ಹಿಂದೂ ಧರ್ಮದಲ್ಲಿ ಆಹಾರವನ್ನು ದೇವರ ರೂಪದಲ್ಲಿ ನೋಡಲಾಗುತ್ತದೆ. ಹಸಿದು ಬಂದವರನ್ನು ಹಾಗೆ ಕಳುಹಿಸಬಾರದು ಎನ್ನುವ ನಂಬಿಕೆಯಿದೆ. ಬಡವರಿಗೆ ಆಹಾರ ದಾನ ಮಾಡಿದ್ರ ಪುಣ್ಯ ಎನ್ನಲಾಗುತ್ತದೆ. ಆದ್ರೆ ಅದೇ ಪ್ರಸಾದ ಕೆಲವರಿಗೆ ಶಾಪವಾಗುತ್ತೆ.  

ಹಿಂದೂ ಧರ್ಮದಲ್ಲಿ ಯಾವುದೇ ಪೂಜೆ ಅಥವಾ ಶುಭ ಕಾರ್ಯದ ನಂತ್ರ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಅದನ್ನು ಪ್ರಸಾದ ಎಂದು ನಂಬಲಾಗುತ್ತದೆ. ಶುಭ ಕಾರ್ಯಕ್ಕೆ ಬಂದ ಎಲ್ಲರೂ ಪ್ರಸಾದ ಸ್ವೀಕರಿಸಿ ಹೋಗ್ಬೇಕು ಎಂಬ ಮಾತನ್ನು ನೀವು ಕೇಳಿರುತ್ತೀರಿ. ದೇವಸ್ಥಾನದಲ್ಲಿ, ಜಾತ್ರೆಯಲ್ಲಿ, ಮನೆಯಲ್ಲಿ ನಡೆಯುವ ದೇವರ ಕಾರ್ಯಕ್ರಮಗಳಲ್ಲಿ ಪ್ರಸಾದ ವಿತರಣೆ ಇದ್ದೇ ಇರುತ್ತದೆ. ಭಕ್ತರು, ದೇವರ ಪ್ರಸಾದ ಅಂದ್ರೆ ಊಟ ಮಾಡಿದ ನಂತ್ರ ದರ್ಶನ ಪರಿಪೂರ್ಣವಾಯ್ತು ಎಂದು ನಂಬುತ್ತಾರೆ. ಅನೇಕ ಬಾರಿ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದ ನಂತ್ರ ಕಾದುಕುಳಿತು ಪ್ರಸಾದ ಸ್ವೀಕರಿಸಿ ಬರುವ ಜನರಿದ್ದಾರೆ. 

ಹಿಂದೂ (Hindu) ಧರ್ಮದಲ್ಲಿ ಮಾತ್ರವಲ್ಲ ಸಿಖ್ (Sikh) ಧರ್ಮದಲ್ಲೂ ಪ್ರಸಾದ ವಿತರಣೆಗೆ ಮಹತ್ವವಿದೆ. ಗುರುದ್ವಾರದಲ್ಲೂ ಇದಕ್ಕೆ ವ್ಯವಸ್ಥೆ ಮಾಡಿರೋದನ್ನು ನೀವು ನೋಡ್ಬಹುದು. ಕೆಲವು ಬಾರಿ, ದಾನದ ಹೆಸರಿನಲ್ಲಿ ಜನರು ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಆಯೋಜನೆ ಮಾಡ್ತಾರೆ. ಬಂದ ಜನರಿಗೆಲ್ಲ ಆಹಾರ (Food) ವಿತರಣೆ ಮಾಡುವ ಮೂಲಕ ದಾನದ ಪುಣ್ಯ ಪಡೆಯುತ್ತಾರೆ. ಆದ್ರೆ ಗುರುದ್ವಾರವಿರಲಿ, ಜಾತ್ರೆ ಸಮಾರಂಭವಿರಲಿ ಇಲ್ಲ ದೇವಸ್ಥಾನ, ಶುಭ ಕಾರ್ಯವಿರಲಿ ಜನರು ಪ್ರಸಾದ ಸ್ವೀಕರಿಸಬಾರದು ಎನ್ನಲಾಗುತ್ತದೆ. ಸಾರ್ವಜನಿಕ ಪ್ರದೇಶದಲ್ಲಿ ವಿತರಣೆಯಾಗುವ ಪ್ರಸಾದವನ್ನು ಸ್ವೀಕರಿಸಬಾರದು ಎನ್ನಲು ಜ್ಯೋತಿಷ್ಯದಲ್ಲಿ ಕೆಲ ಕಾರಣವನ್ನು ಹೇಳಲಾಗಿದೆ.

ಶನಿಯಿಂದಾಗಿ ಈ ರಾಶಿಗಳಿಗೆ ಶಶ ಮಹಾಪುರುಷ ಯೋಗ; ಲಾಭಗಳೇನು?

ಪ್ರಸಾದದ ಮಹತ್ವ : ಧಾರ್ಮಿಕ ಗ್ರಂಥಗಳಲ್ಲಿ ಜನರಿಗೆ ಪ್ರಸಾದ ಅರ್ಪಿಸುವುದು ಅಗತ್ಯವೆಂದು ಪರಿಗಣಿಸಲಾಗುತ್ತದೆ. ಪ್ರತಿ ದಿನ ಆಹಾರಕ್ಕಾಗಿ ಪರದಾಡುವ, ಆಹಾರಕ್ಕೆ ವ್ಯವಸ್ಥೆ ಮಾಡಲು ಸಾಧ್ಯವಾಗದ ಬಡಜನರಿಗೆ ಇದು ನೆರವಾಗಲಿದೆ. ಹಾಗಾಗಿ ಪ್ರಸಾದ ವಿತರಣೆ ವ್ಯವಸ್ಥೆ ಮಾಡಬೇಕು. ನೀವು ಕೂಡ ಪ್ರಸಾದ ವಿತರಣೆ ಮಾಡಿದ್ರೆ ಅಥವಾ ಅದಕ್ಕೆ ಹಣದ ಸಹಾಯ ಮಾಡಿದ್ರೆ ಒಳ್ಳೆಯದು. ಇದ್ರಿಂದ ಪುಣ್ಯ ಲಭಿಸುತ್ತದೆ. ಅಗತ್ಯವಿರುವ ಜನರಿಗೆ ಅನ್ನದಾನ ಮಾಡಿದ ಪುಣ್ಯ ಸಿಗುತ್ತದೆ. ಮನೆಯಲ್ಲಿ ಸಕಾರಾತ್ಮಕತೆ ನೆಲೆಸುತ್ತದೆ. ಮನೆಯಲ್ಲಿ, ಕುಟುಂಬಸ್ಥರ ಮಧ್ಯೆ ಸುಖ, ಸಂತೋ, ಸಮೃದ್ಧಿ ಸದಾ ಇರಬೇಕೆಂದ್ರೆ ಪ್ರಸಾದ ವಿತರಣೆ ಮಾಡೋದು ಮುಖ್ಯವೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. 

ಪ್ರಸಾದ ವಿತರಣೆ ಜಾಗದಲ್ಲಿ ಯಾಕೆ ಊಟ ಮಾಡಬಾರದು? : ಬಡವರಿಗೆ ಅನ್ಯಾಯ ಮಾಡಿದಂತೆ : ಮೊದಲೇ ಹೇಳಿದಂತೆ ಪ್ರಸಾದ ವಿತರಣೆ ಮಾಡೋದು ನಿರ್ಗತಿಕರು, ಬಡವರಿಗಾಗಿ. ಉಳ್ಳವರು ಇಲ್ಲಿ ಆಹಾರ ಸೇವನೆ ಮಾಡಿದ್ರೆ ಅನ್ಯಾಯ ಮಾಡಿದಂತೆ. ಬಡವರು, ಹಸಿದವರ ಅನ್ನವನ್ನು ಕಸಿದುಕೊಂಡಂತೆ. 

Astrology Tips : ಕಿವಿಗೆ ಬಂಗಾರ ಧರಿಸಿದ್ರೆ ಏನೆಲ್ಲ ಲಾಭ ಗೊತ್ತಾ?

ಮನೆಯಲ್ಲಿ ಅಶಾಂತಿ : ಒಂದು ವೇಳೆ ನೀವು ಬಡವರ ಪ್ರಸಾದವನ್ನು ನೀವು ಸೇವನೆ ಮಾಡಿದ್ರೆ ಮನೆಯಲ್ಲಿ ಅಶಾಂತಿ ನೆಲೆಸುತ್ತದೆ. ಸಮರ್ಥ ವ್ಯಕ್ತಿಯಾದ ನೀವು ನಿರ್ಗತಿಕರನ್ನು ಉಪವಾಸ ಕೆಡವಿದಂತಾಗುತ್ತದೆ. 

ಹಣದ ಕೊರತೆ : ಹಣವುಳ್ಳ ವ್ಯಕ್ತಿ ಸಾರ್ವಜನಿಕವಾಗಿ ವಿತರಣೆ ಮಾಡುವ ಪ್ರಸಾದವನ್ನು ಸೇವನೆ ಮಾಡಿದ್ರೆ ಆತನಿಗೆ ಪಾಪ ಪ್ರಾಫ್ತಿಯಾಗುತ್ತದೆ. ಅವನ ಜೀವನದಲ್ಲಿ ವೈಫಲ್ಯಗಳು ಶುರುವಾಗುತ್ತವೆ. ಮನೆಯಲ್ಲಿ ಆಹಾರ ಹಾಗೂ ಹಣದ ಕೊರತೆ ಕಾಡುತ್ತದೆ. 

ಲಕ್ಷ್ಮಿಯ ಕೋಪ : ದೇವಸ್ಥಾನದಲ್ಲಿ ಅಥವಾ ಸಾರ್ವಜನಿಕ ಪ್ರದೇಶದಲ್ಲಿ ನಿರ್ಗತಿಕರಿಗಾಗಿ ವ್ಯವಸ್ಥೆ ಮಾಡಿರುವ ಪ್ರಸಾದವನ್ನು ಉಳ್ಳವರು ಸೇವನೆ ಮಾಡಿದ್ರೆ ಲಕ್ಷ್ಮಿ ಮುನಿಸಿಕೊಳ್ತಾಳೆ. ಲಕ್ಷ್ಮಿ ಅಸಮಾಧಾನಕ್ಕೆ ಇದು ಕಾರಣವಾಗುತ್ತದೆ. ವೃತ್ತಿ, ವ್ಯಾಪಾರದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ವ್ಯಕ್ತಿ ಸದಾ ಹಿನ್ನಡೆ ಎದುರಿಸುತ್ತಾನೆ. ವ್ಯಾಪಾರದಲ್ಲಿ ಕುಸಿತ ಕಂಡುಬರುತ್ತದೆ. 

ಕೃಪೆ ತೋರದ ವಿಷ್ಣು : ಇಂಥ ಜಾಗದಲ್ಲಿ ಭೋಜನ ಮಾಡುವವರಿಗೆ ಮಹಾವಿಷ್ಣುವಿನ ಕೃಪೆ ಸಿಗುವುದಿಲ್ಲ. ವಿಷ್ಣುವಿನ ಕರುಣೆ ಜನರಿಗೆ ಪ್ರಾಪ್ತಿಯಾಗುವುದಿಲ್ಲ. ದಿನದ ಮೂರು ಹೊತ್ತು ಊಟ ಮಾಡುವಷ್ಟು ಹಣ, ಆಹಾರ ನಿಮ್ಮಲ್ಲಿ ಇದೆ ಎಂದಾದ್ರೆ ನೀವು ನಿರ್ಗತಿಕರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಬೇಡಿ.