ಈ 5 ರಾಶಿಯ ಜನರಿಗಂತೂ ಖರ್ಚಿನ ಮೇಲೆ ನಿಯಂತ್ರಣವೇ ಇಲ್ಲ, ನೀರಿನಂತೆ ಹಣ ವ್ಯಯಿಸುತ್ತಾರೆ!
ಅಬ್ಬಬ್ಬಾ, ಈ ರಾಶಿಯವರು ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಈ ಜನರು ತಮ್ಮ ಉಳಿತಾಯದ ಬಗ್ಗೆ ಗಮನ ಹರಿಸುವುದಿಲ್ಲ. ಈ ರಾಶಿಚಕ್ರದ ಚಿಹ್ನೆಗಳ ಬಗ್ಗೆ ತಿಳಿಯಿರಿ.
ಅಗತ್ಯದ ವಸ್ತುಗಳನ್ನು ಮಾತ್ರ ಖರೀದಿಸುವ ಜನರಿದ್ದಾರೆ. ಆದರೆ ಕೆಲವರು ಕಂಡಿದ್ದೆಲ್ಲವನ್ನು ಕೊಂಡುಕೊಳ್ಳೋ ಚಪಲದವರೂ ಇದ್ದಾರೆ. ಏನನ್ನಾದರೂ ಖರೀದಿಸುವ ಬಯಕೆಯು ಕೆಲವು ಜನರಲ್ಲಿ ಎಷ್ಟು ದೊಡ್ಡದಾಗಿರುತ್ತದೆ ಎಂದರೆ ಅವರು ದಿವಾಳಿಯಾಗರೂ, ಸಾಲ ಮಾಡಿಯಾದ್ರೂ ಸರಿ, ತುಪ್ಪ ತಿನ್ನೋಣ ಎನ್ನುವವರು. ತಿಂಗಳ ಸಂಬಂಳ ಖಾತೆಗೆ ಹೀಗೆ ಬಂದು ಬಿದ್ದು ಹಾಗೆ ಮಾಯವಾಗುತ್ತದೆ. ಇವರನ್ನೇ ಶಾಪೋಹಾಲಿಕ್ಸ್ ಎನ್ನುವುದು. ಈ ರಾಶಿಚಕ್ರದ ಜನರು ತಮ್ಮ ಆಸೆಗಳನ್ನು ಪೂರೈಸಲು ಯಾವುದೇ ಹಂತಕ್ಕೆ ಹೋಗಬಹುದು. ಅವರ ಬಳಿ ಹಣ ಉಳಿಯುವುದಿಲ್ಲ. ಇಂಥ ಕೊಳ್ಳುಬಾಕ ಮನಸ್ಥಿತಿಯವರು ಸಾಮಾನ್ಯವಾಗಿ ಯಾವ ರಾಶಿಗೆ ಸೇರಿರುತ್ತಾರೆ ನೋಡೋಣ.
ಮಿಥುನ ರಾಶಿ(Gemini)
ಈ ರಾಶಿಯ ಅಧಿಪತಿ ಬುಧ. ಈ ರಾಶಿಚಕ್ರದ ಜನರು ತಮ್ಮ ಅನುಕೂಲಕ್ಕಾಗಿ ಖರ್ಚು ಮಾಡಲು ಹಿಂಜರಿಯುವುದಿಲ್ಲ. ಈ ರಾಶಿಯ ಜನರು ತಮ್ಮ ಜೀವನ ಮತ್ತು ಆಹಾರಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಅವರು ಕಾರ್ಯಕ್ರಮಗಳು, ಕಾರ್ಯಾಗಾರಗಳು ಮತ್ತು ತರಗತಿಗಳಿಗೆ ಖರ್ಚು ಮಾಡುತ್ತಾರೆ. ಅವರು ಹೊಸ ಹವ್ಯಾಸಗಳನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಈ ಜನರು ಇತರರ ಮೇಲೂ ಮುಕ್ತವಾಗಿ ಖರ್ಚು ಮಾಡುತ್ತಾರೆ. ಅದಕ್ಕಾಗಿಯೇ ಕೆಲವೊಮ್ಮೆ ಹಣವು ಅವರೊಂದಿಗೆ ಉಳಿಯುವುದಿಲ್ಲ. ಒಳ್ಳೆಯ ವಿಷಯವೆಂದರೆ ಅವರು ಭೌತಿಕ ವಸ್ತುಗಳಿಗೆ ಖರ್ಚು ಮಾಡುವುದಿಲ್ಲ.
ಸಿಂಹ ರಾಶಿ(Leo)
ಸಿಂಹ ರಾಶಿಯ ಅಧಿಪತಿ ಸೂರ್ಯ. ಈ ರಾಶಿಚಕ್ರದ ಜನರು ತಮ್ಮ ಭವ್ಯವಾದ ಆಡಂಬರತೆ ಮತ್ತು ಪ್ರದರ್ಶನಕ್ಕೆ ಹೆಸರುವಾಸಿಯಾಗಿದ್ದಾರೆ. ಈ ಜನರು ಐಷಾರಾಮಿ ಜೀವನಶೈಲಿಯನ್ನು ತುಂಬಾ ಇಷ್ಟಪಡುತ್ತಾರೆ. ಈ ಜನರು ತಮ್ಮ ಮೇಲೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಹಲವು ಬಾರಿ ಈ ಚಟದಿಂದ ಇವರು ಸಾಲಗಾರರಾಗುತ್ತಾರೆ. ತಮ್ಮನ್ನು ತಾವು ನವೀಕರಿಸಿಕೊಳ್ಳಲು ಇಷ್ಟಪಡುತ್ತಾರೆ. ಹಾಗಾಗಿ ಟ್ರೆಂಡಿಯಾಗಿರಲು ವಸ್ತುಗಳನ್ನು ಖರೀದಿಸುತ್ತಾರೆ. ಅವರು ಬ್ರ್ಯಾಂಡ್‌ಗಳು ಮತ್ತು ವಿನ್ಯಾಸಕರ ಮೇಲೆ ಹಣ ಚೆಲ್ಲುತ್ತಾರೆ. ಅವರ ಕ್ಲೋಸೆಟ್‌ಗಳನ್ನು ನೋಡಿ, ನೀವು ಖಚಿತವಾಗಿ ಅಸೂಯೆ ಅನುಭವಿಸುವಿರಿ. ಎಷ್ಟೇ ಬೆಲೆ ಬಾಳುವದಾದರೂ ತಮ್ಮ ಕ್ಲೋಸೆಟ್ ಅನ್ನು ಪುನಃ ತುಂಬಲು ಮತ್ತು ನವೀಕರಿಸಲು ಅವರು ಇಷ್ಟಪಡುತ್ತಾರೆ.
Somvati Amavasya 2023: ಬಡತನ ತೊಲಗಿಸಲು ಈ ದಿನ ಈ ಪರಿಹಾರ ಮಾಡಿ..
ತುಲಾ ರಾಶಿ (Libra)
ಇದು ಶುಕ್ರನ ರಾಶಿಚಕ್ರದ ಚಿಹ್ನೆ, ಇದು ದೈಹಿಕ ಸಂತೋಷದ ಅಂಶವಾಗಿದೆ. ಈ ರಾಶಿಚಕ್ರದ ಜನರು ತುಂಬಾ ದುಬಾರಿ ಹವ್ಯಾಸಗಳನ್ನು ಹೊಂದಿದ್ದಾರೆ ಮತ್ತು ಇದನ್ನು ಪೂರೈಸಿಕೊಳ್ಳುವಲ್ಲಿ ಹಿಂದೆ ಸರಿಯುವುದಿಲ್ಲ. ಈ ಜನರು ತಮ್ಮ ಮೇಲೆ ಮಾತ್ರವಲ್ಲದೆ ತಮ್ಮ ಸ್ನೇಹಿತರು ಮತ್ತು ಸಂಬಂಧಿಕರ ಹವ್ಯಾಸಗಳನ್ನು ಪೂರೈಸಲು ಕೂಡಾ ಹಣವನ್ನು ಖರ್ಚು ಮಾಡುತ್ತಾರೆ. ಜನರನ್ನು ಮೆಚ್ಚಿಸುವ ಗುಣ ಇವರದು. ಅವರು ಎಲ್ಲದರಲ್ಲಿಯೂ ಉತ್ತಮವಾದದ್ದನ್ನು ಬಯಸುತ್ತಾರೆ.
ಧನು ರಾಶಿ(Sagittarius)
ಕ್ರೆಡಿಟ್ ಕಾರ್ಡ್ ಅನ್ನು ಸ್ವೈಪ್ ಮಾಡುವ ಮೊದಲು ಅವರು ಒಂದೇ ಒಂದು ಸೆಕೆಂಡ್ ಹಿಂಜರಿಯುವುದಿಲ್ಲ. ಆದರೆ ಅವರು ಇದನ್ನು ಪ್ರಯಾಣ ಮತ್ತು ಹೊಸ ಅನುಭವಗಳಿಗಾಗಿ ಮಾಡುತ್ತಾರೆ. ಅವರು ಹೊಸ ವಿಷಯಗಳನ್ನು ಮತ್ತು ಸ್ಥಳಗಳನ್ನು ಅನ್ವೇಷಿಸಲು ಇಷ್ಟ ಪಡುತ್ತಾರೆ. ಅವರು ಅಪರೂಪವಾಗಿ ಮೇಕ್ಅಪ್, ಬ್ಯಾಗ್‌ಗಳು ಮತ್ತು ಬೂಟುಗಳಂತಹ ಭೌತಿಕ ವಸ್ತುಗಳ ಮೇಲೆ ಖರ್ಚು ಮಾಡುತ್ತಾರೆ.
ಭಾನುವಾರ ಅಶ್ವತ್ಥ ಮರವನ್ನು ಪೂಜಿಸಿದ್ರೆ ಮನೆಗೆ ಬರ್ತಾಳೆ ದರಿದ್ರ ಲಕ್ಷ್ಮೀ! ಯಾಕೆ ಗೊತ್ತಾ?
ಕುಂಭ ರಾಶಿ(Aquarius)
ಈ ರಾಶಿಯ ಜನರ ಮೇಲೆ ರಾಶಿಚಕ್ರದ ಪ್ರಭಾವವನ್ನು ಕಾಣಬಹುದು. ಈ ಜನರು ತಮ್ಮ ಸುಳ್ಳು ವೈಭವವನ್ನು ತೋರಿಸಲು ಸಾಕಷ್ಟು ಖರ್ಚು ಮಾಡುತ್ತಾರೆ. ಸಮಾಜದಲ್ಲಿ ತಮ್ಮ ಸ್ಥಾನಮಾನವನ್ನು ಸ್ಥಾಪಿಸಲು, ಈ ಜನರು ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಈ ರಾಶಿಚಕ್ರದ ಜನರು ಎಂದಿಗೂ ಹಣ ಉಳಿಸಲು ಸಾಧ್ಯವಿಲ್ಲ. ಅವರಿಗೆ ಹಣ ಬಂದ ತಕ್ಷಣ ಅದನ್ನು ಖರ್ಚು ಮಾಡುತ್ತಾರೆ.