Luck ನಿಮ್ಮದಾಗಬೇಕಾ? ಸ್ವಲ್ಪ ಹೀಗ್ ಮಾಡಿ ನೋಡಿ, ಅದೃಷ್ಟ ಖುಲಾಯಿಸದೇ ಇರುತ್ತಾ ನೀವೇ ಹೇಳಿ?
ಶ್ರೀಮಂತನಾಗ್ಬೇಕು ಎಂಬುದು ಎಲ್ಲರ ಕನಸು. ಆದ್ರೆ ಎಲ್ಲರೂ ಐಷಾರಾಮಿ ಜೀವನ ನಡೆಸಲು ಸಾಧ್ಯವಿಲ್ಲ. ಕೆಲವೊಂದಕ್ಕೆ ಅದೃಷ್ಟ ಬೇಕು. ಈ ಅದೃಷ್ಟ ನಮ್ಮದಾಗ್ಬೇಕೆಂದ್ರೆ ನಾವು ಪ್ರತಿ ನಿತ್ಯ ಮಾಡುವ ಕೆಲಸದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಷ್ಟೆ.
ಪ್ರತಿಯೊಬ್ಬರೂ ತಮ್ಮ ಭಾಗ್ಯದ ಬಾಗಿಲು ಯಾವಾಗ ತೆಗೆಯುತ್ತೆ ಅಂತಾ ಕಾಯ್ತಿರುತ್ತಾರೆ. ಆರೋಗ್ಯ, ಆಯಸ್ಸಿನ ಜೊತೆಗೆ ಐಷಾರಾಮಿ ಜೀವನವನ್ನು ಎಲ್ಲರೂ ಬಯಸ್ತಾರೆ. ಆದ್ರೆ ಬಯಸಿದ್ದೆಲ್ಲ ಸಿಗಲು ಸಾಧ್ಯವಿಲ್ಲ. ದೇವರು ನೀಡಿದ್ದನ್ನು ಸ್ವೀಕರಿಸಬೇಕು ಎಂದು ಹಿರಿಯರು ಹೇಳ್ತಾರೆ. ದೇವರನ್ನು ಒಲಿಸಿಕೊಳ್ಳಲು ನಮ್ಮ ಪ್ರಯತ್ನ ಸದಾ ಇರ್ಬೇಕು. ದೇವರು ಒಲಿದು ನಮ್ಮ ಮಡಿಲಿಗೆ ಅದೃಷ್ಟವನ್ನು ಹಾಕಿದ್ರೆ ಸುಖದ ಜೀವನ ಸಾಧ್ಯ. ದೇವರನ್ನು ಒಲಿಸಿಕೊಳ್ಳಲು ಜನರು ಅನೇಕ ಮಾರ್ಗಗಳನ್ನು ಹುಡುಕ್ತಾರೆ. ಕೆಲವರು ಪ್ರತಿ ದಿನ ದೇವಸ್ಥಾನಕ್ಕೆ ಹೋಗ್ತಾರೆ. ಮತ್ತೆ ಕೆಲವರು ಮನೆಯಲ್ಲಿ ಪೂಜೆ ಮಾಡ್ತಾರೆ. ಇನ್ನು ಕೆಲವರು ಹೋಮ, ಹವನ ಮಾಡಿಸಿದ್ರೆ ಮತ್ತೊಂದಿಷ್ಟು ಜನ ವಾಸ್ತು ದೋಷ ಪರಿಹಾರಕ್ಕೆ ಮುಂದಾಗ್ತಾರೆ. ಕೆಲವರು ಜಾತಕ ತೋರಿಸಿ ಅದರಂತೆ ನಡೆದುಕೊಳ್ತಾರೆ. ಇಷ್ಟೆಲ್ಲ ಕೆಲಸ ಮಾಡಿದ್ರೂ ಲಕ್ಷ್ಮಿ ಒಲಿಯೋದು ಅನುಮಾನವೆ. ಆದ್ರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲ ಉಪಾಯಗಳನ್ನು ಹೇಳಲಾಗಿದೆ. ಪ್ರತಿ ದಿನ ಆ ಕೆಲಸ ಮಾಡಿದ್ರೆ ಲಕ್ಷ್ಮಿ ಒಲಿದೇ ಒಲಿಯುತ್ತಾಳೆ.
ಪ್ರತಿ ದಿನ ತಪ್ಪದೆ ಮಾಡಿ ಈ ಕೆಲಸ (Work) :
ಸರಿಯಾದ ದಿಕ್ಕಿ (Direction) ನಲ್ಲಿ ಕುಳಿತು ಆಹಾರ ಸೇವನೆ : ತಾಯಿ ಲಕ್ಷ್ಮಿ (Lakshmi) ಒಲಿಯಲು ಆಕೆ ಪೂಜೆ ಮಾತ್ರವಲ್ಲ ಆಹಾರ ಸೇವನೆ ಮಾಡುವ ದಿಕ್ಕು ಕೂಡ ಮಹತ್ವ ಪಡೆಯುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸರಿಯಾದ ದಿಕ್ಕಿನಲ್ಲಿ ಕುಳಿತು ಆಹಾರ ಸೇವನೆ ಮಾಡಬೇಕಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪೂರ್ವಾಭಿಮುಖವಾಗಿ ಕುಳಿತು ಆಹಾರವನ್ನು ತಿನ್ನಬೇಕು. ಪೂರ್ವಕ್ಕೆ ಮುಖ ಮಾಡಿ ಕುಳಿರು ಆಹಾರ ಸೇವಿಸುವುದರಿಂದ ಜೀವನದಲ್ಲಿ ಸಂತೋಷ ಸದಾ ನೆಲೆಸಿರುತ್ತದೆ. ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ. ಮನೆಯಲ್ಲಿ ಸದಾ ಖುಷಿ, ಸಂಪತ್ತು ಮನೆ ಮಾಡುತ್ತದೆ. ಹಾಗೆಯೇ ಊಟ ಹಾಗೂ ಆಹಾರದಲ್ಲಿ ತಾಯಿ ಅನ್ನಪೂರ್ಣೆ ನೆಲೆಸಿರುತ್ತಾಳೆ. ಹಾಗಾಗಿ ಊಟ ಮಾಡುವಾಗ ಗೌರವ ನೀಡುವುದು ಮುಖ್ಯ. ಚಪ್ಪಲಿ ಅಥವಾ ಶೂ ಧರಿಸಿ ಆಹಾರ ಸೇವನೆ ಮಾಡಿದ್ರೆ ಅನ್ನಪೂರ್ಣೆ ಜೊತೆ ಲಕ್ಷ್ಮಿ ಕೂಡ ಮುನಿಸಿಕೊಳ್ಳುತ್ತಾಳೆ.
ದೇವರ ಮನೆಯಲ್ಲಿ ಸದಾ ಇರಲಿ ದೀಪ (Light lamp for god) : ದೇವರ ಪೂಜೆ ಮಾಡುವಾಗ ಪ್ರತಿಯೊಬ್ಬರೂ ದೀಪ ಬೆಳಗುತ್ತಾರೆ. ಆದ್ರೆ ಹಚ್ಚಿದ ದೀಪ ಎಣ್ಣೆ ಖಾಲಿಯಾದ್ಮೇಲೆ ಆರಿ ಹೋಗುತ್ತದೆ. ಇದು ಒಳ್ಳೆಯದಲ್ಲ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಪೂಜೆ ಮಾಡಿದ ನಂತರ ದೇವರ ಮನೆಯಲ್ಲಿ ಸದಾ ದೀಪ ಉರಿಯುತ್ತಿರಬೇಕು. ದೀಪ ಆರದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಹಾಗೆಯೇ ಲಕ್ಷ್ಮಿ ಒಲಿಯಬೇಕು ಎನ್ನುವವರು ದೀಪದ ಜೊತೆಗೆ ಭಾನುವಾರದಂದು (Sunday) ಅತ್ತಿ ಮರದ ಬೇರನ್ನು ಪೂಜಿಸಬೇಕು. ನಂತ್ರ ಅದನ್ನು ಹಣವಿಡುವ ಜಾಗದಲ್ಲಿ ಇಡಬೇಕು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
ಮೂಲಾಧಾರ ರಹಸ್ಯ: ಗಣೇಶನಿಗೂ, ಸಂಖ್ಯೆ 21ಕ್ಕೂ ಇರುವ ನಂಟೇನು?
ಒಣಗಿದ ಹೂವನ್ನು ಇಲ್ಲಿ ಹಾಕಿ (Dry Flower) : ದೇವರ ಪೂಜೆಗೆ ನಾವು ಪ್ರತಿ ದಿನ ಹೂವನ್ನು ಬಳಸ್ತೇವೆ. ಮರುದಿನ ಬಾಡಿದ ಹೂವನ್ನು ತೆಗೆಯುತ್ತೇವೆ. ಈ ಬಾಡಿದ ಹೂವಿಗೂ ಗೌರವ ನೀಡುವ ಅವಶ್ಯಕತೆಯಿದೆ. ಅದನ್ನು ಕೊಳಕು ಜಾಗದಲ್ಲಿ ಹಾಕುವುದು ಸೂಕ್ತವಲ್ಲ. ಒಣಗಿದ ಹೂವನ್ನು ಯಾವಾಗ್ಲೂ ನದಿ ಅಥವಾ ಹರಿಯುವ ನೀರಿಗೆ ಹಾಕಬೇಕು. ಇದು ಸಾಧ್ಯವಿಲ್ಲ ಎನ್ನುವವರು ಮಣ್ಣಿನ ಹೊಂಡ ತೋಡಿ ಅದರಲ್ಲಿ ಹಾಕಬೇಕು.
Chanakya Niti: ಈ ನಾಲ್ಕು ಚಾಣಕ್ಯ ಮಂತ್ರಗಳನ್ನು ಅಳವಡಿಸಿಕೊಂಡ ಮನೆಯೇ ಸ್ವರ್ಗ!
ಶುದ್ಧವಾದ್ಮೇಲೆ ಈ ಕೆಲಸ ಮಾಡಿ : ಬೆಳಿಗ್ಗೆ ಎದ್ದ ತಕ್ಷಣ ನೀರು ಅಥವಾ ಬೇರೆ ಯಾವುದೇ ಪಾನೀಯ ಸೇವನೆ ಮಾಡಬಾರದು. ಮೊದಲು ಹಲ್ಲುಜ್ಜಬೇಕು. ನಂತ್ರ ನೀರು ಕುಡಿಯಬೇಕು. ಹಾಗೆಯೇ ಸ್ನಾನ ಮಾಡಿದ ನಂತ್ರವೇ ದೇವರ ಮೂರ್ತಿ ಸ್ಪರ್ಶಿಸಬೇಕು. ಸ್ನಾನ ಮಾಡದೆ ದೇವರ ಮೂರ್ತಿಯನ್ನು ಸ್ಪರ್ಶಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಹೀಗೆ ಮಾಡಿದವರ ಮನೆಯಲ್ಲಿ ಲಕ್ಷ್ಮಿ ಎಂದೂ ನೆಲೆಸುವುದಿಲ್ಲವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.