ಈ ದಿನಾಂಕದಲ್ಲಿ ಹುಟ್ಟಿದ ಹೆಣ್ಮಕ್ಕಳು ತಂದೆಯ ಪಾಲಿಗೆ ಅದೃಷ್ಟ ದೇವತೆಯರು!

ಸಂಖ್ಯಾಶಾಸ್ತ್ರದ ಪ್ರಕಾರ, ನಾಲ್ಕು ದಿನಾಂಕದಲ್ಲಿ ಜನಿಸಿದ ಹೆಣ್ಮಕ್ಕಳು ತಮ್ಮ ತಂದೆಯ ಪಾಲಿಗೆ ಅದೃಷ್ಟ ದೇವತೆಯರಾಗಿರುತ್ತಾರೆ. ಅದು ಯಾವ ದಿನಾಂಕ? ಯಾವುದು ಈ ಅದೃಷ್ಟ ಸಂಖ್ಯೆ? ಈ ಹುಡುಗಿಯರ ಸ್ವಭಾವ ಎಂಥದ್ದು ನೋಡೋಣ.

Girls with these 4 birth dates are lucky for their father skr

ಜ್ಯೋತಿಷ್ಯ ಶಾಸ್ತ್ರದ ಒಂದು ಪ್ರಮುಖ ವಿಭಾಗ ಸಂಖ್ಯಾಶಾಸ್ತ್ರ(numerology)ವಾಗಿದೆ. ಸಂಖ್ಯೆಗಳು ನಮಗೆ ಪ್ರತಿ ಕೆಲಸಕ್ಕೂ ಬಳಕೆಯಾಗುತ್ತವೆ. ಪ್ರಪಂಚದ ಪ್ರತಿ ವಿಷಯವೂ ಸಂಖ್ಯೆಗಳ ಆಧಾರದ ಮೇಲೆ ನಡೆಯುತ್ತವೆ. ಸಂಖ್ಯೆಗಳು ಪ್ರತಿ ಕ್ಷಣದ, ಪ್ರತಿ ನಿಮಿಷದ ಆಧಾರವಾಗಿವೆ. ಜ್ಯೋತಿಷ್ಯದ ವಿಷಯಕ್ಕೇ ಬಂದರೆ 9 ಗ್ರಹಗಳು, 12 ರಾಶಿಗಳು, 27 ನಕ್ಷತ್ರಗಳು, 109 ಪಾದಗಳು... ಇವೆಲ್ಲವೂ ಸಂಖ್ಯೆ ಆಧಾರಿತ. ನಾವು ಹುಟ್ಟಿದ ಸಮಯ, ದಿನಾಂಕವೂ ಸಂಖ್ಯೆ ಆಧಾರಿತ. ಹಾಗಾಗಿ, ಸಂಖ್ಯಾಶಾಸ್ತ್ರವು ನಮ್ಮ ಜೀವನದಲ್ಲಿ ಬಹಳ ಪ್ರಾಮುಖ್ಯತೆ ಪಡೆದಿದೆ. 

ಸಂಖ್ಯಾಶಾಸ್ತ್ರದಲ್ಲಿ ವ್ಯಕ್ತಿ ಹುಟ್ಟಿದ ದಿನಾಂಕದ ಅನುಗುಣವಾಗಿ ಭವಿಷ್ಯ ಹೇಳಲಾಗುತ್ತದೆ. ಈ ಸಂಖ್ಯೆ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ ಮತ್ತು ಜೀವನದ ಪ್ರತಿಯೊಂದು ಅಂಶಗಳ ಬಗ್ಗೆಯೂ ತಿಳಿಯಬಹುದಾಗಿದೆ. ಇಂದು ಯಾವ ದಿನಾಂಕದಲ್ಲಿ ಹುಟ್ಟಿದ ಹೆಣ್ಣುಮಕ್ಕಳು, ಯಾವ ಅದೃಷ್ಟ ಸಂಖ್ಯೆಯನ್ನು ಪಡೆದವರು ತಮ್ಮ ತಂದೆ(father)ಗೆ ಭಾಗ್ಯವನ್ನು ತರುತ್ತಾರೆ ಎಂಬ ಬಗ್ಗೆ ನೋಡೋಣ. 

ದಿನಾಂಕಗಳು
ಸಂಖ್ಯೆ 3 ಯಾರದ್ದಾಗಿರುತ್ತದೋ ಅಂಥ ಹುಡುಗಿಯರು ತಮ್ಮ ತಂದೆಗೆ ಅದೃಷ್ಟ(luck) ದೇವತೆಯರಾಗುತ್ತಾರೆ. ಹುಟ್ಟಿದ ದಿನಾಂಕ 3, 12, 21 ಮತ್ತು 30 ಆಗಿರುವ ಹುಡುಗಿಯರ ಸಂಖ್ಯೆ  3 ಆಗಿರುತ್ತದೆ. ಈ ರಾಡಿಕ್ಸ್‌ನ ಹುಡುಗಿಯರನ್ನು ಅದೃಷ್ಟದಲ್ಲಿ ಶ್ರೀಮಂತರು ಎಂದು ಪರಿಗಣಿಸಲಾಗುತ್ತದೆ. ಅವರು ಬುದ್ಧಿವಂತರು(intelligent), ದೃಢ ನಿಶ್ಚಯವುಳ್ಳವರು, ಶ್ರಮಶೀಲರು, ಶ್ರಮಜೀವಿಗಳು ಮತ್ತು ಸ್ವಾಭಿಮಾನಿಗಳು. ಒಮ್ಮೆ ಆಕೆ ಕೆಲವು ಕೆಲಸಗಳನ್ನು ಮಾಡಲು ಯೋಚಿಸಿದರೆ, ಅವಳು ಅದನ್ನು ಮಾಡಿ ಮುಗಿಸುವವರೆಗೂ ವಿಶ್ರಮಿಸುವುದಿಲ್ಲ. 3 ರ್ಯಾಡಿಕ್ಸ್‌ನ ಹುಡುಗಿಯರು ಕಠಿಣ ಪರಿಶ್ರಮದಿಂದ ವೃತ್ತಿಯಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತಾರೆ. ಹಾಗೂ ಬೇಗನೆ ತಮ್ಮ ಸ್ಥಾನವನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ. ಅವರು ಎಲ್ಲವನ್ನೂ ಸ್ವಂತವಾಗಿ ಮಾಡಲು ಬಯಸುತ್ತಾರೆ. ಈ ಹುಡುಗಿಯರು ಯಾರ ಸಹಾಯವನ್ನೂ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ಹಾಗೆಯೇ ಇವರು ತಮ್ಮ ಬಗ್ಗೆ ಸಣ್ಣದೊಂದು ಖಂಡನೆಯನ್ನೂ ಸಹಿಸುವುದಿಲ್ಲ.

ಲೈಂಗಿಕ ಜೀವನ ಚೆನ್ನಾಗಿರಬೇಕೇ? ಈ ವಾಸ್ತು ಸಲಹೆ ಪರಿಗಣಿಸಿ

ನಿರ್ಭೀತರು
ಲಕ್ಕಿ ನಂಬರ್ 3 ಹೊಂದಿರುವ ಹುಡುಗಿಯರಿಗೆ ಸ್ನೇಹಿತರು(friends) ಹೆಚ್ಚು. ಇವರು ಸುಲಭವಾಗಿ ಎಲ್ಲರೊಂದಿಗೆ ಬೆರೆಯಬಲ್ಲರು. ಧೈರ್ಯಶಾಲಿಗಳು ಮತ್ತು ನಿರ್ಭೀತರಾಗಿರುವ ಇವರು ಯಾವುದಕ್ಕಾದರೂ ಮುನ್ನುಗ್ಗಬಲ್ಲರು.. ಅವರಲ್ಲಿ ಅಪಾರ ವಿಶ್ವಾಸವಿದೆ. ಅವರು ತಮ್ಮ ಅದೃಷ್ಟಕ್ಕಿಂತ ಹೆಚ್ಚಾಗಿ ಪರಿಶ್ರಮವನ್ನು ನಂಬುತ್ತಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಉನ್ನತ ಸ್ಥಾನಗಳನ್ನು ಸಾಧಿಸುತ್ತಾರೆ. ಅವರಿಗೆ ಎಲ್ಲೆಡೆ ಗೌರವ ಸಿಗುತ್ತದೆ. ಅವರು ಹಠಮಾರಿ ಮತ್ತು ಭಾವೋದ್ರಿಕ್ತರು. ಒಂದೊಮ್ಮೆ ಯಾವುದಾದರೊಂದು ಹಠ ಹಿಡಿದರೆ ಅದನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ.

Rules ಫಾಲೋ ಮಾಡೋದು ಈ 5 ರಾಶಿಯವರ ಜಾಯಮಾನವಲ್ಲ!

ಮಹತ್ವಾಕಾಂಕ್ಷಿಗಳು
ಈ ರಾಡಿಕ್ಸ್‌ನ ಹುಡುಗಿಯರು ಬಹಳ ಮಹತ್ವಾಕಾಂಕ್ಷೆ(ambitious)ಯುಳ್ಳವರು. ಚಿಕ್ಕಂದಿನಿಂದಲೇ ಎತ್ತರದ ಕನಸು ಕಾಣುವವರು ಮತ್ತು ಯಾವಾಗಲೂ ತನ್ನದೇ ಆದ ಗುರುತನ್ನು ರೂಪಿಸುವಲ್ಲಿ ತೊಡಗಿಸಿಕೊಂಡಿರುತ್ತಾರೆ. ಇಷ್ಟೆಲ್ಲ ಚೆಂದದ ಗುಣ ಸ್ವಭಾವಗಳನ್ನು ಹೊಂದಿರುವ ಹುಡುಗಿಯರು ತಮ್ಮ ತಂದೆಗೂ ಅದೃಷ್ಟ ದೇವತೆಯರಾಗಿರುತ್ತಾರೆ. ಏಕೆಂದರೆ, ಇವರು ವಾಸಿಸುವ ಸ್ಥಳಗಳಲ್ಲಿ ಹಣ ಮತ್ತು ಧಾನ್ಯ(money and grains)ಗಳ ಕೊರತೆಯಿರುವುದಿಲ್ಲ. ಇವರ ಕಾಲ್ಗುಣದಿಂದ ತಂದೆಯ ವ್ಯಾಪಾರ, ವಹಿವಾಟು ಸೇರಿದಂತೆ ವೃತ್ತಿ ಏನೇ ಇರಲಿ ಅದರಲ್ಲಿ ಪ್ರಗತಿ ಹೆಚ್ಚುತ್ತದೆ. ಈ ಹೆಣ್ಣುಮಗುವಿನ ಕಾರಣಕ್ಕೆ ತಂದೆಯ ಪ್ರತಿಷ್ಠೆಯೂ ಸಮಾಜದಲ್ಲಿ ಹೆಚ್ಚುತ್ತದೆ. 
 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios