ಯಾವ ರಾಶಿಯ ಹುಡುಗ ಸಂಗಾತಿಯಾಗಿ ಹೇಗೆ? ಖಾಸಗಿ ಬದುಕಲ್ಲಿ ಆತ ಹೇಗೆ?
ನಿಮ್ಮ ರಹಸ್ಯಗಳು ಯಾರಿಗೂ ತಿಳಿದಿಲ್ಲ ಎಂದು ನೀವಂದುಕೊಂಡಿರಬಹುದು. ಆದರೆ, ನಿಮ್ಮ ರಾಶಿಯೇ ನಿಮ್ಮ ಬಗ್ಗೆ ಸಾಕಷ್ಟನ್ನು ಹೇಳುತ್ತದೆ. ವಿಶೇಷವಾಗಿ ಸಂಗಾತಿಯಾಗಿ ಯಾವ ರಾಶಿಯ ಹುಡುಗ ಹೇಗೆ, ನಿಮ್ಮ ಮಾದಕ, ಪ್ರಣಯ ಭಾಗವೇನು ಎಲ್ಲವನ್ನೂ ಇಲ್ಲಿ ತೆರೆದಿಡಲಾಗಿದೆ.
ರಾಶಿಚಕ್ರ ಚಿಹ್ನೆಗಳು ಯಾರೊಂದಿಗಾದರೂ ನಿಮ್ಮ ಹೊಂದಾಣಿಕೆಯನ್ನು ಮಾತ್ರ ತೋರಿಸುವುದಿಲ್ಲ, ಆದರೆ ಅವರೊಂದಿಗೆ ನಿಮ್ಮ ಲೈಂಗಿಕ ಆಕರ್ಷಣೆಯನ್ನು ಸಹ ತೋರಿಸುತ್ತದೆ. ಯಾರೂ ಪರಿಪೂರ್ಣರಲ್ಲ, ಆದರೆ, ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ವಿಶಿಷ್ಠವಾಗಿರುತ್ತಾರೆ.
ನೀವು ಯಾವ ರಾಶಿಚಕ್ರದ ಗೆಳೆಯನನ್ನು ಹುಡುಕಬೇಕು ಮತ್ತು ಯಾವ ರಾಶಿಚಕ್ರದ ಚಿಹ್ನೆಯು ನಿಮಗೆ ಉತ್ತಮ ಗೆಳೆಯ ಆಗಬಹುದು ಎಂದು ನೀವು ಯೋಚಿಸುತ್ತಿದ್ದರೆ ಇಲ್ಲಿದೆ ನೋಡಿ ರಾಶಿ ಆಧಾರದಲ್ಲಿ ಅವರ ವ್ಯಕ್ತಿತ್ವದ ಹೊಳಹು. ಸಂಗಾತಿಯಾಗಿ ಯಾವ ರಾಶಿಯ ಹುಡುಗ ಹೇಗಿರುತ್ತಾನೆ, ಆತನೊಂದಿಗಿನ ಖಾಸಗಿ ಬದುಕು ಹೇಗಿರಲಿದೆ ಎಂಬುದನ್ನು ರಾಶಿಗಳು ತೋರಬಲ್ಲವು.
ಮೇಷ(Aries)
ಮೇಷ ರಾಶಿಯ ಹುಡುಗರು ಮೊದಲ ಹೆಜ್ಜೆಯನ್ನು ಇಡಲು ಸಂತೋಷಪಡುತ್ತಾರೆ. ಅವರು ಸಾಹಸ, ಥ್ರಿಲ್ ಮತ್ತು ಉತ್ಸಾಹವನ್ನು ಬಯಸುತ್ತಾರೆ. ಮಲಗುವ ಕೋಣೆಯಲ್ಲಿ ಎಲ್ಲವೂ ಅವನ ನಿಯಮಗಳ ಮೇಲೆ ಇರಬೇಕು ಮತ್ತು ಆಗಾಗ್ಗೆ ಇದು ವಿನೋದ ಮತ್ತು ಉತ್ಸಾಹದಿಂದ ತುಂಬಿದ ದೀರ್ಘ ಅವಧಿಗಳಾಗಿರುತ್ತದೆ. ಇವರು ಬದ್ಧತೆ ಮತ್ತು ನಿಷ್ಠಾವಂತ ಪಾಲುದಾರರಾಗಿರುತ್ತಾರೆ. ಮೇಷ ರಾಶಿಯ ಗೆಳೆಯನು ಯಾವುದೇ ಅಡೆತಡೆಗಳನ್ನು ಎದುರಿಸಲು ಮತ್ತು ಅದನ್ನು ಜಯಿಸಲು ಸಿದ್ಧನಿರುತ್ತಾನೆ. ಅವನು ನಿಮ್ಮ ಸಂಬಂಧವನ್ನು ಗಟ್ಟಿಯಾಗಿ ಇರಿಸಿಕೊಳ್ಳಲು ಹೋರಾಡುತ್ತಾನೆ.
ವೃಷಭ(Taurus)
ವೃಷಭದ ಪುರುಷರು ವಿಶ್ವಾಸಾರ್ಹರು. ಭಾವನಾತ್ಮಕವಾಗಿ, ಆರ್ಥಿಕವಾಗಿ, ಆಧ್ಯಾತ್ಮಿಕ ಮತ್ತು ದೈಹಿಕವಾಗಿ - ಪ್ರತಿಯೊಂದು ಅಂಶದಲ್ಲೂ ತಮ್ಮ ಹುಡುಗಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅವನು ಘರ್ಷಣೆಗೆ ಹೆದರುವುದಿಲ್ಲ ಮತ್ತು ವಾದದಲ್ಲಿ ಯಾವಾಗಲೂ ಅರ್ಥಪೂರ್ಣವಾಗಿರುತ್ತಾನೆ. ಸದಾ ನಿಮಗೆ ಉತ್ತಮವಾದದ್ದನ್ನು ಬಯಸುತ್ತಾನೆ. ನೀವು ಅವನ ಪ್ರಮುಖ ಆದ್ಯತೆಯಾಗುತ್ತೀರಿ.
ಮಿಥುನ(Gemini)
ಮಿಥುನ ರಾಶಿಯ ಪುರುಷನು ಜನಮನದಲ್ಲಿರಲು ಇಷ್ಟಪಡುತ್ತಾನೆ ಮತ್ತು ಆದ್ದರಿಂದ ಆತ ಸದಾ ಎಲ್ಲರನ್ನೂ ಮೆಚ್ಚಿಸುವ ಪ್ರಯತ್ನದಲ್ಲಿರುತ್ತಾನೆ. ನೀವು ಅವರ ಗೆಳತಿಯಾಗಿ ಬುದ್ಧಿವಂತಿಕೆಯಿಂದ ನಿಭಾಯಿಸಬೇಕಾಗಿದೆ. ಅವನು ವಿಶ್ವಾಸದ್ರೋಹಿ ಅಲ್ಲ, ಸಂತೋಷದ ಆತ್ಮವೇ. ಆದರೆ ಹಾಸಿಗೆಯಲ್ಲಿ ತೃಪ್ತಿಪಡಿಸುವುದು ತುಂಬಾ ಕಷ್ಟ. ಆತ ಹಲವಾರು ನಿರೀಕ್ಷೆಗಳನ್ನು ಹೊಂದಿರುತ್ತಾನೆ ಮತ್ತು ಯಾವಾಗಲೂ ಹೊಸದನ್ನು ಹುಡುಕುತ್ತಿರುತ್ತಾನೆ.
Astrology Tips: ದೇವಸ್ಥಾನದಲ್ಲಿ ಕದ್ದು ಮುಚ್ಚಿ ಇವನ್ನಿಟ್ರೆ ಯಶಸ್ಸು ನಿಶ್ಚಿತ
ಕರ್ಕಾಟಕ(Cancer)
ಅವರು ನಿಮಗೆ ತಿಳಿದಿರುವ ಅತ್ಯಂತ ಸೂಕ್ಷ್ಮ ಮತ್ತು ಕಾಳಜಿಯುಳ್ಳ ವ್ಯಕ್ತಿಯಾಗಿರುತ್ತಾರೆ. ಅವರು ನಿಮ್ಮ ಮನಸ್ಸನ್ನು ಓದಬಲ್ಲರು ಮತ್ತು ನಿಮ್ಮನ್ನು ಸಂತೋಷಪಡಿಸಲು ಪೂರ್ವಭಾವಿಯಾಗಿ ಕೆಲಸ ಮಾಡುತ್ತಾರೆ. ಅವರು ಉತ್ತಮ ಯೋಜಕರೂ ಆಗಿದ್ದಾರೆ ಮತ್ತು ಪ್ರತಿ ದಿನವನ್ನೂ ಪ್ರಣಯ ಮತ್ತು ವಿನೋದದಿಂದ ತುಂಬಲು ಬಯಸುತ್ತಾರೆ. ಈ ರಾಶಿಯ ಬಾಯ್‌ಫ್ರೆಂಡ್ ಭಾವನೆಗಳಿಲ್ಲದ ಲೈಂಗಿಕ ಜೀವನವನ್ನು ದ್ವೇಷಿಸುತ್ತಾನೆ. ತನ್ನ ಮೃದುವಾದ ಮತ್ತು ಕಾಳಜಿಯುಳ್ಳ ಭಾಗವನ್ನು ತೋರಿಸಲು ನಾಚಿಕೆ ಪಡುವುದಿಲ್ಲ.
ಸಿಂಹ(Leo)
ಸಿಂಹ ರಾಶಿಯ ಪುರುಷರದು ವರ್ಚಸ್ವಿ ವ್ಯಕ್ತಿತ್ವ. ಇದು ಅವರತ್ತ ಅನೇಕ ಮಹಿಳೆಯರನ್ನು ಆಕರ್ಷಿಸುತ್ತದೆ. ಈತ ಸಂಗಾತಿಯ ವಿಷಯದಲ್ಲಿ ತುಂಬಾ ಆಯ್ಕೆ ಮಾಡುತ್ತಾನೆ. ಯಾವುದೇ ಜಗಳದಲ್ಲಿ ತಾನೇ ವಿಜೇತನಾಗ ಬಯಸುತ್ತಾನೆ. ಹಾಸಿಗೆಯಲ್ಲಿ ರಾರಾಜಿಸಲು ಬಯಸುತ್ತಾನೆ.
ಕನ್ಯಾ(Virgo)
ಕನ್ಯಾ ರಾಶಿಯ ಗೆಳೆಯನು ನಿಮ್ಮ ಜೀವನದಲ್ಲಿ ಎಲ್ಲಾ ಅಂತರವನ್ನು ತುಂಬುವನು. ಕೆಲವು ಮಹಿಳೆಯರು ಅವನನ್ನು ಸಾಹಸವಂತನಲ್ಲ ಎನ್ನಬಹುದು. ಆದರೆ ವಾಸ್ತವದಲ್ಲಿ ಅವನು ಕಣ್ಣು ಮುಚ್ಚಿ ಅವಲಂಬಿಸಬಹುದಾದ ವ್ಯಕ್ತಿ. ಅವರು ಹಾಸಿಗೆಯಲ್ಲಿ ಪರಿಪೂರ್ಣತೆಯನ್ನು ಸಾಧಿಸಲು ಪ್ರಯತ್ನಿಸುತ್ತಾರೆ.
ತುಲಾ(Libra)
ತುಲಾ ರಾಶಿಯವರು ಯಾವಾಗಲೂ ಪರಿಸ್ಥಿತಿಯ ಎರಡೂ ಬದಿಗಳನ್ನು ತೂಗುತ್ತಾರೆ. ಆದ್ದರಿಂದ ಅವನು ನಿಮ್ಮ ಜೊತೆ ಪ್ರೀತಿಯ ಬಗ್ಗೆ ಪ್ರಸ್ತಾಪಿಸಿದ್ದರೆ, ನಿಮ್ಮ ಬಗ್ಗೆ ಗಂಭೀರವಾಗಿರುತ್ತಾನೆ ಎಂದರ್ಥ. ಹಾಸಿಗೆಯಲ್ಲಿ ಆಗಾಗ್ಗೆ ಮಹಿಳೆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ಬಯಸುತ್ತಾನೆ. ಶಾಂತಿ ಪ್ರೀತಿಯ ಗುಣಲಕ್ಷಣಗಳಿಂದಾಗಿ ಅವನು ಸಂಘರ್ಷಗಳನ್ನು ಇಷ್ಟ ಪಡುವುದಿಲ್ಲ. ಜೀವನದ ಎಲ್ಲ ಅಂಶಗಳಲ್ಲಿ ಸಮತೋಲನವನ್ನು ಬಯಸುತ್ತಾನೆ.
ದಾಂಪತ್ಯ ಜಗಳ ನಿವಾರಿಸುವ ಜೊತೆಗೆ ಐಶಾರಾಮಿ ಜೀವನ ತಂದುಕೊಡುವ ಬಳೆಗಳು!
ವೃಶ್ಚಿಕ(Scorpio)
ಅವನು ಎಂದಿಗೂ ತನ್ನ ಭಾವನೆಯನ್ನು ವ್ಯಕ್ತಪಡಿಸುವುದಿಲ್ಲ. ಅವನ ಗೆಳತಿ ಅಥವಾ ಹೆಂಡತಿಯಾಗಿ, ಅವನನ್ನು ತಿಳಿದುಕೊಳ್ಳಲು ನಿಮಗೆ ಅಪಾರ ತಾಳ್ಮೆ ಬೇಕು. ನೀವು ಸಂಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾಗದ ವ್ಯಕ್ತಿ ಅವರು. ಆದರೆ, ಮಲಗುವ ಕೋಣೆಯಲ್ಲಿ ಅವನು ಅತ್ಯುತ್ತಮ ಪ್ರೇಮಿಯಾಗಿ ಸಾಬೀತುಪಡಿಸುತ್ತಾನೆ.
ಧನು(Sagittarius)
ಧನು ರಾಶಿ ಮನುಷ್ಯ ಫ್ಲರ್ಟೇಟಿವ್ ಆಗಿರಬಹುದು. ಆತನ ಆಕರ್ಷಕ ವ್ಯಕ್ತಿತ್ವ ಮತ್ತು ಅತ್ಯುತ್ತಮ ಸಂವಹನ ಕೌಶಲ್ಯಗಳು ಹುಡುಗಿಯರನ್ನು ಸೆಳೆಯುತ್ತವೆ. ಆತನ ಸ್ವಾತಂತ್ರ್ಯಪ್ರಿಯತೆ, ಸಾಹಸಶೀಲತೆ ಕೂಡಾ ಸಂಗಾತಿಯ ಬದುಕನ್ನು ಆಸಕ್ತಿಕರವಾಗಿರಿಸುತ್ತದೆ. ಹಾಸಿಗೆಯಲ್ಲಿ, ಧನು ರಾಶಿ ಮನುಷ್ಯ ಗಡಿಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ.
ಮಕರ(Capricorn)
ಈತ ಬದ್ಧತೆಯನ್ನು ಹುಡುಕುವ ವ್ಯಕ್ತಿ. ಅವನು ತನ್ನ ಲೇಡಿಲವ್‌ನ್ನು ಮೆಚ್ಚಿಸಲು ಇಷ್ಟಪಡುತ್ತಾನೆ. ಅದೇ ಸಮಯದಲ್ಲಿ, ಅವನು ವಿಷಯಗಳನ್ನು ತನ್ನ ರೀತಿಯಲ್ಲೇ ಇರಬೇಕೆಂದಪ ಆದ್ಯತೆ ನೀಡುತ್ತಾನೆ. ಆದ್ದರಿಂದ ಅವನ ಜೀವನದಲ್ಲಿ ಹುಡುಗಿ ತನ್ನ ಜೀವನಶೈಲಿಯನ್ನು ಅವನಿಗೆ ಸರಿ ಹೊಂದುವಂತೆ ಹೊಂದಿಸಿಕೊಳ್ಳಬೇಕು. ಹಾಸಿಗೆಯಲ್ಲಿ, ಅವನು ಕಲ್ಪನೆಗಳನ್ನು ದ್ವೇಷಿಸುತ್ತಾನೆ ಮತ್ತು ನೈಜತೆಯನ್ನು ಇಷ್ಟಪಡುತ್ತಾನೆ.
ಕುಂಭ(Aquarius)
ಕುಂಭ ರಾಶಿಯವನು ಹಲವಾರು ಸ್ನೇಹಿತರನ್ನು ಹೊಂದಿರುತ್ತಾನೆ ಮತ್ತು ಅವನ ಸಾಮಾಜಿಕ ವಲಯವು ಅವನಿಗೆ ಬಹಳ ಮುಖ್ಯವಾಗಿದೆ. ಅವನ ಗೆಳತಿಯಾಗಿ, ನೀವು ಅವನ ಸ್ನೇಹಿತರ ಜೊತೆ ಸ್ನೇಹ ಬೆಳೆಸಬೇಕು. ಅವನು ತನ್ನ ಅಹಂಕಾರಕ್ಕಿಂತ ಮೊದಲು ತನ್ನ ಆಯ್ಕೆಗಳನ್ನು ಇರಿಸುವ ವ್ಯಕ್ತಿ. ಅವನು ಹಾಸಿಗೆಯಲ್ಲಿ ಮುದ್ದಾಡುವ ರೀತಿಯವನಲ್ಲ. ಆದರೆ, ನಿಮ್ಮ ಮೇಲಿನ ಪ್ರೀತಿ ಪ್ರಕಟಪಡಿಸುತ್ತಾನೆ. ಆತ ಉತ್ತಮ ಸ್ನೇಹಿತನಂತಿರುತ್ತಾನೆ.
ಇನ್ನೈದು ದಿನದಲ್ಲಿ ಚಾತುರ್ಮಾಸ ಆರಂಭ, ನೀವೇನು ಮಾಡಬೇಕು?
ಮೀನ(Pisces)
ಮೀನ ರಾಶಿಯ ಮನುಷ್ಯ ಆಳದಲ್ಲಿ ರೋಮ್ಯಾಂಟಿಕ್, ಆದರೆ ಯಾವಾಗಲೂ ತುಂಬಾ ಅಂತರ್ಮುಖಿ. ಆದ್ದರಿಂದ, ಆಗಾಗ್ಗೆ, ಮಹಿಳೆ ಮೊದಲ ನಡೆಯನ್ನು ಮಾಡಬೇಕಾಗುತ್ತದೆ. ಗೆಳೆಯನಾಗಿ, ಅವನು ಮೃದುವಾಗಿ ಮಾತನಾಡುವವನು ಮತ್ತು ಸಕಾರಾತ್ಮಕತೆಯಿಂದ ಹೊಳೆಯುತ್ತಾನೆ. ಹಾಸಿಗೆ ಎಂದರೆ ಭಾವಗಳ ಒಕ್ಕೂಟ ಎಂದು ನಂಬಿದವನು. ಸಂಗಾತಿಯು ತನ್ನಂತೆಯೇ ಸಂವೇದನಾಶೀಲಳಾಗಿರಬೇಕೆಂದು ಅವನು ನಿರೀಕ್ಷಿಸುತ್ತಾನೆ.