Asianet Suvarna News Asianet Suvarna News

Astrology Tips : ಕಿವಿಗೆ ಬಂಗಾರ ಧರಿಸಿದ್ರೆ ಏನೆಲ್ಲ ಲಾಭ ಗೊತ್ತಾ?

ಕಿವಿಗೆ ಹಾಕುವ ಆಭರಣ ನಮ್ಮ ಸೌಂದರ್ಯವನ್ನು ಮಾತ್ರ ಹೆಚ್ಚಿಸೋದಿಲ್ಲ. ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಹಿಂದೂ ಧರ್ಮದಲ್ಲಿ ಕಿವಿ ಆಭರಣ ಹಾಗೂ ಬಂಗಾರದ ಆಭರಣಕ್ಕೆ ಮಹತ್ವದ ಸ್ಥಾನವಿದೆ. ಕಿವಿಗೆ ಚಿನ್ನ ಧರಿಸ್ತಿಲ್ಲ ಅಂದ್ರೆ ಇಂದೇ ಧರಿಸೋಕೆ ಶುರು ಮಾಡಿ. ಫಲಿತಾಂಶ ನಿಮಗೆ ತಿಳಿಯುತ್ತೆ.
 

Benefits Of Wearing Gold In Ears
Author
First Published Apr 28, 2023, 5:02 PM IST | Last Updated Apr 28, 2023, 5:02 PM IST

ಭಾರತೀಯ ಸಂಸ್ಕೃತಿಯಲ್ಲಿ ಆಭರಣಕ್ಕೆ ಹೆಚ್ಚಿನ ಮಹತ್ವವಿದೆ. ಆಭರಣ ಧರಿಸೋದನ್ನು ಸಾಂಪ್ರದಾಯವೆಂದು ನಂಬಲಾಗಿದೆ. ಕಿವಿ, ಮೂಗು, ಕಾಲು, ಸೊಂಟ ಹೀಗೆ ದೇಹದ ನಾನಾ ಅಂಗಕ್ಕೆ ಆಭರಣ ಧರಿಸಲಾಗುತ್ತದೆ. ಬಂಗಾರ, ಬೆಳ್ಳಿ, ವಜ್ರ ಸೇರಿದಂತೆ ಅನೇಕ ಲೋಹದ ಆಭರಣಗಳನ್ನು ಬಳಕೆ ಮಾಡಲಾಗುತ್ತದೆ. 

ಭಾರತ (India) ದಲ್ಲಿ ಚಿನ್ನ (Gold) ಪ್ರೇಮಿಗಳ ಸಂಖ್ಯೆ ಹೆಚ್ಚಿದೆ. ಅತಿ ದೊಡ್ಡ ಚಿನ್ನದ  ಮಾರುಕಟ್ಟೆಯನ್ನು ಭಾರತ ಹೊಂದಿದೆ. ಭಾರತದಲ್ಲಿ ಚಿನ್ನವನ್ನು ಬರೀ ಶ್ರೀಮಂತಿಕೆಯ ಸಂಕೇತವಾಗಿ ಧರಿಸೋದಿಲ್ಲ. ಚಿನ್ನದ ಮೇಲೆ ಹೂಡಿಕೆ ಮಾಡೋದನ್ನು ಭಾರತೀಯರು ಇಷ್ಟಪಡ್ತಾರೆ.  ಚಿನ್ನವನ್ನು ಧರಿಸುವುದು ಧಾರ್ಮಿಕ ಮತ್ತು ವೈಜ್ಞಾನಿಕ (Scientific ) ದೃಷ್ಟಿಕೋನದಿಂದ ಲಾಭದಾಯಕವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯದಲ್ಲೂ ಚಿನ್ನಕ್ಕೆ ಬಹಳ ಮಹತ್ವವಿದೆ.  

ಮಕ್ಕಳು ಚಿಕ್ಕವರಿರುವಾಗ್ಲೇ ಅವರ ಕಿವಿ (Ear) ಚುಚ್ಚಲಾಗುತ್ತದೆ. ಕಿವಿಗೆ ಚಿನ್ನದ ಆಭರಣವನ್ನು ಹಾಕಲಾಗುತ್ತದೆ. ಗಂಡು ಮಕ್ಕಳು ದೊಡ್ಡವರಾಗ್ತಿದ್ದಂತೆ ಅದನ್ನು ತೆಗೆದ್ರೆ ಹೆಣ್ಣು ಮಕ್ಕಳು ಚೆಂದದ, ದೊಡ್ಡ ಚಿನ್ನದ ಆಭರಣಗಳನ್ನು ಧರಿಸುತ್ತಾರೆ. ಇದು ಮಹಿಳೆಯರ ಸೌಂದರ್ಯವನ್ನು ದುಪ್ಪಟ್ಟುಗೊಳಿಸುತ್ತದೆ. ಹಿಂದೂ ಧರ್ಮದಲ್ಲಿ ಕಿವಿಗೆ ಚಿನ್ನವನ್ನು ಧರಿಸುವುದು ತುಂಬಾ ಮಂಗಳಕರ ಎಂದು ನಂಬಲಾಗಿದೆ. ಕಿವಿಯಲ್ಲಿ ಚಿನ್ನವನ್ನು ಧರಿಸುವುದರಿಂದ ಆಗುವ ಲಾಭ ಇಲ್ಲಿದೆ. 

ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾದ Gayatri Mantra; ಸಂಶೋಧನೆ ಹೇಳಿದ್ದೇನು?

ಕಿವಿಗೆ ಚಿನ್ನ (Gold) ಧರಿಸೋದ್ರಿಂದ ಆಗುತ್ತೆ ಈ ಎಲ್ಲ ಲಾಭ : 
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳು ವ್ಯಕ್ತಿಯ ದೇಹದ ಪ್ರತಿಯೊಂದು ಭಾಗದ ಮೇಲೆ ಪ್ರಭಾವ ಬೀರುತ್ತವೆ. ಗ್ರಹಗಳು  ದುರ್ಬಲವಾದ್ರೆ ನಮ್ಮ ಜೀವನದಲ್ಲಿ ಸಮಸ್ಯೆ ಎದುರಾಗುತ್ತದೆ. ನಮ್ಮ ಕಿವಿ ಬುಧ ಗ್ರಹಕ್ಕೆ ಸಂಬಂಧಿಸಿದೆ. ನಮಗೆ ಕಿವಿಯಲ್ಲಿ ಯಾವುದೇ ಸಮಸ್ಯೆಯಾದ್ರೂ ಅದು ನಮ್ಮ ಜಾತಕದಲ್ಲಿ ಬುಧ ದುರ್ಬಲನಾಗಿದ್ದಾನೆ ಎಂಬುದನ್ನು ಸೂಚಿಸುತ್ತದೆ. 

ಇದಲ್ಲದೆ ರಾಹು ಕೂಡ ಕೆಟ್ಟ ಸ್ಥಿತಿಯಲ್ಲಿದ್ದರೆ ಅದು ನಮ್ಮ ಕಿವಿ ಆರೋಗ್ಯವನ್ನು ಹಾಳು ಮಾಡುತ್ತದೆ. ಕೇತು ಕೂಡ ಇಲ್ಲಿ ಮುಖ್ಯವಾಗುತ್ತಾನೆ. ಜಾತಕದಲ್ಲಿ ಕೇತು ಸರಿಯಿಲ್ಲವೆಂದ್ರೆ ರೋಗ ನಮ್ಮನ್ನು ಆವರಿಸುತ್ತದೆ. ಒಬ್ಬ ವ್ಯಕ್ತಿಯ ಜಾತಕದಲ್ಲಿ ಕೇತು ಮತ್ತು ರಾಹು ಇಬ್ಬರೂ ಒಟ್ಟಿಗೆ ಪ್ರಭಾವ ಬೀರಿದ್ರೆ ಕಿವಿ ಸಮಸ್ಯೆ ದೊಡ್ಡದಾಗುತ್ತದೆ. ಕಿವಿಗೆ ಸಂಬಂಧಿಸಿದ ಖಾಯಿಲೆ ನಿಮ್ಮನ್ನು ಅಂಟಿಕೊಳ್ಳುತ್ತದೆ. ಬುಧ ಮತ್ತು ರಾಹು ಇಬ್ಬರೂ ಪ್ರಭಾವ ಬೀರಿದ್ರೂ ಕಿವಿ ಖಾಯಿಲೆ ನಿಮ್ಮನ್ನು ಕಾಡುವ ಸಂಭವವಿದೆ. 

ಈ 5 ರಾಶಿ ಹುಡುಗಿಯರು ಹುಟ್ಟಿನಿಂದಲೇ ನಾಯಕರಾಗಿರುತ್ತಾರೆ

ಬಲಪಡೆಯುವ ಬುಧ : ಚಿನ್ನವನ್ನು ನೀವು ಧರಿಸೋದ್ರಿಂದ ಜಾತಕದಲ್ಲಿ ಬುಧದ ಸ್ಥಿತಿ ಸುಧಾರಿಸುತ್ತದೆ. ರಾಹುವಿನ ಕೆಟ್ಟ ಪರಿಣಾಮ ಕೂಡ ಕೊನೆಯಾಗುತ್ತದೆ. 

ಗುರುವಿನ ಆಶೀರ್ವಾದ : ಚಿನ್ನ ಗುರುವನ್ನು ಬಲಗೊಳಿಸುವ ಕೆಲಸ ಮಾಡುತ್ತದೆ. ನೀವು ಕಿವಿಗೆ ಚಿನ್ನದ ಆಭರಣ ಧರಿಸಿದ್ರೆ ಗುರುವಿನ ಆಶೀರ್ವಾದ ನಿಮಗೆ ಸಿಗುತ್ತದೆ. ಬುಧ ಮತ್ತು ಗುರು ಸಂಯೋಜನೆಯಿಂದ ಶುಭ ಲಾಭವಾಗುತ್ತದೆ.

ಕಿವಿ ಆರೋಗ್ಯ (Ear Health) : ಒಬ್ಬ ವ್ಯಕ್ತಿ ಕಿವಿಗೆ ಚಿನ್ನದ ಆಭರಣ ಧರಿಸಿದ್ರೆ ಆತನಿಗೆ ಕಿವಿಗೆ ಸಂಬಂಧಿಸಿದ ಯಾವುದೇ ಖಾಯಿಲೆ ಕಾಡುವುದಿಲ್ಲ. ಕಿವಿ ರೋಗ ಕಡಿಮೆಯಾಗುವ ಜೊತೆಗೆ ಕೇಳುವ ಸಾಮರ್ಥ್ಯ ಹೆಚ್ಚಾಗುತ್ತದೆ. 

ಚುರುಕಾಗುವ ಮೆದುಳು (Brain) : ಕಿವಿಯಲ್ಲಿ ಚಿನ್ನ ಧರಿಸುವುದರಿಂದ ಬುದ್ಧಿಶಕ್ತಿ ಚುರುಕಾಗುತ್ತದೆ. ಕಿವಿಯನ್ನು ಚುಚ್ಚುವುದರಿಂದ ಮೆದುಳಿನ ಶಕ್ತಿಯು ತೀವ್ರಗೊಳ್ಳುತ್ತದೆ. ಚಿನ್ನ ಧರಿಸೋದ್ರಿಂದ ಶಕ್ತಿ ಕೂಡ ಹೆಚ್ಚಾಗುತ್ತದೆ. ಕಿವಿಗೆ ಚಿನ್ನವನ್ನು ಧರಿಸುವುದ್ರಿಂದ ಒತ್ತಡ ಸಮಸ್ಯೆ ದೂರವಾಗುತ್ತದೆ. ಅಲ್ಲದೆ ಮೆದುಳಿನ ಶಕ್ತಿ ಚುರುಕಾಗಬೇಕೆಂದ್ರೆ ನೀವು ಬಂಗಾರದ ಆಭರಣ ಧರಿಸಬೇಕು.

ಕಿವಿಗೆ ಬಂಗಾರ ಧರಿಸೋದ್ರಿಂದ ಆಗುವ ವೈಜ್ಞಾನಿಕ ಲಾಭ : ಕಿವಿಯಲ್ಲಿ ಚಿನ್ನವನ್ನು ಧರಿಸುವುದರಿಂದ ಪಾರ್ಶ್ವವಾಯು, ಅಂಡವಾಯು ಮೊದಲಾದ ಗಂಭೀರ ಕಾಯಿಲೆಗಳು ಕಾಡೋದಿಲ್ಲ.    
 

Latest Videos
Follow Us:
Download App:
  • android
  • ios