Somvati Amavasya 2023: ಬಡತನ ತೊಲಗಿಸಲು ಈ ದಿನ ಈ ಪರಿಹಾರ ಮಾಡಿ..

2023ರ ವರ್ಷದ ಮೊದಲ ಸೋಮಾವತಿ ಅಮಾವಾಸ್ಯೆ ಸೋಮವಾರ, ಫೆಬ್ರವರಿ 20ರಂದು ಬರುತ್ತಿದೆ. ಈ ದಿನದ ಸ್ನಾನ ಮತ್ತು ದಾನದ ವಿಶೇಷ ಮಹತ್ವವನ್ನು ಇಲ್ಲಿ ತಿಳಿಸಲಾಗಿದೆ. ಈ ದಿನ ನಿಮ್ಮ ವಿವಿಧ ಸಮಸ್ಯೆಗಳಿಗೆ ಮಾಡಿಕೊಳ್ಳಬಹುದಾದ ವಿವಿಧ ಪರಿಹಾರಗಳೂ ಇಲ್ಲಿವೆ..

Somvati Amavasya 2023 puja muhurat yogas remedies and significance  skr

20 ಫೆಬ್ರವರಿ 2023, ವರ್ಷದ ಮೊದಲ ಸೋಮಾವತಿ ಅಮವಾಸ್ಯೆಯನ್ನು ಸೋಮವಾರ ಆಚರಿಸಲಾಗುತ್ತದೆ. ಈ ದಿನ ಗಂಗಾ ನದಿ ಅಥವಾ ಇನ್ನಾವುದೇ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಈ ದಿನ, ಪೂರ್ವಜರಿಗೆ ನೈವೇದ್ಯ ಮತ್ತು ದಾನಗಳನ್ನು ಸಹ ನೀಡಲಾಗುತ್ತದೆ. ಈ ದಿನದಂದು ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಉಪವಾಸವನ್ನು ಆಚರಿಸುತ್ತಾರೆ ಮತ್ತು ಅಶ್ವತ್ಥ ಮರವನ್ನು ಪ್ರದಕ್ಷಿಣೆ ಮಾಡುತ್ತಾರೆ. ಈ ದಿನಾಂಕದ ಅಧಿಪತಿಯನ್ನು ಪಿತೃ ಎಂದು ಪರಿಗಣಿಸಲಾಗುತ್ತದೆ. ಈ ದಿನ ಸ್ನಾನ ಮಾಡುವುದರಿಂದ ಪಿತ್ರಾದೋಷ, ಕಲಸರ್ಪ ದೋಷಗಳಿಂದ ಮುಕ್ತಿ ದೊರೆಯುತ್ತದೆ.ಪೂರ್ವಜರ ಕೃಪೆಯಿಂದ ಕುಟುಂಬದಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ.

2023ರಲ್ಲಿ ಮೂರು ಸೋಮಾವತಿ ಅಮವಾಸ್ಯೆಗಳು ರೂಪುಗೊಳ್ಳುತ್ತವೆ..
ಫೆಬ್ರವರಿ 20 ರಂದು ಮೊದಲ ಯೋಗ
ಜುಲೈ 17 ರಂದು ಎರಡನೇ ಯೋಗ
ನವೆಂಬರ್ 13 ರಂದು ಮೂರನೇ ಯೋಗ.

ಭಾನುವಾರ ಅಶ್ವತ್ಥ ಮರವನ್ನು ಪೂಜಿಸಿದ್ರೆ ಮನೆಗೆ ಬರ್ತಾಳೆ ದರಿದ್ರ ಲಕ್ಷ್ಮೀ! ಯಾಕೆ ಗೊತ್ತಾ?

ಸೋಮಾವತಿ ಅಮವಾಸ್ಯೆ ಮುಹೂರ್ತ
ಪ್ರಾರಂಭ ದಿನಾಂಕ - 19 ಫೆಬ್ರವರಿ 2023, ಸಮಯ - 04.18 pm
ತಿಥಿ ಮುಕ್ತಾಯ - 20 ಫೆಬ್ರವರಿ 2023, ಸಮಯ - 12.35 pm
ದಾನ ಮುಹೂರ್ತ - ಫೆಬ್ರವರಿ 20 ಬೆಳಿಗ್ಗೆ 07.00 - 08.25 ರವರೆಗೆ
ಪೂಜಾ ಮುಹೂರ್ತ - ಫೆಬ್ರವರಿ 20 ಬೆಳಿಗ್ಗೆ 09.50 - 11.15 ರವರೆಗೆ
ಶಿವಯೋಗ - 20 ಫೆಬ್ರವರಿ 2023 ಬೆಳಿಗ್ಗೆ 11.03 ರಿಂದ 21 ಫೆಬ್ರವರಿ 2023 ರವರೆಗೆ ಬೆಳಿಗ್ಗೆ 06.57 ರವರೆಗೆ

ಅಮಾವಾಸ್ಯೆಯಂದು ತರ್ಪಣ ಬಿಡಿ

  • ಸೋಮಾವತಿ ಅಮಾವಾಸ್ಯೆಯ ದಿನದಂದು ಪುಣ್ಯಸ್ನಾನ ಮತ್ತು ದಾನ ಹಾಗೂ ತರ್ಪಣ ಇತ್ಯಾದಿಗಳಿಗೆ ವಿಶೇಷ ಮಹತ್ವವಿದೆ. ಈ ದಿನ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ಸ್ನಾನ, ತರ್ಪಣ ಇತ್ಯಾದಿಗಳನ್ನು ಮಾಡಬೇಕು. ಇದನ್ನು ಮಾಡುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ಆಶೀರ್ವಾದ ಸಿಗುತ್ತದೆ ಮತ್ತು ಪೂರ್ವಜರು ಸಂತೋಷ ಪಡುತ್ತಾರೆ ಎಂದು ನಂಬಲಾಗಿದೆ.
  •  ಅಲ್ಲದೆ ಈ ದಿನದಂದು ಶಿವ ಮತ್ತು ತಾಯಿ ಪಾರ್ವತಿಯನ್ನು ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ ಮತ್ತು ಜೀವನದಲ್ಲಿ ಎಲ್ಲಾ ದುಃಖಗಳು ನಾಶವಾಗುತ್ತವೆ. ಇದರೊಂದಿಗೆ, ಸಾಧಕರು ಅನೇಕ ರೀತಿಯ ದೋಷಗಳಿಂದ ಮುಕ್ತರಾಗುತ್ತಾರೆ. 

    ವಾರ ಭವಿಷ್ಯ: ವೃಶ್ಚಿಕಕ್ಕೆ ಹಿಂದಿನ ಹೂಡಿಕೆಗಳಿಂದ ಗಣನೀಯ ಆದಾಯ
     
  • ಈ ದಿನದಂದು ಅಶ್ವತ್ಥ ಮರದ ಪೂಜೆಗೆ ವಿಶೇಷ ಮಹತ್ವವಿದೆ. ಈ ದಿನ ಉಪವಾಸವನ್ನು ಆಚರಿಸಿ, ಬೆಳಿಗ್ಗೆ ಅಶ್ವತ್ಥ ಮರಕ್ಕೆ ಗಂಗಾಜಲದಿಂದ ನೀರುಣಿಸಬೇಕು ಮತ್ತು ನಂತರ ಹಸಿ ಹತ್ತಿಯ ದಾರವನ್ನು ಅಶ್ವತ್ಥ ಮರದ ಸುತ್ತಲೂ 108 ಬಾರಿ ಸುತ್ತಿ. ಗಂಡನ ದೀರ್ಘಾಯುಷ್ಯಕ್ಕೆ ಈ ಪರಿಹಾರವು ತುಂಬಾ ಪ್ರಯೋಜನಕಾರಿ ಎಂದು ನಂಬಲಾಗಿದೆ. ನಿಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಸೋಮಾವತಿ ಅಮವಾಸ್ಯೆಯ ಉಪವಾಸವನ್ನು ಆಚರಿಸುವ ಮೂಲಕ ನೀವು ಸಂತೋಷ ಮತ್ತು ಸಮೃದ್ಧಿಯನ್ನು ಬಯಸಬಹುದು.
  • ಸೋಮಾವತಿ ಅಮವಾಸ್ಯೆಯ ರಾತ್ರಿ ಒಂದು ಚಮಚ ಹಸಿ ಹಾಲು ಮತ್ತು ನಾಣ್ಯವನ್ನು ಬಾವಿಗೆ ಸುರಿಯುವುದರಿಂದ ಬಡತನ ನಾಶವಾಗುತ್ತದೆ ಎಂದು ನಂಬಲಾಗಿದೆ. ಹಣದ ಬಿಕ್ಕಟ್ಟಿನಿಂದ ಪರಿಹಾರವಿದೆ.
  • ವೃತ್ತಿಜೀವನದಲ್ಲಿ ಪ್ರಗತಿ ನಿಂತಿದೆ ಅಥವಾ ಕಷ್ಟಪಟ್ಟು ಕೆಲಸ ಮಾಡಿದರೂ ವ್ಯಾಪಾರವು ಫಲಪ್ರದವಾಗುವುತ್ತಿಲ್ಲ ಎಂದರೆ ಸೋಮಾವತಿ ಅಮವಾಸ್ಯೆಯ ದಿನ ತೆಂಗಿನಕಾಯಿಯನ್ನು ತೆಗೆದುಕೊಂಡು ಅದರ ಮೇಲೆ ಕೆಂಪು ಬಣ್ಣದ ದಾರವನ್ನು ಏಳು ಬಾರಿ ಸುತ್ತಿಕೊಳ್ಳಿ. ಈಗ ನಿಮ್ಮ ಆಸೆಯನ್ನು ಹೇಳುತ್ತಾ, ಅದನ್ನು ನೀರಿನಲ್ಲಿ ಹರಿಯಲು ಬಿಡಿ. ಬ್ರಹ್ಮ ಮುಹೂರ್ತದಲ್ಲಿ ಈ ಪರಿಹಾರವನ್ನು ಮಾಡಿ.
Latest Videos
Follow Us:
Download App:
  • android
  • ios