ತಿಂಗಳಿಗೊಮ್ಮೆ ಗಂಡಸರೂ ಮುಟ್ಟಾಗ್ತಾರೆ, ವಿಜ್ಞಾನದಿಂದ ಬಯಲಾಯ್ತು ಶಾಕಿಂಗ್ ಸತ್ಯ
Periods in Men: ನಿಮ್ಮ ಬಾಯ್‌ಫ್ರೆಂಡ್‌ಗೆ ಮೂಡ್ ಸ್ವಿಂಗ್ ಆಗಿದ್ಯಾ?. ಸಿಡಿಮಿಡಿ ಎನ್ನುತ್ತಿದ್ದಾರಾ? ಚಿಕ್ಕ ವಿಷ್ಯಕ್ಕೆ ಕೋಪ ಮಾಡಿಕೊಳ್ತಿದ್ದಾರಾ? ಇನ್ನೊಂದು ಮೂರ್ನಾಲ್ಕ ದಿನ ನಂತ್ರ ಬದಲಾಗ್ತಾರೆ ಬಿಡಿ. ಯಾಕೆಂದ್ರೆ ಅವರಿಗೂ ನಿಮ್ಮ ಹಾಗೆ ಪಿರಿಯಡ್ಸ್ ಟೈಂ ಇದು. ಅಚ್ಚರಿಯಾಯ್ತಾ? ಪುರುಷರೂ ಮುಟ್ಟಾಗ್ತಾರೆ ಅನ್ನೋದು ನಿಮಗೆ ಗೊತ್ತಾ?
ಪ್ರತಿ ಮಹಿಳೆ (Woman) ಯರಿಗೂ ತಿಂಗಳ ಆ ಮೂರ್ನಾಲ್ಕು ದಿನ ಬಂದ್ರೆ ಕಿರಿಕಿರಿ ಸಾಮಾನ್ಯ. ಮುಟ್ಟಿನ ದಿನ (Period) ಗಳಲ್ಲಿ ಮಹಿಳೆಯರು ಬೇರೆ ಬೇರೆ ಸಮಸ್ಯೆಗಳನ್ನು ಎದುರಿಸುತ್ತಾರೆ. ಹೊಟ್ಟೆ ನೋವು, ಸೊಂಟ ನೋವು, ಕಾಲು ನೋವು, ಅತಿಯಾದ ಬ್ಲೀಡಿಂಗ್ ಹಾಗೆ ಮಾನಸಿಕ ಸಮಸ್ಯೆಯನ್ನು ಮಹಿಳೆಯರು ಅನುಭವಿಸುತ್ತಾರೆ. ಮಹಿಳೆಯರಿಗೆ ಮುಟ್ಟು ಸಾಮಾನ್ಯ. ಆದ್ರೆ ಪುರುಷರೂ ಮುಟ್ಟಾಗ್ತಾರೆ ಎಂಬ ಸಂಗತಿ ನಿಮಗೆ ಗೊತ್ತಾ? ಅಚ್ಚರಿ ಅನ್ನಿಸಿದ್ರೂ ಇದು ಸತ್ಯ. ಕೆಲ ಸಂಶೋಧನೆ (Research) ಗಳಿಂದ ಇದು ಸಾಭೀತಾಗಿದೆ. ಇಂದು ನಾವು ಪುರುಷರ ಮುಟ್ಟಿನ ಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡ್ತೇವೆ.
ಸರ್ವೆಯಲ್ಲಿ ಬಹಿರಂಗವಾಯ್ತು ಸತ್ಯ : ಪುರುಷರ ಮುಟ್ಟಿನ ಬಗ್ಗೆ ಸಂಶೋಧನೆ ನಡೆದಿದೆ. ಸಂಶೋಧನೆಯ ಪ್ರಕಾರ, ಪುರುಷರ ಮುಟ್ಟನ್ನು ವೈದ್ಯಕೀಯ ಪರಿಭಾಷೆಯಲ್ಲಿ Irritable Male Syndrome (IMS) ಎಂದು ಕರೆಯಲಾಗುತ್ತದೆ. ಪುರುಷರ ಮುಟ್ಟಿನ ಬಗ್ಗೆ ಸಮೀಕ್ಷೆಗಳು ಕೂಡ ನಡೆದಿವೆ. ಸರ್ವೆ ಪ್ರಕಾರ, ನಾಲ್ಕರಲ್ಲಿ ಒಬ್ಬ ಪುರುಷರಿಗೆ ಪ್ರತಿ ತಿಂಗಳು ಪಿರಿಯಡ್ಸ್ ಆಗುತ್ತದೆ. ಸರ್ವೆಯಲ್ಲಿ 2412 ಜನರು ಪಾಲ್ಗೊಂಡಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. ಅದರಲ್ಲಿ 26 ಪ್ರತಿಶತ ಪುರುಷರು ಮುಟ್ಟಿನ ಲಕ್ಷಣಗಳನ್ನು ಹೊಂದಿರುವುದು ಕಂಡುಬಂದಿದೆ. ಸಮೀಕ್ಷೆಯಲ್ಲಿ 43 ಪ್ರತಿಶತ ಮಹಿಳೆಯರು ಈ ಸಮಯದಲ್ಲಿ ತಮ್ಮ ಪುರುಷ ಸಂಗಾತಿಯ ನೋವನ್ನು ಕಡಿಮೆ ಮಾಡಲು ಹಲವು ಕ್ರಮಗಳನ್ನು ಕೈಗೊಂಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಜನರಲ್ಲಿ ಶೇಕಡಾ 56 ರಷ್ಟು ಪುರುಷರಲ್ಲಿ ಕಿರಿಕಿರಿ ಕಾಣಿಸಿಕೊಂಡಿದೆ. ಶೇಕಡಾ 51ರಲ್ಲಿ ಆಯಾಸ. ಶೇಕಡಾ 47ರಷ್ಟು ಪುರುಷರಲ್ಲಿ ಕಡುಬಯಕೆ, ಶೇಕಡಾ 43ರಷ್ಟು ಪುರುಷರಲ್ಲಿ ಅತಿಯಾದ ಹಸಿವು ಮತ್ತು ಶೇಕಡಾ 43ರಷ್ಟು ಪುರುಷರು ಸಣ್ಣ ಪುಟ್ಟ ವಿಷಯಗಳಿಗೆ ಬೇಸರಿಸಿಕೊಳ್ಳುತ್ತಿರುವ ಲಕ್ಷಣ ಕಂಡು ಬಂದಿದೆ. ಶೇಕಡಾ 15ರಷ್ಟು ಪುರುಷರಲ್ಲಿ ಹೊಟ್ಟೆ ಉಬ್ಬುವುದು ಮುಂತಾದ ಲಕ್ಷಣಗಳು ಕಂಡುಬಂದಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದನ್ನು ಮಹಿಳೆಯರು ಕೂಡ ಒಪ್ಪಿಕೊಂಡಿದ್ದಾರೆ. ತಮಗಾದಂತೆ ತಮ್ಮ ಪತಿಗೆ ಮುಟ್ಟಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಮಹಿಳೆಯರು ಹೇಳಿದ್ದಾರೆ.
YOGA HEALTH : ಜಿಮ್ ನಂತೆ ದೈಹಿಕ ಶಕ್ತಿ ಹೆಚ್ಚಿಸುತ್ತೆ ಈ ಯೋಗಾಸನ
ಪುರುಷರಿಗೆ ಪ್ಯಾಡ್ ಅವಶ್ಯಕತೆಯಿಲ್ಲ : ಆದ್ರೆ ಪುರುಷರ ಮುಟ್ಟು ಹಾಗೂ ಮಹಿಳೆಯರ ಮುಟ್ಟಿಗೆ ಸ್ವಲ್ಪ ವ್ಯತ್ಯಾಸವಿದೆ. ಮಹಿಳೆಯರ ರೀತಿ ಪುರುಷರಿಗೆ ಬ್ಲೀಡಿಂಗ್ ಆಗೋದಿಲ್ಲ. ಇದನ್ನು ಹೊರತುಪಡಿಸಿ ಮುಟ್ಟಿನಲ್ಲಿ ಮಹಿಳೆಯರು ಅನುಭವಿಸುವ ಎಲ್ಲ ಸಮಸ್ಯೆಯನ್ನು ಎದುರಿಸುತ್ತಾರೆ. ಸಂಶೋಧಕರು ಇದು ಸಹಜವಾದ ಸಂಗತಿ ಎಂದಿದ್ದಾರೆ. ಈ ಸಮಯದಲ್ಲಿ ಪುರುಷರಲ್ಲಿ ಹಾರ್ಮೋನ್ ಬದಲಾವಣೆ ಸಂಭವಿಸುತ್ತವೆ. ಇದರಿಂದಾಗಿ ಅವರು ಬೇಗನೆ ಕೆರಳುತ್ತಾರೆ ಮತ್ತು ಸುಸ್ತಾಗುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ.
ಪುರುಷರ ಮುಟ್ಟಿನ ಲಕ್ಷಣ : ಈ ಸಮಯದಲ್ಲಿ ಪುರುಷರಿಗೆ ಹೊಟ್ಟೆ ಮತ್ತು ಬೆನ್ನು ನೋವು, ಕಿರಿಕಿರಿ, ಹಸಿವು ಕಡಿಮೆಯಾಗುವುದು ಅಥವಾ ಹೆಚ್ಚು ತಿನ್ನುವುದು, ಕೋಪದಂತಹ ಲಕ್ಷಣ ಕಾಣಿಸಿಕೊಳ್ಳುತ್ತದೆ. ಅತಿ ಹೆಚ್ಚು ಪುರುಷರು ಖಿನ್ನತೆಗೊಳಗಾಗ್ತಾರೆಂದು ಸಂಶೋಧಕರು ಹೇಳಿದ್ದಾರೆ.
ಪುರುಷರಿಗೂ ನೋವಾಗುತ್ತೆ : ಪುರುಷರ ಮುಟ್ಟಿನ ಬಗ್ಗೆ ಸಾಕಷ್ಟು ಸಂಶೋಧನೆಗಳನ್ನು ಮಾಡಲಾಗಿದೆ. ಪುರುಷರಲ್ಲಿ ಹಾರ್ಮೋನುಗಳು ನಿರಂತರವಾಗಿ ಬದಲಾಗುತ್ತವೆ ಎಂದು ಕೆಲವು ಸಂಶೋಧಕರು ಹೇಳುತ್ತಾರೆ. 2012 ರಲ್ಲಿ ನಡೆಸಲಾದ ಸಂಶೋಧನೆಯ ಪ್ರಕಾರ, ಮುಟ್ಟಿನ ಸಮಯದಲ್ಲಿ ಪುರುಷರು ಸಹ ಮಹಿಳೆಯರಂತೆಯೇ ನೋವು ಅನುಭವಿಸುತ್ತಾರೆ ಎಂಬುದು ಗೊತ್ತಾಗಿದೆ.
Health Tips: ಮಾವಿನ ಹಣ್ಣಿನ ಸಿಪ್ಪೆಯೂ ಬೇಕು ದೇಹಕ್ಕೆ, ವಿಷ ಇರಬಾರದು ಅಷ್ಟೆ!
ಮಹಿಳೆಯರ ಬೆಂಬಲ ಅಗತ್ಯ : ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಇನ್ನೊಬ್ಬರ ಆಸರೆ ಬೇಕಾಗುತ್ತದೆ. ಅವರ ಮನಸ್ಸು ಪ್ರೀತಿಸುವವರನ್ನು ಬಯಸುತ್ತದೆ. ಅವರ ಭಾವನೆ ಅರ್ಥ ಮಾಡಿಕೊಳ್ಳುವವರನ್ನು ಬಯಸುತ್ತದೆ. ಹಾಗೆಯೇ ಪುರುಷರ ಮುಟ್ಟಿನ ಸಂದರ್ಭದಲ್ಲಿ ಕೂಡ ಮಹಿಳೆಯರು ತಾಳ್ಮೆ ಕಳೆದುಕೊಳ್ಳಬಾರದು. ಪುರುಷರು ಆ ಒತ್ತಡದಿಂದ ಹೊರಬರಲು ನೆರವಾಗಬೇಕು ಎನ್ನುತ್ತಾರೆ ತಜ್ಞರು.