ಧನು, ಕರ್ಕಾಟಕ ರಾಶಿಯವರು ಮದುವೆಯಾದರೆ ದಾಂಪತ್ಯ ಜೀವನ ಹೇಗಿರುತ್ತೆ?
ಕರ್ಕಾಟಕ ಮತ್ತು ಧನು (Sagittarius) ರಾಶಿಯವರು ಪ್ರೀತಿಯ ಹೊಂದಾಣಿಕೆ ಬಗ್ಗೆ ನಾವಿಲ್ಲಿ ಹೇಳಲು ಹೊರಟಿದ್ದೇವೆ. ಈ ಎರಡು ರಾಶಿಗಳ ಸಂಬಂಧ ಬೆಳೆಯಲು, ಪ್ರಬುದ್ಧವಾಗಿ ರೂಪಗೊಳ್ಳಲು ಸಮಯ ಬೇಕು. ಕರ್ಕಾಟಕ ರಾಶಿಯವರು ಮುಕ್ತ ಭಾವನೆ (Open Minded) ಹೊಂದಿದ್ದು, ಮೃಧು ಸ್ವಭಾವದಾಗಿರುತ್ತಾರೆ.
ದಾಂಪತ್ಯದಲ್ಲಿ ಹೊಂದಿಕೆ ಎಂಬುವುದು ಕಷ್ಟ. ಎಲ್ಲಿಯೋ ಹುಟ್ಟಿ, ಮತ್ತೆಲ್ಲೋ ಬೆಳೆದ ಹೆಣ್ಣು ಗಂಡು ಜೊತೆಯಾಗಿ ಬಾಳಿದರೂ ಒಬ್ಬರಿಗೊಬ್ಬರು ಪ್ರೀತಿ, ಗೌರವಾದರಗಳಿಂದ ನೋಡುವುದು ಅಂದು ಕೊಂಡಷ್ಟು ಸುಲಭವಲ್ಲ. ಎಲ್ಲವೂ ಚೆಂದವಾಗಿಯೇ ಕಂಡರೂ ಮದುವೆಯಾದ ಮೇಲೆ ಒಂದೊಂದೇ ವೀಕ್‌ನೆಸ್ (weakness)ಕಾಣಿಸಿಕೊಳ್ಳಲು ಶುರುವಾಗುತ್ತದೆ. ಜಗಳ ಶುರು. ದಾಂಪತ್ಯದಲ್ಲಿ ಕ್ರಮೇಣ ಬಿರುಕು. ಇದುವೇ ಡಿವೋರ್ಸಿಗೂ (divorce)ಕಾರಣವಾಗಬಹುದು ಅಥವಾ ಒಟ್ಟಾಗಿದ್ದರೂ ಮನಸ್ಸು ಮಾರು ದೂರವಾಗಿರುತ್ತದೆ. ಅದಕ್ಕೆ ಹಿರಿಯರು ಜಾತಕ, ಗೋತ್ರ, ರಾಶಿ, ನಕ್ಷತ್ರ ಎಂಬೊಂದಿಷ್ಟು ಪದ್ಧತಿ ತಂದಿದ್ದು, ಹುಡುಗ-ಹುಡಿಗ ಹಸೆಮಣೆ ಏರುವಾಗ ಇವೆಲ್ಲವೂ ಹೊಂದಿಕೆಯಾಗುವಂತೆ ನೋಡಿಕೊಳ್ಳುತ್ತಾರೆ. ಅದಕ್ಕಾಗಿಯೇ ಜಾತಕಕ್ಕೆ ಅಷ್ಟು ಮಹತ್ವ ಕೊಡೋದು.
ಕುಟುಂಬ, ಸಮಾಜ, ಸಂಸ್ಕೃತಿ ಎಲ್ಲವೂ ಹೊಂದಿಕೆಯಾಗುತ್ತೆ ಎಂದಾದ ಮೇಲೆಯೇ ಗಂಡು ಹೆಣ್ಣು ಸಾವಿರಾರು ಮಂದಿಯ ಸಮ್ಮುಖದಲ್ಲಿ ಪಾಣಿಗ್ರಹಣ ಮಾಡಿ, ನಾತಿಚರಾಮಿ ಎಂದು ದಾಂಪತ್ಯಕ್ಕೆ ಕಾಲಿಡುತ್ತಾರೆ. ಸಪ್ತಪದಿ(saptapadi)ತುಳಿದು, ಅರುಂಧತಿ ನಕ್ಷತ್ರ ನೋಡಿ, ಅಗ್ನಿ ಸಾಕ್ಷಿಯಾಗಿ ಸತಿ ಪತಿಯಾಗುವ ಗಂಡು-ಹೆಣ್ಣು ಏಳೇಳು ಜನ್ಮಕ್ಕೂ ಜತೆಯಾಗಿ ಸಾಗೋಣವೆಂದು ಸಪ್ತಪದಿ ತುಳಿದು ಒಂದಾಗುವ ಜೋಡಿ ಅದು ಹೇಗಪ್ಪಾ ಬೇರೆ ಬೇರೆಯಾಗುತ್ತೆ ಎನ್ನುವುದೇ ಅರ್ಥವಾಗೋಲ್ಲ. ಒಟ್ಟಿನಲ್ಲಿ ಜೀವನದ ಬಂಡಿ ಸಾಗಲು ಜೋಡಿಗಳು ರಾಶಿಯೂ ಮುಖ್ಯ ಅನ್ನೋದನ್ನು ಮತ್ತೆ ಹೇಳ ಬೇಕಾಗಿಲ್ಲ.
ಎಂಥದ್ದೇ ಸನ್ನಿವೇಶದಲ್ಲೂ ಸಂಗಾತಿಗೆ ಸಾಥ್ ನೀಡ್ತಾರೆ ಈ ರಾಶಿಯವ್ರು
ಹೊಂದಿಕೊಂಡು ಹೋಗುವಂತ ಸಂಗಾತಿಯನ್ನು ಹುಡುಕುವುದು, ಅವರೊಂದಿಗೆ ಪ್ರೀತಿಯಲ್ಲಿ ಬೀಳುವುದು, ಮತ್ತು ನಂತರ ಮದುವೆಯಾಗುವುದು ಅದಕ್ಕೆ ಅಲ್ವಾ? ಕರ್ಕಾಟಕ ಮತ್ತು ಧನು (Sagittarius) ರಾಶಿಯವರು ಪ್ರೀತಿಯ ಹೊಂದಾಣಿಕೆ ಬಗ್ಗೆ ನಾವಿಲ್ಲಿ ಹೇಳಲು ಹೊರಟಿದ್ದೇವೆ. ಈ ಎರಡು ರಾಶಿಗಳ ಸಂಬಂಧ ಬೆಳೆಯಲು, ಪ್ರಬುದ್ಧವಾಗಿ ರೂಪಗೊಳ್ಳಲು ಸಮಯ ಬೇಕು. ಕರ್ಕಾಟಕ ರಾಶಿಯವರು ಮುಕ್ತ ಭಾವನೆ (Open Minded) ಹೊಂದಿದ್ದು, ಮೃಧು ಸ್ವಾಭಾವದಾಗಿರುತ್ತಾರೆ. ಧನು ರಾಶಿಯವರದ್ದೂ ಡೇರ್ ಸ್ವಭಾವ. ಯಾವುದಕ್ಕೂ ತೆಲೆ ಕೆಡಿಸಿಕೊಳ್ಳದೇ, ಯಾರಿಗೂ ಉತ್ತರಿಸಲೂ ಇಷ್ಟಪಡುವ ಜಾಯಮಾನ ಇವರದ್ದಲ್ಲ. ಗುರು ಧನುರಾಶಿಯ ಮೂಸ ಗ್ರಹವಾಗಿದ್ದು, ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ಬಯಸುವ ಗುಣ ಹೊಂದಿರುತ್ತಾರೆ. ಕರ್ಕಾಟಕ(cancer)ರಾಶಿಯವರು ತಮ್ಮ ಪ್ರೀತಿಯಲ್ಲಿಯೇ ಮನೆ ಕಟ್ಟುತ್ತಾ ಅಲ್ಲಿಯೇ ಜೀವನ ಸವೆಸಲು ಬಯಸೋದೇ ಹೆಚ್ಚು. ಧನು ಮತ್ತು ಕಟಕ ರಾಶಿಯವರಿಬ್ಬರಿಗೂ ಸ್ವಲ್ಪ ತಾಳ್ಮೆ ಇದ್ದರೆ ಸಾಕು, ಒಳ್ಳೆಯ ಜೋಡಿಯಾಗುವುದರಲ್ಲಿ ಅನುಮಾನವೇ ಇಲ್ಲ. ಇಬ್ಬರೂ ಸಂಬಂಧದಲ್ಲಿ ಕಾಲಕ್ರಮೇಣ ಪರಸ್ಪರ ಅರಿತು ಮುಂದೆ ಸಾಗುತ್ತಾರೆ. ಕಟಕ ರಾಶಿಯವರಿಗೆ ಭಾವನಾತ್ಮಕ ಭದ್ರತೆ ಇದೆ ಎಂಬ ತೃಪ್ತಿ ಒಂಥರಾ ಖುಷಿ ಕೊಡುತ್ತೆ. ಇಂಥವರಿಗೆ ಧನು (Sagittarius) ರಾಶಿಯವರು ಮುದ ನೀಡಬಲ್ಲರು. ಇದರಿಂದ ಕರ್ಕಾಟಕ(cancer)ಮತ್ತು ಧನುರಾಶಿ ಜೋಡಿ ಕ್ರಮೇಣ ಸಂಬಂಧವನ್ನು ಸುಧಾರಿಸಿಕೊಂಡು, ಒಬ್ಬರಿಗೊಬ್ಬರು ಅರಿತು, ಮಾದರಿ ಜೋಡಿಗಳಾಗುತ್ತಾರೆ. ಧನು ರಾಶಿಯವರು ಕಟಕ ರಾಶಿಯವರಿಗೆ ನೀಡುವ ಎಮೋಷನಲ್ ಸಪೋರ್ಟ್ ಮಾತ್ರ ಬೇಕೇ ಬೇಕು. ಅಕಸ್ಮಾತ್ ಇಲ್ಲಿ ಏನಾದರೂ ಎಡವಟ್ಟಾದರೆ ಈ ರಾಶಿಗಳ ಸಂಬಂಧ ಹದಗೆಡುವುದರಲ್ಲಿ ಅನುಮಾನವೇ ಇಲ್ಲ.
Weekly Love Horoscope: ಈ ರಾಶಿಯವರು ಪ್ರೇಮ ನಿವೇದನೆಯನ್ನು ಈ ವಾರ ಮುಂದೂಡುವುದು ಉತ್ತಮ!
ಕರ್ಕಾಟಕ ಮತ್ತು ಧನುರಾಶಿಯ ಜಾತಕ ಹೊಂದಾಣಿಕೆ ಅತ್ಯಂತ ಕ್ರಿಯಾಶೀಲವಾಗಿದೆ. ಲೈಫ್‌ನ ಪ್ರತಿಯೊಂದು ಸ್ಟೆಪ್‌ನಲ್ಲಿ ಮುನ್ನುಗ್ಗುವ ಆಟಿಟ್ಯೂಡ್ (attitude),ಲವ್ ಲೈಫ್‌ನಲ್ಲು ಕಾಣುತ್ತದೆ. ನಿಮ್ಮ ಲೈಫ್‌ನಲ್ಲಿ ಯಾವುದೇ ವಿಷಯಗಳನ್ನು ನೆಗ್ಲೇಟ್(Neglect)ಮಾಡಲು ಇಷ್ಟ ಪಡಲ್ಲ. ನಿಮ್ಮ ಪಾರ್ಟನರ್ ಜತೆಗಿನ ಲವ್ ಟರ್ಮ್ಸ್ ಸೆಟಿಸ್‌ಪೈಡಾಗಿರುತ್ತೆ . ನಿಮ್ಮ ಸಂಗಾತಿಗಾಗಿ ವೇಟ್ ಮಾಡುವುದರ ಜತೆಗೆ ಸಂಬಂಧವು ಗಟ್ಟಿಯಾಗಲು ರೊಮ್ಯಾಂಟಿಕ್ (Romantic) ವಾತಾವರಣ ಸೃಷ್ಟಿಮಾಡಲು ಪ್ರಯತ್ನಿಸುತ್ತಿರಿ. ಹಾಗೇ ರಿಲೇಶನ್ ಶಿಪ್‌ನಲ್ಲಿ ಲೇಜಿನೆಸ್ ನಿಮ್ಮ ಸಂಗಾತಿ ಇಷ್ಟಪಡುವುದಿಲ್ಲ, ಇದು ನಿಮ್ಮ ಗಮನಕ್ಕೆ ಬರದಿರಬಹುದು. ಅದಕ್ಕಾಗಿ ನೀವು ಜವಾಬ್ದಾರಿಯನ್ನು ಅರಿತು ಲೇಸಿನೆಸ್ ಬಿಟ್ಟು ಸಂಬಂಧದಲ್ಲಿ ಹೊಸ ಹೆಜ್ಜೆಯನ್ನು ಇಟ್ಟರೆ ನಿಮ್ಮಲ್ಲಿನ ಮೆಚ್ಯುರಿಟಿಯನ್ನು ಸಂಗಾತಿ ಪ್ರೀತಿಯಿಂದ ಸ್ವಾಗತಿಸುತ್ತಾರೆ. ಇದರಿಂದ ಪಾರ್ಟನರ್ ಜತೆ ಇನ್ನಷ್ಟು ರೋಮ್ಯಾಂಟಿಕ್ ಆಗುವುದರಿಂದ ಸಂಗಾತಿಗೆ ಮತ್ತಷ್ಟು ಹತ್ತಿರವಾಗುತ್ತಿರಿ.