ರುದ್ರಾಕ್ಷಿ ಧರಿಸುವಾಗ ‘ಈ ನಿಯಮ’ ತಪ್ಪಿದರೆ ಶಿವನ ಕೆಂಗಣ್ಣಿಗೆ ಗುರಿಯಾಗುವಿರಿ..!
ಅನೇಕ ಜ್ಯೋತಿಷಿಗಳು ನಿಮ್ಮ ಜಾತಕದಲ್ಲಿ ಗ್ರಹಗಳ ಸ್ಥಾನವನ್ನು ನೋಡಿ ರುದ್ರಾಕ್ಷವನ್ನು ಧರಿಸಲು ಸಲಹೆ ನೀಡುತ್ತಾರೆ. ರುದ್ರಾಕ್ಷಿಯನ್ನು ಧರಿಸುವ ಮೂಲಕ, ನೀವು ಆಧ್ಯಾತ್ಮಿಕತೆಯ ಮೇಲೆ ಕೇಂದ್ರೀಕರಿಸುತ್ತೀರಿ. ರುದ್ರಾಕ್ಷಿಯನ್ನು ಧರಿಸುವ ನಿಯಮಗಳು ಏನು? ಇಲ್ಲಿದೆ ಡಿಟೇಲ್ಸ್.
ರುದ್ರಾಕ್ಷಿ ಅಥವಾ ರುದ್ರಾಕ್ಷ ಮಹಾದೇವನಿಗೆ ಬಹಳ ಪ್ರಿಯ. ರುದ್ರಾಕ್ಷಿಯನ್ನು ಧರಿಸಿದವರಿಗೆ ಶಿವನ ಆಶೀರ್ವಾದವಿದೆ ಎಂದು ನಂಬಲಾಗಿದೆ. ದಂತಕಥೆಯ ಪ್ರಕಾರ, ಮಹಾದೇವನಿಗೆ ಪ್ರಿಯವಾದ ರುದ್ರಾಕ್ಷಿ (Rudraksha ) ಯನ್ನು ಮಹಾದೇವನ ಕಣ್ಣೀರಿನಿಂದ ರಚಿಸಲಾಗಿದೆ. ಆದ್ದರಿಂದ ರುದ್ರಾಕ್ಷಿಯನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ ರುದ್ರಾಕ್ಷಿಯನ್ನು ಧರಿಸಲು ಕೆಲವು ಪ್ರಮುಖ ನಿಯಮಗಳಿವೆ. ಈ ಕುರಿತು ಇಲ್ಲಿದೆ ಮಾಹಿತಿ.
ರುದ್ರಾಕ್ಷಿಯಲ್ಲಿ ಹಲವು ವಿಧಗಳಿವೆ. ಒಂದು ಮುಖದಿಂದ 14 ಮುಖಿಯವರೆಗಿನ ರುದ್ರಾಕ್ಷದ ವಿಧಗಳಿವೆ. ಒಂದೊಂದು ರುದ್ರಾಕ್ಷಕ್ಕೂ ಒಂದೊಂದು ಮಹತ್ವವಿದೆ. ಮನಸ್ಸಿನಿಂದ ನಕಾರಾತ್ಮಕ ಆಲೋಚನೆ (Negative thinking) ಗಳನ್ನು ತೊಡೆದುಹಾಕುವುದರ ಜೊತೆಗೆ, ಕೆಟ್ಟ ಸಮಯವನ್ನು ಕಳೆಯುವಲ್ಲಿ ರುದ್ರಾಕ್ಷದ ಪಾತ್ರವೂ ಮುಖ್ಯವಾಗಿದೆ . ಆದ್ದರಿಂದ ರುದ್ರಾಕ್ಷವನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ರುದ್ರಾಕ್ಷಿಯನ್ನು ಭೂಮಿಯ ಮೇಲಿನ ಶಿವನ ಸಂಕೇತವೆಂದು ಪರಿಗಣಿಸಲಾಗಿದೆ. ಶಾಸ್ತ್ರದ ಪ್ರಕಾರ ರುದ್ರಾಕ್ಷಿಯನ್ನು ಧರಿಸಲು ಕೆಲವು ಪ್ರಮುಖ ನಿಯಮಗಳಿವೆ. ನೀವು ಈ ನಿಯಮಗಳನ್ನು ಅನುಸರಿಸದಿದ್ದರೆ, ನಿಮ್ಮ ಕೆಟ್ಟ ದಿನ (bad day) ಗಳು ಆರಂಭವಾಗುತ್ತದೆ.
ಅನೇಕ ಜ್ಯೋತಿಷಿ (astrologer) ಗಳು ನಿಮ್ಮ ಜಾತಕದಲ್ಲಿ ಗ್ರಹಗಳ ಸ್ಥಾನವನ್ನು ನೋಡಿ ರುದ್ರಾಕ್ಷವನ್ನು ಧರಿಸಲು ಸಲಹೆ ನೀಡುತ್ತಾರೆ. ರುದ್ರಾಕ್ಷಿಯನ್ನು ಧರಿಸುವ ಮೂಲಕ, ನೀವು ಆಧ್ಯಾತ್ಮಿಕತೆಯ ಮೇಲೆ ಕೇಂದ್ರೀಕರಿಸುತ್ತೀರಿ. ರುದ್ರಾಕ್ಷಿಯನ್ನು ಧರಿಸುವ ನಿಯಮಗಳು ಏನು? ಇಲ್ಲಿದೆ ಡಿಟೇಲ್ಸ್.
ರುದ್ರಾಕ್ಷವನ್ನು ಧರಿಸಲು ಕೆಲವು ನಿಯಮ (ಈ ನಿಯಮಗಳನ್ನು ಉಲ್ಲಂಘಿಸುವವನು ಶಿವನ ಕೋಪಕ್ಕೆ ಗುರಿಯಾಗುತ್ತಾನೆ ಎಂದು ಹೇಳಲಾಗುತ್ತದೆ.)
ನೀವು ಧೂಮಪಾನ ಮಾಡಿದರೆ ಅಥವಾ ಮಾಂಸವನ್ನು ಸೇವಿಸಿದರೆ, ನಿಮ್ಮ ರುದ್ರಾಕ್ಷವು ಅಶುದ್ಧ (impure) ವಾಗಿರುತ್ತದೆ. ಭವಿಷ್ಯದಲ್ಲಿ ನೀವು ತೊಂದರೆಗಳನ್ನು ಎದುರಿಸಬಹುದು. ಹಾಗಾಗಿ ಅಂತಹವರು ರುದ್ರಾಕ್ಷವನ್ನು ಧರಿಸಬಾರದು.
ಮಲಗುವಾಗ ರುದ್ರಾಕ್ಷವನ್ನು ಧರಿಸಬೇಡಿ
ಮಲಗುವಾಗ ರುದ್ರಾಕ್ಷಿಯನ್ನು ತೆಗೆಯಬೇಕು. ಇಲ್ಲದಿದ್ದರೆ ನೀವು ಕೆಟ್ಟ ಕನಸು (dream) ಗಳನ್ನು ಕಾಣುತ್ತೀರಿ. ಮನಸ್ಸು ಚಂಚಲವಾಗಿರುತ್ತದೆ.
ನೀವು ಯಾರೊಬ್ಬರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುತ್ತಿದ್ದರೆ, ರುದ್ರಾಕ್ಷಿಯನ್ನು ದೂರವಿಡಿ. ಅಂತಹ ಜಾಗದಲ್ಲಿ ರುದ್ರಾಕ್ಷವನ್ನು ಇಟ್ಟರೆ ಅದು ಅಶುದ್ಧವಾಗುತ್ತದೆ. ಇದು ನಿಮ್ಮ ಜೀವನದಲ್ಲಿ ನಕಾರಾತ್ಮಕತೆಯನ್ನು ತರಬಹುದು .
ಮಹಿಳೆಯರೂ ಪಿಂಡದಾನ ಮಾಡಬಹುದು: ಗರುಡ ಪುರಾಣ ಏನು ಹೇಳುತ್ತೆ?
ಇಂತಹ ರುದ್ರಾಕ್ಷಿಯನ್ನು ಧರಿಸಬೇಡಿ
ಬೇರೆಯವರ ರುದ್ರಾಕ್ಷಿಯನ್ನು ಧರಿಸಬೇಡಿ. ಹಾಗೆಯೇ ಬೇರೆಯವರು ಧರಿಸಬಾರದು. ಅಲ್ಲದೆ ರುದ್ರಾಕ್ಷವನ್ನು ಅಶುದ್ಧ ಕೈಗಳಿಂದ ಮುಟ್ಟಬಾರದು. ಶೌಚಾಲಯ (Toilet) ಕ್ಕೆ ಹೋಗುವಾಗ ಅಥವಾ ದೈನಂದಿನ ಚಟುವಟಿಕೆಗಳನ್ನು ಮಾಡುವಾಗ ರುದ್ರಾಕ್ಷವನ್ನು ತೆಗೆಯಬೇಕು.
ಜ್ಯೋತಿಷಿಯನ್ನು ಸಂಪರ್ಕಿಸಿ
ಯಾರೊಬ್ಬರ ಸಲಹೆಯ ಮೇರೆಗೆ ರುದ್ರಾಕ್ಷವನ್ನು ಧರಿಸಬೇಡಿ. ಮೊದಲು ಜ್ಯೋತಿಷಿಯನ್ನು ಸಂಪರ್ಕಿಸಿ. ಏಕೆಂದರೆ ರುದ್ರಾಕ್ಷ ಮಾಲೆ (Rudraksha garland) ಯು ರಾಶಿ ಮತ್ತು ಗ್ರಹಗಳ ಪ್ರಕಾರ ಭಿನ್ನವಾಗಿರಬಹುದು. ಉದಾ. ಪಂಚಮುಖಿ ರುದ್ರಾಕ್ಷವು ಮೀನ, ಧನು ರಾಶಿ ಮತ್ತು ಮೇಷ ರಾಶಿಯ ಜನರಿಗೆ ಉಪಯುಕ್ತವೆಂದು ಪರಿಗಣಿಸಲಾಗಿದೆ.
'ಈ ರಾಶಿ'ಯವರಿಗೆ ಹೆಂಡತಿ ಎಂದರೆ ಪಂಚಪ್ರಾಣ..!
ಈ ರೀತಿಯ ರುದ್ರಾಕ್ಷಿಯನ್ನು ಧರಿಸಬೇಡಿ
ಕೆಲವು ರುದ್ರಾಕ್ಷಿಗಳಲ್ಲಿ ಹುಳುಗಳಿದ್ದು ಅವು ಕೆಟ್ಟದಾಗಿವೆ. ಆದ್ದರಿಂದ ರುದ್ರಾಕ್ಷಿಯನ್ನು ಖರೀದಿಸುವಾಗ ಎಚ್ಚರಿಕೆಯಿಂದ ನೋಡಿ.
ರುದ್ರಾಕ್ಷಿ ಮುರಿದರೆ ಅಥವಾ ಒಡೆದ (broken) ರೆ ಅದನ್ನು ಧರಿಸಬೇಡಿ.
ಕೆಲವೊಮ್ಮೆ ರುದ್ರಾಕ್ಷವು ತಪ್ಪು ರಂಧ್ರಗಳನ್ನು ಹೊಂದಿರುತ್ತದೆ. ನೀವು ಅಂತಹ ರುದ್ರಾಕ್ಷವನ್ನು ಧರಿಸಿದರೆ, ತಕ್ಷಣ ಅದನ್ನು ತೆಗೆದುಹಾಕಿ.
ರುದ್ರಾಕ್ಷಿಯನ್ನು ಧರಿಸುವಾಗ ಅದು ಪೂರ್ಣ ವೃತ್ತವಾಗಿರಬೇಕು (ಗುಂಡಾಗಿರಬೇಕು). ಅಲ್ಲದೆ, ಅದರಲ್ಲಿ ಹಗ್ಗವನ್ನು ಹಾಕಲು ರಂಧ್ರ ಇರಬೇಕು.
ಕಪ್ಪು ದಾರದಲ್ಲಿ ರುದ್ರಾಕ್ಷವನ್ನು ಧರಿಸಬಾರದು. ಯಾವಾಗಲೂ ರುದ್ರಾಕ್ಷಿ ಹಳದಿ (Yellow) ಅಥವಾ ಕೆಂಪು ದಾರದಲ್ಲಿರಬೇಕು.
ರುದ್ರಾಕ್ಷವನ್ನು ಧರಿಸಿದ ನಂತರ, ಭಗವಾನ್ ಮಹಾದೇವನನ್ನು ಧ್ಯಾನಿಸಿ. ಅದರ ನಂತರ ಒಬ್ಬರು ಶಿವ ಮಂತ್ರವನ್ನು 'ಓಂ ನಾಮ: ಶಿವಾಯ' ಜಪಿಸಬೇಕು.