Asianet Suvarna News Asianet Suvarna News

ಪುರಿಯ ಜಗನ್ನಾಥನಿಗೆ ಅನಾರೋಗ್ಯ; ಈ ರೀತಿ ನಡೆಯುತ್ತಿದೆ ಚಿಕಿತ್ಸೆ!

ಪುರಿಯ ಜಗನ್ನಾಥನಿಗೆ ಪ್ರತಿ ವರ್ಷ 15 ದಿನಗಳ ಕಾಲ ಅನಾರೋಗ್ಯ ಕಾಡುತ್ತದೆ. ಈ ಸಂದರ್ಭದಲ್ಲಿ ವಿವಿಧ ರೀತಿಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತದೆ. ಜಗನ್ನಾಥನ ಸಮಸ್ಯೆಯೇನು? ನೀಡುತ್ತಿರುವ ಚಿಕಿತ್ಸೆಯೇನು ತಿಳೀಬೇಕಾ?

Why is Lord Jagannath on sick leave for 15 days every year skr
Author
Bangalore, First Published Jun 22, 2022, 3:05 PM IST

ನೀವೇನಾದರೂ ಪುರಿ 'ಜಗನ್ನಾಥ'(Puri Jagannath)ನ ದರ್ಶನ ಪಡೆಯಲು ಈಗ ವೃಂದಾವನ(Vrundavan)ಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದರೆ, ನಿರಾಸೆಯಿಂದ ಹಿಂತಿರುಗಬೇಕಾಗಬಹುದು. ಏಕೆಂದರೆ ಜಗನ್ನಾಥ ಅನಾರೋಗ್ಯಕ್ಕೊಳಗಾಗಿದ್ದು, 15 ದಿನಗಳ ಕಾಲ ಸಿಕ್ ಲೀವ್‌ನಲ್ಲಿರಲಿದ್ದಾರೆ. ಅಷ್ಟೇ ಅಲ್ಲ, ಆಯುರ್ವೇದ ಚಿಕಿತ್ಸೆ(Ayurveda treatment)ಗೆ ಒಳಗಾಗಿದ್ದಾರೆ!

ಹೌದು, ಪ್ರತಿ ವರ್ಷದಂತೆ ಈ ವರ್ಷವೂ ಪುರಿಯ ಜಗನ್ನಾಥ ಅನಾರೋಗ್ಯಕ್ಕೊಳಗಾಗಿದ್ದಾನೆ. ಪ್ರಾಚೀನ ಸಂಪ್ರದಾಯದ ಪ್ರಕಾರ, ಜ್ಯೇಷ್ಠ ವತ್ ಸಾವಿತ್ರಿ ಪೂರ್ಣಿಮೆ(Vat Savitri Purnima)ಯಂದು 108 ಮಡಕೆಗಳೊಂದಿಗೆ ಸ್ನಾನ ಮಾಡಿದ ನಂತರ, ಜಗನ್ನಾಥ ಜೀ, ಅವರ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರ ಎಲ್ಲರೂ ಅಸ್ವಸ್ಥರಾಗುತ್ತಾರೆ. ನಂತರ ಅನಾರೋಗ್ಯದ ಕಾರಣ 15 ದಿನಗಳ ಕಾಲ ದೇವಸ್ಥಾನದ ಅನಾಸರ ಮನೆಯಲ್ಲಿ ಏಕಾಂತವಾಗಿರುತ್ತಾರೆ. ಆರೋಗ್ಯದ ದೃಷ್ಟಿಯಿಂದ ಪ್ರತಿದಿನ ಗಿಡಮೂಲಿಕೆಯ ಕಷಾಯ ನೀಡಿ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆಯ ನಂತರ, ಆಷಾಢ ಶುಕ್ಲ ಪಕ್ಷದ ಎರಡನೇ ದಿನದಂದು ಅಂದರೆ ಜುಲೈ 1, 2022 ರಂದು, ಭಗವಂತ ರಥಯಾತ್ರೆಗೆ ಹೊರಡುತ್ತಾನೆ. 

ಇದೊಂದು ವಾರ್ಷಿಕ ಸಂಪ್ರದಾಯವಾಗಿದ್ದು, ಪುರಿಯ ಜಗನ್ನಾಥ ಮತ್ತು ಅವರ ಸಹೋದರಿ ಸುಭದ್ರ ಮತ್ತು ಸಹೋದರ ಬಲಭದ್ರರ ವಿಗ್ರಹಗಳನ್ನು ಮರದಿಂದ ಮಾಡಲಾಗಿರುತ್ತದೆ. ಅವು ಒಂದು ವರ್ಷದ ಅವಧಿಯಲ್ಲಿ ಹಾಳಾಗುತ್ತವೆ. ಹೀಗಾಗಿ, ಹೊಸ ವಿಗ್ರಹಗಳ ನಿರ್ಮಾಣ ನಡೆಯುತ್ತದೆ. ಈ ಸಂದರ್ಭದಲ್ಲಿ ಹದಿನೈದು ದಿನಗಳ ಕಾಲ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ಈ ಸಂದರ್ಭದಲ್ಲಿ ಭಕ್ತರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. 

ಈ ರಾಶಿಗಳಿಗೆ ಎಷ್ಟೇ ಸಂಬಳ ಬಂದರೂ ತಿಂಗಳ ಮಧ್ಯದ ಹೊತ್ತಿಗೇ ಖಾತೆ ಖಾಲಿ!

ಸಧ್ಯ ಜಗನ್ನಾಥನಿಗೆ ಹೇಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಯೋಣ(Treatment of Jagannath)

ಆಯುರ್ವೇದ ವಿಧಾನದಲ್ಲಿ ಜಗನ್ನಾಥ್ ಜೀ ಚಿಕಿತ್ಸೆಯು ಈ ರೀತಿ ನಡೆಯುತ್ತಿದೆ:
ಧರ್ಮಗ್ರಂಥಗಳ ಪ್ರಕಾರ, ಜಗನ್ನಾಥನ ಅಸ್ವಸ್ಥತೆಯನ್ನು ಅವನ 'ಜ್ವರಲೀಲಾ' ಎಂದು ಕರೆಯಲಾಗುತ್ತದೆ. ಜಗನ್ನಾಥ, ಬಲಭದ್ರ ಮತ್ತು ಸಹೋದರಿ ಸುಭದ್ರಾ ಅವರಿಗೆ ಆಯುರ್ವೇದ ವಿಧಾನದಿಂದ 15 ದಿನಗಳ ಕಾಲ ಚಿಕಿತ್ಸೆ ನೀಡಲಾಗುತ್ತದೆ. ಈ ದಿನಗಳಲ್ಲಿ, ಅವರಿಗೆ ಆಯುರ್ವೇದ ಕಷಾಯವನ್ನು ನೀಡಲಾಗುತ್ತದೆ.

ದೇವರ ಉಪಚಾರಕ್ಕಾಗಿ ದಶಮೂಲಿ ಔಷಧವನ್ನು ತಯಾರಿಸಲಾಗುತ್ತದೆ. ಇದರಲ್ಲಿ ಶಾಲ ಪರ್ಣಿ, ಬೇಲ, ಕೃಷ್ಣ ಪರ್ಣಿ, ಗಮ್ಹಾರಿ, ಅಗಿಬಾತು, ಅಂಕ್ರಾಂತಿ, ತಿಗೋಖರ, ಫಂಫನ, ಸುನಾರಿ, ವೃಹತಿ ಮತ್ತು ಪೊಟ್ಲಿ ಮಿಶ್ರಣ ಮಾಡಿ ಔಷಧವನ್ನು ತೃಯಾರಿಸಲಾಗುತ್ತದೆ. ಈ ಗಿಡಮೂಲಿಕೆಗಳನ್ನು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ.

ಧಾರ್ಮಿಕ ಸಂಪ್ರದಾಯದ ಪ್ರಕಾರ, ದೇವರು ಅನಾರೋಗ್ಯದಿಂದ ಬಳಲುತ್ತಿರುವಾಗಿನಿಂದ ವಿಶೇಷ ಆಹಾರ ತಿನ್ನುವುದು ಮತ್ತು ಕುಡಿಯುವುದನ್ನು ತ್ಯಜಿಸಬೇಕು. ಈ ದಿನಗಳಲ್ಲಿ, ಗಂಜಿ, ಖಿಚಡಿ ಮತ್ತು ದಾಲ್ ಸೇರಿದಂತೆ ಲಘು ಆಹಾರ ಪದಾರ್ಥಗಳನ್ನು ನೀಡಲಾಗುವುದು. ಜೊತೆಗೆ ಬಿಸಿ ಬಿಸಿಯಾದ ಆಹಾರ ಮಾತ್ರ ನೀಡಲಾಗುವುದು.

ಉಗ್ರರ ದಾಳಿಗೊಳಗಾದ ಅಫ್ಘಾನ್ ಗುರುದ್ವಾರದ ದುರಸ್ತಿಗೆ 10 ಲಕ್ಷ ರೂ. ನೀಡಿದ ಕಾಶ್ಮೀರ ಸಿಖ್ ಸಂಸ್ಥೆ

ನಂಬಿಕೆಯ ಪ್ರಕಾರ, ಭಗವಂತ 15 ದಿನಗಳವರೆಗೆ ಜ್ವರ ಮತ್ತು ಅತಿಸಾರದಿಂದ (ವಾಂತಿ, ಭೇದಿ) ಬಳಲುತ್ತಾನೆ. ಈ ಸಮಯದಲ್ಲಿ, ಮಾನವ ದೇಹಕ್ಕೆ ಅನ್ವಯಿಸುವ ಎಲ್ಲ ನಿಯಮಗಳು ದೇವರಿಗೂ ಅನ್ವಯಿಸುತ್ತವೆ. ದೇಹದ ಉಷ್ಣತೆಯನ್ನು ಕಡಿಮೆ ಮಾಡುವ ಔಷಧಿಗಳನ್ನು(medicines) ಮೊದಲು ಭಗವಂತನಿಗೆ ನೀಡಲಾಗುತ್ತದೆ ಮತ್ತು ನಂತರ ಔಷಧಿಗಳಿಂದ ಮಾಡಿದ ಎಣ್ಣೆಯನ್ನು ಮಸಾಜ್ ಮಾಡಲಾಗುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios