ಈ ನಾಲ್ಕು ರಾಶಿಯವರು ಓದು, ಕೆಲಸಕ್ಕಾಗಿ ಪ್ರೀತಿಯನ್ನೇ ತ್ಯಾಗ ಮಾಡಬಲ್ಲರು!

ಕೆಲವರು ಹಾಗೆಯೇ, ಅವರು ತಮ್ಮ ಬದುಕಿನ ಗುರಿ ಕನಸುಗಳು, ಕೆಲಸಕ್ಕಾಗಿ ಪ್ರೀತಿಯನ್ನೇ ತ್ಯಾಗ ಮಾಡಬಲ್ಲರು. ಇಂಥವರು ಸಾಮಾನ್ಯವಾಗಿ ಯಾವ ರಾಶಿಗೆ ಸೇರಿರುತ್ತಾರೆ ಗೊತ್ತಾ?
 

Zodiac signs who breakup with true love to focus on work and education skr

ಕೆಲವರು ತಮ್ಮ ಪ್ರೀತಿ ಉಳಿಸಿಕೊಳ್ಳುವ ಸಲುವಾಗಿ ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ಅದಕ್ಕಾಗಿ ಮನೆ, ಮಠ ತೊರೆದು, ಕೆಲಸ ಕೂಡಾ ಬದಲಿಸಲು ಸಿದ್ಧರಿರುತ್ತಾರೆ. ಶಿಕ್ಷಣವನ್ನು ಅರ್ಧಕ್ಕೇ ಬಿಟ್ಟು ಪ್ರೀತಿಯ ಮಾಯೆಯಲ್ಲಿ ತೇಲುವವರೆಷ್ಟೋ! ತಮ್ಮ ಪ್ರೇಮಿಗಾಗಿ ತಾವಿರುವ ಸ್ಥಳ, ಹೆಸರು ಎಲ್ಲವನ್ನೂ ಬದಲಾಯಿಸಿದವರಿದ್ದಾರೆ. ಇವರೆಲ್ಲರ ಪ್ರೇಮ ಕತೆ(love story) ಕೇಳಲು ಬಹಳ ಚೆನ್ನಾಗೆನಿಸುತ್ತದೆ. ಆದರೆ, ಇದಕ್ಕೆ ವ್ಯತಿರಿಕ್ತ ಸ್ವಭಾವದವರೂ ಇರುತ್ತಾರೆ. ಅವರು, ತಮ್ಮ ಗುರಿ ಸಾಧನೆಗಾಗಿ, ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು, ಉತ್ತಮ ಕೆಲಸಕ್ಕಾಗಿ ಅಥವಾ ಶಿಕ್ಷಣ ಮುಂದುವರಿಸುವ ಸಲುವಾಗಿ ಪ್ರೇಮಿಯನ್ನೇ ತ್ಯಾಗ ಮಾಡಬಲ್ಲರು. ಪ್ರೀತಿಗಿಂತ ಬದುಕು ಕಟ್ಟಿಕೊಳ್ಳುವುದೇ ಮುಖ್ಯವೆಂಬ ಧೋರಣೆಯವರಿವರು. ಇಂಥ ಸ್ವಭಾವದವರು ಸಾಮಾನ್ಯವಾಗಿ ಯಾವ ರಾಶಿ(Zodiac sign)ಗೆ ಸೇರಿರುತ್ತಾರೆ ಗೊತ್ತಾ?

ಕನ್ಯಾ ರಾಶಿ(Virgo)
ಕೆಲವು ರಾಶಿಚಕ್ರದ ಚಿಹ್ನೆಗಳು ವೃತ್ತಿ ವಿಷಯವಾಗಿ ಬಹಳ ಬಲವಾದ ನೈತಿಕತೆಯನ್ನು ಹೊಂದಿವೆ. ಪ್ರೇಮಜೀವನದಿಂದಾಗಿ ತಮ್ಮ ವೃತ್ತಿಪರ ಜೀವನಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗಬಹುದು ಎಂದು ಅವರು ಭಯ ಪಡುತ್ತಾರೆ. ಕೆಲಸದ ಮೇಲಿನ ಗಮನ ಹಾಳಾಗುವುದನ್ನು ಗಮನಿಸಿದ ಮೇಲೆ ಅವರು ಮೊಳಕೆಯೊಡೆಯುವ ಭಾವನೆಗಳನ್ನು ನಿಗ್ರಹಿಸಲು ನಿರ್ಧರಿಸುತ್ತಾರೆ. ಹೀಗಾಗಿ ಪ್ರೀತಿ ಇದ್ದರೂ ತಮ್ಮಲ್ಲಿ ಪ್ರೀತಿ ಇಲ್ಲ ಎಂದು ಪ್ರೇಮಿಗೆ ಸುಳ್ಳು ಹೇಳುತ್ತಾರೆ. 

ಧನಲಾಭಕ್ಕಾಗಿ ಈ ರೀತಿಯ ರುದ್ರಾಕ್ಷಿ ಧರಿಸಿ

ಕರ್ಕಾಟಕ ರಾಶಿ(Cancer)
ಹಣ ಮತ್ತು ಆರ್ಥಿಕ ಭದ್ರತೆಯು ಕರ್ಕ ರಾಶಿಯವರಿಗೆ ಸರ್ವಸ್ವವಾಗಿದೆ. ಆದ್ದರಿಂದ, ತಮ್ಮ ಸಂಬಂಧವು ಹೆಚ್ಚು ಸಮಯ ಅಥವಾ ಶಕ್ತಿಯನ್ನು ತೆಗೆದುಕೊಳ್ಳುತ್ತಿದೆ, ಸಂಬಂಧದ ಕಾರಣದಿಂದಾಗಿ ದುಡಿಮೆಗೆ ಅಡ್ಡಿಯಾಗುತ್ತಿದೆ, ಉತ್ತಮ ಅವಕಾಶಗಳನ್ನು ತಂದುಕೊಡುವ ಓದಿಗೆ ತೊಂದರೆಯಾಗುತ್ತಿದೆ ಎಂದು ಅನಿಸಿದಾಗದಾಗ ತಮ್ಮ ಅಂತಿಮ ಗುರಿಯನ್ನು ನೆನಪಿಸಿಕೊಳ್ಳುತ್ತಾರೆ. ಮತ್ತು ಸಂಬಂಧವನ್ನು ತ್ಯಜಿಸಲು ದೃಢ ನಿರ್ಧಾರ ಮಾಡುತ್ತಾರೆ. ಹೀಗೆ ಸಂಬಂಧ ತೊರೆದರೂ ಮನಸ್ಸಿನಲ್ಲಿ ಕೊಂಚ ಗೊಂದಲ ಅವರನ್ನು ಸದಾ ಕಾಡುತ್ತಲೇ ಇರುತ್ತದೆ. 

ಮೀನ ರಾಶಿ(Pisces)
ಮೀನ ರಾಶಿಯವರು ಕಠಿಣ ಅಧ್ಯಯನ ಮಾಡುವ ಹಲವಾರು ಆರೋಗ್ಯಕರ ಅಭ್ಯಾಸಗಳನ್ನು ಹೊಂದಿರುತ್ತಾರೆ ಮತ್ತು ಅವರ ಶೈಕ್ಷಣಿಕ ಕನಸನ್ನು ದೃಷ್ಟಿಯಲ್ಲಿಟ್ಟುಕೊಳ್ಳಲು ವಿವಿಧ ಪ್ರೇರಕ ತಂತ್ರಗಳನ್ನು ಬಳಸುತ್ತಾರೆ. ಕೆಲವೊಮ್ಮೆ, ಮೋಹ ಅಥವಾ ಕಾಲೇಜು ಪ್ರಣಯವು ತಿಳಿಯದೆಯೇ ಸಂಭವಿಸುತ್ತದೆ. ಆದರೆ ಅವರು ಬೇಗ ಎಚ್ಚೆತ್ತುಕೊಳ್ಳುತ್ತಾರೆ ಮತ್ತು ಪ್ರೀತಿಯನ್ನು ಕೊನೆಗೊಳಿಸಲು ಒಂದು ಕಾರಣವನ್ನು ಹುಡುಕುತ್ತಾರೆ. ಈ ವಿಷಯ ಅವರಿಗೂ ಬಹಳ ನೋವುಂಟು ಮಾಡುತ್ತದೆ. ಈ ಬಗ್ಗೆ ಖಾಸಗಿಯಾಗಿದ್ದಾಗ ಕಣ್ಣೀರು ಹಾಕುತ್ತಾರೆ. ಆದರೆ ಅಂತಿಮವಾಗಿ, ಅವರು ತಮ್ಮ ಪ್ರೇಮ ಜೀವನದಲ್ಲಿ ತಾವೇ ಖಳನಾಯಕರಾಗಿರುತ್ತಾರೆ. ತಮ್ಮ ಈ ತ್ಯಾಗದ ನೆನಪೇ ಅವರಿಗೆ ಗುರಿ ಸಾಧನೆಗೆ ಪ್ರೇರಣೆಯಾಗುತ್ತದೆ. 

Vastu Tips: ಮನೆಯಲ್ಲಿ ಕಳ್ಳತನ ತಪ್ಪಿಸಲು ಹೀಗೆ ಮಾಡಿ

ತುಲಾ ರಾಶಿ(Libra)
ತುಲಾ ರಾಶಿಯವರು ಸಮತೋಲಿತ ಮನಸ್ಥಿತಿಯವರು. ಎಲ್ಲರೊಡನೆ ಸ್ನೇಹದಿಂದಿರುತ್ತಾರೆ. ಅವರ ಪ್ರೇಮಿಗೇ ಅನುಮಾನವಾಗುವಷ್ಟು ಎಲ್ಲರ ಬಳಿಯೂ ಸಾಮಾನ್ಯವಾಗಿ ಒಂದೇ ತರ ಇರುತ್ತಾರೆ. ಪೋಷಕರ ಇಷ್ಟಾರ್ಥಗಳನ್ನು ಈಡೇರಿಸುವುದು ಇವರಿಗೆ ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ಇವರು ಶಿಕ್ಷಣ ಮತ್ತು ವೃತ್ತಿ ಬದುಕಿಗೆ ಪ್ರೀತಿ ಅಡ್ಡಿಯಾಗುತ್ತಿದೆ ಎನಿಸಿದಾಗ ಅದನ್ನು ತೊರೆಯುತ್ತಾರೆ. ಈ ಬಗ್ಗೆ ಇವರು ಬಹಳಷ್ಟು ನೋವು ಅನುಭವಿಸುತ್ತಾರೆ. ಆದರೆ, ತಂದೆತಾಯಿಯ ಇಷ್ಟದಂತೆ ದೊಡ್ಡ ಸಾಧನೆ ಮಾಡುವುದು ಇವರಿಗೆ ಮುಖ್ಯವಾಗಿರುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios