ಹೋಳಿ ಹುಣ್ಣಿಮೆ ಹಬ್ಬದಂದು ಚಂದ್ರನನ್ನು ಪೂಜಿಸುವುದರಿಂದ ಅದೃಷ್ಟ ಹಾಗೂ ಸಮೃದ್ಧಿ ಹೆಚ್ಚುವುದು. ಚಂದ್ರನನ್ನು ಹೇಗೆ ಪೂಜಿಸಬೇಕೆಂದು ನಾವು ತಿಳಿಸುತ್ತೇವೆ. 

ವಸಂತ ಮಾಸದ ಆರಂಭವನ್ನು ಸೂಚಿಸುವ ಹಬ್ಬ ಹೋಳಿ(Holi). ಪ್ರಕೃತಿಯಲ್ಲಿ ಮರಗಿಡಗಳು ವಿಧವಿಧ ಹೂವು, ಹಣ್ಣುಗಳನ್ನು ಬಿಟ್ಟು ವರ್ಣರಂಜಿತವಾಗಿರುವ ಸಮಯದಲ್ಲೇ ನಾವೂ ಕೂಡಾ ಬಣ್ಣದೋಕುಳಿಯಲ್ಲಿ ಆಡುವಂತೆ ಮಾಡುತ್ತದೆ ಹೋಳಿ. ಹಿಂದೂಗಳ ಈ ಪುರಾತನ ಹಬ್ಬವು ಈಗ ಯೂರೋಪಿಯನ್ನರು, ಉತ್ತರ ಅಮೆರಿಕನ್ನರ ನಡುವೆಯೂ ಹರಡಿ ಹಬ್ಬಿ ಪ್ರೀತಿಯ ದ್ಯೋತಕ ಎನಿಸಿಕೊಂಡಿದೆ. 

ಧುಲಾಂಡಿ(Dhulandi)
ಹೋಳಿಯು ಎರಡು ದಿನಗಳ ಹಬ್ಬವಾಗಿದ್ದು, ಹುಣ್ಣಿಮೆಯ ರಾತ್ರಿ ಹೋಲಿಕಾ ದಹನ್‌ನಿಂದ ಆರಂಭವಾಗಿ ಮರು ಬೆಳಗ್ಗೆ ಬಣ್ಣದೋಕುಳಿಯಲ್ಲಿ ಆಡುವವರೆಗೆ ಹಬ್ಬಿದೆ. ಹೋಲಿಕಾ ದಹನದ ರಾತ್ರಿ ಬೆಂಕಿ ಹೊತ್ತಿಸಿ ಕೆಟ್ಟದ್ದನ್ನು ನಾಶ ಮಾಡಿ ಒಳಿತನ್ನು ಮಾತ್ರ ಉಳಿಸಿಕೊಳ್ಳುವ ಸಾಂಕೇತಿಕ ಆಚರಣೆ ನಡೆಸಲಾಗುತ್ತದೆ. ಇದು ಹಿರಣ್ಯಕಶಿಪು ಹಾಗೂ ಆತನ ಸಹೋದರಿ ಹೋಲಿಕಾಗೆ ಸಂಬಂಧಿಸಿದ ಕತೆಯಾಗಿದೆ. ಆಗ ಹೋಳಿಯ ದಿನ ಚಂದ್ರ(Moon)ನನ್ನು ಆರಾಧಿಸುವ ಮೂಲಕ ನೀವು ಹೇಗೆ ನಿಮ್ಮ ಅದೃಷ್ಟವನ್ನು ಹೆಚ್ಚಿಸಿಕೊಳ್ಳಬಹುದು, ಸಂಪತ್ತನ್ನು ಸೃಷ್ಟಿಸಿಕೊಳ್ಳಬಹುದು ನೋಡೋಣ. 

ಚಂದ್ರ ಪೂಜೆಯ ಸಾಮಗ್ರಿಗಳು
ಹೋಲಿಕಾ ದಹನದ ರಾತ್ರಿ, ಅಂದರೆ ಹುಣ್ಣಿಮೆಯ ರಾತ್ರಿ, ಚಂದ್ರ ಕಾಣಿಸಿಕೊಳ್ಳುತ್ತಿದ್ದಂತೆ ಹೊರ ಹೋಗಿ ಮೊದಲು ಚಂದ್ರದರ್ಶನ ಮಾಡಿ. ಬೆಳ್ಳಿಯ ತಟ್ಟೆಯೊಂದರಲ್ಲಿ ಒಣ ಕರ್ಜೂರ, ತಾವರೆ ಬೀಜ, ಕೇಸರಿ ಬೆರೆಸಿ ಬೇಯಿಸಿದ ಸಬುದಾನ, ಬಿಳಿ ಬಣ್ಣದ ಸಿಹಿತಿನಿಸು, ತಾಮ್ರದ ಲೋಟದ ತುಂಬಾ ಹಾಲು, ಮಣ್ಣಿನ ಹಣತೆಯಲ್ಲಿ ತುಪ್ಪದ ದೀಪ ಹಾಗೂ ಧೂಪ ಇಟ್ಟುಕೊಳ್ಳಿ. 

Holi 2022: ಕಾಮದಹನಕ್ಕೆ ಯಾವೆಲ್ಲ ವಸ್ತು ಹಾಕ್ತಾರೆ ಗೊತ್ತಾ? ಪೂಜೆಯ ವಿಧಿವಿಧಾನಗಳಿವು..

ಮೊದಲು ದೀಪ ಹಚ್ಚಿ ನಂತರ ಚಂದ್ರನಿಗೆ ಹಾಲನ್ನು ಅರ್ಪಿಸಿ. ಇದಕ್ಕೆ ಚಂದ್ರ ಅರ್ಗ ಎನ್ನಲಾಗುತ್ತದೆ. ಬಳಿಕ ಬಿಳಿಯ ಬಣ್ಣದ ಸಿಹಿಯನ್ನು ಹಾಗೂ ಬೇಯಿಸಿದ ಸಬುದಾನವನ್ನು ಚಂದ್ರನಿಗೆ ನೈವೇದ್ಯ ಮಾಡಿ. ನಂತರ ಚಂದ್ರನಲ್ಲಿ ಸಮೃದ್ಧಿಗಾಗಿ ಪ್ರಾರ್ಥನೆ ಮಾಡಿ. ಒಣ ಕರ್ಜೂರ ಹಾಗೂ ತಾವರೆ ಬೀಜವನ್ನು ಮನೆಯ ಸದಸ್ಯರೆಲ್ಲರಿಗೂ ಹಂಚಿ, ನೀವೂ ಸೇವಿಸಿ. ಇದಾಗುತ್ತಿದ್ದಂತೆಯೇ ಹೋಲಿಕಾ ದಹನ ಕಾರ್ಯಕ್ರಮವನ್ನು ಧಾರ್ಮಿಕವಾಗಿ ಪೂರೈಸಿ. ಇದರಿಂದ ನಿಮ್ಮ ಅದೃಷ್ಟ ಖುಲಾಯಿಸುವುದು. 

ಗ್ರಹದೋಷ ನಿವಾರಣೆಗೆ
ಹೋಲಿಕಾ ದಹನದ ರಾತ್ರಿ ಬಿಳಿ ವಸ್ತ್ರವನ್ನು ಸ್ವಚ್ಛ ನೆಲದ ಮೇಲೆ ಹರಡಿ ಅದರ ಮೇಲೆ ಒಂದು ಮುಷ್ಠಿ ಹೆಸರುಕಾಳು, ಮತ್ತೊಂದು ಮುಷ್ಠಿ ಪುಟಾಣಿ, ಬಿಳಿ ಅಕ್ಕಿ, ತೊಗರಿಬೇಳೆ, ಗೋಧಿ, ಕರಿ ಉದ್ದು ಹಾಗೂ ಎಳ್ಳನ್ನು ಹಾಕಿ. ಅದರ ಮೇಲೆ ನವಗ್ರಹ ಯಂತ್ರ ಕಟ್ಟಿ. ಬಳಿಕ ಈ ಕೆಳಗಿನ ಮಂತ್ರ ಜಪಿಸಿ. 
ಬ್ರಹ್ಮ ಮುರಾರಿ ತ್ರಿಪುರಾಂತಕರಿ ಭಾನು ಶಶಿ ಬುಧಾದ್ವ ಗುರುಧ್ವ ಶುಕ್ರ ಶನಿ ರಾಹು ಕೇತವಃ ಸರ್ವೇ ಶಾಂತಿ ಕರ ಭವಂತು

Holi 2022: ಹೋಳಿ ಹಬ್ಬದ ದಿನ ಯಾವ ಬಣ್ಣದ ಬಟ್ಟೆ ಧರಿಸಿದ್ರೆ ಗೌರವ ಹೆಚ್ಚುತ್ತೆ?

ಉದ್ಯಮ(business) ಗೆಲ್ಲಿಸಲು
ಚಂದ್ರ ದರ್ಶನದ ಬಳಿಕ, ಹೋಳಿಯ ರಾತ್ರಿ, ಒಕ್ಕಣ್ಣಿನ ತೆಂಗಿಕಾಯನ್ನು ಕೆಂಪು ಬಣ್ಣದ ಬಟ್ಟೆಯೊಳಗಿಡಿ. ಇದರ ಮೇಲೆ ಮುಷ್ಠಿ ಗೋಧಿ ಹಾಕಿ ಹಾಗೂ ಕುಂಕಮದ ತಿಲಕವಿಡಿ. ಬಳಿಕ ಈ ಮಂತ್ರ ಪಠಿಸಿ. 
ಓಂ ಶ್ರೀಂ ಶ್ರೀಂ ಶ್ರೀಂ ಪರಮ್ ಸಿದ್ಧಿ ವ್ಯಾಪಾರ ವೃದ್ಧಿ ನಮಃ

ಹಣದ ಹರಿವು ಹೆಚ್ಚಿಸಲು
ಕಾಮದಹನಕ್ಕೆ ಬೆಂಕಿ ಹಚ್ಚುವ ಜಾಗದಲ್ಲಿ ನೆಲ ಅಗೆದು ಸಮಾನ ಮೊತ್ತದ ಕಬ್ಬಿಣ, ಬೆಳ್ಳಿ ಹಾಗೂ ಹಿತ್ತಾಳೆಯನ್ನು ನೆಲದೊಳಗೆ ಹಾಕಿ. ಬಳಿಕ ನೆಲವನ್ನು ಮಣ್ಣು ತುಂಬಿ ಮುಚ್ಚಿಬಿಡಿ. ಈ ಮಂತ್ರವನ್ನು ಪಠಿಸಿ.
ಓಂ ನಮೋ ಭಗವತೇ ವಾಸುದೇವಾಯ
ನಂತರ ಹೋಲಿಕಾ ದಹನವನ್ನು ಅದೇ ಸ್ಥಳದಲ್ಲಿ ನಡೆಸಿ. ಮರು ಬೆಳಗ್ಗೆ ಅದೇ ಜಾಗವನ್ನು ಅಗೆದು ಮೆಟಲ್ ವಸ್ತುಗಳನ್ನು ತೆಗೆದು ನಿಮ್ಮೊಟ್ಟಿಗೆ ಇಟ್ಟುಕೊಳ್ಳಿ.