Asianet Suvarna News Asianet Suvarna News

Navaratri 2023: ವಿಜಯದಶಮಿ ಅತಿ ಮಂಗಳದಾಯಕ ದಿನ; ತಪ್ಪಿಯೂ ಈ ಕೆಲಸ ಮಾಡ್ಬೇಡಿ!

ಯಾವುದೇ ಹೊಸ ಕೆಲಸದ ಆರಂಭಕ್ಕೆ ವಿಜಯದಶಮಿ ಅತ್ಯಂತ ಶುಭ ಮುಹೂರ್ತವಾಗಿದೆ. ಕೆಲವೆಡೆ ಹೊಸ ವಸ್ತುಗಳ ಖರೀದಿಯನ್ನು ಮಾಡಲಾಗುತ್ತದೆ. ಲಲಿತಕಲೆಗಳ ವಿದ್ಯಾರಂಭಕ್ಕೆ ಆರಂಭಕ್ಕೆ ಇದು ಪ್ರಶಸ್ತ ದಿನ. ಅಷ್ಟೇ ಅಲ್ಲ, ವಿಜಯದಶಮಿಯಂದು ಕೆಲವು ಅಮಂಗಳ ಕಾರ್ಯವನ್ನು ಎಂದಿಗೂ ಮಾಡಬಾರದು.
 

Navratri 2023: Dussehra is auspicious day and not do these things
Author
First Published Oct 22, 2023, 5:43 PM IST

ವಿಜಯದಶಮಿಯನ್ನು ಅತ್ಯಂತ ಶುಭದಾಯಕ ದಿನವೆಂದು ಪರಿಗಣಿಸಲಾಗಿದೆ. ವಿಜಯದಶಮಿ, ಶ್ರೀರಾಮನು ರಾವಣನನ್ನು ಹತ್ಯೆಗೈದ ದಿನವಾಗಿದೆ. ಆದಿಮಾಯೆಯು ದುರ್ಗಾ ದೇವಿಯ ರೂಪ ತಾಳಿ ಮಹಿಷಾಸುರನನ್ನು ವಧೆ ಮಾಡಿ ಜಗತ್ತನ್ನು ರಕ್ಷಿಸಿದ ದಿನವಾಗಿದೆ. ಈ ದಿನವನ್ನು ಅಸತ್ಯದ ಮೇಲೆ ಸತ್ಯದ ವಿಜಯದ ದಿನವೆಂದೂ, ಅಧರ್ಮದ ವಿರುದ್ಧ ಧರ್ಮದ ವಿಜಯದ ದಿನವೆಂದೂ ಪರಿಗಣಿಸಲಾಗಿದೆ. ಕೆಟ್ಟದ್ದರ ಮೇಲೆ ಉತ್ತಮ ವಿಚಾರಗಳ ವಿಜಯದ ದಿನವೆಂದು ಹೇಳಲಾಗಿದೆ. ಹಿಂದೂ ಧರ್ಮದಲ್ಲಿ ವಿಜಯದಶಮಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಈ ದಿನವನ್ನು ಹೊಸತರ ಆರಂಭಕ್ಕೆ ಶುಭವಾದ ಸಮಯವೆಂದು ಪರಿಗಣಿಸಲಾಗಿದೆ. ವಿಜಯದಶಮಿಯಂದು ಆರಂಭಿಸುವ ಯಾವುದೇ ಹೊಸ ಕೆಲಸಕ್ಕೆ ಯಶಸ್ಸು ಲಭಿಸುತ್ತದೆ ಎನ್ನುವ ಭಾವನೆಯಿದೆ. ಯಾವುದೇ ಹೊಸ ವಿದ್ಯೆಯ ಆರಂಭಕ್ಕೂ ಈ ದಿನವನ್ನು ಶುಭಮುಹೂರ್ತವೆಂದು ಪರಿಗಣಿಸಲಾಗಿದೆ. ಸರ್ವವನ್ನೂ ಸಿದ್ಧಿಸಿಕೊಳ್ಳುವ ಅರ್ಥಾತ್‌ ಸರ್ವಸಿದ್ಧಿದಾಯಕ ದಿನ ಎಂದು ವಿಜಯದಶಮಿಗೆ ಹೇಳಲಾಗುತ್ತದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಿಜಯದಶಮಿಯಂದು (Dashami) ಯಾವುದೇ ಶುಭವಾದ (Auspicious) ಕಾರ್ಯವನ್ನು ಕೈಗೊಳ್ಳಬಹುದು. ಹೊಸ ಉದ್ಯಮ (Industry) ಆರಂಭಿಸಬಹುದು, ಹೊಸ ಕಾರ್ಯಕ್ಕೆ (New Work) ಕೈ ಹಾಕಬಹುದು. ಹೊಸ ಯೋಚನೆಗಳನ್ನು ನಿರಾತಂಕವಾಗಿ ಜಾರಿಗೆ ತರಬಹುದು. ಮನೆಯ ನಿರ್ಮಾಣ ಕಾರ್ಯವನ್ನು ಆರಂಭಿಸಬಹುದು. ಮಕ್ಕಳಿಗೆ ಅಕ್ಷರ ಅಭ್ಯಾಸ, ಅನ್ನಪ್ರಾಶನ ಮಾಡಿಸಬಹುದು. ಗೃಹ (Home) ಪ್ರವೇಶಕ್ಕೂ ಇದು ಉತ್ತಮ ಸಮಯವಾಗಿದೆ. ಹಾಗೆಯೇ, ಮುಂಡನ, ನಾಮಕರಣ (Naming) ಮಾಡಬಹುದು. ಮಕ್ಕಳಿಗೆ ಕಿವಿ ಚುಚ್ಚಿಸಬಹುದು. ಯಜ್ಞೋಪವೀತ ಸಂಸ್ಕಾರ ನೀಡಬಹುದು. ಕಟ್ಟಡ ನಿರ್ಮಾಣದ (Construction) ಭೂಮಿ ಪೂಜೆಯನ್ನು ಸಹ ಇಟ್ಟುಕೊಳ್ಳಬಹುದು. ಸಂಗೀತ, ನೃತ್ಯ ಕಲೆಗಳನ್ನು ಕಲಿಯಲು ಇಚ್ಛಿಸುವವರು ಇಂದೇ ಶುಭಾರಂಭ ಮಾಡುತ್ತಾರೆ. ವಿಜಯದಶಮಿಯಂದು ರಾಮಚರಿತ ಮಾನಸವನ್ನು ಪಠಣ ಮಾಡುವುದು ಶುಭವೆಂದು ಹೇಳಲಾಗಿದೆ. ದಕ್ಷಿಣ ಭಾರತದಲ್ಲಿ ವಿಜಯದಶಮಿಯಂದು ಪೂಜೆಗಿಟ್ಟ ಪುಸ್ತಕಗಳನ್ನು ಓದುವ (Read) ಸಂಪ್ರದಾಯ ಕಂಡುಬರುತ್ತದೆ. ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸಹ ಸಾಮಾನ್ಯ. ಅಷ್ಟೇ ಅಲ್ಲ, ಅಂದು ಗುಪ್ತವಾಗಿ ದಾನ ಮಾಡುವುದರಿಂದ ಜೀವನದಲ್ಲಿ ಸುಖ ಹಾಗೂ ಸಮೃದ್ಧಿ (Prosperous) ನೆಲೆಸುತ್ತದೆ ಎಂದು ಹೇಳಲಾಗುತ್ತದೆ. 

Navratri 2023: ಪ್ರಯಾಗ್ ರಾಜ್‌ನಲ್ಲಿ ವಿಜಯದಶಮಿಯಂದು ರಾವಣನಿಗೆ ಸಮ್ಮಾನ: ಹೀಗ್ಯಾಕೆ?

ಮರೆತೂ ಸಹ ಮಾಡಬೇಡಿ: ವಿಜಯದಶಮಿಯನ್ನು ಅತ್ಯಂತ ಮಂಗಳದಾಯಕ ದಿನವಾಗಿದೆ. ಹೀಗಾಗಿ, ಈ ದಿನ ಕೆಲವು ಅಮಂಗಳಕರವಾದ ಕಾರ್ಯವನ್ನು ಎಂದಿಗೂ ಮಾಡಬಾರದು. ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ (Vistory) ದಿನವಾಗಿರುವುದರಿಂದ ಕೆಟ್ಟ ಕಾರ್ಯಗಳ ಬಗ್ಗೆ ಮನಸ್ಸಿನಲ್ಲಿ ಯೋಚಿಸಲೂಬಾರದು. ಭವಿಷ್ಯದ ಬಗ್ಗೆ ಆತಂಕ ಪಡಬಾರದು. ಕೆಟ್ಟ ದಿನಗಳು ಮುಂದಿವೆ ಎಂದು ಸಹ ಭಾವಿಸಬಾರದು. ಈ ದಿನದಂದು ಮರೆತೂ ಸಹ ಮಾಡಬಾರದ ಕೆಲಸಗಳಿವೆ. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆಶೀರ್ವಾದ ಬೇಕೆಂದಾದರೆ ಮರ್ಯಾದೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು. ಮೈಮರೆತು ಸಹ ವಿಜಯದಶಮಿಯಂದು ಯಾರನ್ನಾದರೂ ಅವಮಾನಿಸಬಾರದು. ಅಂದು ಯಾರೊಂದಿಗೂ ವಾದ-ವಿವಾದ (Argument) ಮಾಡಬಾರದು. ಕಠೋರವಾದ ಮಾತುಗಳನ್ನು ಆಡಬಾರದು. ಯಾರ ಬಳಿಯೂ ಸುಳ್ಳು (Lie) ಹೇಳಬಾರದು. ಅಂದು ಮಾಂಸ, ಮದ್ಯಪಾನ ಮಾಡಬಾರದು. ತಾಮಸಿಕ ಚಿಂತನೆ ಹಾಗೂ ವಸ್ತುಗಳಿಂದ ದೂರ ಇರಬೇಕು. ಅಲ್ಲದೇ ಅಂದು ಗಿಡ, ಮರಗಳನ್ನು ಕತ್ತರಿಸಬಾರದು (Cut) ಎಂದು ಹೇಳಲಾಗುತ್ತದೆ.

ನವರಾತ್ರಿ ವೇಳೆ ಇವುಗಳನ್ನು ನೋಡಿದ್ರೆ ದೇವಿಯ ಕೃಪೆ ನಿಮ್ಮ ಮೇಲಿರುತ್ತೆ!

ಶಸ್ತ್ರಗಳ ಪೂಜೆ:  ಪಾಂಡವರು ವನವಾಸದ ಬಳಿಕ ಒಂದು ವರ್ಷದ ಅಜ್ಞಾತವಾಸ ಮುಗಿಸಿದ ದಿನವೆಂದೂ ವಿಜಯದಶಮಿಗೆ ಹೇಳಲಾಗುತ್ತದೆ. ಈ ದಿನದಂದು ಪಾಂಡವರಿಗೆ ಕೌರವರ ವಿರುದ್ಧ ಮೊದಲ ವಿಜಯ ದೊರೆತಿತ್ತು. ಹೀಗಾಗಿ, ಈ ದಿನ ಶಸ್ತ್ರಗಳ ಪೂಜೆಯನ್ನು ಮಾಡುವ ಸಂಪ್ರದಾಯವಿದೆ. ಅವರು ತಮ್ಮ ಶಸ್ತ್ರಗಳನ್ನು ಬನ್ನಿ ಅಥವಾ ಶಮಿ ವೃಕ್ಷದಲ್ಲಿ ಅಡಗಿಸಿಟ್ಟಿದ್ದರು. ವಿಜಯದಶಮಿಯಂದು ಪೂಜೆ ಸಲ್ಲಿಸಿ ಅವುಗಳನ್ನು ಬಳಕೆ ಮಾಡಿದ್ದರು. ಈ ಪೌರಾಣಿಕ ಹಿನ್ನೆಲೆಯಲ್ಲಿ, ಮೈಸೂರಿನ ಮಹಾರಾಜರು ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸುವ ಸಂಪ್ರದಾಯ ಇಂದಿಗೂ ಇದೆ.  
 

Follow Us:
Download App:
  • android
  • ios