Hanuman Jayanti 2023: ವರ್ಷದಲ್ಲಿ ಎರಡು ಬಾರಿ ಹನುಮ ಜನ್ಮೋತ್ಸವ ಆಚರಣೆ ಏಕೆ?
ಹನುಮಾನ್ ಜಯಂತಿ ಪ್ರತಿ ವರ್ಷ ಬರುತ್ತದೆ. ಆದರೆ ಹನುಮ ಜಯಂತಿ ವರ್ಷಕ್ಕೆ ಎರಡು ಬಾರಿ ಬರುತ್ತದೆ! ಅದರ ಕಾರಣವೇನು ಮತ್ತು ಅದರ ಪ್ರಾಮುಖ್ಯತೆ ಏನು ಎಂಬುದನ್ನು ಕಥೆಯ ಮೂಲಕ ತಿಳಿಯೋಣ.
ಹನುಮಂತನು ಶಕ್ತಿ ಮತ್ತು ಧೈರ್ಯದ ಪ್ರತಿರೂಪ. ಅವನು ಸಮುದ್ರಗಳನ್ನು ದಾಟಬಲ್ಲನು, ಪರ್ವತಗಳನ್ನು ಚಲಿಸಬಲ್ಲನು ಮತ್ತು ಮಾರಣಾಂತಿಕ ರಾಕ್ಷಸರನ್ನು ಸಂಹರಿಸಬಲ್ಲನು. ಅವನ ಶಕ್ತಿ, ಸದಾಚಾರ ಮತ್ತು ಭಕ್ತಿಗಾಗಿ, ಅವನು ಅಮರತ್ವದಿಂದ ಆಶೀರ್ವದಿಸಲ್ಪಟ್ಟನು. ಪುರಾಣಗಳ ಪ್ರಕಾರ, ಶ್ರೀರಾಮನು ತನ್ನ ಭೌತಿಕ ರೂಪವನ್ನು ತೊರೆದಾಗ, ಹನುಮಂತನು ಅವನೊಂದಿಗೆ ಹೋಗಲು ಬಯಸಿದನು. ಆದರೆ ಪ್ರಪಂಚದಲ್ಲಿ ಹನುಮಂತನ ಇರುವಿಕೆ ಎಷ್ಟು ಮುಖ್ಯ ಎಂದು ರಾಮನಿಗೆ ಗೊತ್ತಿತ್ತು. ಹಾಗಾಗಿ, ಆಂಜನೇಯನಿಗೆ ಭೂಮಿಯ ಮೇಲೆ ಶಾಶ್ವತವಾಗಿ ಉಳಿಯಲು ಮತ್ತು ತನ್ನ ಶಕ್ತಿಯಿಂದ ಜನರಿಗೆ ಸಹಾಯ ಮಾಡಲು ರಾಮನು ಆದೇಶಿಸಿದನು. ಅಂದಿನಿಂದ, ಚಿರಂಜೀವಿ ಹನುಮಂತನು ಭೂಮಿಯ ಮೇಲೆ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ.
ಸಾಮಾನ್ಯವಾಗಿ ಹನುಮ ಜನ್ಮೋತ್ಸವವನ್ನು ಚೈತ್ರ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಅದರಂತೆ ಈ ವರ್ಷ ಹನುಮ ಜನ್ಮೋತ್ಸವವನ್ನು 6 ಏಪ್ರಿಲ್ 2023ರಂದು ಆಚರಿಸಲಾಗುತ್ತದೆ. ಹನುಮ ಜಯಂತಿಯನ್ನು ದೇಶದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ, ವರ್ಷದಲ್ಲಿ ಎರಡು ಬಾರಿ ಹನುಮ ಜಯಂತಿ ಬರುತ್ತದೆ ಎಂಬುದು ನಿಮಗೆ ಗೊತ್ತೇ? ಹೌದು, ದೀಪಾವಳಿ ಸಮೀಪದಲ್ಲಿರುವಾಗಲೂ ಒಮ್ಮೆ ಹನುಮ ಜಯಂತಿ ಆಚರಿಸಲಾಗುತ್ತದೆ. ಇದೇಕೆ ಹೀಗೆ? ಹನುಮ ಜಯಂತಿ ವರ್ಷಕ್ಕೆ ಎರಡು ಬಾರಿ ಬರುವುದಾದರೂ ಹೇಗೆ ಎಂಬ ಗೊಂದಲ ನಿಮ್ಮನ್ನು ಕಾಡುತ್ತಿರಬಹುದು.
ಇದಕ್ಕೆ ಎರಡು ಕಾರಣಗಳನ್ನು ನೀಡಲಾಗಿದೆ. ಚೈತ್ರ ಮಾಸದಲ್ಲಿ ವರ್ಷದ ಮೊದಲ ಹನುಮ ಜಯಂತಿ ಬರುತ್ತದೆ. ಆಂಜನೇಯನು ಚೈತ್ರ ಮಾಸದ ಹುಣ್ಣಿಮೆಯಂದು ಜನಿಸಿದನು. ಅದಕ್ಕಾಗಿಯೇ ಈ ದಿನವನ್ನು ಹನುಮ ಜಯಂತಿ ಎಂದು ಆಚರಿಸಲಾಗುತ್ತದೆ. ಮತ್ತು ವರ್ಷದ ಎರಡನೇ ಹನುಮ ಜಯಂತಿ ದೀಪಾವಳಿಯ ಹತ್ತಿರ ಬರುತ್ತದೆ. ದೀಪಾವಳಿಯ ಹತ್ತಿರ ಬರುವ ಹನುಮ ಜಯಂತಿಯನ್ನು ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಇದು ಕೆಟ್ಟದ್ದರ ವಿರುದ್ಧ ಆತನ ಜಯದ ಆಚರಣೆಗಾಗಿಯಾಗಿದೆ.
Hanuman Jayanti 2023: 4 ರಾಶಿಗಳ ಮೇಲೆ ಹನುಮ ಕೃಪೆ, ತೆರೆಯಲಿದೆ ಅವಕಾಶಗಳ ಬಾಗಿಲು
ವರ್ಷದಲ್ಲಿ ಎರಡು ಹನುಮ ಜಯಂತಿ ಏಕೆ?
ಹನುಮ ಜಯಂತಿಯನ್ನು ಎರಡು ಬಾರಿ ಆಚರಿಸುವ ಬಗ್ಗೆ ಹೇಳುವುದಾದರೆ, ಒಂದು ದಿನಾಂಕವನ್ನು ವಿಜಯ ಅಭಿನಂದನೆ ಹಬ್ಬವಾಗಿ ಆಚರಿಸಲಾಗುತ್ತದೆ ಮತ್ತು ಎರಡನೇ ದಿನಾಂಕವನ್ನು ಜನ್ಮದಿನವಾಗಿ ಆಚರಿಸಲಾಗುತ್ತದೆ. ಈ ದಿನದಂದು ಪವಿತ್ರ ಸ್ನಾನ ಮಾಡುವುದು, ದಾನ ಮಾಡುವುದು ಮತ್ತು ಇತರ ಧಾರ್ಮಿಕ ಕಾರ್ಯಗಳನ್ನು ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ.
ಹನುಮ ಜಯಂತಿಯನ್ನು ಆಚರಿಸುವುದರ ಹಿಂದೆ ಪೌರಾಣಿಕ ಕಥೆಯಿದೆ. ಮೊದಲ ದಿನಾಂಕದ ಪ್ರಕಾರ, ಬಾಲ ಹನುಮಂತನು ಸೂರ್ಯನನ್ನು ಹಣ್ಣು ಎಂದು ಭಾವಿಸಿ ತಿನ್ನುವ ಆಸೆಯಿಂದ ಆಕಾಶದಲ್ಲಿ ಹಾರಲು ಪ್ರಾರಂಭಿಸಿದನು. ಅದೇ ದಿನ, ರಾಹು ಕೂಡ ಸೂರ್ಯನನ್ನು ಗ್ರಹಣ ಮಾಡಲು ಬಯಸಿದನು, ಆದರೆ ಹನುಮಂತನನ್ನು ನೋಡಿದ ಸೂರ್ಯನು ಅವನನ್ನು ಇನ್ನೊಬ್ಬ ರಾಹು ಎಂದು ಭಾವಿಸಿದನು. ಈ ದಿನ ಚೈತ್ರ ಮಾಸದ ಹುಣ್ಣಿಮೆಯ ದಿನವಾಗಿತ್ತು. ಆ ದಿನ ಹೊಡೆತ ತಿಂದು ಭೂಮಿಗೆ ಬಿದ್ದ ಹನುಮನಿಗೆ ವಾಯುವಿನ ಕಾರಣದಿಂದ ಎಲ್ಲ ಹಿರಿಯರು ಆಶೀರ್ವದಿಸಿ ಜೀವ ನೀಡಿದರು.
Hanuman Jayanti 2023: ಈ ಪರಿಹಾರ ಮಾಡೋದ್ರಿಂದ ಕಷ್ಟ, ಚಿಂತೆ ದೂರ ದೂರ
ಎರಡನೇ ಹನುಮ ಜಯಂತಿಯ ಕಥೆಯ ಪ್ರಕಾರ, ಹನುಮಂತನ ಅವರ ಭಕ್ತಿ ಮತ್ತು ಸಮರ್ಪಣೆಯನ್ನು ನೋಡಿದ ನಂತರ ತಾಯಿ ಸೀತಾ ಅವನಿಗೆ ಅಮರತ್ವದ ವರವನ್ನು ನೀಡಿದಳು. ಈ ದಿನ ನರಕ ಚತುರ್ದಶಿ. ಇದನ್ನು ದೀಪಾವಳಿಯ ಒಂದು ದಿನ ಮೊದಲು ಆಚರಿಸಲಾಗುತ್ತದೆ. ಅಂದರೆ ಹನುಮಂತ ನರಕ ಚತುರ್ದಶಿಯ ದಿನದಂದು ಚಿರಂಜೀವಿಯಾದನು. ಈ ದಿ ಚತುರ್ದಶಿ ತಿಥಿ, ಮಂಗಳವಾರ, ಕಾರ್ತಿಕ ಮಾಸ, ಕೃಷ್ಣ ಪಕ್ಷ, ಸ್ವಾತಿ ನಕ್ಷತ್ರ ಮತ್ತು ಮೇಷ ರಾಶಿಯಾಗಿತ್ತು.