ಹಾವೇರಿ: ಯುವಕನಿಗೆ ಕರ್ನಾಟಕದ ಮುಖ್ಯಮಂತ್ರಿ ಸ್ಥಾನ, ಕಾರ್ಣೀಕನ ಭವಿಷ್ಯ ವಾಣಿ..!
ಆಕಾಶದ ಗುಡ್ಡಕ್ಕೆ ಶಿಶು ಏರಿತಲೇ ಪರಾಕ್-ಐತಿಹಾಸಿಕ ದೇವರಗುಡ್ಡ ಮಾಲತೇಶ ಸ್ವಾಮಿ ದೈವ ಕಾರ್ಣೀಕ
ವರದಿ- ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ
ಹಾವೇರಿ(ಅ.04): ವಿಜಯ ದಶಮಿಯ ಈ ದಿನ ಐತಿಹಾಸಿಕ ಸುಕ್ಷೇತ್ರ ದೇವರಗುಡ್ಡದಲ್ಲಿ ಇಂದು(ಮಂಗಳವಾರ) ಗೊರವಪ್ಪನವರು ಕಾರ್ಣೀಕ ನುಡಿದಿದ್ದಾರೆ. ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್ ಎಂದು ದೇವರಗುಡ್ಡದಲ್ಲಿ ಬಿಲ್ಲನ್ನೇರಿ ಗೊರವಪ್ಪ ನಾಗಪ್ಪ ಉರ್ಮಿ ಕಾರ್ಣೀಕ ನುಡಿದಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ನಡೆದ ಮಾಲತೇಶ ದೇವರ ಕಾರ್ಣಿಕೋತ್ಸವ ನುಡಿಗೆ ಲಕ್ಷಾಂತರ ಜನ ಸಾಕ್ಷಿಯಾಗಿದ್ದಾರೆ.
ಮೈಲಾರ ಕಾರ್ಣಿಕೋತ್ಸವದ ಗೊರವಯ್ಯ ಬದಲಾವಣೆ: ಭಕ್ತರಿಂದ ಆಕ್ರೋಶ
ದಸರಾ ಹಬ್ಬದ ಸಮಯದಲ್ಲಿ ನಡೆಯುವ ಮಾಲತೇಶ ದೇವರ ಕಾರ್ಣಿಕೋತ್ಸವ ಬಹಳ ಪ್ರಸಿದ್ಧಿ ಪಡೆದಿದೆ. ವರ್ಷದ ಭವಿಷ್ಯ ವಾಣಿ ಅಂತಲೇ ಜನ ಕಾರ್ಷಿಕೋತ್ಸವವನ್ನು ನಂಬುತ್ತಾರೆ. ಈ ಬಗ್ಗೆ ವಿಶ್ಲೇಷಣೆ ನೀಡಿರುವ ದೇವರಗುಡ್ಡದ ಪ್ರಧಾನ ಅರ್ಚಕ ಸಂತೋಷ್ ಭಟ್ ಗುರೂಜಿ, ಸಣ್ಣಸಣ್ಣ ರೈತರಿಗೂ ಉತ್ತಮವಾಗಲಿದೆ. ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ ಅಂತ ಕಾರ್ಣೀಕ ವಿಶ್ಲೇಷಿಸಿದ್ದಾರೆ.
ಕಾರ್ಣೀಕನ ವಿಶ್ಲೇಷನೆ ಪ್ರಕಾರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ತಾರಾ? ಹಾಗೂ ಯಾವ ಯುವಕನಿಗೆ ಸಿಎಂ ಸ್ಥಾನ ದೊರಕಲಿದೆ ಎಂಬುದನ್ನ ಕಾಲವೇ ಉತ್ತರಿಸಬೇಕಿದೆ.