ಇವರದು ಸೂಜಿಗಲ್ಲಿನ ನೋಟ: ಈ ರಾಶಿಯವರು ಎಲ್ಲರನ್ನೂ ಆಕರ್ಷಿಸುತ್ತಾರೆ..!
ಕೆಲವು ಜನರ ಸೂಜಿಗಲ್ಲಿನ ನೋಟ ಎಲ್ಲರನ್ನೂ ಆಕರ್ಷಿಸುತ್ತದೆ. ಇವರು ತಮ್ಮ ಲುಕ್’ನಿಂದ ಇತರರನ್ನು ಮೋಡಿ ಮಾಡುತ್ತಾರೆ. ಹಾಗೂ ತಮ್ಮೆಡೆಗೆ ಸೆಳೆದುಕೊಳ್ಳುತ್ತಾರೆ. ಇದಕ್ಕೂ ಕೂಡ ರಾಶಿ ಚಕ್ರ ಕಾರಣ. ಈ ಕುರಿತು ಏನು ಹೇಳುತ್ತೆ ಜ್ಯೋತಿಷ್ಯ? ಇಲ್ಲಿದೆ ಮಾಹಿತಿ..
ಕೆಲವು ಜನರ ಸೂಜಿಗಲ್ಲಿನ ನೋಟ ಎಲ್ಲರನ್ನೂ ಆಕರ್ಷಿಸುತ್ತದೆ. ಇವರು ತಮ್ಮ ಲುಕ್’ನಿಂದ ಇತರರನ್ನು ಮೋಡಿ ಮಾಡುತ್ತಾರೆ. ಹಾಗೂ ತಮ್ಮೆಡೆಗೆ ಸೆಳೆದುಕೊಳ್ಳುತ್ತಾರೆ. ಇದಕ್ಕೂ ಕೂಡ ರಾಶಿ ಚಕ್ರ (zodiac) ಕಾರಣ. ಈ ಕುರಿತು ಏನು ಹೇಳುತ್ತೆ ಜ್ಯೋತಿಷ್ಯ? ಇಲ್ಲಿದೆ ಮಾಹಿತಿ..
ಕೆಲವು ಜನರು ತಮ್ಮ ದೇಹ (body) ದ ನೋಟದ ಕುರಿತು ಬಹಳ ಜಾಗೃತರಾಗಿರುತ್ತಾರೆ. ಅವರು ಹೊರಗೆ ಹೋಗುವಾಗ ಟಿಪ್ ಟಾಪ್ ಆಗಿ ರೆಡಿಯಾಗ್ತಾರೆ. ಜನರ ಮುಂದೆ ತಾವು ಹೇಗೆ ಕಾಣಿಸಿಕೊಳ್ಳಬೇಕು ಎಂಬ ಬಗ್ಗೆ ಯೋಚನೆ ಮಾಡುತ್ತಾರೆ. ಈ ಕೆಳಗಿನ ರಾಶಿಚಕ್ರ ಚಿಹ್ನೆಗಳು ಈ ಕುರಿತು ಹೆಚ್ಚು ಗಮನ ಕೊಡುತ್ತಾರೆ.
ವೃಷಭ ರಾಶಿ (Taurus)
ಇವರು ತಮ್ಮ ನೋಟದ ಬಗ್ಗೆ ತುಂಬಾ ಕಾಳಜಿ (concern) ವಹಿಸುತ್ತಾರೆ. ಇವರು ತೀಕ್ಷ್ಣವಾದ ಕಣ್ಣನ್ನು ಹೊಂದಿದ್ದಾರೆ. ಜನರ ಮುಂದೆ ಕಳಪೆಯಾಗಿ ಕಾಣಲು ಇಷ್ಟಪಡಲ್ಲ. ಆದ್ದರಿಂದ ಅವರು ಉತ್ತಮ ಗುಣಮಟ್ಟದ ಬಟ್ಟೆಗಳನ್ನು ಹಾಕುತ್ತಾರೆ. ಬಟ್ಟೆಗಳ ಹೊಳಪು ಇರುವಂತೆ ನೋಡಿಕೊಳ್ಳುತ್ತಾರೆ. ವೃಷಭ ರಾಶಿಯವರು ತಮ್ಮ ನೋಟದಲ್ಲೇ ಆತ್ಮವಿಶ್ವಾಸ (Confidence) ವನ್ನು ಹೊಂದಿರುತ್ತಾರೆ. ಅದು ಅವರನ್ನು ಇತರರಿಗೆ ಬಹಳ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
ರುದ್ರಾಕ್ಷಿ ಧರಿಸುವಾಗ ‘ಈ ನಿಯಮ’ ತಪ್ಪಿದರೆ ಶಿವನ ಕೆಂಗಣ್ಣಿಗೆ ಗುರಿಯಾಗುವಿರಿ..!
ಸಿಂಹ ರಾಶಿ (Leo)
ಇವರು ವಿಭಿನ್ನ ಶೈಲಿಯ ಸಾಮರ್ಥ್ಯವನ್ನು ಹೊಂದಿದ್ದಾರೆ ಮತ್ತು ಜನರ ಮನದಲ್ಲಿರಲು ಇಷ್ಟಪಡುತ್ತಾರೆ. ಅವರು ಹೇಗೆ ಕಾಣುತ್ತಾರೆ ಎಂಬುದರ ಬಗ್ಗೆ ಬಹಳ ಜಾಗೃತ (conscious) ರಾಗಿದ್ದಾರೆ. ಅವರು ಫ್ಯಾಶನ್ ಮತ್ತು ಮನಮೋಹಕ ನೋಟ ಕಾಪಾಡಿಕೊಳ್ಳಲು ಸಾಕಷ್ಟು ಸಮಯ ಮತ್ತು ಶ್ರಮವನ್ನು ಹಾಕುತ್ತಾರೆ. ಇವರು ತಮ್ಮ ಇಚ್ಛೆಗೆ ತಕ್ಕಂತೆ ಇರುತ್ತಾರೆ. ಸಿಂಹ ರಾಶಿಯವರು ತಮ್ಮ ಸಾಮರ್ಥ್ಯಗಳಲ್ಲಿ ಬಹಳ ವಿಶ್ವಾಸ (confidence) ವನ್ನು ಹೊಂದಿರುತ್ತಾರೆ. ಇವರು ಸಾಮಾನ್ಯವಾಗಿ ಇತರರನ್ನು ತಮ್ಮತ್ತ ಸೆಳೆಯುವ ಸ್ವಾಭಾವಿಕ ಆಕರ್ಷಣೆಯನ್ನು ಹೊಂದಿರುತ್ತಾರೆ.
ಕನ್ಯಾರಾಶಿ (Virgo)
ಇವರು ಸ್ವಭಾವತಃ ಸೂಕ್ಷ್ಮವಾಗಿರುತ್ತಾರೆ ಮತ್ತು ಅವರ ನೋಟಕ್ಕೆ ಹೆಚ್ಚಿನ ಗಮನ ನೀಡುತ್ತಾರೆ. ಬ್ರಾಂಡೆಡ್ ಬಟ್ಟೆ (Branded cloth) ಗಳನ್ನು ಧರಿಸಿ ಗಮನ ಸೆಳೆಯುತ್ತಾರೆ. ಇವರು ಶಾಂತ ಮತ್ತು ಸಹಾನುಭೂತಿಯ ಶಕ್ತಿಯನ್ನು ಹೊಂದಿದ್ದಾರೆ. ಅದು ಜನರನ್ನು ಸೆಳೆಯುತ್ತದೆ. ಅವರು ಆಗಾಗ್ಗೆ ಪ್ರಯತ್ನಿಸದೆಯೂ ಮೋಹಕತೆಯನ್ನು ಹೊರಸೂಸುತ್ತಾರೆ.
ತುಲಾ ರಾಶಿ (Libra)
ಇವರು ಸಮತೋಲನ ಮತ್ತು ಸೌಂದರ್ಯ (beauty) ದ ಸ್ವಾಭಾವಿಕ ಪ್ರಜ್ಞೆಯನ್ನು ಹೊಂದಿದ್ದಾರೆ. ಇವರ ನೋಟದ ಬಗ್ಗೆ ಹೆಚ್ಚು ಜಾಗೃತರಾಗುತ್ತಾರೆ. ಇವರು ವಿಭಿನ್ನ ಅಭಿರುಚಿಯನ್ನು ಹೊಂದಿದ್ದಾರೆ ಮತ್ತು ಅವರ ವೈಯಕ್ತಿಕ ಶೈಲಿ ಸೇರಿದಂತೆ ಜೀವನದ ಎಲ್ಲಾ ಅಂಶಗಳಲ್ಲಿ ಸೊಬಗು ಮತ್ತು ಸೌಂದರ್ಯವನ್ನು ಮೆಚ್ಚುತ್ತಾರೆ. ಇವರ ಆಳವಾದ ನೋಟ ಮತ್ತು ನಿಗೂಢ (mystery) ಆಕರ್ಷಣೆ ಅನೇಕರಿಗೆ ಎದುರಿಸಲಾಗದಂತಾಗುತ್ತದೆ. ಅವರು ತಮ್ಮ ಕಾಂತೀಯ ವ್ಯಕ್ತಿತ್ವ, ಉತ್ಸಾಹದಿಂದ ಇತರರಿಗೆ ಮೋಡಿ ಮಾಡುತ್ತಾರೆ.
ಮಹಿಳೆಯರೂ ಪಿಂಡದಾನ ಮಾಡಬಹುದು: ಗರುಡ ಪುರಾಣ ಏನು ಹೇಳುತ್ತೆ?
ಮಕರ ರಾಶಿ (Capricorn)
ಅವರು ತಮ್ಮ ವೈಯಕ್ತಿಕ ಇಮೇಜ್ ಬಗ್ಗೆ ತುಂಬಾ ಗಮನ (attention) ಕೊಡುತ್ತಾರೆ. ತಮ್ಮ ಗುರಿಗಳನ್ನು ಸಾಧಿಸುವಲ್ಲಿ ನಿರತರಾಗಿರುತ್ತಾರೆ. ತಮ್ಮ ಹೊಳಪಿಗೆ ಆದ್ಯತೆ ನೀಡುತ್ತಾರೆ. ಇವರು ತಮ್ಮ ಡ್ರೆಸ್ಸಿಂಗ್ ಆಯ್ಕೆಗಳ ಮೂಲಕ ಜನರಿಗೆ ಇಷ್ಟ ಆಗುತ್ತಾರೆ. ಇವರು ಜನರ ಸುತ್ತಲೂ ಇರುವುದನ್ನು ಇಷ್ಟಪಡುತ್ತಾರೆ. ಅವರ ಮೋಹಕ ವರ್ಚಸ್ಸಿನಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ.
ಇವರು ತಮ್ಮ ನೋಟದ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ
ಮೇಷ, ಮಿಥುನ, ಕಟಕ (Kataka) , ವೃಶ್ಚಿಕ, ಧನು ರಾಶಿ, ಕುಂಭ ಮತ್ತು ಮೀನ ರಾಶಿ (Pisces) ಯವರು ಜನರ ಮುಂದೆ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುವುದಿಲ್ಲ. ಅವರು ತಮ್ಮ ಬಗ್ಗೆ ತುಂಬಾ ವಿಶ್ವಾಸ ಹೊಂದಿದ್ದಾರೆ.