Hindu Culture : ಪೂಜಾರಿ ಜುಟ್ಟು ಬಿಡಲು ಕಾರಣವೇನು ಗೊತ್ತಾ?
ದೇವಸ್ಥಾನದಲ್ಲಿ ಪೂಜೆ ಮಾಡುವ ಪೂಜಾರಿಗಳು ತಲೆ ಮೇಲೊಂದು ಜುಟ್ಟು ಬಿಟ್ಟಿರ್ತಾರೆ. ಅದನ್ನು ನೋಡಿ ಕೆಲವರು ಹಾಸ್ಯ ಮಾಡ್ತಾರೆ. ಕೇವಲ ಧಾರ್ಮಿಕ ಕಾರಣ ಮಾತ್ರವಲ್ಲ ಈ ಜುಟ್ಟಿನ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಅದನ್ನು ತಿಳಿದುಕೊಂಡ್ರೆ ನೀವೂ ನಗೋದು ನಿಲ್ಲಿಸ್ತೀರಾ.
ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ಭಾರತ. ನಮ್ಮ ದೇಶದಲ್ಲಿ ಅನೇಕ ಸಂಸ್ಕೃತಿಗಳ ಸಮ್ಮಿಲನವಾಗಿದೆ. ಭಾರತದ ಸಂಸ್ಕೃತಿ ವಿಶ್ವ ಪ್ರಸಿದ್ಧವಾಗಿದೆ. ಭಾರತ ಸಂಸ್ಕೃತಿ, ಪರಂಪರೆಯ ದೇಶ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಒಂದೊಂದು ಪ್ರದೇಶದಲ್ಲಿ ಒಂದೊಂದು ಜಾತಿ, ಧರ್ಮದಲ್ಲಿ ವಿಶಿಷ್ಟ ಸಂಪ್ರದಾಯ, ಪದ್ಧತಿಯನ್ನು ನೀವು ಕಾಣಬಹುದು. ಭಾರತದಲ್ಲಿ ಜನರ ಜೀವನ ಶೈಲಿ, ಆಹಾರ ಪದ್ಧತಿ, ಉಡುಗೆ – ತೊಡುಗೆ ಎಲ್ಲವೂ ಭಿನ್ನವಾಗಿದೆ.
ನಾವು – ನೀವೆಲ್ಲ ದೇವಸ್ಥಾನ (Temple) ಕ್ಕೆ ಹೋಗ್ತೇವೆ. ದೇವರ (God) ಪೂಜೆ ಮಾಡುವ ಪೂಜಾರಿಗಳ ಉಡುಗೆ ಬೇರೆ ಬೇರೆ ದೇವಸ್ಥಾನದಲ್ಲಿ ಬೇರೆ ಬೇರೆಯಾಗಿಯೇ ಇರುತ್ತದೆ. ಅವರ ಉಡುಗೆ ನೋಡಿಯೇ ನಾವು ಅವರು ದೇವಸ್ಥಾನದ ಪೂಜಾರಿ ಎಂದು ಸುಲಭವಾಗಿ ಹೇಳಬಹುದು. ಬಟ್ಟೆ ಮಾತ್ರವಲ್ಲ ಅವರ ಜುಟ್ಟು (Tuft) ಎಲ್ಲರನ್ನೂ ಆಕರ್ಷಿಸುತ್ತದೆ. ಪೂಜಾರಿ, ತಲೆ ಮೇಲೆ ಜುಟ್ಟು ಏಕೆ ಹಾಕಿಕೊಳ್ತಾಳೆಂದು ನೀವು ಆಲೋಚನೆ ಮಾಡಿದ್ದೀರಾ? ಇಂದು ನಾವು ಪೂಜಾರಿ ಜುಟ್ಟಿನ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ ಜುಟ್ಟದ ಸಂಪ್ರದಾಯ : ಪೂಜಾರಿ ತಲೆ ಮೇಲಿರುವ ಜುಟ್ಟಕ್ಕೆ ಇತಿಹಾಸವಿದೆ. ಅನೇಕ ಐತಿಹಾಸಿಕ ಕಥೆಗಳಲ್ಲಿ ಪೂಜಾರಿ ಜುಟ್ಟದ ಬಗ್ಗೆ ಉಲ್ಲೇಖವಿರುತ್ತದೆ. ಅಂದಿನಿಂದ ಇಂದಿನವರೆಗೂ ಜುಟ್ಟು ಬಿಡುವ ಪೂಜಾರಿಗಳ ಸಂಖ್ಯೆ ಸಾಕಷ್ಟಿದೆ.ಬರೀ ಪೂಜಾರಿಗಳು ಮಾತ್ರವಲ್ಲ ಉಪನಯನ ಮಾಡಿಕೊಂಡ ಗಂಡು ಮಕ್ಕಳಿಗೆ ಈ ಜುಟ್ಟು ಬಿಡುವ ಸಂಪ್ರದಾಯವೂ ಭಾರತದಲ್ಲಿದೆ. ಹಾಗೆ ಕುಟುಂಬದಲ್ಲಿ ಹಿರಿಯರು, ತಂದೆ – ತಾಯಿ ಸಾವನ್ನಪ್ಪಿದಾಗ ತಲೆ ಬೋಳಿಸಿ, ಒಂದು ಜುಟ್ಟು ಬಿಡುವ ಪದ್ಧತಿಯೂ ಜಾರಿಯಲ್ಲಿದೆ.
ಜುಟ್ಟು ಬಿಡಲು ಧಾರ್ಮಿಕ ಕಾರಣ : ಜುಟ್ಟು ಬಿಡುವ ಜಾಗವನ್ನು ಸಹಸ್ರ ಚಕ್ರವೆಂದು ಕರೆಯಲಾಗುತ್ತದೆ. ಮಾನವನ ಆತ್ಮವು ಸಹಸ್ತ್ರ ಚಕ್ರದ ಕೆಳಭಾಗದಲ್ಲಿ ನೆಲೆಸಿದೆ ಎಂದು ನಂಬಲಾಗಿದೆ. ದೇವರ ಶಕ್ತಿ ಇದ್ರ ಮೂಲಕವೇ ಮನುಷ್ಯದ ದೇಹವನ್ನು ಪ್ರವೇಶ ಮಾಡುತ್ತದೆ ಎಂದು ನಂಬಲಾಗಿದೆ.ವೇದಗಳ ಪ್ರಕಾರ ಜುಟ್ಟವನ್ನು ಬಿಗಿಯಾಗಿ ಕಟ್ಟುವುದರಿಂದ ಮೆದುಳಿನಲ್ಲಿ ಒತ್ತಡ ಸೃಷ್ಟಿಯಾಗುತ್ತದೆ. ಇದರಿಂದ ರಕ್ತ ಸಂಚಾರ ಸರಿಯಾಗಿ ಆಗುತ್ತದೆ. ದೃಷ್ಟಿ ಸುಧಾರಿಸುವ ಜೊತೆಗೆ ದೇಹ ಕ್ರಿಯಾಶೀಲವಾಗುತ್ತದೆ ಎಂದು ಹೇಳಲಾಗಿದೆ. ಜುಟ್ಟು ಕಟ್ಟುವುದ್ರಿಂದ ಮನಸ್ಸು ಲೈಂಗಿಕತೆ ಕಡೆಗೆ ಓಡುವುದಿಲ್ಲ ಎಂಬ ನಂಬಿಕೆಯೂ ಇದೆ. ಅಂದ್ರೆ ಮನಸ್ಸು ಚಂಚಲಗೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ.
ಜುಟ್ಟು ಸುಷುಮ್ನ ನಾಡಿಯನ್ನು ಹಾನಿಕಾರಕ ಪ್ರಭಾವದಿಂದ ರಕ್ಷಿಸುತ್ತದೆ. ಇದ್ರಿಂದ ಪೂಜಾರಿಗಳು ಧಾರ್ಮಿಕ ಹಾಗೂ ಸಕಾರಾತ್ಮಕ ವಿಚಾರವನ್ನು ಹಿಡಿದಿಟ್ಟುಕೊಳ್ಳಲು ನೆರವಾಗುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ರಾಹು ಕೆಟ್ಟ ಸ್ಥಾನದಲ್ಲಿದ್ದರೆ ಅಥವಾ ರಾಹು ದೋಷವಿದ್ದರೆ ಆ ವ್ಯಕ್ತಿ ಜುಟ್ಟನ್ನು ಬಿಡಬೇಕೆಂದು ಹೇಳಲಾಗುತ್ತದೆ.
ಫೆಂಗ್ ಶುಯಿಯ ಈ ವಸ್ತುಗಳನ್ನು ಮನೆಗೆ ತಂದ್ರೆ ಸಂಪತ್ತು ಹೆಚ್ಚುತ್ತೆ !
ಜುಟ್ಟದ ಹಿಂದಿದೆ ವೈಜ್ಞಾನಿಕ ಕಾರಣ : ಜುಟ್ಟು ಬಿಡುವುದರ ಹಿಂದೆ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣವಿದೆ. ಜುಟ್ಟು ಬಿಡುವ ಸ್ಥಳವನ್ನು ವಿಜ್ಞಾನದಲ್ಲಿ ಮೆದುಳಿನ ಕೇಂದ್ರವೆಂದು ಪರಿಗಣಿಸಲಾಗಿದೆ. ಯಾವುದೇ ಕೆಲಸವನ್ನು ಮಾಡುವಾಗ ಮೆದುಳು ದೊಡ್ಡ ಪಾತ್ರವನ್ನು ವಹಿಸುತ್ತದೆ. ಮೆದುಳಿನ ಸಮತೋಲನವನ್ನು ಕಾಯ್ದುಕೊಳ್ಳಲು ಜುಟ್ಟು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಜುಟ್ಟು ದೇಹದ ಬಹುಮುಖ್ಯ ಅಂಗವೆಂದು ಇಂಗ್ಲಿಷ್ ವೈದ್ಯ ಕ್ಲಾರ್ಕ್ ಬರೆದಿದ್ದಾರೆ. ಇದು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಮಾನಸಿಕ ರೋಗದಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ಅವರು ಹೇಳಿದ್ದಾರೆ. ಜುಟ್ಟಿನ ಕೆಳ ಭಾಗದಲ್ಲಿ ಪಿಟ್ಯುಟರಿ ಗ್ರಂಥಿ ಇರುತ್ತದೆ. ಇದು ರಸವನ್ನು ಸೃಷ್ಟಿಸುತ್ತದೆ. ಇದು ಇಡೀ ದೇಹ ಮತ್ತು ಬುದ್ಧಿಯನ್ನು ತೀಕ್ಷ್ಣಗೊಳಿಸುತ್ತದೆ. ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡುತ್ತದೆ.
Navratri 2022 : ದುರ್ಗೆ ಪೂಜೆ ಜೊತೆ ಮನೆ ಮಹಿಳೆ ಮೇಲಿರಲಿ ವಿಶೇಷ ಪ್ರೀತಿ
ಎಷ್ಟಿರಬೇಕು ಜುಟ್ಟಿನ ಗಾತ್ರ : ಬೇಕಾಬಿಟ್ಟಿ ಜುಟ್ಟ ಬಿಡೋದ್ರಿಂದ ಪ್ರಯೋಜನವಿಲ್ಲ. ಜುಟ್ಟಕ್ಕೊಂದು ಮಿತಿಯಿದೆ. ಹಸುವಿನ ಪಾದದ ಗೊರಸಿನಷ್ಟು ಜುಟ್ಟದ ಗಾತ್ರವಿರಬೇಕು. ಅದು ಹೆಚ್ಚು ಅಥವಾ ಕಡಿಮೆ ಆದ್ರೆ ಪ್ರಯೋಜನವಿಲ್ಲ.