ಸಿಂಹ, ತುಲಾ, ಕಟಕ ರಾಶಿಯವರೇ ದಯವಿಟ್ಟು ಗಮನಿಸಿ
ದೀಪಾವಳಿ ಕಳೆದಿದೆ. ಕೋವಿಡ್ ನಿಧಾನಕ್ಕೆ ಮರೆಯಾಗುತ್ತಿದೆ. ಬರಗೆಟ್ಟು ಹೋದವರು ತುಸು ಚೇತರಿಸಿಕೊಳ್ತಿದ್ದಾರೆ. ಆದರೆ ಸಿಂಹ, ಧನು, ಕಟಕ ರಾಶಿಯವ್ರು ಈಗ ಗಮನಿಸಲೇ ಬೇಕಾದ ಕೆಲವು ಅಂಶಗಳಿವೆ.
ಸಿಂಹ ರಾಶಿ
ಈ ರಾಶಿಯವರ ಅಧಿಪತಿ ರವಿ ಅಂದರೆ ಸೂರ್ಯ. ಲೋಕವನ್ನೇ ಬೆಳಗುವವನು. ಈತ ರಾಜ. ಈ ರಾಶಿವರಿಗೆ ಆತ್ಮಕಾರಕ. ಪ್ರಜ್ವಲಿಸುವ ಸೂರ್ಯ ತನ್ನ ಪ್ರಭಾವವನ್ನು ತುಸು ಏರು ಪೇರು ಮಾಡಿದರೂ ಪರಿಣಾಮ ಇಡೀ ಜಗತ್ತಿನ ಮೇಲಾಗುತ್ತದೆ. ಸೂರ್ಯನನ್ನು ಹೃದಯದಲ್ಲಿಟ್ಟುಕೊಂಡಿರುವ ಈ ರಾಶಿಯವರ ಸದ್ಯದ ರಾಶಿ ಫಲ ವಿಭಿನ್ನವಾಗಿದೆ. ಹಾಗೆಂದು ಗಾಬರಿಯಾಗಬೇಕಿಲ್ಲ. ಅನಿರೀಕ್ಷಿತ ಶುಭ ಫಲಗಳು ನಿಮ್ಮ ನಿರೀಕ್ಷೆಯಲ್ಲಿವೆ. ಹಾಗೆಂದು ಕಷ್ಟಗಳೇ ಬರೋದಿಲ್ಲ ಅಂತಲ್ಲ. ಆದರೆ ಆ ಕಷ್ಟಗಳನ್ನೆಲ್ಲ ನಿಮ್ಮ ಏಳಿಗೆಗೆ ಬಳಸುವ ಶಕ್ತಿ ನಿಮ್ಮಲ್ಲಿ ಸಂಚಯವಾಗಲಿದೆ. ಕಷ್ಟಗಳನ್ನು ಸವಾಲು ಅಂದುಕೊಂಡು ಮುನ್ನುಗ್ಗುತ್ತಾ ಅದರಲ್ಲಿ ಯಶಸ್ಸು ಸಿಗುತ್ತಾ ಹೋದರೆ ನೀವು ಬಲಿಷ್ಠರಾಗುತ್ತಾ ಹೋಗುವಿರಿ. ನಿಮಗೆ ಅಧಿಕಾರ ಸಿಗಲಿದೆ. ಅಂತಸ್ತು ಹೆಚ್ಚಲಿದೆ. ಇನ್ನೊಬ್ಬರ ಮುಂದೆ ಏನನ್ನೂ ಬೇಡದೇ, ನೀಡುವ ರಾಜಯೋಗ ನಿಮಗಿದೆ. ವೈವಾಹಿಕ ಬದುಕಿನಲ್ಲಿ ಕೊಂಚ ವಿರಸ ಬಂದ ಹಾಗೆ ಕಂಡರೂ ಅದು ನೀರಿನ ಗುಳ್ಳೆಯ ಹಾಗೆ ಹೀಗೆ ಬಂದು ಹಾಗೆ ಹೋಗುತ್ತದೆ. ಗುರುರಾಯರನ್ನು ಭಜಿಸಿ, ವಿಷ್ಣ ಸಹಸ್ರನಾಮ ಪಠಿಸುತ್ತಿರಿ. ಒಳ್ಳೆಯ ದಿನಗಳನ್ನು ಆನಂದಿಸಿ.
ಪಂಚಾಂಗ| ಈಶ್ವರ ದೇಗುಲಕ್ಕೆ ತೆರಳಿ ಗೋಧಿ ಅಭಿಷೇಕ ಮಾಡಿಸಿ, ಶುಭವಾಗುತ್ತದೆ! ...
ತುಲಾ ರಾಶಿ
ತತೀಯ ಭಾವದಿಂದ ಚತುರ್ಥ ಭಾವಕ್ಕೆ ಗುರು ಚಲಿಸಿದ್ದಾನೆ. ಈ ಬದಲಾವಣೆ ನಿಮ್ಮ ಗಮನಕ್ಕೇ ಬರುತ್ತದೆ. ನಿಮ್ಮ ಅನಾನುಕೂಲತೆಗಳು ನಿವಾರಣೆಯಾಗಿ ಅನುಕೂಲ ಪರಿಸ್ಥಿತಿ ನಿರ್ಮಾಣವಾಗಲಿದೆ. ಸಮೀಪದ ರಾಶಿಗಳೆಲ್ಲ ಶುಭ ಕಾರಕಗಳೇ ಆಗಿವೆ. ಸಮೀಪ ಶುಭ ತರುವ ರಾಶಿಗಳಿದ್ದರೆ ಅವುಗಳ ಪ್ರಭಾವದಿಂದ ಶುಭ ಫಲಗಳು ಹೆಚ್ಚುತ್ತವೆ ಅನ್ನುವುದು ಸರ್ವ ವಿದಿತ. ಆದರೆ ಆತ್ಮಕಾರಕ ರವಿ ಒಳ್ಳೆಯ ಸ್ಥಾನದಲ್ಲಿ ಇಲ್ಲದೇ ಇರುವುದರಿಂದ ಕೊಂಚ ಮಾನಸಿಕ ಸಮಸ್ಯೆಗಳು ಬಾಧಿಸಬಹುದು. ಮನೆ ಕೊಳ್ಳಬೇಕು ಅಂತಿದ್ದರೆ ನಿರ್ಧಾರಕ್ಕೆ ಬರುವುದು ಕಷ್ಟವಾಗಬಹುದು. ಇಂಥ ಗೊಂದಲ, ಒತ್ತಡಗಳು ಮನಸ್ಸನ್ನು ಕೊಂಚ ಖಿನ್ನತೆಗೆ ದೂಡಬಹುದು. ಆದರೆ ನೀವು ಕೊಂಚ ಮುನ್ನೆಚ್ಚರಿಕೆಯಿಂದ ವ್ಯವಹರಿಸಿ ಧೃಢ ನಿಶ್ಚಯಕ್ಕೆ ಬನ್ನಿ. ಆಗ ಶುಭ ರಾಶಿಗಳ ಶುಭ ದೃಷ್ಟಿಯಿಂದ ನೀವು ಕೈ ಹಾಕಿದ ಕೆಲಸ ಸಫಲವಾಗಬಹುದು. ಮಕ್ಕಳು ನಿಮ್ಮ ಮಾತನ್ನು ಕೇಳುತ್ತಾರೆ. ನಿಮ್ಮ ಮಾತಿಗೆ ಎಲ್ಲೆಡೆ ಬೆಲೆ ಬರುತ್ತದೆ. ಜನರು ನಿಮ್ಮ ಪ್ರಭಾವಕ್ಕೆ ಸಿಲುಕುತ್ತಾರೆ. ಯಾರಿಗೂ ನಿಮಗೆ ಮೋಸ ಮಾಡಬೇಕು ಅಂತ ಅನಿಸೋದಿಲ್ಲ. ಅನಿರೀಕ್ಷಿತವಾಗಿ ಧನ ಬಲ ಬರಬಹುದು. ವ್ಯವಹಾರಗಳಲ್ಲಿ ಜಯ ಸಿಗಬಹುದು. ಮಾತು ಪ್ರಧಾನವಾದ ಕ್ಷೇತ್ರಗಳಲ್ಲಿ ಇರುವವರಿಗೆಯಶಸ್ಸು ಬೆರಳ ತುದಿಯಲ್ಲಿರುತ್ತದೆ. ಶಿವನನ್ನು ಭಜಿಸಿ, ಪಂಚಾಕ್ಷರಿ ಮಂತ್ರ ಪಠಿಸಿ. ಒಳ್ಳೆಯದಾಗುತ್ತದೆ.
ಮಕರ ರಾಶಿಗೆ ಗುರು ಪ್ರವೇಶ; ಯಾವ ಯಾವ ರಾಶಿಯವರಿಗೆ ಲಕ್..? ...
ಕಟಕ ರಾಶಿ
ಗುರು ಬಲವಿದೆ. ಗುರುವಿನ ಪೂರ್ಣ ಅನುಗ್ರಹ ನಿಮ್ಮ ಮೇಲಾಗಲಿದೆ. ಹೆಂಡತಿ, ಮಕ್ಕಳಿಂದ ಸಹಕಾರ ಸಿಗುತ್ತದೆ. ಮನೆಯಲ್ಲಿ ಅನುಕೂಲವಿದೆ. ಕೈ ಹಾಕಿದ ಕೆಲಸದಲ್ಲೆಲ್ಲ ಶುಭ ಫಲವಿದೆ. ನೀವು ಬಹುಕಾಲದಿಂದ ಬಯಸಿದ ಆಸೆಯೊಂದು ಇದೀಗ ಈಡೇರಲಿದೆ. ನೀವು ಇಷ್ಟಪಟ್ಟರೂ ಪಡದಿದ್ದರೂ ಅಧಿಕಾರ ನಿಮ್ಮ ಕೈ ಸೇರುವುದು. ಈ ಹೊಸ ಬದಲಾವಣೆಯಿಂದಾಗಿ ನಿಮ್ಮ ಮಾತಿಗೆ ಸಾಕಷ್ಟು ಮನ್ನಣೆ ಸಿಗುತ್ತದೆ. ಹೊಸ ಅಧಿಕಾರ ಕೈ ಸೇರುವುದರ ಫಲವಾಗಿ ನಿಮ್ಮ ಸ್ಥಾನ ಮಾನ ಮತ್ತಷ್ಟು ಎತ್ತರಕ್ಕೇರುವುದು. ವ್ಯಾಪಾರಿಗಳಿಗೆ, ಅದರಲ್ಲೂ ಬೇರೆ ಬೇರೆ ಕಡೆ ಪ್ರಯಾಣಿಸಿ ವ್ಯಾಪಾರ ಮಾಡುವವರಿಗೆ ಈಗ ಟೈಮ್ ಬಹಳ ಚೆನ್ನಾಗಿದೆ. ನಿಮ್ಮ ವ್ಯವಹಾರ ಬಹುಬೇಗ ಕುದುರುವುದು. ಋಣಬಾಧೆಯಿಂದ ಮುಕ್ತರಾಗುವ ಸಮಯವಿದು. ನೀವು ಸಾಲ ಮಾಡಿದ್ದರೆ ಇದೀಗ ಸಾಲಗಳೆಲ್ಲ ತೀರುವುದು. ಹೊಸ ಲಾಭ ಹರಿದುಬರುವುದು. ಕೃಷಿ ಕ್ಷೇತ್ರದವರಿಗೂ ಶುಭ ಫಲವಿರುತ್ತದೆ. ನಿಮ್ಮ ಆಪ್ತ ಬಂಧುಗಳಿಗೆ ಅನಾರೋಗ್ಯವಾಗಿದ್ದರೆ ಅವರು ಚೇತರಿಸಿಕೊಳ್ಳುತ್ತಾರೆ. ತಿಂಗಳ ಕೊನೆಯಲ್ಲಿ ನೀವು ನಿರೀಕ್ಷಿಸದ ಕಡೆಯಿಂದ ಸಪ್ರೈಸ್ ಒಂದು ನಿಮಗಾಗಿ ಕಾದಿದೆ. ಬ್ಯಾಂಕ್ ವ್ಯವಹಾರದಲ್ಲಿ ತುಸು ಜಾಗೃತೆ ವಹಿಸಿ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಶ್ರದ್ಧೆ, ವಾಹನ, ಭೂಮಿ, ಮನೆ ಕೊಂಡುಕೊಳ್ಳಬಹುದು. ಪ್ರಮೋಶನ್ ಆಗಬಹುದು. ಕೆಲಸಗಳೆಲ್ಲ ನಿಧಾನವಾಗಿ ಮುಗಿದರೂ ಕೊನೆಯಲ್ಲಿ ಶುಭವೇ ಆಗುವುದು. ಮನೆ ದೇವರ ಪೂಜೆಯನ್ನು ಶ್ರದ್ಧೆಯಿಂದ ಮಾಡಿ. ಮನೆ ದೇವರ ದರ್ಶನ ಮಾಡಿದರೆ ಬಹಳ ಉತ್ತಮ.
ಜ್ಯೋತಿಷ್ಯದ ಈ ನಿಯಮಗಳನ್ನು ಅನುಸರಿಸಿದರೆ ಉಜ್ವಲವಾಗುತ್ತೆ ಲೈಫ್ ...