Asianet Suvarna News Asianet Suvarna News

Hanuman Jayanti 2023: ಈ ಪರಿಹಾರ ಮಾಡೋದ್ರಿಂದ ಕಷ್ಟ, ಚಿಂತೆ ದೂರ ದೂರ

ರಾಮನವಮಿಯಾಗಿ ವಾರದೊಳಗೆ ಹನುಮ ಜಯಂತಿ ಬರುತ್ತಿದೆ. ಈ ದಿನದಂದು ಕೆಲ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವುದರಿಂದ ಹನುಮನು ಪ್ರಸನ್ನನಾಗಿ ನಿಮ್ಮೆಲ್ಲ ಚಿಂತೆಗಳನ್ನು ದೂರ ಮಾಡುತ್ತಾನೆ. 

On Hanuman Jayanti these miraculous measures will remove all suffering skr
Author
First Published Apr 1, 2023, 12:41 PM IST

ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಹನುಮ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳೊಂದಿಗೆ ಆಂಜನೇಯನನ್ನು ಪೂಜಿಸುವುದರಿಂದ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಈ ಬಾರಿ ಹನುಮ ಜಯಂತಿ ಏಪ್ರಿಲ್ 6ರಂದು. ಈ ದಿನ ಆಂಜನೇಯನ ಜಯಂತಿ. ಆಂಜನೇಯನ ಹೆಸರಿನಲ್ಲಿ ಉಪವಾಸ ಮತ್ತು ನಿಯಮಗಳ ಪ್ರಕಾರ ಆತನನ್ನು ಪೂಜಿಸುವುದರಿಂದ, ವ್ಯಕ್ತಿಯು ಆತನ ಆಶೀರ್ವಾದವನ್ನು ಪಡೆಯುತ್ತಾನೆ ಮತ್ತು ವ್ಯಕ್ತಿಯ ಎಲ್ಲಾ ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ. ಹನುಮ ಜಯಂತಿಯ ದಿನದಂದು ಈ ಪರಿಹಾರ ಕಾರ್ಯಗಳನ್ನು ಕೈಗೊಂಡರೆ ನೀವು ಆದಷ್ಟು ಶೀಘ್ರ ಫಲಿತಾಂಶಗಳನ್ನು ಕಾಣಬಹುದು. 

ಹನುಮ ಜಯಂತಿಯ ದಿನದಂದು ಈ ಅದ್ಭುತ ಪರಿಹಾರಗಳನ್ನು ಮಾಡಿ..

1. ನೀವು ಯಾವುದಾದರೂ ವಿಷಯದ ಬಗ್ಗೆ ತುಂಬಾ ಚಿಂತೆ ಮಾಡುತ್ತಿದ್ದರೆ, ಹನುಮ ಜಯಂತಿಯ ದಿನದಂದು, ಅಶ್ವತ್ಥ ಮರದ 11 ಎಲೆಗಳನ್ನು ತೆಗೆದುಕೊಂಡು ಅದನ್ನು ಶುದ್ಧ ನೀರಿನಿಂದ ತೊಳೆಯಿರಿ. ನಂತರ, ಆ ಎಲೆಗಳ ಮೇಲೆ ಶ್ರೀರಾಮ ಎಂದು ಶ್ರೀಗಂಧ ಅಥವಾ ಕುಂಕುಮದಿಂದ ಬರೆಯಿರಿ ಮತ್ತು ಈ ಸಂಪೂರ್ಣ ಎಲೆಗಳ ಹಾರವನ್ನು ಮಾಡಿ ಮತ್ತು ಅದನ್ನು ಆಂಜನೇಯನಿಗೆ ಅರ್ಪಿಸಿ. ಇದರೊಂದಿಗೆ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಮತ್ತು ಹಣದ ಹರಿವೂ ಹೆಚ್ಚಾಗುತ್ತದೆ.

2. ಹನುಮ ಜಯಂತಿಯ ದಿನದಂದು ವೀಳ್ಯದೆಲೆಯ ವಿಶೇಷ ಹಾರವನ್ನು ಮಾಡಿ ಹನುಮಂತನಿಗೆ ಅರ್ಪಿಸಿ. ಇದರ ನಂತರ, ಹನುಮನ ಮುಂದೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ ಮತ್ತು ಶುದ್ಧ ತುಪ್ಪದ ದೀಪವನ್ನು ಸಹ ಬೆಳಗಿಸಿ. ನಂತರ ಆಸನದ ಮೇಲೆ ಕುಳಿತು ಆಂಜನೇಯನನ್ನು ಧ್ಯಾನಿಸಿ, ಹಾಗೆಯೇ ಬಜರಂಗ ಬಾಣವನ್ನು ಪಠಿಸಿ. ಇದರಿಂದ ಹನುಮಂತನ ಕೃಪೆ ಸದಾ ನಿಮ್ಮ ಮೇಲಿರುತ್ತದೆ.

April Horoscope: ಯಾವ ರಾಶಿಗೆ ಕಹಿ, ಯಾವ ರಾಶಿಗೆ ಸಿಹಿ ಈ ಏಪ್ರಿಲ್?

3. ಹನುಮ ಜಯಂತಿಯ ದಿನದಂದು, ದೇವಸ್ಥಾನಕ್ಕೆ ಹೋಗಿ ಆಂಜನೇಯನ ಮುಂದೆ ಸಾಸಿವೆ ಎಣ್ಣೆ ಅಥವಾ ತುಪ್ಪದ ದೀಪವನ್ನು ಹಚ್ಚಿ ಮತ್ತು ಹನುಮಾನ್ ಚಾಲೀಸಾವನ್ನು 11 ಬಾರಿ ಪಠಿಸಿ. ಇದರಿಂದ ಆಂಜನೇಯನು ಶೀಘ್ರದಲ್ಲೇ  ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತಾನೆ.

4. ಹನುಮ ದೇವಸ್ಥಾನಕ್ಕೆ ಹೋಗಿ, ಅವನಿಗೆ ಕಪ್ಪು ಉದ್ದು 11 ಕಾಳುಗಳು, ಸಿಂಧೂರ, ಹೂವುಗಳು, ಸಿಹಿತಿಂಡಿಗಳನ್ನು ಅರ್ಪಿಸಿ ಮತ್ತು ಹನುಮಾನ್ ಚಾಲೀಸಾವನ್ನು ಪಠಿಸಿ. ನಿಮ್ಮ ಜಾತಕದಲ್ಲಿ ಯಾವುದೇ ದೋಷವಿದ್ದರೆ ಅದೂ ದೂರವಾಗುತ್ತದೆ. ಆಂಜನೇಯನಿಗೆ ಗುಲಾಬಿಗಳ ಹಾರವನ್ನು ಅರ್ಪಿಸುವ ಮೂಲಕ ಅವನ ಕೃಪೆ ಪಡೆಯಿರಿ. ಈ ದಿನ, ಬೂಂದಿ ಲಡ್ಡೂಗಳನ್ನು ನೈವೇದ್ಯವಾಗಿ ಅರ್ಪಿಸಿ.

5. ಹನುಮ ಜಯಂತಿಯ ದಿನದಂದು ರುದ್ರಾಕ್ಷದ ಜಪಮಾಲೆಯೊಂದಿಗೆ ಈ ಮಂತ್ರವನ್ನು 108 ಬಾರಿ ಪಠಿಸಿ. ಇದರೊಂದಿಗೆ ನೀವು ಎಲ್ಲಾ ತೊಂದರೆಗಳಿಂದ ಮುಕ್ತರಾಗುತ್ತೀರಿ.
'ಓಂ ರಾಮದೂತಾಯ ನಮಃ'

ಧಾರ್ಮಿಕ ನಂಬಿಕೆ ಪ್ರಕಾರ ಹನುಮಾನ್ ಜಯಂತಿ ಅನ್ನಬಾರದೇಕೆ?

6. ಮನೆಯ ಶಾಂತಿಗಾಗಿ, ಹನುಮ ಜಯಂತಿಯ ದಿನ, ಸಾಸಿವೆ ಎಣ್ಣೆಯಲ್ಲಿ ಕುಂಕುಮ ಬೆರೆಸಿ ಹನುಮಂತನಿಗೆ ಲೇಪಿಸಿ. ನಂತರ ಮನೆಯ ಮುಖ್ಯ ದ್ವಾರದಲ್ಲಿ ಸ್ವಸ್ತಿಕ ಚಿಹ್ನೆಯನ್ನು ಮಾಡಿ ಮತ್ತು ಮುಖ್ಯ ಬಾಗಿಲಿಗೆ ಸಾಸಿವೆ ದೀಪವನ್ನು ಹಚ್ಚಿ.

7. ಆರ್ಥಿಕ ಲಾಭಕ್ಕಾಗಿ, ಹನುಮ ಜಯಂತಿಯ ದಿನದಿಂದ 5 ಶನಿವಾರಗಳಂದು ಬೆಲ್ಲ, ಮಲ್ಲಿಗೆ ಎಣ್ಣೆ ಮತ್ತು ಸಿಂಧೂರವನ್ನು ಆಂಜನೇಯನಿಗೆ ಅರ್ಪಿಸಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios