Asianet Suvarna News Asianet Suvarna News

Hindu Wedding : ಮದುವೆಯಲ್ಲಿ ಕೆಂಪು ಬಣ್ಣವನ್ನೇಕೆ ಧರಿಸ್ಬೇಕು?

ಹಿಂದೂ ಧರ್ಮದಲ್ಲಿ ಬಣ್ಣಕ್ಕೆ ಆದ್ಯತೆಯಿದೆ. ಪೂಜೆ ಸಮಯದಲ್ಲಿ, ಸಾವಿನ ಮನೆಯಲ್ಲಿ ಹೀಗೆ ಬೇರೆ ಬೇರೆ ಸಂದರ್ಭದಲ್ಲಿ ಯಾವ ಬಣ್ಣದ ಬಟ್ಟೆ ಧರಿಸ್ಬೇಕು ಎಂಬುದನ್ನು ಹಿಂದೂ ಧರ್ಮದಲ್ಲೇ ಹೇಳಲಾಗಿದೆ.  ಮದುವೆಯಲ್ಲಿ ವಧು ಯಾವ್ಯಾವುದೋ ಬಣ್ಣ ಧರಿಸುವಂತಿಲ್ಲ. ಅದಕ್ಕೂ ನಿಯಮವಿದೆ.

Why Do Hindu Bride Prefer To Wear Red Dress In Her Wedding
Author
First Published May 10, 2023, 2:45 PM IST | Last Updated May 10, 2023, 2:45 PM IST

ಭಾರತೀಯ ವಿವಾಹಗಳು ಸದಾ ಸುದ್ದಿಯಲ್ಲಿರುತ್ತವೆ. ಪ್ರಾಚೀನ ಕಾಲದಿಂದ ನಡೆದುಕೊಂಡು ಬಂದ ಪದ್ಧತಿ, ಸಂಪ್ರದಾಯಗಳನ್ನು ಈಗ್ಲೂ ಕೆಲವರು ಆಚರಿಸಿಕೊಂಡು ಬರುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಮದುವೆ ಸಮಯದಲ್ಲಿ ವಧು-ವರರು ಯಾವ ಬಟ್ಟೆ ಧರಿಸಬೇಕು ಎಂಬುದ್ರಿಂದ ಹಿಡಿದು ಮದುವೆ ಎಷ್ಟು ದಿನ ನಡೆಯಬೇಕು ಎಂಬುದೆಲ್ಲ ಸಂಪ್ರದಾಯದಂತೆ ನಡೆಯುತ್ತಿತ್ತು. ಈಗ ಕೆಲ ಪದ್ಧತಿಗಳಲ್ಲಿ ಬದಲಾವಣೆಯನ್ನು ನಾವು ಕಾಣಬಹುದು. ಮದುವೆ ಸಂದರ್ಭದಲ್ಲಿ  ವಧು ಕೆಂಪು ಬಣ್ಣದ ಬಟ್ಟೆ ಧರಿಸುವುದು ಕಡ್ಡಾಯವಾಗಿತ್ತು. ಆದ್ರೆ ಈಗ ಹುಡುಗಿಯರು ನೀಲಿ, ಹಸಿರು ಸೇರಿದಂತೆ ಬೇರೆ ಬಣ್ಣದ ಬಟ್ಟೆಯನ್ನು ಧರಿಸುತ್ತಾರೆ. 

ಪ್ರಾಚೀನ ಕಾಲದಿಂದಲೂ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಈ ಆಚರಣೆಗಳ ಹಿಂದೆ ಹಲವು ವೈಜ್ಞಾನಿಕ (Scientific) ಹಾಗೂ ಧಾರ್ಮಿಕ ಕಾರಣವಿದೆ. ನಾವಿಂದು ಮದುವೆ ವೇಳೆ ಕೆಂಪು (Red) ಬಣ್ಣದ ಬಟ್ಟೆಯನ್ನೇ ಏಕೆ ಧರಿಸಬೇಕು ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಕೆಂಪು ಬಣ್ಣ (Color) ದ ಬಟ್ಟೆ ಧರಿಸಲು ಧಾರ್ಮಿಕ ಕಾರಣ ಏನು ಗೊತ್ತಾ? : ಹಿಂದೂ (Hindu) ಧರ್ಮದಲ್ಲಿ ದೇವರು ಮತ್ತು ದೇವತೆಗಳನ್ನು ಸಾಕ್ಷಿಯಾಗಿ ಪರಿಗಣಿಸಿ, ವಧು ಮತ್ತು ವರರು ಪರಸ್ಪರ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದರು. ಮದುವೆಗಳಲ್ಲಿ ಕೆಂಪು, ಹಳದಿ, ಹಸಿರು ಮುಂತಾದ ಶುಭ ಬಣ್ಣಗಳನ್ನೇ ಬಳಸಲಾಗುತ್ತಿತ್ತು. ಈ ಬಣ್ಣಗಳನ್ನು ಧರಿಸಿದ್ರೆ ದೇವರ ಆಶೀರ್ವಾದ ಸಿಗುತ್ತದೆ ಎಂದು ಅವರು ನಂಬಿದ್ದರು. ಶಕ್ತಿ, ಪ್ರೀತಿ, ಶೌರ್ಯ, ವಾತ್ಸಲ್ಯದ ಸಂಕೇತ ತಾಯಿ ದುರ್ಗೆ. ಶಿವನ ಪತ್ನಿ ಪಾರ್ವತಿಯ ಇನ್ನೊಂದು ರೂಪವಾಗಿರುವುದರಿಂದ ತಾಯಿ ದುರ್ಗೆ ಯಾವಾಗಲೂ ಕೆಂಪು ಸೀರೆ ಧರಿಸಿ, ಶೃಂಗಾರ ಮಾಡಿಕೊಂಡು, ಸಿಂಧೂರವನ್ನಿಟ್ಟುಕೊಳ್ಳುತ್ತಾಳೆ. ತಾಯಿ ದುರ್ಗೆಯನ್ನು ವಿವಾಹಿತ ಮಹಿಳೆಯರಿಗೆ ಹೋಲಿಸಲಾಗುತ್ತದೆ. ಮದುವೆಯ ನಂತರ ವಿವಾಹಿತ ಮಹಿಳೆಯರಿಗೆ ಕೆಂಪು ಬಣ್ಣದ ಪ್ರಾಮುಖ್ಯತೆ ಹೆಚ್ಚಾಗುತ್ತದೆ. ಮದುವೆ ಸಂದರ್ಭದಲ್ಲಿ ಹಾಗೂ ವಿವಾಹದ ನಂತ್ರ ಮಹಿಳೆ ಕೆಂಪು ಬಣ್ಣವನ್ನು ಧರಿಸಬೇಕು ಎನ್ನಲಾಗುತ್ತದೆ. ವಿವಾಹಿತ ಮಹಿಳೆಯ ಮೇಲೆ ತಾಯಿ ಪಾರ್ವತಿಯ ಆಶೀರ್ವಾದ ಯಾವಾಗಲೂ ಇರಬೇಕೆಂದ್ರೆ ಕೆಂಪು ಬಣ್ಣಕ್ಕೆ ಆದ್ಯತೆ ನೀಡಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. 

Sindhi Wedding : ಸಿಂಧಿ ಮದುವೆಯಲ್ಲಿದೆ ವಿಚಿತ್ರ ಪದ್ಧತಿ

ಪ್ರೀತಿಯ ಸಂಕೇತ ಕೆಂಪು : ಇನ್ನು ಎಲ್ಲರಿಗೂ ತಿಳಿದಿರುವಂತೆ ಪ್ರೀತಿಯ ಸಂಕೇತ ಕೆಂಪು. ಕೆಂಪು ಬಣ್ಣದ ಪ್ರಾಮುಖ್ಯತೆಯು ವಿಭಿನ್ನ ಜನರಿಗೆ ವಿಭಿನ್ನವಾಗಿರುತ್ತದೆ. ಕೆಂಪು ಬಣ್ಣವನ್ನು ಅನೇಕ ಸ್ಥಳಗಳಲ್ಲಿ ಪ್ರೀತಿ, ಸಹಾನುಭೂತಿ, ಉತ್ಸಾಹ, ಸಮೃದ್ಧಿ ಮತ್ತು ಆಶೀರ್ವಾದದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕೆಲವರು ಕೆಂಪನ್ನು ವೈವಾಹಿಕ ಜೀವನದ ಪಯಣದ ಸಂಕೇತ ಎಂದೂ ಪರಿಗಣಿಸುತ್ತಾರೆ.  

ಸಂತೋಷಕ್ಕೆ ಕೆಂಪು ಬಣ್ಣ ಸಾಕ್ಷಿ : ಕೆಂಪು ಬಣ್ಣವನ್ನು ಮಂಗಳ ಗ್ರಹದ ಬಣ್ಣವೆಂದು ಪರಿಗಣಿಸಲಾಗುತ್ತದೆ. ಈ ಗ್ರಹವು ಜ್ಯೋತಿಷ್ಯದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ವೈವಾಹಿಕ ಜೀವನದಲ್ಲಿ ಮಂಗಳ ಗ್ರಹ, ಪ್ರೀತಿ, ತಿಳುವಳಿಕೆ, ಸಂತೋಷ, ಸಮೃದ್ಧಿ ಸೇರಿದಂತೆ ಎಲ್ಲಾ ಮಂಗಳಕರ ಫಲ ನೀಡುತ್ತದೆ. ಸಂಗಾತಿ ಮಧ್ಯೆ ಬಂಧವನ್ನು ಗಟ್ಟಿಗೊಳಿಸುವ ಕೆಲಸವನ್ನು ಇದು ಮಾಡುತ್ತದೆ. 

ಧನು, ಕರ್ಕಾಟಕ ರಾಶಿಯವರು ಮದುವೆಯಾದರೆ ದಾಂಪತ್ಯ ಜೀವನ ಹೇಗಿರುತ್ತೆ?

ಎಲ್ಲರಿಂದ ಪ್ರತ್ಯೇಕಗೊಳಿಸುತ್ತೆ ಕೆಂಪು ಬಣ್ಣ : ಮದುವೆ ಸಮಯದಲ್ಲಿ ಎಲ್ಲರ ಗಮನ ವಧು ಮತ್ತು ವರರ ಮೇಲಿರುತ್ತದೆ. ಮದುವೆ ಸಮಯದಲ್ಲಿ ವಧು - ವರರು ಅತ್ಯಂತ ಸುಂದರವಾಗಿ ಮತ್ತು ವಿಭಿನ್ನವಾಗಿ ಕಾಣಬೇಕು. ಗಾಢ ಬಣ್ಣದ ಬಟ್ಟೆ ಧರಿಸಿದ್ರೆ ಅವರು ಭಿನ್ನವಾಗಿ ಕಾಣ್ತಾರೆ. ಕೆಂಪು ಬಣ್ಣ ಅವರನ್ನು ಪ್ರತ್ಯೇಕಗೊಳಿಸುತ್ತದೆ.  ವೈಜ್ಞಾನಿಕ ದೃಷ್ಟಿಕೋನದಿಂದ ನೋಡೋದಾದ್ರೆ ಕೆಂಪು ಬಣ್ಣ  ಅತ್ಯಧಿಕ ತರಂಗಾಂತರವನ್ನು ಹೊಂದಿರುತ್ತದೆ. ಈ ಕಾರಣದಿಂದಾಗಿ ಅದನ್ನು ನಾವು ದೂರದಿಂದಲೇ ಸುಲಭವಾಗಿ ಗುರುತಿಸಬಹುದಾಗಿದೆ. 

Latest Videos
Follow Us:
Download App:
  • android
  • ios