Asianet Suvarna News

ಬಯಸಿದ್ದನ್ನೆಲ್ಲ ಕೊಡುವ ಶ್ರೀಕೃಷ್ಣನ ಕೃಪೆಗೆ ಹೀಗೆ ಮಾಡಿ!

ಧರ್ಮ ಸಂಸ್ಥಾಪನೆಗೆ ಕುರುಕ್ಷೇತ್ರವನ್ನೇ ಮಾಡಿಸಿದ ಶ್ರೀಕೃಷ್ಣ ಗೀತೋಪದೇಶದ ಮೂಲಕ ಅನೇಕ ಸಂದೇಶವನ್ನು ಕೊಟ್ಟಿದ್ದಾನೆ. ಇಲ್ಲಿ ಕೃಷ್ಣ ಒಬ್ಬ ಬೋಧಕನಾಗಿ, ತಂದೆಯಾಗಿ, ಸ್ನೇಹಿತನಾಗಿ, ಹಿತೈಷಿಯಾಗಿ, ಶತ್ರುಗಳ ಪಾಲಿಗೆ ದುಸ್ವಪ್ನವಾಗಿ ಹೀಗೆ ಅನೇಕ ರೂಪದಲ್ಲಿ ಕಾಣುತ್ತಾನೆ. ಆದರೆ, ಇದೇ ಪರಮಾತ್ಮನ ಬಳಿ ಭಕ್ತರು ಶ್ರದ್ಧೆ-ಭಕ್ತಿಯಿಂದ ದಯನೀಯವಾಗಿ ಬೇಡಿಕೊಂಡರೆ ಎಲ್ಲವನ್ನೂ ದಯಪಾಲಿಸುತ್ತಾನೆ. ಅಂತಹ ಅದೆಷ್ಟೋ ಉದಾಹರಣೆಗಳು ಪುರಾಣಗಳಲ್ಲಿ ಉಲ್ಲೇಖವಿದೆ. ಹಾಗಾದರೆ ಕೃಷ್ಣನ ಒಲಿಸಿಕೊಳ್ಳಬೇಕೆಂದರೆ ಏನು ಮಾಡಬೇಕು ಎಂಬುದನ್ನು ನೋಡೋಣ ಬನ್ನಿ.

Worshiping Shri  Krishna like this he fulfill all your desires
Author
Bangalore, First Published May 19, 2020, 4:12 PM IST
  • Facebook
  • Twitter
  • Whatsapp

ನಮಗೆ ಏನೇ ಬೇಕೆಂದರೂ ಮೊದಲು ಕೇಳುವುದು ಭಗವಂತನಲ್ಲಿ. ಕಾರಣ ಆತ ಬೇಡಿದ್ದನ್ನು ಕೊಡುವಾತ. ಹೀಗಾಗಿ ಒಬ್ಬೊಬ್ಬರಿಗೆ ಒಂದೊಂದು ದೇವರ ಮೇಲೆ ಅತಿಯಾದ ನಂಬಿಕೆ. ಇದಕ್ಕೆ ಕೃಷ್ಣ ಪರಮಾತ್ಮ ಸಹ ಹೊರತಲ್ಲ.

ಹೀಗೆ ಯಾರು ಏನೇ ಕೇಳಿದರೂ ಅದನ್ನು ದಯಪಾಲಿಸುತ್ತಾನೆ ಎಂಬ ನಂಬಿಕೆಯಿಂದಲೇ ದ್ರೌಪದಿ ತನ್ನ ಮಾನ ಹೋಗುತ್ತಿದ್ದ ಸಂದರ್ಭದಲ್ಲಿ ಎರಡೂ ಕೈಯನ್ನು ಎತ್ತಿ ಶ್ರೀಕಷ್ಣ ಪರಮಾತ್ಮ ನನ್ನನ್ನು ನೀನೇ ಕಾಪಾಡು ಎಂದು ಬೇಡಿದ ಒಂದೇ ಕೂಗಿಗೆ ತಥಾಸ್ತು ಎಂದು ಸೀರೆಯನ್ನು ಸರಪಳಿಯನ್ನೇ ಹರಿಸಿಬಿಟ್ಟ. ದುಷ್ಯಾಶಸನನಿಗೆ ಎಳೆದೂ ಎಳೆದು ಸುಸ್ತಾಗಿದ್ದು ಬಿಟ್ಟರೆ ಸೀರೆ ಮಾತ್ರ ಹಾಗೆಯೇ ಇರುತ್ತಿತ್ತು. ಇಂಥ ಕೃಷ್ಣ ಕೇಳದೆಯೇ ತನ್ನ ಆಪ್ತ ಗೆಳೆಯ ಸುಧಾಮನಿಗೆ ಅಷ್ಟೈಶ್ವರ್ಯವನ್ನೂ ಕೊಡಲಿಲ್ಲವೇ? ಇನ್ನು ಭಕ್ತಿಯಿಂದ ಕೇಳಿದರೆ ಏಕೆ ಕೊಡುವವನಲ್ಲ. ಅಲ್ಲವೇ..? ಶ್ರೀಕೃಷ್ಣನನ್ನು ಭಕ್ತಿಯಿಂದ ಬೇಡಿದರೆ ಎಲ್ಲ ಆಸೆಗಳನ್ನು ಈಡೇರಿಸುವ ಕರುಣಾಳು ಎಂದು ಪುರಾಣಗಳಲ್ಲಿಯೇ ಕೊಂಡಾಡಲಾಗಿದೆ.

ಪ್ರೀತಿ ಪ್ರೇಮವನ್ನು ಪಡೆಯಲು ರಾಧೆಯ ಕೃಷ್ಣನ ಮನಗೆಲ್ಲಬೇಕು, ಧನವಂತರಾಗಲು, ಕುಚೇಲನನ್ನು ದೈನ್ಯ ಸ್ಥಿತಿಯಿಂದ ಪಾರು ಮಾಡಿದ ದಯಾಮಯಿಯ ಕರುಣೆ ಪಡೆಯಬೇಕು. ಕೃಷ್ಣನ ಭಕ್ತಿಯನ್ನು ಹೀಗೆ ಮಾಡಿದರೆ ಕಠಿಣ ಪರಿಸ್ಥಿತಿಯಿಂದ ಪಾರಾಗುವಂತೆ ಮಾಡುತ್ತಾನೆ. ಕೃಷ್ಣನನ್ನು ಒಲಿಸಿಕೊಳ್ಳಲು ಇಲ್ಲಿದೆ ಕೆಲವು ಉಪಾಯಗಳು.

ಇದನ್ನು ಓದಿ: ಮಂಗಳಾರತಿ ಈ ಕ್ರಮದಲ್ಲಿ ಬೆಳಗಿ, ನಿಮ್ಮ ಆಶಯ ಆಗುವುದು ಪೂರ್ತಿ!

ಬಯಸಿದ ಪ್ರೇಮ ಪಡೆಯಲು ಹೀಗೆ ಮಾಡಿ…
ಜೀವನದಲ್ಲಿ ಪ್ರೀತಿಯನ್ನು ಪಡೆಯುವುದು ಎಲ್ಲರ ಹಂಬಲವಾಗಿರುತ್ತದೆ. ಮನಮೆಚ್ಚಿದವರ ಜೊತೆ ಪೂರ್ತಿ ಜೀವನವನ್ನು ಕಳೆಯುವುದು ಎಲ್ಲರ ಬಯಕೆ. ಆದರೆ ಇಂಥ ಪ್ರೇಮವನ್ನು ಪಡೆಯಲು ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಅಂಥ ಸಮಯದಲ್ಲಿ ರಾಧಾಕೃಷ್ಣ ದೇವಾಲಯಕ್ಕೆ ಹೋಗಿ ಶ್ರೀಕೃಷ್ಣನಿಗೆ ಬೆಣ್ಣೆ ಮತ್ತು ಸಕ್ಕರೆಯನ್ನು ನೈವೇದ್ಯ ಮಾಡಬೇಕು. ನಂತರ ಪ್ರೀತಿಸಿದವರ ಹೆಸರನ್ನು ಹೇಳುತ್ತಾ ರಾಧಾಕೃಷ್ಣನಿಗೆ ಹೂಮಾಲೆಯನ್ನು ಅರ್ಪಿಸಬೇಕು. ಇದರಿಂದ ನೀವು ಬಯಸಿದ ಪ್ರೀತಿ ನಿಮ್ಮದಾಗುತ್ತದೆ. ಶತ್ರು ಕಾಟದಿಂದ ತಪ್ಪಿಸಿಕೊಳ್ಳಲು
ಪ್ರತಿಯೊಬ್ಬರ ಏಳಿಗೆಯ ಮೇಲೆ ಹಲವರ ಕಣ್ಣು ಬಿದ್ದಿರುತ್ತದೆ. ಏಳಿಗೆಯನ್ನು ನೋಡಲಾಗದೆ ಕೆಡುಕನ್ನು ಬಯಸುವ ಶತ್ರುಗಳಿಂದ ತಪ್ಪಿಸಿಕೊಳ್ಳಬೇಕೆಂದರೆ, ಸೂರ್ಯಾಸ್ತದ ನಂತರ ಅಶ್ವತ್ಥ ಮರದ ಒಂದು ಎಲೆ ತೆಗೆದುಕೊಂಡು ಅಷ್ಟಗಂಧವನ್ನು ಲೇಪಿಸಿ ದಾಳಿಂಬೆಯ ಸಹಾಯದೊಂದಿಗೆ ಸರ್ವ ಶತ್ರುನಾಶಯ ಎಂದು ಬರೆದು ನೆಲೆದಲ್ಲಿ ಹೂತುಹಾಕಬೇಕು. ಇದರಿಂದ ಶತ್ರುಗಳು ನಮ್ಮನ್ನು ಏನೂ ಮಾಡಲಾಗದು. ಕಾರಣ ಕೃಷ್ಣನ ದೃಷ್ಟಿ ನಿಮ್ಮತ್ತ ಬೀರಿರುತ್ತದೆ. 

ಇದನ್ನು ಓದಿ: ಮಣಿಕಟ್ಟಿನ ರೇಖೆಯಿಂದ ತಿಳಿಬಹುದು ನಿಮ್ಮ ಆರೋಗ್ಯ, ಆಯಸ್ಸು ಮತ್ತು ಸಂಪತ್ತಿನ ರಹಸ್ಯ!

ಸಾಲದಿಂದ ಮುಕ್ತಿ
ಸಾಲವಂತರಾಗಿದ್ದರೆ ಮೊದಲು ಶ್ರೀಕೃಷ್ಣನ ಮೊರೆಹೋಗುವುದು ಒಳ್ಳೆಯದು. ಹುಣ್ಣಿಮೆಗಿಂತ 8 ದಿನ ಮುಂಚೆ ಕಲಶದಲ್ಲಿ ಕರಿ ಎಳ್ಳು ಮತ್ತು ಸಕ್ಕರೆ ಪಾಕವನ್ನು ಅಶ್ವತ್ಥ ಮರಕ್ಕೆ ಅರ್ಪಣೆ ಮಾಡಬೇಕು. ಅಮಾವಾಸ್ಯೆವರೆಗೆ 8 ದಿನಗಳ ಕಾಲ ಹೀಗೆ ಮಾಡಬೇಕು. ಹೀಗೆ ಮಾಡಿದರೆ ಸಾಲದಿಂದ ಮುಕ್ತಗೊಳ್ಳಲು ಶ್ರೀಕೃಷ್ಣ ಸಹಾಯ ಮಾಡುತ್ತಾನೆ. 

ಹಣದ ಕೊರತೆ ಇದ್ದರೆ
ನೀವು ಎಷ್ಟೇ ದುಡಿದರು ಹಣ ಮಾತ್ರ ಸಾಲುತ್ತಿಲ್ಲ. ಇಂಥ ಸಂದರ್ಭದಲ್ಲಿ ಹಸುವಿನ ಹಾಲಿನಿಂದ ಕೀರು ಮಾಡಿ ಅದಕ್ಕೆ ಕರಿಮೆಣಸು ಹಾಗೂ ತುಳಸಿ ಎಲೆಯನ್ನು ಸೇರಿಸಬೇಕು. ಬಳಿಕ ಸಕ್ಕರೆ ಮಿಶ್ರಿತ ನೀರಿನಿಂದ ಶ್ರೀಕೃಷ್ಣನಿಗೆ ಅಭಿಷೇಕ ಮಾಡಿ, ಆ ಕೀರನ್ನು ಕೃಷ್ಣನಿಗೆ ನೈವೇದ್ಯ ಮಾಡಬೇಕು. 

ಇದನ್ನು ಓದಿ: ನಿಮ್ಮ ರಾಶಿ ಮಂತ್ರ ಪಠಿಸಿರಿ, ಕಷ್ಟಗಳಿಂದ ಮುಕ್ತಿ ಹೊಂದಿರಿ!

ಸುಖೀ ವೈವಾಹಿಕ ಜೀವನ
ವೈವಾಹಿಕ ಜೀವನದಲ್ಲಿ ಸುಖ-ಶಾಂತಿ ಬೇಕೆಂದರೆ ತುಳಸಿ ಗಿಡದ ಮುಂದೆ ಶ್ರೀಗಂಧದ ಧೂಪವನ್ನು ಹಚ್ಚಬೇಕು. ಬಳಿಕ ತುಪ್ಪದ ದೀಪವನ್ನು ಹಚ್ಚಬೇಕು. ಇದರಿಂದ ದಾಂಪತ್ಯ ಜೀವನದಲ್ಲಿ ಸದಾ ಪ್ರೇಮ ತುಂಬಿ ರಾಧಾ-ಕೃಷ್ಣರಂತೆ ಜೀವನ ಸಾಗಿಸಬಹುದು ಎಂದು ಹೇಳಲಾಗುತ್ತದೆ. 

Follow Us:
Download App:
  • android
  • ios