ಶನಿಯಿಂದಾಗಿ ಈ ರಾಶಿಗಳಿಗೆ ಶಶ ಮಹಾಪುರುಷ ಯೋಗ; ಲಾಭಗಳೇನು?
ಶನಿಯು ಕುಂಭ ರಾಶಿಯಲ್ಲಿ ಕುಳಿತು ಕೆಲವು ರಾಶಿಚಕ್ರಗಳಿಗೆ ಶಶ ಮಹಾಪುರುಷ ಯೋಗ ಸೃಷ್ಟಿಸಿದ್ದಾನೆ. ಈ ಯೋಗವು ವ್ಯಕ್ತಿಯನ್ನು ಭಿಕ್ಷುಕನಿಂದ ರಾಜನಾಗಿಸುವ ಶಕ್ತಿ ಹೊಂದಿದೆ. ಯಾವೆಲ್ಲ ರಾಶಿಗಳಿಗೆ ಈ ಯೋಗವಿದೆ ನೋಡೋಣ.
ಇಂದು ಶನಿವಾರ. ಶನಿ ಗ್ರಹದ ವಾರ. ಶನಿ ಎಂದರೆ ಕೇವಲ ತೊಂದರೆ ಕೊಡುವವನು ಎಂದು ಅವನೆಡೆಗೆ ಅತ್ಯಂತ ಭಯಭಕ್ತಿ ಹೊಂದಿದವರು ಹಲವರು. ಆದರೆ, ಶನಿ ಕೇವಲ ತೊಂದರೆ ಕೊಡುವುದಿಲ್ಲ. ಆತ ಆಶೀರ್ವಾದ ಮಾಡಿದರೆ ಭಿಕ್ಷುಕನು ಕೂಡಾ ರಾಜನಾಗುವ ಯೋಗ ಹೊಂದಬಹುದು. ವ್ಯಕ್ತಿಯನ್ನು ಒಂದು ಶ್ರೇಣಿಯಿಂದ ರಾಜನನ್ನಾಗಿ ಮಾಡುವ ಇಂತಹ ಅನೇಕ ಶನಿ ಯೋಗಗಳಿವೆ. ಅಂಥದೊಂದು ಯೋಗವನ್ನು ಶನಿ ಪ್ರಸ್ತುತ ಕೆಲ ರಾಶಿಗಳಿಗೆ ಸೃಷ್ಟಿಸಿದ್ದಾನೆ. ಅದೇ ಶಶ ಮಹಾಪುರುಷ ಯೋಗ.
ಶನಿಯು ಮಕರ, ಕುಂಭ ಅಥವಾ ತುಲಾ ರಾಶಿಯಲ್ಲಿ ಕೇಂದ್ರ ಸ್ಥಿತನಾದರೆ ಮತ್ತು ಲಗ್ನವು ಬಲವಾಗಿದ್ದರೆ, ಶಶ ಯೋಗವು ಉಂಟಾಗುತ್ತದೆ. ಇದೊಂದು ರೀತಿಯ ರಾಜಯೋಗ. ಜನವರಿ 17ರಂದು, ಶನಿಯು ಕುಂಭ ರಾಶಿಗೆ ಪ್ರವೇಶಿಸಿದ್ದಾನೆ. ಮುಂದಿನ ಎರಡೂವರೆ ವರ್ಷಗಳ ಕಾಲ ಶನಿಯು ಕುಂಭ ರಾಶಿಯಲ್ಲಿ ಇರುತ್ತಾನೆ. ಶನಿಯು ಕುಂಭ ರಾಶಿಯಲ್ಲಿರುವುದರಿಂದ ಶಶ ಮಹಾಯೋಗವು ರೂಪುಗೊಳ್ಳಲಿದೆ. ಇದರ ಬಂಪರ್ ಪ್ರಯೋಜನಗಳನ್ನು ಕೆಲವು ರಾಶಿಚಕ್ರ ಚಿಹ್ನೆಗಳು ಪಡೆಯಲಿದ್ದಾವೆ.
ವೃಷಭ ರಾಶಿ: ವೃಷಭ ರಾಶಿಯವರಿಗೆ ಈ ರಾಜಯೋಗದಿಂದ ವಿಶೇಷ ಲಾಭ ದೊರೆಯಲಿದೆ. ಶನಿಯ ಕೃಪೆಯಿಂದ ನಿಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ನೀವು ಜೀವನದ ಕೆಲವು ಸಮಸ್ಯೆಗಳನ್ನು ಶಾಶ್ವತವಾಗಿ ತೊಡೆದು ಹಾಕಲು ಸಾಧ್ಯವಾಗುತ್ತದೆ. ಈ ಯೋಗದಿಂದ ನೀವು ಎಲ್ಲಿಂದಲಾದರೂ ಹಠಾತ್ ಹಣವನ್ನು ಪಡೆಯಬಹುದು. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ನೀವು ಪಡೆಯುತ್ತೀರಿ.
12 ರಾಶಿಗಳ ಮೇಲೆ Chandra Grahan 2023ರ ಪರಿಣಾಮ ಹೇಗಿರುತ್ತದೆ?
ಮಿಥುನ ರಾಶಿ: ಈ ಯೋಗದಿಂದಾಗಿ ಮಿಥುನ ರಾಶಿಯವರ ಜೀವನದಲ್ಲಿ ಅನೇಕ ಉತ್ತಮ ಬದಲಾವಣೆಗಳನ್ನು ಕಾಣಬಹುದು. ನೀವು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳುವಿರಿ, ಇದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ತೀರ್ಥಯಾತ್ರೆಗೆ ಸಹ ಹೋಗಬಹುದು. ಪ್ರಚಾರದ ವಿಷಯದಲ್ಲಿ ನೀವು ಅನೇಕ ದೊಡ್ಡ ಅವಕಾಶಗಳನ್ನು ಪಡೆಯಲಿದ್ದೀರಿ. ನಿಮ್ಮ ವೈವಾಹಿಕ ಜೀವನದಲ್ಲಿ ನಡೆಯುತ್ತಿರುವ ಪ್ರತಿಯೊಂದು ರೀತಿಯ ಉದ್ವೇಗವೂ ದೂರವಾಗುತ್ತದೆ.
ಸಿಂಹ ರಾಶಿ: ಈ ಯೋಗದ ಪ್ರಭಾವದಿಂದ ಸಿಂಹ ರಾಶಿಯವರಿಗೆ ಶ್ರಮ ಕಡಿಮೆಯಾದರೂ ಉತ್ತಮ ಫಲಿತಾಂಶ ಸಿಗುತ್ತದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಯಾವುದೇ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಾರೆ. ಶಶ ಯೋಗವು ನಿಮಗೆ ಕೆಲಸದ ಸ್ಥಳದಲ್ಲಿ ಉತ್ತಮ ಯಶಸ್ಸನ್ನು ನೀಡುತ್ತದೆ. ಈ ಸಮಯದಲ್ಲಿ, ನೀವು ಭೂಮಿ ಮತ್ತು ಕಟ್ಟಡ ಸಂಬಂಧಿತ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಯಾವುದೇ ವ್ಯವಹಾರದೊಂದಿಗೆ ಸಂಬಂಧ ಹೊಂದಿರುವವರು ಈ ಅವಧಿಯಲ್ಲಿ ದೊಡ್ಡ ಆರ್ಡರ್ ಪಡೆಯಬಹುದು.
ತುಲಾ ರಾಶಿ: ಈ ಯೋಗದ ಪರಿಣಾಮವು ತುಲಾ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಗೋಚರಿಸುತ್ತದೆ. ನೀವು ಮಾಡುವ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ರಾಜಕೀಯಕ್ಕೆ ಸಂಬಂಧಿಸಿದವರು ಈ ಯೋಗದಿಂದ ಉನ್ನತ ಸ್ಥಾನಗಳನ್ನು ತಲುಪಬಹುದು. ಈ ಸಮಯವು ನಿಮಗೆ ಆರ್ಥಿಕ ಲಾಭವನ್ನು ತರಲಿದೆ. ಈ ಸಮಯದಲ್ಲಿ ನೀವು ನಿಮ್ಮ ವೃತ್ತಿಜೀವನದಲ್ಲಿ ಅನೇಕ ಹೊಸ ಅವಕಾಶಗಳನ್ನು ಪಡೆಯುವ ಸಾಧ್ಯತೆಯಿದೆ. ವಿದೇಶದಲ್ಲಿ ಓದುವ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಈ ಸಮಯವು ಅತ್ಯಂತ ಫಲಪ್ರದವಾಗಲಿದೆ.
Grah Gochar May 2023: 5 ರಾಶಿಗಳಿಗೆ ಮಂಗಳಕರ ಮೇ
ಕುಂಭ ರಾಶಿ: ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬರುವುದು ಮತ್ತು ನಿಮ್ಮಲ್ಲಿ ಧನಾತ್ಮಕ ಬದಲಾವಣೆಗಳನ್ನು ಅನುಭವಿಸುವಿರಿ. ಈ ಯೋಗದ ಫಲವಾಗಿ ನಿಮ್ಮ ಆರ್ಥಿಕ ಜೀವನವೂ ಸುಧಾರಿಸುತ್ತದೆ. ನೀವು ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು- ಅದು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಶಿಸ್ತು ಮತ್ತು ಕಠಿಣ ಪರಿಶ್ರಮದ ಬಲದಿಂದ, ನೀವು ಕ್ಷೇತ್ರದಲ್ಲಿ ಮುಂದುವರಿಯುತ್ತೀರಿ ಮತ್ತು ಹುದ್ದೆ ಮತ್ತು ಸಂಬಳದಲ್ಲಿ ಹೆಚ್ಚಳವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ. ಗೌರವದ ಲಾಭವನ್ನೂ ಪಡೆಯುತ್ತೀರಿ.