Asianet Suvarna News Asianet Suvarna News

Baba Vanga Prediction: ನಿಜವಾಯ್ತು 2022ರ ಕುರಿತಾಗಿ ಬಾಬಾ ವಂಗಾ ಹೇಳಿದ್ದ ಎರಡೂ ಭವಿಷ್ಯ!

ಪ್ರಪಂಚದ ಪ್ರಸಿದ್ಧ ಬಾಬಾ ವಂಗಾ ಅವರ ಅನೇಕ ಭವಿಷ್ಯವಾಣಿಗಳು ನಿಜವೆಂದು ಈಗಾಗಲೇ ಸಾಬೀತಾಗಿದೆ. ಇನ್ನೂ ಕೆಲವು ಭವಿಷ್ಯವಾಣಿಗಳು ತಪ್ಪಾಗಿವೆ ಎನ್ನುವುದು ಈಗಾಗಲೇ ತಿಳಿದಿರುವ ವಿಚಾರ. ಆದರೆ, ಬೆಲ್ಜಿಯಂ ಬಾಬಾ ವಂಗಾ ಈವರೆಗೂ ತನ್ನ ಅನುಯಾಯಿಗಳಿಗೆ 5079 ವರೆಗಿನ ಭವಿಷ್ಯವನ್ನು ಹೇಳಿದ್ದಾರೆ. ವರದಿಗಳ ಪ್ರಕಾರ, 2022 ರ ಬಗ್ಗೆ ಅವರ ಎರಡು ಭವಿಷ್ಯವಾಣಿಗಳು ಬಹುತೇಕ ನಿಜವಾಗಿವೆ.
 

Nostradamus of the Balkans Baba Vanga Two Prediction for the year 2022 almost come true san
Author
Bengaluru, First Published Jul 16, 2022, 5:45 PM IST | Last Updated Jul 16, 2022, 5:47 PM IST

ನವದೆಹಲಿ (ಜುಲೈ 16): ಜಗತ್ತಿನಲ್ಲಿ ಸಾಕಷ್ಟು ಪ್ರವಾದಿಗಳಿದ್ದಾರೆ, ಆದರೆ, ತಮ್ಮ ಭವಿಷ್ಯವಾಣಿಗಳಿಂದ ಪ್ರಪಂಚದಾದ್ಯಂತ ಪ್ರಸಿದ್ಧರಾದವರು ಕೆಲವೇ ಕೆಲವರು. ಪ್ರಪಂಚದ ಅತ್ಯಂತ ಪ್ರಸಿದ್ಧ ಪ್ರವಾದಿಗಳ ಮಾತನಾಡುವ ವೇಳೆ, ಮೊದಲನೆಯದಾಗಿ, ಕೇಳಿಬರುವ ಪ್ರಮುಖ ಹೆಸರು. ಅದು 'ಬಾಬಾ ವೆಂಗಾ'. ತಮ್ಮ ಭವಿಷ್ಯವಾಣಿಗಳಿಂದ ಜಗತ್ತಿನಲ್ಲಿ ಪ್ರಸಿದ್ಧರಾದ ಬಾಬಾ ವೆಂಗಾ ಅವರ ಅನೇಕ ಭವಿಷ್ಯವಾಣಿಗಳು ಈಗಾಗಲೇ ನಿಜವೆಂದು ಸಾಬೀತಾಗಿದೆ. ಇನ್ನೂ ಕೆಲವು ತಪ್ಪಾಗಿವೆ. ಸ್ತನ ಕ್ಯಾನ್ಸರ್‌ನಿಂದಾಗಿ 1996ರ ಆಗಸ್ಟ್‌ನಲ್ಲಿ ನಿಧನರಾಗಿರುವ ಬಾಬಾ ವಂಗಾ, ಈವರೆಗೂ 5079ರ ವರ್ಷದವರೆಗಿನ ವಿಶ್ವದ ಭವಿಷ್ಯ ನುಡಿದಿದ್ದಾರೆ. ಇದಕ್ಕಾಗಿಯೇ ಅವರನ್ನು, ಬಾಲ್ಕನ್‌ ಪ್ರದೇಶದ ನಾಸ್ಟ್ರಾಡಾಮಸ್‌ ಎಂದೂ ಹೇಳಲಾಗುತ್ತದೆ. 2022ರ ಕುರಿತಾಗಿ ಅವರು ಹೇಳಿದ್ದ ಎರಡು ಪ್ರಮುಖ ಭವಿಷ್ಯವಾಣಿಗಳ ಪೈಕಿ ಎರಡೂ ಕೂಡ ಇಲ್ಲಿಯವರೆಗೂ ಬಹುತೇಕ ನಿಜವಾಗಿದೆ. ದಿ ಮಿರರ್ ಪ್ರಕಾರ, ಬಾಬಾ ವೆಂಗಾ ಅವರು 2022 ರಲ್ಲಿ ಕೆಲವು ದೇಶಗಳು ನೀರಿನ ಕೊರತೆಯಿಂದ ತೊಂದರೆಗೊಳಗಾಗುತ್ತವೆ ಎಂದು ಹೇಳಿದ್ದರು. ಪೋರ್ಚುಗಲ್ ಮತ್ತು ಇಟಲಿಯಂತಹ ದೇಶಗಳು ನೀರಿನ ಬಳಕೆಯನ್ನು ಕಡಿಮೆ ಮಾಡಲು ತಮ್ಮ ಜನರನ್ನು ಕೇಳಿಕೊಂಡಿರುವುದು ಈಗಾಗಲೇ ಸುದ್ದಿಯಾಗಿದೆ. ಅದರೊಂದಿಗೆ ಪೋರ್ಚುಗಲ್‌ ದೇಶವು ಪ್ರಸ್ತುತ 1950 ರ ದಶಕದ ನಂತರ ಅತ್ಯಂತ ಭೀಕರ ಬರವನ್ನು ಅನುಭವಿಸುತ್ತಿದೆ. ಅದೇ ಸಮಯದಲ್ಲಿ, ಇಟಲಿ ದೇಶ ಕೂಡ 1950 ರ ದಶಕದ ನಂತರ ಅತ್ಯಂತ ಭೀಕರ ಬರಗಾಲವನ್ನು ಎದುರಿಸುತ್ತಿದೆ.

ಏಷ್ಯನ್‌ ದೇಶಗಳಲ್ಲಿ ಪ್ರವಾಹ: ಅದರೊಂದಿಗೆ, ಬಾಬಾ ವೆಂಗಾ (Baba Vanga)ಅವರು 2022 ರಲ್ಲಿ ಏಷ್ಯನ್ ದೇಶಗಳು (Asian Countries) ಮತ್ತು ಆಸ್ಟ್ರೇಲಿಯಾದ (Australia) ಕೆಲವು ಭಾಗಗಳಲ್ಲಿ ಪ್ರವಾಹದಂತಹ ಪರಿಸ್ಥಿತಿಗಳು, ಭೂಕಂಪಗಳು ಮತ್ತು ಸುನಾಮಿಗಳು ಉಂಟಾಗುತ್ತವೆ ಎಂದು ಭವಿಷ್ಯ ಹೇಳಿದ್ದರು. ಆಸ್ಟ್ರೇಲಿಯದ ಪೂರ್ವ ಕರಾವಳಿಯಲ್ಲಿ ಭಾರೀ ಮಳೆ ಮತ್ತು ಪ್ರವಾಹವು ಹಾನಿಯನ್ನುಂಟುಮಾಡಿದೆ ಎಂದು ಎಲ್ಲರಿಗೂ ತಿಳಿದಿದೆ. ಬಾಂಗ್ಲಾದೇಶ, ಭಾರತದ ಈಶಾನ್ಯ ಭಾಗ ಮತ್ತು ಥಾಯ್ಲೆಂಡ್ ಕೂಡ ಪ್ರವಾಹದಿಂದ ಪ್ರಭಾವಿತವಾಗಿದೆ. ಈ ವರ್ಷ ಈ ದೇಶಗಳು ಭಾರೀ ಮಳೆಯನ್ನು ಪಡೆದಿರುವುದರಿಂದ ಈ ಭವಿಷ್ಯವು ಸಂಪೂರ್ಣವಾಗಿ ನಿಖರವಾಗಿದೆ ಎಂದು ತೋರುತ್ತದೆ.
 


ಯಾರೀಕೆ ಜಗತ್ಪ್ರಸಿದ್ಧ ಬಾಬಾ ವಂಗಾ: ಪ್ರಪಂಚದಾದ್ಯಂತ ಭವಿಷ್ಯವಾಣಿಗಳಿಗೆ ಹೆಸರುವಾಸಿಯಾದ ಪ್ರವಾದಿ ಬಾಬಾ ವೆಂಗಾ ಅವರಿಗೆ ಕಣ್ಣುಗಳಿಲ್ಲ. ಬಲ್ಗೇರಿಯಾದ (Bulgaria) ನಿವಾಸಿಯಾಗಿದ್ದ ಈಕೆ ಸಾಕಷ್ಟು ಭವಿಷ್ಯವಾಣಿಗಳನ್ನು ನುಡಿದಿದ್ದು, ಇದರಲ್ಲಿ ಬಹುತೇಕ ಭವಿಷ್ಯವಾಣಿಗಳು ನಿಜವಾಗಿದೆ. 1911ರಲ್ಲಿ ಜನಿಸಿದ್ದ ಈಕೆ, ತಮ್ಮ 12ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡಿದ್ದರು. ಇಲ್ಲಿವರೆಗೂ ಆಕೆ ಹೇಳಿರುವ ಭವಿಷ್ಯದ ಪ್ರಕಾರ, ಶೇ. 85ರಷ್ಟು ನಿಜವಾಗಿದ್ದರೆ, ಶೇ. 15ರಷ್ಟು ಭವಿಷ್ಯ ತಪ್ಪಾಗಿವೆ. 

ಇದನ್ನೂ ಓದಿ: Baba Vanga predictions: 2022ರಲ್ಲಿ ಮತ್ತೊಂದು ವೈರಸ್ ದಾಳಿ, ಬಾಬಾ ವಾಂಗಾ ಭವಿಷ್ಯ

ಬಾಬಾ ವಂಗಾ ಆಗಸ್ಟ್ 1996 ರಲ್ಲಿ ಸ್ತನ ಕ್ಯಾನ್ಸರ್‌ನಿಂದ ನಿಧನರಾದರು. ಆದರೆ ಅವರು ಸಾಯುವ ಮೊದಲು 5079 ವರ್ಷಗಳವರೆಗೆ ಭವಿಷ್ಯ ನುಡಿದಿದ್ದರು. ಬಾಬಾ ವೆಂಗಾ ಅವರ ಪ್ರಕಾರ, 5079 ರಲ್ಲಿ ಜಗತ್ತು ಕೊನೆಗೊಳ್ಳುತ್ತದೆ.  ಆಕೆ ಹೇಳಿರುವ ಭವಿಷ್ಯವನ್ನು ಈವರೆಗೂ ಎಲ್ಲಿಯೂ ಬರೆದಿಡಲಾಗಿಲ್ಲ. ಆದರೆ, ಆಕೆಯ ಅನುಯಾಯಿಗಳು, ಇಂಥ ಭವಿಷ್ಯವನ್ನು ಬಾಬಾ ವೆಂಗಾ ನುಡಿದಿದ್ದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾಬಾ ವಂಗಾ 2021ರ ಬಗ್ಗೆ ನುಡಿದ ಭವಿಷ್ಯವೇನು?

ಸಾಕಷ್ಟು ಬಾರಿ ನಿಜವಾಗಿದ್ದ ಭವಿಷ್ಯ: ಬಾಬಾ ವಂಗಾ ಅವರು 2004 ರಲ್ಲಿ ಸುನಾಮಿ ಮುನ್ಸೂಚನೆ ನೀಡಿದ್ದರು, ಅದು ನಿಜವಾಗಿತ್ತು. ಇದರ ನಂತರ, ಬ್ರಿಟನ್ ರಾಜಕುಮಾರಿ ಡಯಾನಾ ಸಾವಿನ ಬಗ್ಗೆಯೂ ಭವಿಷ್ಯ ನುಡಿದರು, ಅದು ಕೂಡ ನಿಜವಾಗಿತ್ತು. ಬಾಬಾ ವಂಗಾ ಅವರು ಅಮೆರಿಕದ 44ನೇ ಅಧ್ಯಕ್ಷ ಕಪ್ಪಿವರ್ಣೀಯನಾಗಿರಲಿದ್ದಾನೆ ಹಾಗೂ  ಅಮೆರಿಕ ದೇಶಕ್ಕೆ ಅವರೇ ಕೊನೆಯ ಅಧ್ಯಕ್ಷರಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಅಮೆರಿಕದ 44 ನೇ ಅಧ್ಯಕ್ಷ ಬರಾಕ್ ಒಬಾಮಾ ಆಗಿದ್ದರಿಂದ ಇವರ ಭವಿಷ್ಯ ಅರ್ಧ ನಿಜವಾಗಿತ್ತು. ಆದರೆ, ಅವರು ಅಮೆರಿಕದ ಕೊನೆಯ ಅಧ್ಯಕ್ಷರಾಗಿರಲಿಲ್ಲ. ಆ ಮೂಲಕ ಇನ್ನರ್ಧ ಭವಿಷ್ಯ ತಪ್ಪಾಗಿತ್ತು.

Latest Videos
Follow Us:
Download App:
  • android
  • ios