Asianet Suvarna News Asianet Suvarna News

ಸಂಬಂಧದಲ್ಲಿ ನಾಟಕವೆಲ್ಲಾ ಇವರಿಗೆ ಇಷ್ಟವೇ ಆಗೋಲ್ಲ!

ಸಂಬಂಧದಲ್ಲಿ ನಾಟಕ ಇರುವುದು ಸಾಮಾನ್ಯ. ಹಲವರು ಇದನ್ನು ಒಪ್ಪಿಕೊಂಡು ಮುನ್ನಡೆಯುತ್ತಾರೆ. ಆದರೆ, ಅತಿಯಾದ ನಾಟಕವು ಸಂಬಂಧದಲ್ಲಿ ಬಿರುಕು ಮೂಡುವಂತೆ ಮಾಡಬಹುದು. ಸಂಬಂಧದ ನಡುವೆ ಯಾವುದೇ ಕಾರಣಕ್ಕೂ ನಾಟಕವನ್ನು ಒಪ್ಪಿಕೊಳ್ಳದ ರಾಶಚಕ್ರಗಳ ಪಟ್ಟಿ ಇಲ್ಲಿದೆ..

Zodiacs which hate drama in relationship
Author
First Published Dec 10, 2022, 2:20 PM IST

 ಕೆಲವು ಜನರು ಸಂಬಂಧಗಳ ನಾಟಕವನ್ನು ಆನಂದಿಸುತ್ತಾರೆ. ಆದರೆ, ಇನ್ನೂ ಉಳಿದ ಜನರು ಸಂಬಂಧದ ನಾಟಕ ಜೀವನವನ್ನು ಎಂದಿಗೂ ಇಷ್ಟ ಪಡುವುದಿಲ್ಲ ಇದರೆಡೆಗೆ ತಮ್ಮ ಗಮನವನ್ನೂ ಹರಿಸುವುದಿಲ್ಲ. ಅವರು ಅನಗತ್ಯ ಭಾವನೆಗಳಿಂದ ದೂರ ಉಳಿಯಲು ಬಯಸುತ್ತಾರೆ. ಅತಿಯಾದ ಭಾವನಾತ್ಮಕ ಸಂಬಂಧವು ಇವರಲ್ಲಿ ಗೊಂದಲಮಯ ಕಿರಿಕಿರಿಯನ್ನು ಉಂಟುಮಾಡುತ್ತದೆ. ಆದ್ದರಿಂದ, ಇವರು ಯಾವುದೇ ನಾಟಕ ಪ್ರಕಾರದ ಸಂಬಂಧಗಳಿಗೆ ಆದ್ಯತೆ ನೀಡುವುದಿಲ್ಲ. ಇಂತಹ ಸ್ವಭಾವದ ಜನರು ಜನಿಸಿದ ರಾಶಿ ನಕ್ಷತ್ರಗಳು ಇಲ್ಲಿವೆ, ಇಂತಹ ವರ್ತನೆಗೆ ಅವರ ರಾಶಿಯ ಪರಿಣಾಮವೇ ಕಾರಣ. ಸಂಬಂಧದ ನಾಟಕವನ್ನು ದ್ವೇಷಿಸುವುದು ಮತ್ತು ಅದರಿಂದ ದೂರವಿರಲು ಎಲ್ಲ ಪ್ರಯತ್ನಗಳನ್ನು ಮಾಡುವ ರಾಶಿ ನಕ್ಷತ್ರಗಳು...

ಸಿಂಹ ರಾಶಿ (Leo)
ಸಿಂಹ ರಾಶಿಯವರು ಯಾವುದೇ ಸಂಬಂಧದ ನಾಟಕವನ್ನು (Relationship drama) ತಪ್ಪಿಸಲು ಬಯಸುತ್ತಾರೆ. ಏಕೆಂದರೆ, ಅವರು ತಮ್ಮ ಸಮಯ ಮತ್ತು ಶ್ರಮವನ್ನು ಅರ್ಥಹೀನ ಚಟುವಟಿಕೆಗಳಲ್ಲಿ ಕಳೆಯಲು ಬಯಸುವುದಿಲ್ಲ. ಈ ಜನರು ತಮ್ಮ ಜೀವನದಲ್ಲಿ ತಮ್ಮ ಗುರಿಗಳನ್ನು ಸಾಧಿಸುವ ಕಡೆಗೆ ಮೊದಲ ಆದ್ಯತೆ ನೀಡುತ್ತಾರೆ ಮತ್ತು ಅನಗತ್ಯವಾದ ಅವ್ಯವಸ್ಥೆಗಳನ್ನು ಉದ್ದೇಶಪೂರ್ವಕವಾಗಿ ಬೇರೆಡೆಗೆ ತಿರುಗಿಸಲು ಬಯಸುತ್ತಾರೆ.

ಇದನ್ನೂ ಓದಿ:Zodiac Signs: ಮಾತಲ್ಲೇ ಫ್ಲರ್ಟ್ ಮಾಡೋ ರಾಶಿಗಳಿವು, ಯಾರನ್ನೂ ಬೇಕಿದ್ರೂ ಪಟಾಯಿಸ್ತಾರೆ!

ಕನ್ಯಾರಾಶಿ (Virgo)
ಕನ್ಯಾ ರಾಶಿಯವರು ಗಮನ, ಶ್ರದ್ಧೆ ಮತ್ತು ಕಾರ್ಯ ದಕ್ಷತೆಗೆ ಹೆಸರುವಾಸಿ (Famous). ಅವರು ಗುರಿ ಸಾಧನೆಗೆ ಹಾಗೂ ತಾವು ಮಾಡುವ ಕೆಲಸದ ಕಡೆಗೆ ತಮ್ಮ ಎಲ್ಲಾ ಗಮನ ಹಾಗೂ ಶ್ರಮವನ್ನು ನೀಡುತ್ತಾರೆ. ಕನ್ಯಾ ರಾಶಿಯವರು ಯಾವುದೇ ಸನ್ನಿವೇಶದಲ್ಲಿ ನಾಟಕವನ್ನು ಇಷ್ಟ ಪಡುವುದಿಲ್ಲ, ಇದು ಅವರಲ್ಲಿ ಕಿರಿಕಿರಿಯನ್ನು (Irritation) ಉಂಟುಮಾಡುತ್ತಾರೆ. ಪರಿಣಾಮವಾಗಿ, ಈ ಜನರು ಅದನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ. ನಾಟಕೀಯ ಸಂದರ್ಭಗಳು ಅವರಿಗೆ ಅನಾನುಕೂಲತೆಯನ್ನುಂಟುಮಾಡುತ್ತವೆ, ಆದ್ದರಿಂದ ಅವರು ಅವರಿಂದ ದೂರವಿರಲು ಪ್ರಯತ್ನಿಸುತ್ತಾರೆ.

ಧನು ರಾಶಿ (Sagittarius)
ಧನು ರಾಶಿಯವರು ನಾಟಕವನ್ನು ತಪ್ಪಿಸಲು ಬಯಸುತ್ತಾರೆ. ಏಕೆಂದರೆ, ಅವರು ಹರ್ಷಚಿತ್ತದಿಂದ ಮತ್ತು ಆಶಾವಾದಿಗಳಾಗಿರುತ್ತಾರೆ (Optimist) ಹೀಗಾಗಿ ತಮ್ಮ ಒಳ್ಳೆಯ ಮೂಡನ್ನು ನಾಟಕದಿಂದ ಕಳೆದುಕೊಳ್ಳಲು ಬಯಸುವುದಿಲ್ಲ. ಮತ್ತು ತಮ್ಮ ಸಂಗಾತಿಯೊಂದಿಗೆ ಬಿಸಿಯಾದ ವಿವಾದದಿಂದ ಕೂಡ ಹೊರಬರುವ ಮೊದಳಿಗರಾಗಿರುತ್ತಾರೆ. ಅವರು ತಮ್ಮ ರೋಮಾಂಚಕ ಮತ್ತು ಸಾಹಸಮಯ ಜೀವನದಲ್ಲಿ ಎಷ್ಟು ಮುಳುಗಿದ್ದಾರೆಂದರೆ, ಅವರು ಅತಿಯಾದ ವೈಯಕ್ತಿಕ ನಾಟಕದಿಂದ ಯಾವುದೇ ರೀತಿಯ ವಿನೋದ (Enjoy) ಪಡೆಯುವುದಿಲ್ಲ.

ಇದನ್ನೂ ಓದಿ: ಅಬ್ಬಾ! ಈ ರಾಶಿಗಳು ತುಂಬಾ ಸೆಲ್ಫಿಶ್, ಅವರ ಜೊತೆ ಸ್ನೇಹ ಬೇಡ

ಕುಂಭ ರಾಶಿ (Aquarius)
ಕುಂಭ ರಾಶಿಯ ಜನರು ಯಾವುದೇ ಸಮಸ್ಯೆಯ ವಾಸ್ತವತೆಯ ಬಗ್ಗೆ ತಿಳಿಯಲು ಬಯಸುತ್ತಾರೆ, ಹಾಗಾಗಿ ಅಂತಹ ಸಮಯದಲ್ಲಿ ಸಂಬಂಧದಲ್ಲಿ ನಾಟಕವಾಡುವುದನ್ನು ದ್ವೇಷಿಸುತ್ತಾರೆ.ಹಾಗೂ ಅಂತಹ ಸಂದರ್ಭಗಳು ಎದುರಾದಾಗ ವಿಷಯಗಳನ್ನು ಮೂಲೆಗೆ ತಳ್ಳುವ ಮೂಲಕ ತಮ್ಮ ಸಂಗಾತಿಯೊಂದಿಗೆ (Partner) ಯಾವುದೇ ಅಹಿತಕರ ಸಂಭಾಷಣೆಗಳನ್ನು (Conversation) ತಪ್ಪಿಸಲು ಅವರು ಬಯಸುತ್ತಾರೆ. ಪ್ರಸ್ತುತ ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಸಹಾಯ ಮಾಡುವ ಯಾವುದೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಅವರು ಸಿದ್ಧರಾಗಿರುತ್ತಾರೆ.

ಮೀನ ರಾಶಿ (Pisces)
ನಾಟಕವನ್ನು ಮಾಡುವುದು ಅವರ ವೈಯಕ್ತಿಕ (Personal) ಮತ್ತು ವೃತ್ತಿಪರ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದು ಅವರ ಅಭಿಪ್ರಾಯ. ಹಾಗಾಗಿ ಅವರು ನಾಟಕವನ್ನು ಇಷ್ಟಪಡುವುದಿಲ್ಲ. ಮೀನ ರಾಶಿಯವರು ಕೇವಲ ನಾಟಕೀಯತೆಯ ವಿರೋಧಿ ಮಾತ್ರವಲ್ಲ, ಈ ನೀರಿನ ಚಿಹ್ನೆಯು ಅವರ ದೈನಂದಿನ ಜೀವನದಲ್ಲಿ ಶಾಂತತೆಯನ್ನು (Peace) ಗೌರವಿಸುತ್ತಾರೆ. ಅವರು ಅರ್ಥಹೀನ ಬಿಸಿಯಾದ ವಾದಗಳು (Argument) ಮತ್ತು ಸಂಬಂಧ ನಾಟಕದ ಒತ್ತಡವನ್ನು ತಡೆದುಕೊಳ್ಳಲು ಎಂದಿಗೂ ತಯಾರಿರುವುದಿಲ್ಲ.

Follow Us:
Download App:
  • android
  • ios