ಸಂಗತಿಯರು ನಿರ್ವಹಿಸಬೇಕು. ಹೀಗೆ ಇಬ್ಬರ ನಡುವೆ ಜವಾಬ್ದಾರಿ ಸರಿಯಾಗಿ ನಿರ್ವಹಣೆಯಾಗದೆ ಒಬ್ಬರು ತಮ್ಮ ನಡವಳಿಕೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ ಅಂದಾಗ ಇನ್ನೊಬ್ಬರು ತಮ್ಮ ಭಾವನೆಗಳನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಸುಧಾರಿಸಲು ಪ್ರಯತ್ನಿಸುತ್ತಾರೆ. ಆದ್ದರಿಂದ, ಸಂಬಂಧದಲ್ಲಿ ಜವಾಬ್ದಾರರಾಗಿರುವುದು ಕೆಲವು ಜನರ ವ್ಯಕ್ತಿತ್ವದ ಲಕ್ಷಣಗಳಲ್ಲಿ ಒಂದಾಗಿದೆ. ಇಲ್ಲವಾದರೆ ಅಂತಹ ಸಂಬಂಧವು ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ.
ತಮ್ಮ ಸಂಗಾತಿಯ ವಿಷಯದಲ್ಲಿ ಅಚ್ಚುಕಟ್ಟಾಗಿ ಜವಾಬ್ದಾರಿಯನ್ನು ನಿರ್ವಹಿಸುವ ಗುಣವುಳ್ಳಂತಹ ರಾಶಿ ಚಕ್ರಗಳ ಪಟ್ಟಿ (List) ಇಲ್ಲಿದೆ ನೋಡಿ..
ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿಯವರು ತಮ್ಮ ಕ್ರಿಯೆಗಳಿಗೆ (Actions) ತಾವೇ ಹೊಣೆಗಾರಿಕೆಯನ್ನು ಹೊರುತ್ತಾರೆ. ಯಾಕೆಂದರೆ, ಅವರ ಪ್ರಕಾರ ಸಂಬಂಧದಲ್ಲಿ ಸಂತೋಷ ನೆಲೆಸಲು ಇದು ಮುಖ್ಯ ಎಂದು ನಂಬುತ್ತಾರೆ. ಇವರು ಇತರರ ಮೇಲೆ ದಯೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುವ ವಿಚಾರದಲ್ಲಿ ಬಹಳ ಖ್ಯಾತಿಯನ್ನು ಹೊಂದಿದ್ದಾರೆ. ಆದ್ದರಿಂದ, ಸಂಬಂಧವು ವಿಫಲಗೊಳ್ಳುತ್ತಿದೆ (Fail) ಅನ್ನುವ ಅಂಶವನ್ನು ಅವರು ಗಮನಿಸಿದಾಗ, ಯಾವುದೇ ಹಿಂಜರಿಕೆಯಿಲ್ಲದೆ ಅದರ ಜವಾಬ್ದಾರಿಯನ್ನು (Responsibility) ತೆಗೆದುಕೊಳ್ಳುತ್ತಾರೆ ಮತ್ತು ಇಬ್ಬರ ನಡುವಿನ ಬಂಧ ಮತ್ತು ಸಂಪರ್ಕವನ್ನು ಸರಿಪಡಿಸಲು ತಮ್ಮಿಂದ ಎಷ್ಟು ಸಾಧ್ಯವೋ ಅದೆಲ್ಲವನ್ನೂ ಮಾಡಲು ಪ್ರಯತ್ನಿಸುತ್ತಾರೆ.
ಇದನ್ನೂ ಓದಿ: Breakup ನೋವನ್ನು ಎದುರಿಸಲು ಸಿಂಹ ರಾಶಿಯವರಿಗೆ ಇಲ್ಲಿವೆ ಟಿಪ್ಸ್!
ಸಿಂಹ ರಾಶಿ (Leo)
ಸಿಂಹ ರಾಶಿಚಕ್ರದ ಜನರು ಅತ್ಯಂತ ಜವಾಬ್ದಾರಿಯುತ ವ್ಯಕ್ತಿಗಳಾಗಿರುತ್ತಾರೆ ಎಂಬುದಾಗಿ ಖ್ಯಾತಿಯನ್ನು (Famous) ಹೊಂದಿದ್ದಾರೆ. ಸಿಂಹ ರಾಶಿಯವರಿಂದ ನಿಮ್ಮನ್ನು ನಿರಾಸೆಗೊಳಿಸಲು ಆಗುವುದಿಲ್ಲ. ಅವರು ಕೇವಲ ತಮ್ಮ ಪಾಲುದಾರರ ಬೇಡಿಕೆ ಅಥವಾ ಮನವೊಲಿಕೆಗೆ ಜವಾಬ್ದಾರಿಯುತ ಸಂಬಂಧವನ್ನು ನಿರ್ವಹಿಸುವಂತೆ ವರ್ತಿಸುವುದಿಲ್ಲ, ಬದಲಿಗೆ ತಮ್ಮ ಸ್ವಂತ (Own) ಇಚ್ಛೆಯಿಂದ ಹಾಗೆ ಮಾಡುತ್ತಾರೆ. ಅವರ ಸಂಬಂಧಗಳು ಮತ್ತು ಹೊಣೆಗಾರಿಕೆಯ ಮೂಲಕ, ಅವರು ಆಗಾಗ್ಗೆ ಅಗತ್ಯವಿರುವ ಗುರಿಗಳನ್ನು ಸಾಧಿಸಲು (Achive) ಅಭಿವೃದ್ಧಿ ಹೊಂದುತ್ತಾರೆ. ತಮ್ಮ ಸಂಗಾತಿಯ ವಿಚಾರದಲ್ಲಿ ಬಹಳ ಕಲಾಜಿವಹಿಸುತ್ತಾರೆ.
ಮಕರ ರಾಶಿ (Capricorn)
ಮಕರ ರಾಶಿಯ ಜನರು ಹೆಚ್ಚು ಜವಾಬ್ದಾರಿಯುತ ವ್ಯಕ್ತಿಗಳಾಗಿದ್ದು, ಅವರ ಶ್ರದ್ಧೆ ಮತ್ತು ದೃಢವಾದ ಮನಸ್ಥಿತಿಯಿಂದಾಗ ಅವರ ಜೀವನದಲ್ಲಿ ಪ್ರಬುದ್ಧ (Mature), ಪ್ರಾಯೋಗಿಕ (Practical) ಮತ್ತು ಕೇಂದ್ರೀಕೃತ ವಿಧಾನವನ್ನು ಅನುಸರಿಸುತ್ತಾರೆ. ಸಂಬಂಧಗಳಲ್ಲಿ ಜವಾಬ್ದಾರರಾಗುವ ವಿಚಾರ ಬಂದಾಗ, ಅವರು ಅದೇ ತಂತ್ರವನ್ನು (Tricks) ಅಳವಡಿಸಿಕೊಳ್ಳುತ್ತಾರೆ. ತಮ್ಮ ಸಂಪರ್ಕಗಳನ್ನು ಸರಿಪಡಿಸಲು (Corrections) ಅವರು ಗಮನಾರ್ಹ ತ್ಯಾಗಗಳನ್ನು ಮಾಡಲು ಸಿದ್ಧರಿದ್ದಾರೆ. ಮತ್ತು ಅವರು ಯಾವಾಗಲೂ ತಮ್ಮ ಕಾರ್ಯಗಳ ಜವಾಬ್ದಾರಿಯನ್ನು ಸ್ವೀಕರಿಸುತ್ತಾರೆ ಮತ್ತು ತಾವು ಮಾಡಿದ ತಪ್ಪುಗಳನ್ನು (Mistakes) ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತಾರೆ.
ಇದನ್ನೂ ಓದಿ: Relationship Tips: ದಾಂಪತ್ಯದಲ್ಲಿನ ಒತ್ತಡ ನಿವಾರಣೆಗೆ ಇಲ್ಲಿದೆ ಸಲಹೆ!
ಧನು ರಾಶಿ (Sagittarius)
ತಮ್ಮ ಕಾರ್ಯಗಳ ಬಗ್ಗೆ ಗಮನ ಹರಿಸುವ ಜನರಲ್ಲಿ ಧನು ರಾಶಿಯ ಜನರು ಕೂಡ ಒಬ್ಬರು. ಅವರು ನಿರಂತರವಾಗಿ ಅವುಗಳನ್ನು ನಿರ್ವಹಿಸುತ್ತಾರೆ (Handle). ಹಾಗೆ ಮಾಡುವಾಗ, ಅವರು ತಮ್ಮ ಸಂಬಂಧದಲ್ಲಿ ತಾವು ವಹಿಸುವ ಪಾತ್ರದ ಉಸ್ತುವಾರಿ (Accountability) ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ. ಅವರ ಸಂಬಂಧದಲ್ಲಿ ಬದಲಾವಣೆ (Change) ಅಗತ್ಯವಿದ್ದಲ್ಲಿ, ಅದನ್ನು ಮಾಡಲು ಅವರು ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತಾರೆ. ಅದರ ಹೊಣೆಗಾರಿಕೆಯನ್ನು ಇತರರ ಮೇಲೆ ವಹಿಸುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ.