Asianet Suvarna News Asianet Suvarna News

ಮಡಿಕೇರಿಯಲ್ಲಿ ದಸರಾ ಸಂಭ್ರಮ: ಫ್ಯಾಷನ್ ಶೋ, ಕಬ್ಬಡಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಹಿಳೆಯರು ಫುಲ್ ಖುಷ್

ಮಡಿಕೇರಿ ನಗರದ ಗಾಂಧಿ ಮೈದಾನದ ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ಫ್ಯಾಷನ್ ಶೋ, ನೃತ್ಯ ಸ್ಪರ್ಧೆಗಳು ಎಲ್ಲರ ಕಣ್ಣು ಕೋರೈಸಿದ್ದಂತು ಸತ್ಯ. 25 ವಯೋಮಾನದ ಒಳಗಿನವರ ಒಂದು ವಿಭಾಗದ ಫ್ಯಾಷನ್ ಒಂದೆಡೆ ಇದ್ದರೆ ಮತ್ತೊಂದೆಡೆ 25 ಕ್ಕೂ ಮೇಲ್ಪಟ್ಟ ವಯೋಮಾನದ ಸ್ಪರ್ಧೆ ಮತ್ತೊಂದೆಡೆ ಇತ್ತು. ಎರಡು ವಿಭಾಗದಲ್ಲಿ ಮಹಿಳೆಯರು ಅಂದ ಚೆಂದದ ಉಡುಗೆ ತೊಡುಗೆಗಳನ್ನು ತೊಟ್ಟು ರ್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದರೆ ಸೌಂದರ್ಯವೇ ಧರೆಗೆ ಇಳಿದಂತೆ ಇತ್ತು. 

Women Enjoyment in Dasara Festival in Kodagu grg
Author
First Published Oct 22, 2023, 8:50 PM IST

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಅ.22): ಮಡಿಕೇರಿ ದಸರಾ ಅಂದರೆ ಎಲ್ಲಾ ಜನರು ಸ್ವಯಂ ಪ್ರೇರಿತವಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಅದು ಜನೋತ್ಸವವೇ ಸರಿ. ಅದರಲ್ಲೂ ಭಾನುವಾರ ನಡೆದ ಮಹಿಳಾ ದಸರಾದಲ್ಲಿ ನೂರಾರು ಮಹಿಳೆಯರು ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಫುಲ್ ಎಂಜಾಯ್ ಮಾಡಿದ್ರು. 

ಮಡಿಕೇರಿ ನಗರದ ಗಾಂಧಿ ಮೈದಾನದ ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ಫ್ಯಾಷನ್ ಶೋ, ನೃತ್ಯ ಸ್ಪರ್ಧೆಗಳು ಎಲ್ಲರ ಕಣ್ಣು ಕೋರೈಸಿದ್ದಂತು ಸತ್ಯ. 25 ವಯೋಮಾನದ ಒಳಗಿನವರ ಒಂದು ವಿಭಾಗದ ಫ್ಯಾಷನ್ ಒಂದೆಡೆ ಇದ್ದರೆ ಮತ್ತೊಂದೆಡೆ 25 ಕ್ಕೂ ಮೇಲ್ಪಟ್ಟ ವಯೋಮಾನದ ಸ್ಪರ್ಧೆ ಮತ್ತೊಂದೆಡೆ ಇತ್ತು. ಎರಡು ವಿಭಾಗದಲ್ಲಿ ಮಹಿಳೆಯರು ಅಂದ ಚೆಂದದ ಉಡುಗೆ ತೊಡುಗೆಗಳನ್ನು ತೊಟ್ಟು ರ್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದರೆ ಸೌಂದರ್ಯವೇ ಧರೆಗೆ ಇಳಿದಂತೆ ಇತ್ತು. 

ಚಿಕ್ಕಮಗಳೂರಲ್ಲಿ ನವರಾತ್ರಿ ಸಂಭ್ರಮ: ಹೊರನಾಡು, ಶೃಂಗೇರಿಯಲ್ಲಿ ಭಕ್ತರ ಸಾಗರ

ಸೌಂದರ್ಯದಲ್ಲಿ ತಾ ಮುಂದೋ, ನಾ ಮುಂದೋ ಎಂದು ಮಹಿಳೆಯರು ರ್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದರೆ ವೇದಿಕೆ ಮುಂಭಾಗದಲ್ಲಿದ್ದ ಮಹಿಳೆ, ಪುರುಷರು ಸೇರಿದಂತೆ ಎಲ್ಲಾ ಪ್ರೇಕ್ಷಕರು ಸಿಳ್ಳೆ ಚಪ್ಪಾಳೆ ತಟ್ಟಿ ಸ್ಪರ್ಧಿಗಳನ್ನು ಹುರಿದುಂಬಿಸಿದರು. ಕೊಡವತಿಯ ಸೀರೆಯನ್ನುಟ್ಟು ಕೆಲವು ಮಹಿಳೆಯರು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರೆ ಇನ್ನು ಕೆಲವರು ಪಕ್ಕ ಹಳ್ಳಿಯ ಮಹಿಳೆಯ ರೀತಿ ಧಿರಿಸು ಧರಿಸಿ ಬಂದ್ರು. ಕೆಲವರು ಪುರಷರಿಗೆ ನಾವೇನು ಕಡಿಮೆ ಕೊಡವ ಪುರಷರ ಧಿರಿಸಾದ ಕುಪ್ಪೆಚಾಲೆ ಹಾಕಿ ರ್ಯಾಂಪ್ ಮೇಲೆ ನಡೆದರು. 

ಇದು ಫ್ಯಾಷನ್ ಷೋದಲ್ಲಿ ಕಂಡು ಬಂದ ಕಲರ್ಫುಲ್ ದೃಶ್ಯಗಳು. ವೇದಿಕೆಯಿಂದ ಸ್ವಲ್ಪ ದೂರದಲ್ಲಿಯೇ ನಡೆದ ನಿಂಬೆಹಣ್ಣನ್ನು ಚಮಚದ ಮೇಲಿಟ್ಟು ನಡೆಯುವುದು, ಬಕೆಟ್ಗೆ ಬಾಲ್ ಹಾಕುವುದು, ರಿಂಗ್ ಹಾಕುವ ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲರೂ ಫುಲ್ ಎಂಜಾಯ್ ಮಾಡಿದರು. ಜೊತೆಗೆ ಮಹಿಳೆಯರಿಗಾಗಿ ಕಬಡ್ಡಿ ಸ್ಪರ್ಧೆ ಕೂಡ ನಡೆಯಿತು. ಸ್ಪರ್ಧೆಯಲ್ಲಿ ಭಾಗವಹಿಸಿ ಮಹಿಳೆಯರು ಯುವಕರನ್ನು ನಾಚಿಸುವಂತೆ ಆಟವಾಡಿದ್ದು ನೆರೆದಿದ್ದವರನ್ನು ಹುಬ್ಬೇರುವಂತೆ ಮಾಡಿತು. ಅಲ್ಲದೆ ಮಹಿಳೆಯರಿಗಾಗಿ ನಡೆದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ನಾನಾ ನೀನಾ ಎನ್ನುವಂತೆ ಸ್ಪರ್ಧೆಯೊಡ್ಡಿದ್ದು ಮಾತ್ರ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ಕಬಡ್ಡಿ ಮತ್ತು ಹಗ್ಗಜಗ್ಗಾಟ ಸ್ಪರ್ಧೆಯ ನೋಡುಗರಂತು ಶಿಳ್ಳೆ ಕೇಕೆಗಳನ್ನು ಹಾಕಿ ಸ್ಪರ್ಧಿಗಳನ್ನು ಪ್ರೋತ್ಸಾಹಿಸಿದರು. ಇವಿಷ್ಟೇ ಅಲ್ಲ, ಮಹಿಳೆಯರಿಗಾಗಿ ಸಂತೆ ಸ್ಪರ್ಧೆ ಕೂಡ ನಡೆಯಿತು. ತಾವೇ ಸ್ವತಃ ಉತ್ಪಾದಿಸಿದ ವಸ್ತುಗಳನ್ನು ತಂದ ಮಹಿಳೆಯರು ಗಾಂಧಿ ಮೈದಾನದಲ್ಲಿ ಇರಿಸಿ ಮಾರಾಟ ಮಾಡಿದರು. ಇನ್ನು ಕೆಲವರು ಬ್ಯಾಂಗಲ್ಸ್ ಮತ್ತು ಇತರೆ ವಸ್ತುಗಳನ್ನು ಮಾರಾಟ ಮಾಡಿದರು. ಇವೆಲ್ಲಕ್ಕಿಂತ ಹೆಚ್ಚಿನದಾಗಿ ಮಹಿಳೆಯರಿಗೆ ಮೆಹಂದಿ ಹಾಕುವುದು ಎಂದರೆ ಕೇಳಬೇಕಾ ಅದಕ್ಕಾಗಿಯೂ ನಡೆದ ಸ್ಪರ್ಧೆಯಲ್ಲಿ ಒಬ್ಬರಿಗೆ ಒಬ್ಬರು ಮೆಹಂದಿ ಚಿತ್ತಾರಗಳನ್ನು ಹಾಕಿ ಸಂಭ್ರಮಿಸಿದರು. 

Navaratri 2023: ವಿಜಯದಶಮಿ ಅತಿ ಮಂಗಳದಾಯಕ ದಿನ; ತಪ್ಪಿಯೂ ಈ ಕೆಲಸ ಮಾಡ್ಬೇಡಿ!

ತೆಂಗಿನಕಾಯಿಗೆ ಕಲ್ಲು ಒಡೆಯುವ ಸ್ಪರ್ಧೆಯಲ್ಲೂ ಸ್ಪರ್ಧಿಸಿ ಖುಷಿಪಟ್ಟರು. ಈ ಸಂದರ್ಭ ತಮ್ಮ ಖುಷಿ ಹಂಚಿಕೊಂಡ ಮಹಿಳೆಯರು ಮಹಿಳೆಯರಿಗಾಗಿ ಇಷ್ಟೊಂದು ಖುಷಿಯನ್ನು ಕೊಡುವ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿರುವುದು ತುಂಬಾ ಸಂತೋಷ ತಂದಿದೆ ಎಂದು ಯಶೋದ ಎಂಬುವರು ಹೇಳಿದರು. 

ನಮಗಾಗಿ ನಡೆಯುತ್ತಿರುವ ಸ್ಪರ್ಧೆಗಳನ್ನು ನಾವು ಸಕ್ಕತ್ತಾಗಿ ಎಂಜಾಯ್ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ ಸ್ಪರ್ಧಿಗಳು. ಒಟ್ಟಿನಲ್ಲಿ ಮಡಿಕೇರಿ ದಸರಾ ಜನೋತ್ಸವದಲ್ಲಿ ನೂರಾರು ಮಹಿಳೆಯರು ಭಾಗವಹಿಸಿ ಫುಲ್  ಎಂಜಾಯ್ ಮಾಡಿದ್ದಂತು ಸತ್ಯ. 

Follow Us:
Download App:
  • android
  • ios