ದುಡ್ಡು ಮಾಡೋದಷ್ಟೇ ಈ ರಾಶಿಯವರ ಟಾರ್ಗೆಟ್, ಧನಯೋಗ ಯಾರಿಗಿದೆ?
ಹಣ ಎಂದರೆ ಹೆಚ್ಚು ಇಷ್ಟ ಪಡುವ ರಾಶಿಗಳು ಇವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಕೆಲವರಿಗೆ ಹಣ ಕೇವಲ ಜೀವನ ಸಾಗಿಸಲು ಬೇಕಾದ ಅವಶ್ಯಕ ವಸ್ತುವಾದರೆ, ಇನ್ನು ಕೆಲವರಿಗೆ ಹಣವೇ ಸರ್ವಸ್ವವಾಗಿರುತ್ತದೆ. ಹಾಗಾಗಿ ಯಾವ್ಯಾವ ರಾಶಿಯವರಿಗೆ ಹಣ ಮೇಲೆ ಹೆಚ್ಚು ವ್ಯಾಮೋಹವೆಂಬುದನ್ನು ತಿಳಿಯೋಣ ಮತ್ತು ಜಾತಕದಲ್ಲಿ ಧನಯೋಗದ ಬಗ್ಗೆ ತಿಳಿಯುವುದು ಹೇಗೆಂದು ನೋಡೋಣ...
ಹಣ (Money), ಸಂಪತ್ತು, ಲಕ್ಷ್ಮೀ ಎಂದು ಕರೆಯುವ ದುಡ್ಡಿನ ಬಗ್ಗೆ ಯಾರಿಗೆ ವ್ಯಾಮೋಹ ಇರುವುದಿಲ್ಲ. ಎಲ್ಲರಿಗೂ ದುಡ್ಡು ಬೇಕು, ದುಡ್ಡಿಲ್ಲದೇ ಜೀವನವಿಲ್ಲ ಆದರೆ ದುಡ್ಡೇ ಎಲ್ಲವೂ ಅಲ್ಲ. ಹಾಗಾಗಿ ಹಣದ ಬಗ್ಗೆ ಒಲವು ಇಷ್ಟಿರಬೇಕೋ ಅಷ್ಟೇ ಇದ್ದರೆ ಚೆಂದ. ಆದರೆ ಕೆಲವರಿಗೆ ದುಡಿದಷ್ಟೂ (Earning) ಕಡಿಮೆಯೇ, ಹಣ ಎಷ್ಟಿದ್ದರೂ ಸಾಲದು. ಇನ್ನೂ ಬೇಕು ಎನ್ನುತ್ತಾ, ಹಣ ಸಂಪಾದಿಸುವ ಬಗ್ಗೆಯೇ ಯೋಚಿಸುವ ಮತ್ತು ಹಣ ಗಳಿಸುವ ರಾಶಿಗಳ (Zodiac sign) ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಜ್ಯೋತಿಷ್ಯ ಶಾಸ್ತ್ರ (Astrology) ಹೇಳುವ ಪ್ರಕಾರ ರಾಶಿ ಮತ್ತು ನಕ್ಷತ್ರಗಳು ಆಧಾರದ ಮೇಲೆ ಗುಣ ಲಕ್ಷಣಗಳನ್ನು ತಿಳಿಯಬಹುದಾಗಿದೆ. ಪ್ರತಿ ರಾಶಿಯ ವ್ಯಕ್ತಿಗಳಲ್ಲಿಯೂ ಅವರದ್ದೇ ಆದ ವಿಶೇಷ ಗುಣಗಳಿರುತ್ತದೆ. ಹಣ ಸಂಪಾದನೆಯ ವಿಷಯಕ್ಕೆ ಬಂದರೆ ಕೆಲವರಿಗೆ ಅದು ಅವಶ್ಯಕತೆಗಾಗಿ ಅಷ್ಟೇ, ಆದರೆ ಮತ್ತೆ ಕೆಲವು ರಾಶಿಯವರಿಗೆ ದುಡ್ಡೇ ಸರ್ವಸ್ವವಾಗಿರುತ್ತದೆ. ಅದಕ್ಕೆ ಜಾತಕದ ಪ್ರಭಾವದ ಜೊತೆಗೆ ಕರ್ಮ ಫಲವು ಅಡಗಿರುತ್ತದೆ. ಹಾಗಾಗಿ ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ. ಅಷ್ಟೇ ಅಲ್ಲದೇ ಜಾತಕದಲ್ಲಿ ಧನ ಯೋಗವಿದೆಯೇ (Dhana yoga)? ಅಥವಾ ಇಲ್ಲವೇ? ಎಂಬುದರ ಬಗ್ಗೆ ಸಹ ತಿಳಿಯೋಣ.
ನಿಮ್ಮ ರಾಶಿಗೆ ಯಾವ ಬಣ್ಣ ಅದೃಷ್ಟ ತರುತ್ತೆ ಗೊತ್ತಾ..?
ದುಡ್ಡು ಮಾಡುವ ಬಗ್ಗೆ ಹೆಚ್ಚು ಇಂಟ್ರೆಸ್ಟ್ ಇರುವ ರಾಶಿಗಳು
ಜ್ಯೋತಿಷ್ಯ ಶಾಸ್ತ್ರದ ಅನುಸಾರ ಹಣ ಮಾಡುವ ಹೆಚ್ಚಿನ ಇಚ್ಛೆ ಹೊಂದಿರುವುದು ಶುಕ್ರ (Venus), ಮಂಗಳ (Mars), ಚಂದ್ರ ಮತ್ತು ಸೂರ್ಯ ಗ್ರಹದ ರಾಶಿಗಳಾಗಿವೆ. ಅಂದರೆ ಶುಕ್ರ ಗ್ರಹದ ರಾಶಿಯಾದ ವೃಷಭ, ಮಂಗಳನ ರಾಶಿಯಾದ ವೃಶ್ಚಿಕ ಮತ್ತು ಮೇಷ, ಸೂರ್ಯನ ರಾಶಿಯಾದ ಸಿಂಹ ಮತ್ತು ಚಂದ್ರ ಗ್ರಹದ ರಾಶಿಯಾದ ಕರ್ಕಾಟಕ ರಾಶಿಗಳಿಗೆ ದುಡ್ಡು ಮಾಡುವ ಬಗ್ಗೆ ತೀವ್ರವಾದ ಆಸಕ್ತಿ ಇರುತ್ತದೆ. ಈ ರಾಶಿ ಚಕ್ರದ ವ್ಯಕ್ತಗಳಿದೆ ಭೌತಿಕ ಸುಖದ ಬಗ್ಗೆ ಹೆಚ್ಚಿನ ಒಲವಿರುತ್ತದೆ.
ಜಾತಕದಲ್ಲಿರಬೇಕಾದ ಧನ ಯೋಗ..
ಮುಖ್ಯವಾಗಿ ಜಾತಕದಲ್ಲಿ (Horoscope) ಧನಯೋಗವಿರುವುದು ಹೆಚ್ಚು ಅವಶ್ಯಕವಾಗಿತ್ತದೆ. ಹಣ ಯೋಗವು ಜಾತಕದ ಎರಡನೇ ಮತ್ತು ಎಂಟನೇ ಮನೆಗೆ ಸಂಬಂಧಿಸಿದ್ದಾಗಿರುತ್ತದೆ. ಈ ಮನೆಗಳಲ್ಲಿ ವೃಷಭ ಮತ್ತು ವೃಶ್ಚಿಕ ರಾಶಿಗಳ ಅಧಿಪತ್ಯವಿರುತ್ತದೆ. ಅದೇ ಒಂಭತ್ತು, ಹನ್ನೊಂದು ಮತ್ತು ಹನ್ನೆರಡನೇ ಮನೆಯನ್ನು ಭಾಗ್ಯದ (Luck) ಭಾವವೆಂದು ಹೇಳಲಾಗುತ್ತದೆ. ಜಾತಕದಲ್ಲಿ ಈ ಮನೆಗಳಲ್ಲಿ ಪ್ರಬಲ ಗ್ರಹಗಳಿದ್ದರೆ ಧನ ಯೋಗ ಉಂಟಾಗುತ್ತದೆ. ಹಾಗಾಗಿ ಜಾತಕದಲ್ಲಿ ಧನ ಯೋಗ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ತಿಳಿಯಬಹುದಾಗಿದೆ. ಅದು ಹೇಗೆ ಎಂಬುದನ್ನು ಇಲ್ಲಿ ನೋಡೋಣ...
ಹಾರ್ಟ್ ಪ್ರಾಬ್ಲಂನಿಂದ ಪಾರಾಗಲು ಜ್ಯೋತಿಷ್ಯ ಉಪಾಯ!
- ಜಾತಕದಲ್ಲಿ ಏಳನೇ ಮನೆಯಲ್ಲಿ ಮಂಗಳ ಅಥವಾ ಶನಿ (Saturn) ವಿರಾಜಮಾನರಾಗಿದ್ದರೆ, ಹನ್ನೊಂದನೇ ಮನೆಯಲ್ಲಿ ಶನಿ ಅಥವಾ ರಾಹು ಇದ್ದರೆ ಅಂಥ ಯೋಗವುಳ್ಳವರು ಕೆಟ್ಟ ಮಾರ್ಗದಿಂದ ಹಣವನ್ನು ಸಂಪಾದಿಸುತ್ತಾರೆ.
- ಒಂದೊಮ್ಮೆ ಚಂದ್ರ (Money) ಮತ್ತು ಮಂಗಳ ಗ್ರಹ ಒಟ್ಟಿಗೆ ಒಂದೇ ಮನೆಯಲ್ಲಿ ಸ್ಥಿತರಾಗಿದ್ದರೆ. ಇದರಿಂದ ಚಂದ್ರ ಮಂಗಳ ಯೋಗ ಉಂಟಾಗುತ್ತದೆ. ಇದು ಧನಯೋಗವನ್ನು ಸೂಚಿಸುತ್ತದೆ.
- ಯಾವುದೇ ವ್ಯಕ್ತಿಯ ಜಾತಕದಲ್ಲಿ ಮಂಗಳ ಗ್ರಹವು ಶುಕ್ರ ಗ್ರಹದ ಜೊತೆಗೆ ಜೋಡಿಯಾಗಿ ಸ್ಥಿತವಾಗಿದ್ದರೆ. ಅಂಥವರಿಗೆ ಮಹಿಳೆಯ ಕಡೆಯಿಂದ ಹಣ ಬರುವ ಮೂಲಕ ಧನ ಲಾಭವಾಗುತ್ತದೆ.
- ವ್ಯಕ್ತಿಯ ಜಾತಕದಲ್ಲಿ ಮಂಗಳ ಮತ್ತು ಗುರು ಗ್ರಹದ (Jupiter) ಯುತಿಯಾದಾಗ ಧನ ಲಾಭದ ಸಂಪೂರ್ಣ ಯೋಗ ಉಂಟಾಗುತ್ತದೆ.
- ವ್ಯಕ್ತಿಯ ಜಾತಕದಲ್ಲಿ ಐದನೇ ಮನೆಯಲ್ಲಿ ಸೂರ್ಯ (Sun) ಗ್ರಹವಿದ್ದು, ಲಾಭ ಸ್ಥಾನದಲ್ಲಿ ಶನಿ ಇದ್ದರೆ, ಅಷ್ಟೇ ಅಲ್ಲದೆ ಚಂದ್ರ, ಶುಕ್ರ ಗ್ರಹದ ಯುತಿಯಾದಾಗ ಅಂಥವರು ಧನವಂತರಾಗುತ್ತಾರೆ.