ಈ ನಾಲ್ಕು ರಾಶಿಯ ಗಂಡೈಕ್ಳಿಗೆ ಹೆಣ್ಮಕ್ಳು ಬೇಗ ಆಕರ್ಷಿತರಾಗ್ತಾರೆ!

ಕೆಲ ಹುಡುಗರು ಹಾಗೆಯೇ, ಅವರು ಸುಮ್ಮನಿದ್ದರೂ ಸೆಳೆಯುತ್ತಾರೆ, ಮಾತಾಡಿದರೆ ಮೈ ಮರೆಸುತ್ತಾರೆ. ಅವರ ನಡೆ, ನುಡಿ ಎಲ್ಲವೂ ಆಕರ್ಷಕ. ಇಂಥ ಆಕರ್ಷಕ ಹುಡುಗರು ಯಾವ ರಾಶಿಯವರಾಗಿರುತ್ತಾರೆ ತಿಳ್ಕೋಬೇಕಾ?

Women get easily attracted to men of these Leo Libra Capricorn Gemini zodiac signs skr

ಕೆಲ ಪುರುಷರು ಸಿಕ್ಕಾಪಟ್ಟೆ ಆಕರ್ಷಕ. ಅವರ ಮಾತು, ನಡೆ, ಯೋಚಿಸುವ ರೀತಿ, ಚಟುವಟಿಕೆಯುಕ್ತ ವ್ಯಕ್ತಿತ್ವ ಎಂಥವರನ್ನೂ ಸೆಳೆಯುತ್ತದೆ. ಅವರಿಗೂ ತಮ್ಮ ಆಕರ್ಷಕತೆ ಬಗ್ಗೆ ಗೊತ್ತಿರುತ್ತದೆ. ಇಂಥ ಪುರುಷರು ಉದ್ಯೋಗದಲ್ಲೂ ಸೈ ಎನಿಸಿಕೊಳ್ಳುತ್ತಾರೆ, ಸಂಗಾತಿಗೂ ಸಂತಸ ತರುತ್ತಾರೆ, ಚೆನ್ನಾಗಿ ಮಾತಾಡುತ್ತಾರೆ, ಯೋಚನಾ ಕ್ರಮದಿಂದ ಗೆಲ್ಲುತ್ತಾರೆ. ಇಂಥವರು ಸಾಮಾನ್ಯವಾಗಿ ಈ ನಾಲ್ಕು ರಾಶಿಗಳಿಗೆ ಸೇರಿರುತ್ತಾರೆ. 

ಮಹಿಳೆಯರನ್ನು ಬೇಗ ಸೆಳೆವ ಪುರುಷರ 4 ಆಕರ್ಷಕ ರಾಶಿಚಕ್ರಗಳು ಇವು.
ಮಿಥುನ ರಾಶಿ(gemini)
ಮಿಥುನ ರಾಶಿಯವರು ಮಹಿಳೆಯರ ಗಮನ ಸೆಳೆಯಲು ಕಷ್ಟಪಡಬೇಕಾಗಿಲ್ಲ. ಅವರ ಆಕರ್ಷಕ ವ್ಯಕ್ತಿತ್ವವೇ ಅವರಿಗೆ ಆ ಕೆಲಸವನ್ನು ಮಾಡಿಕೊಡುತ್ತದೆ. ಮಿಥುನ ರಾಶಿಯವರು ಮಹಿಳೆಯರನ್ನು ತಕ್ಷಣವೇ ಆಕರ್ಷಿಸುತ್ತಾರೆ ಮತ್ತು ಅವರು ಸಾಮಾನ್ಯವಾಗಿ ತುಂಬಾ ಮೃದು ಮತ್ತು ರೋಮ್ಯಾಂಟಿಕ್ ಸ್ವಭಾವವನ್ನು ಹೊಂದಿರುತ್ತಾರೆ. ಈ ರಾಶಿಚಕ್ರ ಚಿಹ್ನೆಯ ಪುರುಷರು ತುಂಬಾ ಭಾವನಾತ್ಮಕವಾಗಿರುತ್ತಾರೆ ಮತ್ತು ಅವರು ತಮ್ಮ ಕೆಲಸವನ್ನು ಚೆನ್ನಾಗಿ ತಿಳಿದಿದ್ದಾರೆ. ಅವರು ಹುಡುಗಿಯ ಹೃದಯ ಮತ್ತು ಅವಳ ಭಾವನೆಗಳನ್ನು ಹೆಚ್ಚು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅಲ್ಲದೆ, ಮಾತಿನಲ್ಲೇ ಮನೆ ಕಟ್ಟುವ ಅವರ ಗುಣವು ಹುಡುಗಿಯರಿಗೆ ಇಷ್ಟವಾಗುತ್ತದೆ.

ಗಡಿಬಿಡಿ, ಅಗ್ರೆಸ್ಸೀವ್, ಉತ್ಸಾಹಿ, ರೊಮ್ಯಾಂಟಿಕ್ ನಕ್ಷತ್ರಗಳಿವು!

ಸಿಂಹ ರಾಶಿ(Leo)
ಸಿಂಹ ರಾಶಿಯನ್ನು ಬೆಂಕಿಗೆ ಹೋಲಿಸಲಾಗುತ್ತದೆ. ಆದರೆ ಅವರು ಹೃದಯದಲ್ಲಿ ತುಂಬಾ ಒಳ್ಳೆಯವರು ಮತ್ತು ಪ್ರಣಯ ಸ್ವಭಾವವನ್ನು ಹೊಂದಿರುತ್ತಾರೆ. ಹುಡುಗಿಯರು ಸಹ ಅವರೊಂದಿಗೆ ಬಹಿರಂಗವಾಗಿ ಫ್ಲರ್ಟ್ ಮಾಡಲು ನಾಚಿಕೆ ಪಡುವುದಿಲ್ಲ. ಈ ರಾಶಿಚಕ್ರ ಚಿಹ್ನೆಯ ಪುರುಷರು ತುಂಬಾ ಪ್ರಭಾವಶಾಲಿಯಾಗಿರುತ್ತಾರೆ, ಆದರೆ ಅವರು ತುಂಬಾ ಸೂಕ್ಷ್ಮವಾಗಿರುತ್ತಾರೆ ಅವರು ದಯೆ, ಸ್ನೇಹಪರ, ಸಹಾಯಕ ಮತ್ತು ಉತ್ತಮ ಸ್ವಭಾವದವರು. ಮಹಿಳೆಯರು ಇರ ಗುಣಗಳನ್ನು ನಿಜವಾಗಿಯೂ ಮೆಚ್ಚುತ್ತಾರೆ. ಸಿಂಹ ರಾಶಿಯವರು ಯಾವುದೇ ಹುಡುಗಿಯನ್ನು ಮೊದಲ ನೋಟದಲ್ಲೇ ಆಕರ್ಷಿಸುವ ಸಾಮರ್ಥ್ಯ ಹೊಂದಿದ್ದಾರೆ. ಹೆಚ್ಚುವರಿಯಾಗಿ, ಅವರು ಉದಾರ ಸ್ವಭಾವದವರೂ, ಬಾಯಿ ತುಂಬಾ ಮಾತಾಡುವವರೂ ಆಗಿದ್ದಾರೆ. 

ತುಲಾ ರಾಶಿ(Libra)
ತುಲಾ ರಾಶಿಯವರು ಸಮತೋಲಿತ ವ್ಯಕ್ತಿತ್ವದವರು. ಎವರು ಎಲ್ಲರ ಬಳಿ ಸ್ನೇಹಪರರಾಗಿರುತ್ತಾರೆ. ಮತ್ತು ಅವರು ವಿಶಾಲವಾಗಿ ಯೋಚಿಸುವ ಕ್ರಮ ಎಲ್ಲರಿಗೂ ಇಷ್ಟವಾಗುತ್ತದೆ. ಇದರಿಂದಾಗಿ ಮಹಿಳೆಯರು ಸುಲಭವಾಗಿ ಅವರತ್ತ ಆಕರ್ಷಿತರಾಗುತ್ತಾರೆ. ಅವರ ಶೈಲಿಯು ಇತರ ರಾಶಿಚಕ್ರ ಚಿಹ್ನೆಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಪ್ರೀತಿ ಅವರಿಗೆ ಆಳವಾದ ಭಾವನೆ. ಆದರೆ ಪ್ರೀತಿ ಮತ್ತು ಕರ್ತವ್ಯದ ಸಮತೋಲನವನ್ನು ಕಾಪಾಡಿಕೊಳ್ಳಲು ಅವರು ಪ್ರಯತ್ನಿಸುತ್ತಾರೆ. ಒಂದು ಹುಡುಗಿ ಅವರೊಂದಿಗೆ ಸ್ವಲ್ಪ ಸಮಯ ಕಳೆದರೆ,  ಮತ್ತಾತನನ್ನು ಬಿಟ್ಟಿರುವುದಿಲ್ಲ. 

ಈ ರಾಶಿ ಹುಡುಗಿಯರ ಮೇಲೆ ತಾಯಿ ಲಕ್ಷ್ಮಿ ಕೃಪೆ ಸದಾ ಇರುತ್ತೆ !

ಮಕರ ರಾಶಿ(Capricorn)
ಮಕರ ರಾಶಿಯ ಪುರುಷರು ನೋಡಲು ಆಕರ್ಷಕವಾಗಿರುತ್ತಾರೆ. ಆದ್ದರಿಂದ ಮಹಿಳೆಯರು ಸಾಮಾನ್ಯವಾಗಿ ಅವರ ನೋಟಕ್ಕಾಗಿ ಅವರಿಗೆ ಬೀಳುತ್ತಾರೆ. ಅವರ ಶೈಲಿ, ಅವರಲ್ಲಿರುವ ಸ್ಪಾರ್ಕ್, ಕೆಲಸ ಮಾಡುವ ಕ್ರಮ ಮತ್ತು ಜವಾಬ್ದಾರಿ ಎಲ್ಲರಿಗೂ ಹಿಡಿಸುತ್ತದೆ. ಹೀಗಾಗಿ, ಈ ರಾಶಿಯ ಪುರುಷರು ಮಹಿಳೆಯರನ್ನು ಆಕರ್ಷಿಸುತ್ತಾರೆ. ಇದಲ್ಲದೆ ಇವರು ಹೆಣ್ಣುಮಕ್ಕಳೊಂದಿಗೆ ಫ್ಲರ್ಟ್ ಮಾಡುವವರಲ್ಲ. ಅಲ್ಲದೆ, ಹೆಂಗಸರ ಕಡೆ ತಾವಾಗೇ ಕಣ್ಣೆತ್ತಿ ನೋಡುವವರಲ್ಲ. ಯಾರ ಮೇಲೂ ಕೋಪ ಪ್ರದರ್ಶನ ಮಾಡುವವರಲ್ಲ. ಗೆದ್ದು ತೋರಿಸುವ ಬಯಕೆಯವರು. ಇವರ ಈ ಗುಣಗಳೇ ಇವರತ್ತ ಜನರನ್ನು ಆಕರ್ಷಿಸುತ್ತವೆ. 

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios