Asianet Suvarna News Asianet Suvarna News

ಪರಶುರಾಮನೇಕೆ ಎಲ್ಲ ಕ್ಷತ್ರಿಯ ರಾಜರನ್ನು ಕೊಂದ?

ಮಹಾವಿಷ್ಣುವಿನ ಆರನೇ ಅವತಾರ ಎನಿಸಿಕೊಂಡಿರುವ ಪರಶುರಾಮನು ಎಲ್ಲ ಕ್ಷತ್ರಿಯರನ್ನು ಸಂಹರಿಸಿದನು. ಇದರ ಹಿಂದಿನ ಕಾರಣ, ಕತೆ ಸ್ವಾರಸ್ಯಕರವಾಗಿದೆ. 

WHY PARASHURAMA KILLED ALL THE KSHATRIYAS skr
Author
Bangalore, First Published May 21, 2022, 5:05 PM IST

ವಿಷ್ಣುವಿನ ದಶಾವತಾರಗಳಲ್ಲಿ ಬಹುತೇಕರಿಗೆ ಹೆಚ್ಚು ಪರಿಚಿತವಾಗಿರುವ ಅವತಾರಗಳು ರಾಮ ಮತ್ತು ಕೃಷ್ಣನದು. ವಿಷ್ಣು(Lord Vishnu)ವಿನ ಆರನೆಯ ಅವತಾರವಾದ ಪರಶುರಾಮ(Parashuram)ನ ಕುರಿತು ಸಂಕ್ಷಿಪ್ತವಾಗಿ ಆತ ತಂದೆಯ ಆಜ್ಞೆ ಪಾಲಿಸಲು ತಾಯಿಯ ತಲೆಯನ್ನೇ ಕಡಿದ ಎಂಬುದಷ್ಟೇ ಬಹುತೇಕರಿಗೆ ಪರಿಚಯವಿದೆ. ಆದರೆ ಪರಶುರಾಮ ಎಲ್ಲ ದುಷ್ಟ ಕ್ಷತ್ರಿಯ ರಾಜರನ್ನೂ ಕೊಂದು ಮುಗಿಸಿದ ಕತೆ ಗೊತ್ತೇ?

ಹೌದು, ಪರಶುರಾಮನು ಖ್ಯಾತನಾಗಿದ್ದ ಕಾಲದ ಎಲ್ಲ ಕ್ಷತ್ರಿಯ ರಾಜರನ್ನು ಕೊಂದನೆಂದು ಹೇಳಲಾಗುತ್ತದೆ. ಈ ಕತೆಯ ಹಿನ್ನೆಲೆ ಏನು? ಅವನೇಕೆ ಹಾಗೆ ಮಾಡಿದ ನೋಡೋಣ. 

ಸವದತ್ತಿಯಲ್ಲಿ ಜನನ
ಪರಶುರಾಮ ಬೆಳಗಾವಿ(Belagavi) ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದಬಳಿಯ ಪರಶುಘಡದಲ್ಲಿ ಋಷಿ ಜಮದಗ್ನಿ(Sage Jamadagni) ಮತ್ತು ರೇಣುಕಾ(Renuka) ದಂಪತಿಗೆ ಜನಿಸಿದನು. ಶಿವನಿಂದ ವರ ಪಡೆದು ಸಪ್ತಚಿರಂಜೀವಿಗಳಲ್ಲಿ ಒಬ್ಬನೆನಿಸಿಕೊಂಡಿರುವ ಪರಶುರಾಮನು ಇಂದಿಗೂ ಮಹೇಂದ್ರ ಪರ್ವತದಲ್ಲಿ ತಪಸ್ಸು ಮಾಡುತ್ತಾ ಇದ್ದಾನೆಂದು ನಂಬಿಕೆ ಇದೆ.  ಈತನು ಮಹಾಭಾರತ ಮತ್ತು ರಾಮಾಯಣದಲ್ಲಿ ಪ್ರಮುಖ ಪಾತ್ರ ಹೊಂದಿದ್ದಾನೆ. ಕೌರವ, ಪಾಂಡವರ ಗುರುಗಳಾದ ದ್ರೋಣಾಚಾರ್ಯರಿಗೇ ಗುರು ಪರಶುರಾಮ. ಬ್ರಾಹ್ಮಣನಾಗಿ ಜನಿಸಿದರೂ  ಕ್ಷತ್ರಿಯರ ಆಕ್ರಮಶೀಲತೆ ಮತ್ತು ಧೈರ್ಯ ಪರಶುರಾಮನಿಗೆ ಇದ್ದುದರಿಂದ ಬ್ರಹ್ಮ ಕ್ಷತ್ರಿಯನೆಂಬ ಹೆಸರಿನಲ್ಲೂ ಆತನನ್ನು ಕರೆಯಲಾಗುತ್ತದೆ. ಕೇರಳದ ಕಲರಿಪಯಟ್ಟುವಿನ ಜನಕ ಈ ಪರಶುರಾಮ.

ಅಂಬಾ, ಕಾಳಿ ಮತ್ತು ದುರ್ಗಾ ಎಲ್ಲ ಒಬ್ಬಳೇ ದೇವಿಯೇ?

ಪರಶುರಾಮನು ಭಗವಾನ್ ಶಿವ(Lord Shiva)ನ ಮಹಾನ್ ಭಕ್ತನಾಗಿದ್ದನು. ಶಿವನು ಈತನ ಭರ್ತಿಗೆ ಮೆಚ್ಚಿ ಆಕಾಶ ಆಯುಧವನ್ನು ವರವಾಗಿ ನೀಡಿದನು. ಆದರೆ ಈ ಆಯುಧವನ್ನು ಸಾಧಿಸಲು ಅವನು ದೇವತೆಗಳಿಗೆ ಬೆದರಿಕೆಯನ್ನುಂಟುಮಾಡುವ ದೈತ್ಯರು ಮತ್ತು ದಾನವರನ್ನು ಕೊಲ್ಲಲು ಆದೇಶಿಸಿದನು. ಪರಶುರಾಮನು ಎಲ್ಲಾ ದೈತ್ಯರು ಮತ್ತು ದಾನವರನ್ನು ಸಂಹರಿಸಿ ಶಿವನಿಂದ ಆಕಾಶ ಆಯುಧವನ್ನು ಗಳಿಸಿದನು. ಅತ್ಯಂತ ಕೋಪಿಷ್ಠ ಬ್ರಾಹ್ಮಣ ಎನಿಸಿಕೊಂಡಿದ್ದ ಪರಶುರಾಮನು ತಂದೆ ಜಮದಗ್ನಿಯ ನಿಷ್ಠಾವಂತ ಪುತ್ರ. ತಂದೆ ಆಜ್ಞಾಪಿಸಿದಾಗ ಸ್ವಂತ ತಾಯಿಯನ್ನೇ ಕೊಂದ ಈತ, ಬಳಿಕ ತಾಯಿಯನ್ನು ಬದುಕಿಸಿಕೊಡುವಂತೆ ತಂದೆಯಲ್ಲಿ ವರ ಬೇಡಿ ಗೆದ್ದ. ಇದೇ ಪಿತೃಭಕ್ತಿಯ ಕಾರಣದಿಂದ ಪರಶುರಾಮ ಕ್ಷತ್ರಿಯರನ್ನೆಲ್ಲ ಸಂಹರಿಸಿದ. 

ಈ ರಾಶಿಗಳಿಗೆ ವಜ್ರ ಧರಿಸಿದ್ರೆ ಅಪಾಯ ತಪ್ಪಿದ್ದಲ್ಲ!

ಕ್ಷತ್ರಿಯರನ್ನು ಕೊಂದದ್ದೇಕೆ?
ಒಮ್ಮೆ ಕಾರ್ತವೀರ್ಯಾರ್ಜುನ ಎಂಬ ರಾಜನು ಜಮದಗ್ನಿಯ ಆಶ್ರಮಕ್ಕೆ ಬಂದನು. ಆಗ ಜಮದಗ್ನಿಯು ರಾಜ ಹಾಗೂ ಇಡೀ ಸೇನೆಯನ್ನು ಉತ್ತಮ ಔತಣೋಪಚಾರದಿಂದ ನೋಡಿಕೊಂಡರು. ನಂತರ ರಾಜನು ಉಪಚಾರ ಮಾಡಿಸಿಕೊಂಡಿದ್ದು ಸಾಲದೆ, ಅವರ ಬಳಿಯಿದ್ದ ಕಾಮಧೇನುವನ್ನು ಕೇಳಿದರು. ಋಷಿಯು ಅದನ್ನು ಕೊಡುವುದಿಲ್ಲವೆಂದಾಗ ಬಲವಂತವಾಗಿ ಅವರಿಂದ ಆ ಹಸುವನ್ನು ಪಡೆಯಲು ನೋಡಿದನು. ಆಗ ಜಮದಗ್ನಿ ಮತ್ತು ರಾಜ ಕಾರ್ತವೀರ್ಯರ ನಡುವೆ ದೊಡ್ಡ ಸಂಘರ್ಷ ನಡೆಯುತ್ತದೆ. ರಾಜನು ಜಮದಗ್ನಿಯನ್ನು ಕೊಲ್ಲುತ್ತಾನೆ. ಜೊತೆಗೆ ಸಂಪೂರ್ಣ ಆಶ್ರಮವನ್ನು ನಾಶ ಮಾಡುತ್ತಾರೆ. ಈ ವಿಷಯ ಬೇರೆ ಊರಿನಿಂದ ಮನೆಗೆ ಬಂದ ಪರಶುರಾಮನಿಗೆ ತಾಯಿಯ ಮೂಲಕ ತಿಳಿಯುತ್ತದೆ. ಈ ವಿಷಯ ತಿಳಿದ ಪರುಶರಾಮ ಕೋಪಾವಿಷ್ಟನಾಗಿ ಪರಶುರಾಮನು ತನ್ನ ಹೆತ್ತವರ ಅವಮಾನದ ವಿರುದ್ಧ ಸೇಡು ತೀರಿಸಿಕೊಳ್ಳಲು ಹೋಗುತ್ತಾನೆ. ಕ್ಷತ್ರಿಯ ಕುಲದ ಎಲ್ಲಾ 21 ತಲೆಮಾರುಗಳನ್ನು ನಾಶ ಮಾಡುವುದಾಗಿ ಪ್ರತಿಜ್ಞೆ ಮಾಡಿದ ಆತ, ಕೂಡಲೆ ಮಾಹೀಷ್ಮತಿ ನಗರಕ್ಕೆ ಹೋಗಿ ಕಾರ್ತವೀರ್ಯಾರ್ಜುನನ ಸಾವಿರ ತೋಳುಗಳನ್ನು ಕತ್ತರಿಸಿ ಹಾಕಿದ. ಅಲ್ಲದೆ, ಎಲ್ಲ ಕ್ಷತ್ರಿಯ ರಾಜರನ್ನು ಕೊಲ್ಲುವ ಶಪಥ ಮಾಡಿದ. ಇಪ್ಪತ್ತೊಂದು ಬಾರಿ ಭೂಪ್ರದಕ್ಷಿಣೆ ಮಾಡಿ ಕ್ಷತ್ರಿಯರನ್ನೆಲ್ಲ ಕೊಂದು ಅವರ ರಕ್ತದಿಂದ ಪಿತೃತರ್ಪಣ ಕೊಟ್ಟ. ಕಡೆಗೆ ಶ್ರೀರಾಮನನ್ನು ಭೇಟಿಯಾದ ಪರಶುರಾಮನಿಗೆ ಎಲ್ಲ ರಾಜರೂ ಕೆಟ್ಟವರಲ್ಲ ಎಂಬ ನಂಬಿಕೆ ಪುನಃ ಸ್ಥಾಪನೆಯಾಗುತ್ತದೆ. 

Follow Us:
Download App:
  • android
  • ios