ಧನಲಾಭಕ್ಕಾಗಿ ಈ ರೀತಿಯ ರುದ್ರಾಕ್ಷಿ ಧರಿಸಿ

ಹಿಂದೂ ಧರ್ಮದಲ್ಲಿ ರುದ್ರಾಕ್ಷಿ ಧಾರಣೆಗೆ ವಿಶೇಷ ಮಹತ್ವವಿದೆ. ಇದನ್ನು ಧರಿಸುವುದರಿಂದ ಹಲವಾರು ಪ್ರಯೋಜನಗಳಿವೆ. ನಮ್ಮ ದೇಹದ ಚಕ್ರಗಳನ್ನು ಸಮತೋಲನಗೊಳಿಸತ್ತದೆ ರುದ್ರಾಕ್ಷಿ. ಇಷ್ಟಕ್ಕೂ ಧನಪ್ರಾಪ್ತಿಯಾಗಬೇಕೆಂದರೆ ಯಾವ ರೀತಿಯ ರುದ್ರಾಕ್ಷಿ ಧರಿಸಬೇಕು ಗೊತ್ತಾ?

Which Rudraksha is right for getting money skr

ಶಿವ(Lord Shiva)ನು ಕುತ್ತಿಗೆ ಮತ್ತು ತೋಳುಗಳಲ್ಲಿ ರುದ್ರಾಕ್ಷಿ ಮಣಿಗಳನ್ನು ಧರಿಸುತ್ತಾನೆ. ಅಲ್ಲದೆ, ಶಿವನ ಕಣ್ಣೀರು ಭೂಮಿಗೆ ಬಿದ್ದಾಗ ರುದ್ರಾಕ್ಷಿ(Rudraksha) ಹುಟ್ಟಿತು ಎಂಬ ಕತೆ ಇದೆ. ಹೀಗಾಗಿ, ಹಿಂದೂ ಧರ್ಮದಲ್ಲಿ ರುದ್ರಾಕ್ಷಿಯನ್ನು ಅತ್ಯಂತ ವಿಶೇಷ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಶಿವ ಮಹಾಪುರಾಣ(Shiva Mahapuran)ದಲ್ಲಿ ರುದ್ರಾಕ್ಷಿಯ ವಿಧಗಳು, ಅವುಗಳ ಧಾರಣೆಯ ಲಾಭಗಳು, ಪ್ರಾಮುಖ್ಯತೆ ಎಲ್ಲವನ್ನೂ ವಿವರಿಸಲಾಗಿದೆ. ಇನ್ನು ಶಿವ ಪುರಾಣ, ಸ್ಕಂದ ಪುರಾಣ, ಲಿಂಗ ಪುರಾಣ ಸೇರಿ ಹಲವು ಪುರಾಣಗಳಲ್ಲಿ ರುದ್ರಾಕ್ಷಿಯ ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ.

ರುದ್ರಾಕ್ಷಿಯು ಮುಖಕ್ಕೆ ಅನುಗುಣವಾಗಿ ವಿಭಿನ್ನ ಶಕ್ತಿಯನ್ನು ಆಕರ್ಷಿಸುತ್ತದೆ. ಕೆಲವು ರೀತಿಯ ರುದ್ರಾಕ್ಷಿ ಧರಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಏಕೆಂದರೆ ರುದ್ರಾಕ್ಷಿಯು ದೇಹದ ಚಕ್ರವನ್ನು ಸಮತೋಲನಗೊಳಿಸುತ್ತದೆ.

ನಿಮ್ಮ ಜೀವನದಲ್ಲಿ ಹಣ(money)ದ ಕೊರತೆಯಿದ್ದರೆ, ಇದಕ್ಕಾಗಿ ನೀವು ರುದ್ರಾಕ್ಷಿ ಮಾಲೆ ಧರಿಸಬಹುದು. ಆದರೆ ಇದಕ್ಕಾಗಿ ಎಷ್ಟು ಮುಖದ ರುದ್ರಾಕ್ಷಿ ಧರಿಸಬೇಕು ಎಂಬುದು ತಿಳಿದಿರಬೇಕು. ಏಕೆಂದರೆ, ರುದ್ರಾಕ್ಷಿಯು ಏಕಮುಖಿಯಿಂದ 21 ಮುಖಿಯವರೆಗೆ ಬರುತ್ತದೆ. ಸಂಪತ್ತು ಪಡೆಯಲು ಯಾವ ಮುಖಿ ರುದ್ರಾಕ್ಷಿ ಧರಿಸಬೇಕು ಎಂದು ತಿಳಿಯೋಣ. 

ಪಂಚಮುಖಿ ರುದ್ರಾಕ್ಷಿ ಧರಿಸಿ(Panchamukhi Rudraksha)
ನಿಮ್ಮ ಜೀವನದಲ್ಲಿ ಹಣದ ಕೊರತೆ ಇರಬಾರದು ಎಂದರೆ, ಇದಕ್ಕಾಗಿ ನೀವು ಪಂಚಮುಖಿ ರುದ್ರಾಕ್ಷವನ್ನು ಧರಿಸಬೇಕು. ಇದು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಇದು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

Vastu Tips: ಮನೆಯಲ್ಲಿ ಕಳ್ಳತನ ತಪ್ಪಿಸಲು ಹೀಗೆ ಮಾಡಿ

13 ಮುಖದ ರುದ್ರಾಕ್ಷಿ
ಜೀವನದ ಮೇಲೆ 13 ಮುಖದ ರುದ್ರಾಕ್ಷಿಯ ಪರಿಣಾಮ ಹೀಗಿದೆ- ಅದನ್ನು ಧರಿಸುವುದರಿಂದ ನೀವು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತೀರಿ. ನಿರ್ಧಾರಗಳು ಸರಿ ಇದ್ದಾಗ ಅದು ಹಣವನ್ನು ತನ್ನ ಕಡೆಗೆ ಆಕರ್ಷಿಸುತ್ತದೆ. ಈ ರುದ್ರಾಕ್ಷಿಯು ನಿಮ್ಮ ಜೀವನದಲ್ಲಿ ಸಂಪತ್ತು ಮತ್ತು ಅದೃಷ್ಟವನ್ನು ತರುವ ಜನರನ್ನು ಕೂಡಾ ಆಕರ್ಷಿಸುತ್ತದೆ.
 
21 ಮುಖದ ರುದ್ರಾಕ್ಷಿ

21 ಮುಖಿ ರುದ್ರಾಕ್ಷಿಯನ್ನು ಧರಿಸುವುದರಿಂದ ಹಣದ ಕೊರತೆ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಏಕೆಂದರೆ ಇದು ಸಂಪತ್ತಿನ ದೇವರು ಎಂದು ಕರೆಯಲ್ಪಡುವ ಭಗವಾನ್ ಕುಬೇರನಿಗೆ ನೇರವಾಗಿ ಸಂಬಂಧಿಸಿದೆ. ಕುಬೇರನೇ ನಿಮ್ಮೊಂದಿಗಿದ್ದರೆ, ನಿಮಗೆ ಹಣದ ಕೊರತೆಯುಂಟಾಗಬಹುದೇ? ಆದ್ದರಿಂದ, 21 ಮುಖಿ ರುದ್ರಾಕ್ಷಿಯನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. 

7 ಮುಖಿ ರುದ್ರಾಕ್ಷಿ
ಲಕ್ಷ್ಮಿ ದೇವಿಯು ತನ್ನ ಭಕ್ತರಿಗೆ ಸಂಪತ್ತನ್ನು ಹಂಚುವವಳು. ಅವಳು 7 ಮುಖಿ ರುದ್ರಾಕ್ಷಿಯಲ್ಲಿ ವಾಸಿಸುತ್ತಾಳೆ ಎನ್ನಲಾಗುತ್ತದೆ. ಅಂದ ಮೇಲೆ ನೀವು ಧನಲಾಭಕ್ಕಾಗಿ ಈ ರೀತಿಯ ರುದ್ರಾಕ್ಷವನ್ನು ಧರಿಸಬಹುದು. ಪರಿಣಾಮಕಾರಿ ಫಲಿತಾಂಶಕ್ಕಾಗಿ ಸೋಮವಾರ ಬೆಳಿಗ್ಗೆ ಸೂರ್ಯೋದಯಕ್ಕೆ ಮೊದಲು ಇದನ್ನು ಧರಿಸಿ. 

ಬಯಸಿದ್ದೆಲ್ಲ ಕೊಡುವ ಕಾಮಧೇನು ಹಸುವಿನ ಕತೆ ಕೇಳಿದ್ದೀರಾ?

ರುದ್ರಾಕ್ಷಿಯನ್ನು ಹೀಗೆ ಧರಿಸಿ
ಸೋಮವಾರ ತಾಮ್ರ(copper)ದ ಪಾತ್ರೆಯಲ್ಲಿ ರುದ್ರಾಕ್ಷಿ ಹಾಕಿ. ಸ್ವಲ್ಪ ಸಮಯದ ನಂತರ ಅದನ್ನು ಚಮಚದಿಂದ ಹೊರತೆಗೆಯಿರಿ. ನಂತರ ದೇವಸ್ಥಾನಕ್ಕೆ ಹೋಗಿ ಶಿವನಿಗೆ ಶಮಿ ಪತ್ರವನ್ನು ಅರ್ಪಿಸಿ. ಬಳಿಕ ನೀರನ್ನು ಅರ್ಪಿಸಿ. ಈಗ ಶಿವನಲ್ಲಿ ನಿಮ್ಮ ಆಸೆಯನ್ನು ಹೇಳಿಕೊಳ್ಳಿ. ರುದ್ರಾಕ್ಷಿಯನ್ನು ಶಿವಲಿಂಗದ ಹತ್ತಿರ ಇರಿಸಿ ಅಭಿಷೇಕ ಮಾಡಿ. ನಂತರ ಮಹಾದೇವನ ಮಂತ್ರಗಳನ್ನು ಜಪಿಸಬೇಕು. ಬಳಿಕ ಅದನ್ನು ಧರಿಸಬಹುದಾಗಿದೆ. 

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios