ಅಂಬಾ, ಕಾಳಿ ಮತ್ತು ದುರ್ಗಾ ಎಲ್ಲ ಒಬ್ಬಳೇ ದೇವಿಯೇ?

ಸಾಮಾನ್ಯವಾಗಿ ಹೆಣ್ಣು ದೇವರ ಹೆಸರು ಏನೇ ಇರಲಿ, ಅಮ್ಮನವರು ಎಂದುಬಿಡುತ್ತೇವೆ. ಅಂಬಾ, ಕಾಳಿ, ದುರ್ಗಾ ಎಲ್ಲವೂ ಪಾರ್ವತಿಯ ಸ್ವರೂಪವೇ. ಆದರೂ ಅವರ ನಡುವೆ ವ್ಯತ್ಯಾಸವಿದೆ. ಈ ಎಲ್ಲ ಮಹಾಮಾಯಿಗಳ ಕತೆ ಬೇರೆ ಬೇರೆ. 

Differences between Amba Kali and Durga skr

ನವರಾತ್ರಿಯನ್ನು ಯಾವಾಗಲೂ ಮಾ ದುರ್ಗೆಯ ಹಬ್ಬ ಎನ್ನಲಾಗುತ್ತದೆ. ಆದರೆ ಸಾಮಾನ್ಯವಾಗಿ ಜನರಿಗೆ ಅಂಬಾ, ದುರ್ಗಾ, ಕಾಳಿ ಮತ್ತು ಪಾರ್ವತಿಯ ನಡುವಿನ ವ್ಯತ್ಯಾಸವನ್ನು ಹೇಳಲು ಸಾಧ್ಯವಿಲ್ಲ, ಎಲ್ಲರೂ ಒಬ್ಬರೇ ಎಂದು ಬಗೆಯುತ್ತಾರೆ. ಕೆಲವೊಮ್ಮೆ ಇವರೆಲ್ಲ ಶಿವನ ಅರ್ಧಾಂಗಿಯ ಹೆಸರುಗಳು ಎಂದು ಭಾವಿಸುತ್ತಾರೆ. ಆದರೆ ಅದು ಸಂಪೂರ್ಣ ನಿಜವಲ್ಲ. ಈ ಎಲ್ಲ ದೇವತೆಗಳ(Goddesses) ಕತೆ ಬೇರೆಯೇ ಇದೆ. 

ಅಂಬಿಕಾ, ದುರ್ಗಾ, ಸತಿ ಇವರೆಲ್ಲರೂ ಪಾರ್ವತಿಯ ರೂಪಗಳೇನೋ ನಿಜ. ಆದರೆ, ಅವರಿಗೂ ಸ್ಪಷ್ಟ ಅಸ್ತಿತ್ವವಿತ್ತು. ಅದಕ್ಕೆ ಕಾರಣಗಳಿತ್ತು. 

ಆದಿಶಕ್ತಿ ಅಥವಾ ಮಹಾಮಾಯಾ ಎಂಬುದು ಶಕ್ತಿಯಲ್ಲಿ ಸ್ತ್ರೀಲಿಂಗ ಹೆಸರನ್ನು ಪಡೆದಿರುವ ಅತ್ಯುನ್ನತ ನಿರಾಕಾರದ ಹೆಸರು. 3 ದೇವರು (ಬ್ರಹ್ಮ-ವಿಷ್ಣು-ಮಹೇಶ) ಮತ್ತು 3 ದೇವತೆಗಳು (ಸರಸ್ವತಿ-ಲಕ್ಷ್ಮಿ-ಪಾರ್ವತಿ) ಬಂದಿರುವುದೇ ಆದಿಶಕ್ತಿಯಿಂದ. ಮತ್ತೊಂದು ಆವೃತ್ತಿಯ ಪ್ರಕಾರ, ಮಹಾಮಾಯೆಯ 3 ಗುಣಲಕ್ಷಣಗಳು ಮಹಾಲಕ್ಷ್ಮಿ, ಮಹಾಕಾಳಿ ಮತ್ತು ಮಹಾಸರಸ್ವತಿ. 
ಆದಿಶಕ್ತಿಯು ಮಹಿಷಾಸುರನನ್ನು ಕೊಂದಾಗ ದುರ್ಗಾ ಎಂದು ಹೆಸರು ಪಡೆದಳು. ಅಸುರರನ್ನು ಕೊಲ್ಲಲು ಚಂಡಿಕಾ ಅಥವಾ ಅಂಬಿಕಾ ರೂಪವನ್ನು ಪಡೆದಾಗಲೆಲ್ಲ ಅವಳು ಕಪ್ಪಾಗುತ್ತಾಳೆ ಮತ್ತು ಉಗ್ರ ರೂಪವನ್ನು ಪಡೆಯುತ್ತಾಳೆ.  ಆಗ ಆಕೆಯನ್ನು ಅಂಬಿಕಾ ಎನ್ನಲಾಗುತ್ತದೆ. ಸತಿಯು ಶಿವನ ಮೊದಲ ಪತ್ನಿಯಾಗಿದ್ದು, ಮರುಜನ್ಮದಲ್ಲಿ ಪಾರ್ವತಿಯಾಗಿ ಮತ್ತೆ ಶಿವನನ್ನು ವರಿಸುತ್ತಾಳೆ ಮತ್ತು ಸಾಮಾನ್ಯ ಸ್ಥಿತಿಯಲ್ಲಿರುತ್ತಾಳೆ. 

ಅಂಬಿಕಾ ಯಾರು? (Who is Ambika)
ಶಿವ ಪುರಾಣದ ಪ್ರಕಾರ, ಅಂಬಿಕಾಳನ್ನು ಪ್ರಕೃತಿ, ಸರ್ವೇಶ್ವರಿ, ನಿತ್ಯಾ ಮತ್ತು ಕೆಲವೊಮ್ಮೆ ಜಗದಂಬಾ ಎಂದೂ ಕರೆಯಲಾಗುತ್ತದೆ. ಅವಳು ಎಂಟು ತೋಳುಗಳನ್ನು ಹೊಂದಿದ್ದಾಳೆ, ಅನೇಕ ಆಯುಧಗಳನ್ನು ಹಿಡಿದಿದ್ದಾಳೆ. ಆಕೆಯನ್ನು ಭಗವತಿ ಅಥವಾ ಚಂಡಿ, ಚಾಮುಂಡಿ ಎಂದೂ ಕರೆಯುತ್ತಾರೆ. ಅವಳು ಆದಿ ಪರಾಶಕ್ತಿ ಮತ್ತು ಬ್ರಹ್ಮಾಂಡದ ತಾಯಿ ಎಂದು ಪರಿಗಣಿಸಲ್ಪಟ್ಟಿದ್ದಾಳೆ, ಇದು "ಅಂಬಿಕಾ" ಎಂಬ ಹೆಸರಿನ ಅರ್ಥವೂ ಆಗಿದೆ. ಸ್ಕಂದ ಪುರಾಣದಲ್ಲಿ ಅಂಬಿಕಾ ರಾಕ್ಷಸರಾದ ಶುಂಭ ಮತ್ತು ನಿಶುಂಭರನ್ನು ಕೊಂದಳು.

ಆಲದ ಎಲೆಯಲ್ಲಿದೆ ಶನಿಯನ್ನು ಶಾಂತಗೊಳಿಸೋ ಪರಿಹಾರ!

ದುರ್ಗಾ ಯಾರು? (Who is Durga)
ದುಷ್ಟ ರಾಕ್ಷಸ ಮಹಿಷಾಸುರನನ್ನು ಎದುರಿಸಲು ದುರ್ಗಾ ದೇವಿ ಅವತರಿಸಿದಳು. ಬ್ರಹ್ಮ, ವಿಷ್ಣು ಮತ್ತು ಶಿವನ ತ್ರಿಮೂರ್ತಿಗಳು ಹತ್ತು ತೋಳುಗಳನ್ನು ಹೊಂದಿರುವ ಶಕ್ತಿಯುತ ಸ್ತ್ರೀ ರೂಪವನ್ನು ಸೃಷ್ಟಿಸಲು ಒಟ್ಟುಗೂಡಿದರು. ದುರ್ಗೆಯು ಪವಿತ್ರ ಗಂಗೆಯ ನೀರಿನಿಂದ ಚೇತನವಾಗಿ ಹೊರ ಹೊಮ್ಮಿದಾಗ, ಎಲ್ಲಾ ದೇವರುಗಳು ಒಟ್ಟಾಗಿ ಅವಳಿಗೆ ಭೌತಿಕ ರೂಪವನ್ನು ನೀಡಿದರು.

ಸತಿ ಯಾರು? (Who is Sati)
ಶಿವನು ದಕ್ಷ ರಾಜನ ಮಗಳು ದಾಕ್ಷಾಯಿಣಿಯೊಂದಿಗೆ ವಿವಾಹವಾದನು. ಆಕೆಯನ್ನು ಸತಿ ಎಂದೂ ಕರೆಯುತ್ತಾರೆ. ಪತಿಯು ತನ್ನ ತಂದೆಯಿಂದ ಅವಮಾನಕ್ಕೊಳಗಾಗುವುದನ್ನು ನೋಡಿದ ನಂತರ ಅವಳು ದಕ್ಷನು ಮಾಡುತ್ತಿದ್ದ ಯಜ್ಞದ ಅಗ್ನಿಕುಂಡದಲ್ಲಿ ಹಾರಿ ತನ್ನ ಮರ್ತ್ಯ ರೂಪವನ್ನು ತೊರೆದಳು. ಶಿವ ಅವಳ ವಿರೂಪಗೊಂಡ ದೇಹವನ್ನು ತನ್ನ ಭುಜದ ಮೇಲೆ ಹೊತ್ತೊಯ್ದನು. ಅವಳು ಪಾರ್ವತಿಯಾಗಿ ಮರುಜನ್ಮ ಪಡೆದಳು ಮತ್ತು ಅಂತಿಮವಾಗಿ ಶಿವನನ್ನು ಸಮಾಧಾನಪಡಿಸಲು ಕಠಿಣ ತಪಸ್ಸಿನ ನಂತರ ಮತ್ತೆ ಮದುವೆಯಾದಳು. ಪಾರ್ವತಿಯನ್ನು ಗೌರಿ ಮತ್ತು ಮಹಾಗೌರಿ ಎಂದೂ ಕರೆಯುತ್ತಾರೆ. 

ಯುವಕರನ್ನು ಆಯಸ್ಕಾಂತದಂತೆ ಸೆಳೆವ ಆಕರ್ಷಣೆ ಈ ರಾಶಿಯ ಹುಡುಗಿಯರಲ್ಲಿ!

ನವದುರ್ಗೆಯರು ಯಾರು?
ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ: ಇವರೇ ನವದುರ್ಗಾ, ದುರ್ಗೆಯ ಒಂಬತ್ತು ರೂಪಗಳು. ಇರನ್ನು ನವರಾತ್ರಿಯ ಒಂಬತ್ತು ಹಗಲು ರಾತ್ರಿಗಳ ಅವಧಿಯಲ್ಲಿ ಪೂಜಿಸಲಾಗುತ್ತದೆ. 

Latest Videos
Follow Us:
Download App:
  • android
  • ios