ನಮ್ಮ ದೈನಂದಿನ ಜೀವನದಲ್ಲಿ(Daily life) ಒಂಭತ್ತು ಗ್ರಹಗಳ (Nine Planet) ಪಾತ್ರ ಇದ್ದೇ ಇರುತ್ತದೆ. ಹಾಗೆ ಈ ಒಂಭತ್ತು ಗ್ರಹಗಳ ಸಂಕೇತವಾಗಿ ನವ ರತ್ನಗಳನ್ನು(Navarathna) ಬಳಸುತ್ತೇವೆ. ಹಿಂದೂ ಸಂಸ್ಕೃತಿಯ ಪ್ರಕಾರ ಮನೆ ಕಟ್ಟುವ ಮುನ್ನ ಭೂಮಿ ಪೂಜೆ(Bhoomi Pooja) ಮಾಡುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಈ ಸಂದರ್ಭದಲ್ಲಿ ಒಂಭತ್ತು ರತ್ನಗಳನ್ನಿಟ್ಟು ಪೂಜಿಸುತ್ತೇವೆ ಹಾಗೂ ಅದನ್ನು ಅಲ್ಲಿಗೆ ಮಣ್ಣಿನಲ್ಲಿ ಹುದುಗಿಸುತ್ತೇವೆ.
ನಮ್ಮ ದೈನಂದಿನ ಜೀವನದಲ್ಲಿ ಒಂಭತ್ತು ಗ್ರಹಗಳ ಪಾತ್ರ ಇದ್ದೇ ಇರುತ್ತದೆ. ಹಾಗೆ ಈ ಒಂಭತ್ತು ಗ್ರಹಗಳ ಸಂಕೇತವಾಗಿ ನವ ರತ್ನಗಳನ್ನು ಬಳಸುತ್ತೇವೆ. ಅದು ಜ್ಯುವೆಲ್ಲರಿ(Jewellery), ಉಂಗುರವಿರಲಿ(Rings) ಒಂದಿಲ್ಲೊAದು ರೀತಿಯಲ್ಲಿ ಅದನ್ನು ಉಪಯೋಗಿಸುತ್ತೇವೆ. ಹಾಗೆಯೇ ಹಿಂದೂ ಸಂಸ್ಕೃತಿಯ ಪ್ರಕಾರ ಮನೆ ಕಟ್ಟುವ(Construction) ಮುನ್ನ ಭೂಮಿ ಪೂಜೆ ಮಾಡುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಈ ಸಂದರ್ಭದಲ್ಲಿ ಒಂಭತ್ತು ರತ್ನಗಳನ್ನಿಟ್ಟು ಪೂಜಿಸುತ್ತೇವೆ ಹಾಗೂ ಅದನ್ನು ಅಲ್ಲಿಗೆ ಮಣ್ಣಿನಲ್ಲಿ ಹುದುಗಿಸುತ್ತೇವೆ.
ಕೆಲವರು ಮನೆಯ ಬಾಗಿಲು ಕೂರಿಸುವ ಮೊದಲು ನವರತ್ನವನ್ನು ಹೊಸ್ತಿಲ ಬಳಿ ಇಟ್ಟು ಬಾಗಿಲು(Door) ಕೂರಿಸುತ್ತಾರೆ. ಇನ್ನು ಕೆಲವರು ಮಣ್ಣಲ್ಲಿ ಹುದುಗಿಸಿದರೆ, ಮತ್ತೆ ಕೆಲವರು ದೇವರ ಮನೆಯ(Pooja Room) ಹೊಸ್ತಿಲಲ್ಲಿ ಇಡುತ್ತಾರೆ. ಹೀಗೆ ಮಾಡುವುದು ಏಕೆ? ಏನೆಲ್ಲಾ ಪ್ರಭಾವ ಬೀರುತ್ತದೆ ಎಂಬ ಮಾಹಿತಿ ಇಲ್ಲಿದೆ.
ಯಾವೆಲ್ಲ ರತ್ನಗಳಿವೆ (Gems)?
ನವರತ್ನಗಳು ವಾಸ್ತು(Vaastu) ತತ್ವಗಳಿಗೆ ಅನುಗುಣವಾಗಿ ಆಳುವ ದೇವತೆಗಳು, ದಿಕ್ಕು(Direction), ಕಲ್ಲು(Stone) ಮತ್ತು ಗ್ರಹಗಳನ್ನು ಪ್ರತಿನಿಧಿಸುತ್ತವೆ. ಒಂದೊAದು ರತ್ನವೂ ಒಂದೊAದು ಗ್ರಹವನ್ನು ಪ್ರತಿನಿಧಿಸುತ್ತವೆ. ಈ ಗ್ರಹಗಳು ನಮ್ಮ ದೈನದಿಂನ ಬದುಕಿನಲ್ಲಿ ಪ್ರಭಾವಬೀರುತ್ತವೆ. ಪಚ್ಛೆ ಎಂದರೆ ಬುಧ, ವಜ್ರ ಎಂದರೆ ಇಂದ್ರ, ಮುತ್ತು ಎಂದರೆ ಅಗ್ನಿ, ಹಳದಿ ನೀಲಮಣಿ ಎಂದರೆ ಗುರು, ಬೆಕ್ಕಿನ ಕಣ್ಣು ಎಂದರೆ ಕೇತು, ಮಾಣಿಕ್ಯ ಎಂದರೆ ರವಿ, ಕೆಂಪು ಹವಳ ಎಂದರೆ ಮಂಗಳ, ನೀಲಿ ನೀಲಮಣಿ ಎಂದರೆ ಶನಿಯನ್ನು ಪ್ರತಿನಿಧಿಸುತ್ತವೆ.
ಈ ರತ್ನಗಳನ್ನು ತಪ್ಪಿಯೂ ಜೊತೆಯಾಗಿ ಧರಿಸಬೇಡಿ!
ಯಾರು ಬೇಕಾದರೂ ಧರಿಸಬಹುದು
ಈ ನವರತ್ನವನ್ನು ಆಭರಣದ ರೂಪದಲ್ಲಿ ಯಾರು ಬೇಕಾದರೂ ಧರಿಸಬಹುದು. ಹೀಗೆ ಧರಿಸುವುದರಿಂದ ಯಾವುದೇ ರೋಗಗಳು ಬರುವುದಿಲ್ಲ ಎನ್ನಲಾಗುತ್ತದೆ. ಜನ್ಮ(Birth), ನಕ್ಷತ್ರಕ್ಕನುಗುಣವಾಗಿ ವ್ಯಕ್ತಿ ನಿರ್ದಿಷ್ಟ ರತ್ನ ಧರಿಸುವುದರಿಂದ ಸಮಸ್ಯೆಗಳಿಂದ ಮುಕ್ತರಾಗುತ್ತಾರೆ. ಗ್ರಹಗಳ ಪ್ರಭಾವ ಅವುಗಳ ಮೇಲಿರುವುದರಿಂದ ರಕ್ಷಾಕವಚವಾಗಿ ಕಾರ್ಯ ನಿರ್ವಹಿಸುತ್ತವೆ.
ಭೂಮಿ ಪೂಜೆಯಲ್ಲಿ ನವರತ್ನ ಬಳಸುವುದು ಏಕೆ?
ಪಾರಂಪರಿಕವಾಗಿ ಭೂಮಿ ಪೂಜೆ ಸಂದರ್ಭದಲ್ಲಿ ನವರತ್ನಗಳನ್ನಿಡುವುದು ನಮ್ಮ ಸಂಪ್ರದಾಯದಲ್ಲಿ ರೂಢಿಯಾಗಿ ಬಂದಿದೆ. ಭೂಮಿ ಪೂಜೆಯಲ್ಲಿ ನವರತ್ನ ಹುದುಗಿಸುವುದರಿಂದ ಕುಟುಂಬದಲ್ಲಿ(Family) ನೆಮ್ಮದಿ ಹಾಗೂ ಶಾಂತಿ(Peaceful) ಸಮೃದ್ಧವಾಗಿರುತ್ತದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಅಭಿವೃದ್ಧಿ ಹಾಗೂ ಆರ್ಥಿಕ ಸ್ಥಿರತೆ(Financial Stability) ಕಾಯ್ದುಕೊಳ್ಳುತ್ತದೆ ಎನ್ನಲಾಗುತ್ತದೆ.
ಪ್ರಯೋಜನಗಳು
ಕೇವಲ ಭೂಮಿ ಪೂಜೆಗಷ್ಟೇ ಇದನ್ನು ಬಳಸದೆ ಆಭರಣವಾಗಿಯೂ ಬಳಸಲಾಗುತ್ತದೆ.
1.ಈ ನವರತ್ನಗಳಿಂದ ಋಣಾತ್ಮಕ ಚಿಂತನೆಯನ್ನು(Negetive energy) ಹೋಗಲಾಡಿಸಿ ಧನಾತ್ಮಕ ಚಿಂತನೆಗಳು(Positive energy) ಮನೆಯಲ್ಲಿ ಹೆಚ್ಚುತ್ತವೆ.
2. ನವರತ್ನವನ್ನು ಉಂಗುರ(Ring) ರೂಪದಲ್ಲಿ ಹಾಕಿಕೊಳ್ಳುವವರು ಇದ್ದಾರೆ. ಗಂಡು ಮಕ್ಕಳು ಇದನ್ನು ಬಲಗೈನಲ್ಲಿ(Right Hand) ಹಾಗೂ ಹೆಣ್ಣು ಮಕ್ಕಳು ಎಡಗೈನಲ್ಲಿ(Left Hand) ಹಾಕಿಕೊಳ್ಳುತ್ತಾರೆ. ಇದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.
3. ಭೂಮಿ ಪೂಜೆ ಸಂದರ್ಭದಲ್ಲಿ ನವರತ್ನವನ್ನು ಬೆಳಗಿನ ಜಾವದಲ್ಲಿ(Morning time) ಇರಿಸುವುದು ಒಳ್ಳೆಯದು. ಆಗ ಗ್ರಹಗಳ ಪ್ರಭಾವ ಹೆಚ್ಚಿರುತ್ತದೆ.
4. ಪ್ರತೀ ರತ್ನಗಳು ವ್ಯಕ್ತಿಯ 7 ಚಕ್ರಗಳ(Chakras) ಮೇಲೂ ಪ್ರಭಾವಬೀರುತ್ತವೆ.
5. ನವರತ್ನಗಳಲ್ಲಿ ಒಂದಾದ ಮುತ್ತು(Pearl) ವ್ಯಕ್ತಿಯ ದೈಹಿಕ(Physical) ಹಾಗೂ ಮಾನಸಿಕವಾಗಿ(Mentally) ಸದೃಢಗೊಳಿಸಲು ಸಹಕಾರಿಯಾಗಿದೆ.
6.ರತ್ನದ ಹರಳುಗಳಿಂದ ಮಾಡಿದ ಉಂಗುರ ಅಥವಾ ರತ್ನದ ಹರಳುಗಳಿಂದ ಮಾಡಿದ ಯಾವುದೇ ಆಭರಣಗಳನ್ನು ಹಾಲಿನಲ್ಲಿ(Milk) ಸ್ವಲ್ಪ ಸಮಯ ಇಟ್ಟು ನಂತರ ಶುದ್ಧ ನೀರಿನಿಂದ(Water) ತೊಳೆದು ಧರಿಸಲಾಗುತ್ತದೆ.
Cat's Eye: ಕೇತು ಸಮಸ್ಯೆ ತಂದೊಡ್ಡುತ್ತಿದ್ದರೆ ಈ ಹರಳನ್ನು ಧರಿಸಿ ಸಾಕು!
ಖರೀದಿಸುವ ಮುನ್ನ ಎಚ್ಚರ ಇರಲಿ
ಮಾರ್ಕೆಟ್‌ನಲ್ಲಿ ಇತ್ತೀಚೆಗೆ ಮೋಸ ಮಾಡುವವರ ಸಂಖ್ಯೆ ಹೆಚ್ಚು. ನವರತ್ನಗಳನ್ನು ಖರೀದಿಸುವಾಗ ಎಚ್ಚರದಿಂದ ಇರಬೇಕು. ರತ್ನಗಳ ಬಗ್ಗೆ ಮೊದಲು ತಿಳಿದುಕೊಂಡು ಖರೀದಿಸುವುದು ಒಳ್ಳೆಯದು. ಅದರಲ್ಲೂ ಸರ್ಕಾರದಿಂದ ಮಾನ್ಯತೆ ಪಡೆದ(License) ರತ್ನಗಳನ್ನು ಹೊಂದುವುದು ಸೂಕ್ತ.

