ಗಡಿಬಿಡಿ, ಅಗ್ರೆಸ್ಸೀವ್, ಉತ್ಸಾಹಿ, ರೊಮ್ಯಾಂಟಿಕ್ ನಕ್ಷತ್ರಗಳಿವು!
ಜನ್ಮ ನಕ್ಷತ್ರಗಳ ಮೂಲಕ ವ್ಯಕ್ತಿಯ ಗುಣ, ಸ್ವಭಾವಗಳ ಬಗ್ಗೆ ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲದೆ, ಭವಿಷ್ಯದ ವಿಚಾರಗಳ ಬಗ್ಗೆ ಸಹ ಅರಿಯಬಹುದು. ಅದೃಷ್ಟ ಮತ್ತು ಯೋಗಗಳ ಬಗ್ಗೆ ಮತ್ತು ಅವರ ಮನಸ್ಥಿತಿ ಹೀಗೆ ಇನ್ನಿತರ ವಿಷಯಗಳನ್ನು ನಕ್ಷತ್ರದ ಆಧಾರದ ಮೇಲೆ ತಿಳಿದುಕೊಳ್ಳಬಹುದಾಗಿದ್ದು, ಈಗ ಅಶ್ವಿನಿ, ಭರಣಿ, ಕೃತಿಕಾ ಮತ್ತು ರೋಹಿಣಿ ನಕ್ಷತ್ರಗಳ ಬಗ್ಗೆ ತಿಳಿಯೋಣ...
ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಇಪ್ಪತ್ತೇಳು ನಕ್ಷತ್ರಗಳಿವೆ. ಈ ನಕ್ಷತ್ರ (Star) ಪುಂಜವನ್ನು ದಕ್ಷ ಪ್ರಜಾಪತಿಯ ಪುತ್ರಿಯರು ಎನ್ನಲಾಗುತ್ತದೆ. ಸೋಮದೇವ (ಚಂದ್ರದೇವ)ನ ಜೊತೆ ಈ ಎಲ್ಲ ಪುತ್ರಿಯರ ವಿವಾಹವಾಯಿತು (Marriage) ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ನಕ್ಷತ್ರಗಳಿಗೆ ಹೆಚ್ಚಿನ ಮಹತ್ವವಿದ್ದು, ವ್ಯಕ್ತಿಯ ಭವಿಷ್ಯದ (Future) ಮೇಲೆ ಪ್ರಭಾವವನ್ನು ಬೀರುತ್ತದೆ. ಇದು ವ್ಯಕ್ತಿಗಳ ಗುಣ, ಸ್ವಭಾವಗಳ ಮೇಲೂ ಪರಿಣಾಮವನ್ನು ಬೀರುತ್ತದೆ.
ಆರಂಭಿಕ 4 ನಕ್ಷತ್ರಗಳಾದ ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ ನಕ್ಷತ್ರದಲ್ಲಿ ಜನಿಸಿದವರ ಮೇಲೆ ನಕ್ಷತ್ರಗಳ ಪ್ರಭಾವ, ಶುಭ – ಅಶುಭ ಫಲಗಳು ಏನು..? ಎತ್ತ..? ಹಾಗೂ ಈ ನಕ್ಷತ್ರದವರ ಗುಣ, ಸ್ವಭಾವ ಸಹಿತ ವಿಶೇಷಣಗಳ ಬಗ್ಗೆ ತಿಳಿಯೋಣ...
ಅಶ್ವಿನಿ ನಕ್ಷತ್ರ (Ashwini)
ಅಶ್ವಿನಿ ನಕ್ಷತ್ರವು 27 ನಕ್ಷತ್ರ ಪುಂಜಗಳಲ್ಲಿ ಮೊದಲನೇ ನಕ್ಷತ್ರವಾಗಿದೆ. ಕೇತು ಗ್ರಹವು (Ketu Planet) ಈ ನಕ್ಷತ್ರದ ಅಧಿಪತಿ ಗ್ರಹವಾಗಿದೆ. ಜ್ಯೋತಿಷ್ಯದ ಅನುಸಾರ ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ಬಲಶಾಲಿಗಳಾಗಿರುವುದಲ್ಲದೆ, ಯಾವಾಗಲೂ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸಕ್ರಿಯರಾಗಿರುತ್ತಾರೆ. ಆದರೆ, ಇವರು ಮಹತ್ವಾಕಾಂಕ್ಷಿಗಳಾಗಿದ್ದು (Ambitious), ಯಾವುದನ್ನು ಪಡೆದರೂ ತೃಪ್ತಿ ಎಂಬುದು ಇವರಿಗೆ ಇರುವುದಿಲ್ಲ. ಇವರು ಗುಟ್ಟನ್ನು ಹೆಚ್ಚು ಮಾಡುವ ಗುಣವನ್ನು ಹೊಂದಿರುವುದಲ್ಲದೆ, ಸ್ವಲ್ಪ ಗಡಿಬಿಡಿ ಜಾಸ್ತಿ. ಇವರು ತಮ್ಮ ಸಂಗಾತಿ (Partner) ಜೊತೆಗೆ ವಿಶ್ವಾಸಪೂರ್ಣವಾಗಿ ಇರುತ್ತಾರೆ.
ಈ 4 ನಕ್ಷತ್ರದವರಲ್ಲಿ ಯಾರು ರಿಚ್, ಸೆಲ್ಫಿಶ್, ಲಕ್ಕಿ ಮತ್ತು ಅಟ್ರ್ಯಾಕ್ಟಿವ್?
ಭರಣಿ ನಕ್ಷತ್ರ (Bharani)
ಭರಣಿ ನಕ್ಷತ್ರವು ನಕ್ಷತ್ರ ಕೂಟದಲ್ಲಿ 2ನೇ ನಕ್ಷತ್ರವಾಗಿದೆ. ಶುಕ್ರ ಗ್ರಹವು ಈ ನಕ್ಷತ್ರದ ಅಧಿಪತಿ ಗ್ರಹವಾಗಿದೆ. ಈ ನಕ್ಷತ್ರದಲ್ಲಿ ಜನಿಸಿದವರು ಆರಾಮದ ಜೀವನವನ್ನು (Life) ಇಷ್ಟಪಡುತ್ತಾರೆ. ಜೊತೆಗೆ ಲಕ್ಸುರಿಯಾಗಿ (Luxury) ಬದುಕುವುದೆಂದರೆ ಇವರಿಗೆ ಅಚ್ಚುಮೆಚ್ಚು. ಇವರು ಆಕರ್ಷಕ (Attractive) ಹಾಗೂ ಸುಂದರವಾಗಿ (Pretty) ಕಾಣುತ್ತಾರೆ. ಭರಣಿ ನಕ್ಷತ್ರದವರ ವ್ಯಕ್ತಿತ್ವವು ಇತರರನ್ನು ತಮ್ಮತ್ತ ಆಕರ್ಷಿಸುತ್ತದೆ. ಅಲ್ಲದೆ, ಇವರು ಪ್ರೀತಿ ವಾತ್ಸಲ್ಯಕ್ಕೆ ಹೆಚ್ಚಿನ ಮಹತ್ವವನ್ನು ಕೊಡುತ್ತಾರೆ. ಇವರು ಅಗ್ರೆಸ್ಸೀವ್ (Aggressive) ವ್ಯಕ್ತಿತ್ವವನ್ನು ಹೊಂದಿದ್ದು, ಒಮ್ಮೆ ಇವರು ಒಂದು ಕೆಲಸವನ್ನು ಮಾಡಿ ಮುಗಿಸಬೇಕೆಂದು ಪಣ ತೊಟ್ಟರೆ ಪೂರೈಸದ ಹೊರತು ನೆಮ್ಮದಿ ಕಾಣುವುದಿಲ್ಲ. ಅಲ್ಲದೆ, ಇವರು ಸಮಾಜದಲ್ಲಿ ಗೌರವ – ಪ್ರತಿಷ್ಠೆಗಳನ್ನು ಹೊಂದಿರುತ್ತಾರೆ.
ಕೃತ್ತಿಕಾ ನಕ್ಷತ್ರ (Kruttika)
ಇದು 3ನೇ ನಕ್ಷತ್ರವಾಗಿದೆ. ಸೂರ್ಯ ಗ್ರಹವು (Sun planet) ಈ ನಕ್ಷತ್ರದ ಅಧಿಪತಿ ಗ್ರಹವಾಗಿದೆ. ಕೃತ್ತಿಕಾ ನಕ್ಷತ್ರದವರು ತಕ್ಷಣಕ್ಕೆ ಯಾರನ್ನೂ ನಂಬುವವರಲ್ಲ. ಇವರು ಪ್ರಥಮ ನೋಟದಲ್ಲೇ ಪ್ರೀತಿ ಆಗುತ್ತದೆ ಎಂಬುದನ್ನೆಲ್ಲಾ ನಂಬುವವರಲ್ಲ. ಈ ನಕ್ಷತ್ರದವರಿಗೆ ಸೂರ್ಯನ ಅನುಗ್ರಹ ಮತ್ತು ಪ್ರಭಾವ ಹೆಚ್ಚಿರುತ್ತದೆ. ಅಲ್ಲದೆ, ಇವರು ಸ್ವಾಭಿಮಾನಿಗಳಾಗಿ (Self-respecting) ಇರುವುದಲ್ಲದೆ, ಜೀವನದಲ್ಲಿ ಹೆಚ್ಚು ಉತ್ಸಾಹ ಹೊಂದಿದವರಾಗಿರುತ್ತಾರೆ. ಇವರಿಗೆ ಯಾವುದೇ ಕೆಲಸವನ್ನು ಕೊಟ್ಟರೂ ಶ್ರದ್ಧೆ ಮತ್ತು ಉತ್ಸಾಹದಿಂದ ಮಾಡಿ ಮುಗಿಸುವ ಸ್ವಭಾವವನ್ನು ಹೊಂದಿದ್ದಾರೆ.
ಈ 3 ರಾಶಿಗಳಿಗೆ ಜುಲೈನಲ್ಲಿ ಕುಬೇರನ ಕೃಪೆ - ಧನಲಾಭ
ರೋಹಿಣಿ ನಕ್ಷತ್ರ (Rohini)
ರೋಹಿಣಿ ನಕ್ಷತ್ರವು ಒಟ್ಟು ನಕ್ಷತ್ರಗಳಲ್ಲಿ 4ನೇ ನಕ್ಷತ್ರವಾಗಿದೆ. ಚಂದ್ರ ಗ್ರಹವು (Moon planet) ಈ ನಕ್ಷತ್ರದ ಅಧಿಪತಿ ಗ್ರಹವಾಗಿದೆ. ಇವರು ಕಲ್ಪನಾ ಜೀವಿಗಳಾಗಿದ್ದು, ಚಂದ್ರ ಗ್ರಹದ ಪ್ರಭಾವ ಇದಕ್ಕೆ ಕಾರಣವಾಗಿದೆ. ಈ ನಕ್ಷತ್ರದವರು ಬಹಳ ರೊಮ್ಯಾಂಟಿಕ್ (Romantic) ಆಗಿರುತ್ತಾರೆ. ಅಲ್ಲದೆ, ಇವರದ್ದು ಸ್ವಲ್ಪ ಚಂಚಲ ಸ್ವಭಾವವಾಗಿದ್ದು, ಯಾವುದೇ ನಿರ್ಧಾರಕ್ಕೆ ಸಹ ಬದ್ಧರಾಗಿರುವುದಿಲ್ಲ. ಜೀವನದಲ್ಲಿ ಎಲ್ಲ ಸುಖ – ಸಮೃದ್ಧಿಯು ಇವರಿಗೆ ಬೇಕೆನಿಸುತ್ತದೆ. ವಿರುದ್ಧ ಲಿಂಗಿಗಳ ಮೇಲೆ ಇವರಿಗೆ ವಿಶೇಷ ಆಸಕ್ತಿ (Interest) ಮತ್ತು ಆಕರ್ಷಣೆ ಇವರುತ್ತದೆ.