Zodiac Signs: ಮಾತಲ್ಲೇ ಫ್ಲರ್ಟ್ ಮಾಡೋ ರಾಶಿಗಳಿವು, ಯಾರನ್ನೂ ಬೇಕಿದ್ರೂ ಪಟಾಯಿಸ್ತಾರೆ!
ವಿನೋದದ ಮಾತುಗಳಿಂದ ಜನರನ್ನು ಸೆಳೆಯುವ ಗುಣ ಎಲ್ಲರಲ್ಲೂ ಇಲ್ಲ. ಕೆಲವೇ ಜನ ಮಾತ್ರ ಇದರಲ್ಲಿ ನಿಸ್ಸೀಮರಿರುತ್ತಾರೆ. ಈ ಐದು ರಾಶಿಗಳ ಜನ ತಾವು ಒಡನಾಡುವ ವ್ಯಕ್ತಿಗಳೊಂದಿಗೆ ಫ್ಲರ್ಟ್ ಮಾಡುತ್ತ, ತಮ್ಮ ಮಾತುಕತೆಯಿಂದ ಅವರನ್ನು ಸೆಳೆಯುವುದರಲ್ಲಿ ಮುಂದಿರುತ್ತಾರೆ.
ಮನುಷ್ಯರ ಒಬ್ಬರಿಂದ ಒಬ್ಬರಿಗೆ ನಡವಳಿಕೆಗಳು ಭಿನ್ನ. ಕೆಲವರು ಮಾತೇ ಆಡದೆ ಸುಮ್ಮನಿದ್ದುಬಿಡುವ ಸ್ವಭಾವ ಹೊಂದಿದ್ದರೆ, ಕೆಲವರಿಗೆ ಮಾತೇ ಬಂಡವಾಳ. ಇನ್ನು ಕೆಲವರು ಸಿಕ್ಕವರನ್ನೆಲ್ಲ ತಲೆ ತಿಂದು ಗೋಳು ಹೊಯ್ದುಕೊಳ್ಳುವಷ್ಟು ತರಲೆಯಾಗಿದ್ದರೆ, ಇನ್ನು ಕೆಲವರು ಮತ್ತೊಬ್ಬರ ಗೋಜಿಗೆ ಹೋಗಲು ಹಿಂಜರಿಯುತ್ತಾರೆ. ಇನ್ನೂ ಕೆಲವರಿರುತ್ತಾರೆ. ಅವರು ಮಾತಿನಲ್ಲೇ ಎಲ್ಲರನ್ನೂ ಮೋಡಿ ಮಾಡುತ್ತಾರೆ. ತಮಗೆ ಯಾರೇ ಸಿಕ್ಕರೂ ಅವರೊಂದಿಗೆ ಫ್ಲರ್ಟ್ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಫ್ಲರ್ಟ್ ಎಂದರೆ ಕೆಟ್ಟ ರೀತಿಯಲ್ಲೇನೂ ಪರಿಗಣಿಸಬೇಕಾಗಿಲ್ಲ. ತಮ್ಮ ಆಪ್ತ ವಿನೋದಮಯ, ಛೇಡಿಸುವ ಮಾತುಗಳ ಮೂಲಕ ಎದುರಿನವರನ್ನು ಸೆಳೆಯುತ್ತಾರೆ. ಒಳ್ಳೆಯ ಫ್ಲರ್ಟ್ ನಿಜಕ್ಕೂ ಒಳ್ಳೆಯದು. ದುರುದ್ದೇಶಕ್ಕಾಗಿ ಯಾರನ್ನಾದರೂ ಸೆಳೆಯುವುದು ಇವರ ಗುರಿಯಲ್ಲ. ಫ್ಲರ್ಟ್ ಇವರಿಗೆ ಒಂದು ರೀತಿ ಟೈಮ್ ಪಾಸ್ ಇದ್ದಂತೆ. ತಮ್ಮ ಜೀವನದಲ್ಲಿ ಸಂಬಂಧದ ಸ್ಥಿತಿಗತಿ ಹೇಗೇ ಇರಲಿ, ಅದೆಲ್ಲ ಇವರಿಗೆ ಸಂಬಂಧವಿಲ್ಲ. ಒಟ್ಟಿನಲ್ಲಿ ಸಿಕ್ಕವರೊಂದಿಗೆ ಸಲುಗೆಯಿಂದ ವರ್ತಿಸುತ್ತಾರೆ. ಒಮ್ಮೆ ಇವರನ್ನು ಎದುರಾದವರು ಯಾವ ಕಾರಣಕ್ಕೂ ಮರೆಯುವುದಿಲ್ಲ. ಅಷ್ಟು ನಕ್ಕು ಹಗುರಾಗಿಸುತ್ತಾರೆ. ಈ ವಿನೋದದ ಗುಣವನ್ನು ಐದು ರಾಶಿಗಳಲ್ಲಿ ಗುರುತಿಸಲಾಗಿದೆ.
• ಮಕರ (Capricorn)
ಮಕರ ರಾಶಿಯ ಜನಕ್ಕೆ ಫ್ಲರ್ಟ್ (Flirt) ಎನ್ನುವುದು ಅಪ್ರಯತ್ನಪೂರ್ವಕವಾಗಿ ಬಂದುಬಿಡುತ್ತದೆ. ಇವರ ಫ್ಲರ್ಟ್ ಗೆ ಮರುಳಾಗದವರಿಲ್ಲ ಎನ್ನುವಂತಾಗುತ್ತದೆ. ನಿಸ್ಸಂದೇಹವಾಗಿ ಇವರ ಜತೆ ಒಡನಾಡಿದವರು ಇವರನ್ನು ಮರೆಯುವುದಿಲ್ಲ. ಒಬ್ಬರೊಂದಿಗೆ ದೀರ್ಘ ಸಮಯ ಒಡನಾಡುವುದಿಲ್ಲ. ವಿಭಿನ್ನ ಸ್ನೇಹಿತರನ್ನು (Friends) ಸದಾಕಾಲ ಸ್ವಾಗತಿಸುತ್ತಾರೆ. ನೀವು ಎಂದಿಗಾದರೂ ಮಕರ ರಾಶಿಯವರೊಂದಿಗೆ ಒಡನಾಡಿದ್ದರೆ ನಿಮಗೆ ಅವರ ಪ್ರಭಾವ (Effect) ತಿಳಿಯುತ್ತದೆ. ನೀವು ಎದುರಿದ್ದಾಗ ಹೇಗೆಲ್ಲ ಸಾಧ್ಯವೋ ಅಷ್ಟು ರೀತಿಯಲ್ಲಿ ನಿಮ್ಮನ್ನು ಸೆಳೆಯಲು (Attract) ಯತ್ನಿಸುತ್ತಾರೆ. ನಿಮ್ಮ ಬಗ್ಗೆ ಆಸಕ್ತಿ (Interest) ತೋರುತ್ತಾರೆ.
Messy Zodiacs: ಮನೆಯನ್ನು ಸಂತೆ ಮಾರ್ಕೆಟ್ ತರಾ ಇಟ್ಕೊಳ್ಳುವ ರಾಶಿಗಳಿವು!
• ಕರ್ಕಾಟಕ (Cancer)
ಈ ರಾಶಿಯ ಜನ ಭಾವುಕತೆಗೆ (Emotion) ಮತ್ತೊಂದು ಹೆಸರು. ಇವರು ಮುಗ್ಧವಾದ (Innocent) ಫ್ಲರ್ಟ್ ಮಾಡುವುದರಲ್ಲಿ ಸಕ್ರಿಯರಾಗಿರುತ್ತಾರೆ. ಫ್ಲರ್ಟಿಂಗ್ ಅನ್ನು ಅತ್ಯಂತ ಸಾಮಾನ್ಯೀಕರಿಸುವುದು ಇವರ ಸ್ವಭಾವದಲ್ಲೇ ಬಂದಿರುವ ಗುಣ. ತಮ್ಮ ನಿಗದಿತ ಗುರಿ ತಲುಪಲು ಮೊದಲೇ ಸಿದ್ಧತೆ ನಡೆಸುತ್ತಾರೆ. ತಮ್ಮ ಫ್ಲರ್ಟ್ ಗೆ ಎದುರಿನವರು ಯಾವ ರೀತಿ ಸ್ಪಂದಿಸುತ್ತಾರೆ (React) ಎಂದು ಚಿಂತನೆ ನಡೆಸಿಯೇ ಮುಂದಿನ ಹೆಜ್ಜೆ ಇರಿಸುತ್ತಾರೆ.
• ವೃಷಭ (Taurus)
ತಮ್ಮ ಅದ್ಭುತ ವರ್ಚಸ್ಸಿನ (Charisma) ಮೂಲಕ ವೃಷಭ ರಾಶಿಯ ಜನ ಯಾರನ್ನಾದರೂ ಬೆರಗುಗೊಳಿಸುತ್ತಾರೆ. ವಾದದಲ್ಲಿ ಸಾಕಷ್ಟು ನಿಷ್ಣಾತರಾಗಿರುತ್ತಾರೆ. ತಮ್ಮ ಧೈರ್ಯ, ಸಾಹಸಿ ಪ್ರವೃತ್ತಿಯ ಮೂಲಕ ವೃತ್ತಿ ಸ್ಥಳದಲ್ಲಿ ಸಾಕಷ್ಟು ಹೊಗಳುಭಟರನ್ನು (Admirers) ಹೊಂದಿರುತ್ತಾರೆ. ಪ್ರೀತಿಭರಿತ, ಕರುಣಾಮಯಿ ಆಗಿದ್ದು, ಯಾರ ಬಗ್ಗಾದರೂ ಗಮನ ನೀಡಲು ಇವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಈ ಗುಣದಿಂದಲೂ ಸಾಕಷ್ಟು ಮಂದಿಯನ್ನು ಗಳಿಸಿಕೊಳ್ಳುತ್ತಾರೆ. ಸುಲಭವಾಗಿ ಬೆರೆಯುವ ಗುಣ ಹೊಂದಿದ್ದು, ರೋಮ್ಯಾನ್ಸ್ (Romance) ಮಾಡಲೂ ಹಿಂಜರಿಯುವುದಿಲ್ಲ.
Plants and Zodiac: ಲಕ್ ಕೊರತೆನಾ? 2023ರಲ್ಲಿ ರಾಶಿಗೆ ತಕ್ಕ ಗಿಡ ಬೆಳೆಸಿ ಲಕ್ ಗಳಿಸಿ
• ತುಲಾ (Libra)
ತುಲಾ ರಾಶಿಯ ಜನ ಜನ್ಮಜಾತವಾಗಿ ಕುಶಲ (Tactics) ಬುದ್ಧಿ ಹೊಂದಿದ್ದು, ಪ್ರೀತಿ-ಪ್ರೇಮಕ್ಕೆ ಎತ್ತಿದ ಕೈ. ಎದುರಿನವರೊಂದಿಗೆ ಸಂಬಂಧ (Relationship) ಏರ್ಪಡಿಸಿಕೊಳ್ಳುವ ಉದ್ದೇಶಕ್ಕಾಗಿಯೇ ಫ್ಲರ್ಟ್ ಮಾಡುವುದಿಲ್ಲ. ಮಾತುಗಾರಿಕೆ (Orator) ಇವರ ಬಂಡವಾಳ. ಸ್ಟೇಜ್ ಮೇಲೆಯೂ ಉತ್ತಮ ಪ್ರದರ್ಶನ ನೀಡಬಲ್ಲರು. ಇತರರನ್ನು ಓಲೈಸಲು (Impress) ಉತ್ತಮವಾಗಿ ಫ್ಲರ್ಟ್ ಮಾಡಬಲ್ಲರು.
• ಕುಂಭ (Aquarius)
ಕುಂಭ ರಾಶಿಯವರು ಹೆಚ್ಚು ಜನರೊಂದಿಗೆ ಒಡನಾಡುವುದಿಲ್ಲವಾದರೂ ಅತ್ಯುತ್ತಮ ವಿನೋದದ (Fun) ಗುಣ ಹೊಂದಿರುತ್ತಾರೆ. ಈ ಗುಣವನ್ನು ತೋರ್ಪಡಿಸಿಕೊಳ್ಳಲು ಇವರಿಗೆ ಮುಜುಗರ ಇರುವುದಿಲ್ಲ. ಜೋಕ್ (Joke) ಮಾಡುವುದು, ನಗು ಮೂಡಿಸುವಂತಹ ವಾಕ್ಯಗಳನ್ನು ಥಟ್ ಎಂದು ಹೇಳುವುದು ಇವರ ಹುಟ್ಟಾಗುಣ.