ಶನಿಯು ಪ್ರಸ್ತುತ ಮಕರ ರಾಶಿಯಲ್ಲಿ ಹಿಮ್ಮುಖವಾಗಿದೆ. ಇದರಿಂದಾಗಿ ಪ್ರಸ್ತುತ ಶನಿಯ ಹಾಫ್ ಎಂಡ್ ಹಾಫ್ 3 ರಾಶಿಗಳಲ್ಲಿ ಮತ್ತು ಶನಿಯ ಧೈಯಾವು 2 ರಾಶಿಗಳಲ್ಲಿ ನಡೆಯುತ್ತಿದೆ.

ಶನಿ ದೇವನನ್ನು ಕರ್ಮ ಮತ್ತು ನ್ಯಾಯದ ದೇವರು ಎಂದು ಹೇಳಲಾಗುತ್ತದೆ. ಅವನು ಎಲ್ಲರಿಗೂ ಅವರವರ ಕರ್ಮಕ್ಕನುಸಾರವಾಗಿ ಫಲವನ್ನು ಕೊಡುತ್ತಾನೆ. ಜ್ಯೋತಿಷ್ಯದಲ್ಲಿ ಶನಿ ದೇವನಿಗೆ ವಿಶೇಷ ಸ್ಥಾನವಿದೆ. ಆತ ಸೂರ್ಯ ಮತ್ತು ಛಾಯಾದೇವಿಯ ಪುತ್ರ. 
ಪುರಾಣದಂತೆ ಶನಿದೇವನು ಭಗವಾನ್ ಶಿವನನ್ನು ನೆನೆದು ತೀವ್ರ ತಪಸ್ಸು ಮಾಡಿದನು. ಇದರಿಂದ ಸಂತಸಗೊಂಡ ಶಿವನು ಶನಿದೇವನಿಗೆ ಕಲಿಯುಗದ ನ್ಯಾಯಾಧೀಶ ಅಂದರೆ ದಂಡಾಧಿಕಾರಿ ಎಂಬ ಬಿರುದನ್ನು ನೀಡಿದನು. ಅಂದಿನಿಂದ ಶನಿಯನ್ನು ನ್ಯಾಯದ ದೇವರು ಮತ್ತು ಕರ್ಮ ಫಲದಾತ ಎಂದು ಕರೆಯಲಾಯಿತು. ಕಲಿಯುಗದಲ್ಲಿ ಶನಿದೇವನು ಮಾತ್ರ ಮಾನವನ ಕಾರ್ಯಗಳಿಗೆ ಫಲವನ್ನು ನೀಡುತ್ತಾನೆ.

ಪಂಚಾಂಗದ ಪ್ರಕಾರ, ಶನಿ(Lord Shani)ಯು ಜುಲೈ 2022ರಿಂದ ಮಕರ ರಾಶಿಯಲ್ಲಿ ಹಿಮ್ಮುಖ ಸ್ಥಿತಿಯಲ್ಲಿದೆ. ಅದು ಅಕ್ಟೋಬರ್ 23ರಂದು ಮಕರ ರಾಶಿಯಲ್ಲಿ ಮತ್ತೆ ಸಹಜ ಚಲನೆ ಆರಂಭಿಸುತ್ತದೆ. ಶನಿದೇವನು ಜನವರಿ 17, 2023ರವರೆಗೆ ಮಕರ ರಾಶಿಯಲ್ಲಿ ಇರುತ್ತಾನೆ. ಶನಿಯು ವಕ್ರಿಯಾದಾಗ ಅವನು ಪೀಡಿತನಾಗುತ್ತಾನೆ ಎಂಬುದು ಜ್ಯೋತಿಷ್ಯ ಶಾಸ್ತ್ರದ ನಂಬಿಕೆ. ಇದು ಅವನ ಚಲನೆಯನ್ನು ನಿಧಾನಗೊಳಿಸುತ್ತದೆ. ಮಕರ ರಾಶಿ(Capricorn)ಯಲ್ಲಿ ವಕ್ರಿ ಶನಿಯ ಸಂಚಾರದಿಂದಾಗಿ ಎಲ್ಲಾ ರಾಶಿಚಕ್ರದ ಚಿಹ್ನೆಗಳು(Zodiac signs) ಪರಿಣಾಮ ಎದುರಿಸುತ್ತವೆ. ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಶನಿಯ ಮಾರ್ಗಿಯು ಲಾಭದಾಯಕವಾಗಿರುತ್ತದೆ ಮತ್ತು ಕೆಲವರಿಗೆ ಇದು ಹಾನಿಕಾರಕವೆಂದು ಸಾಬೀತುಪಡಿಸುತ್ತದೆ.

ಪ್ರಸ್ತುತ 5 ರಾಶಿಗಳ ಮೇಲೆ ಶನಿ ಸಾಡೇಸಾತಿ ಮತ್ತು ಶನಿ ಧೈಯಾ ನಡೆಯುತ್ತಿದೆ. ಜಾತಕದಲ್ಲಿ ಚಂದ್ರನಿಂದ ಹನ್ನೆರಡನೇ, ಮೊದಲ ಮತ್ತು ಎರಡನೆಯ ಮನೆಯ ಮೂಲಕ ಶನಿ ಸಾಗುವ, ಅವಧಿಯನ್ನು ಸಾಡೇ ಸಾತಿ(Sade sati) ಎಂದು ಕರೆಯಲಾಗುತ್ತದೆ. ಶನಿಯು ಒಂದು ಮನೆಯಿಂದ ಇನ್ನೊಂದು ಮನೆಗೆ ಸಾಗಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಆದ್ದರಿಂದ ಇದನ್ನು ಧೈಯಾ ಎಂದರೆ 2 1/2 ವರ್ಷ ಎಂದು ಕರೆಯಲಾಗುತ್ತದೆ. ಈ ಮೂರು ಮನೆಗಳ ಮೂಲಕ ಶನಿ ಸಾಗುವಾಗ ಏಳೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತದೆ, ಇದು ಶನಿ ಸಾಡೆಸಾತಿಯ ಅಕ್ಷರಶಃ ಅರ್ಥವಾಗಿದೆ.

Budh Vakri 2022: ವಕ್ರಿ ಬುಧನಿಂದ ಈ ರಾಶಿಗಳಿಗೆ ಕಂಟಕ! ಎಚ್ಚರವಾಗಿರಿ!

ಸಾಡೇ ಸಾತಿ ಇದ್ದಾಗ ಏನಾಗುತ್ತದೆ?(effects of Sade sati)
ಸಾಡೇಸಾತಿ ಸಂದರ್ಭದಲ್ಲಿ ಜನರು ಸಾಕಷ್ಟು ಸಮಸ್ಯೆಗಳಿಂದ ನುಜ್ಜುಗುಜ್ಜಾಗುತ್ತಾರೆ. ಸಾಡೇ ಸತಿಯ ಆರಂಭದಲ್ಲಿ ಆರ್ಥಿಕ ಸಂಕಷ್ಟಗಳನ್ನು ಅನುಭವಿಸುತ್ತಾರೆ. ನಂತರ ವ್ಯಕ್ತಿಯು ಹತಾಶೆಗೆ ಬೀಳುತ್ತಾನೆ. ಸಂಪರ್ಕಗಳು, ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಸಮಸ್ಯೆಗಳನ್ನು ಹೊಂದಲು ಪ್ರಾರಂಭಿಸುತ್ತಾನೆ. ಶತ್ರುಗಳ ಕಾಟ ಹೆಚ್ಚುತ್ತದೆ. ಆರಂಭಿಕ ಹಂತದಲ್ಲಿ ನೀವು ನಿಮ್ಮ ವೃತ್ತಿಪರ ರಂಗಗಳಲ್ಲಿ ಸಹ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತೀರಿ. ಈ ಸಮಯದಲ್ಲಿ ನೀವು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ದುರ್ಬಲರಾಗುತ್ತೀರಿ. ನಿಮ್ಮ ಕೈಲಾದ ಶ್ರಮ ಹಾಕಿದರೂ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ. ನೀವು ಸಾಡೇ ಸಾತಿಯ ಉತ್ತುಂಗವನ್ನು ತಲುಪಿದಾಗ, ಗಂಭೀರವಾದ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಒಬ್ಬರು ಆರ್ಥಿಕ ಮುಗ್ಗಟ್ಟು ಮತ್ತು ಸಾಲದ ಹೊರೆಯನ್ನೂ ಎದುರಿಸಬಹುದು. ಸಾಡೆ ಸಾತಿಯು ನಿಮ್ಮನ್ನು ಒಟ್ಟಾರೆಯಾಗಿ ಅಸಮತೋಲನದ ವ್ಯಕ್ತಿಯನ್ನಾಗಿ ಮಾಡುತ್ತದೆ.

ಸಾಡೇ ಸತಿ ಮತ್ತು ಶನಿಯ ಧೈಯಾ ಯಾವ ರಾಶಿಚಕ್ರದ ಮೇಲೆ ಇದೆ?

ಶನಿ ಸಾಡೇಸಾತಿ ಈ ರಾಶಿಚಕ್ರ ಚಿಹ್ನೆಗಳ ಮೇಲಿದೆ..
ಧನು ರಾಶಿ
ಮಕರ ರಾಶಿ
ಕುಂಭ ರಾಶಿ

ಈ ರಾಶಿಚಕ್ರಗಳ ಮೇಲೆ ಶನಿ ಧೈಯಾ
ಮಿಥುನ ರಾಶಿ
ತುಲಾ ರಾಶಿ

ಯೋಗಿಯೇ ಈ ದೇಶದ ಮುಂದಿನ ಬಲಿಷ್ಠ ಪ್ರಧಾನಿ; ಅನಿರುಧ್ ಮಿಶ್ರಾ ಭವಿಷ್ಯ!

ಶನಿಯ ಸಾಡೇ ಸಾತಿ ಯಾವಾಗ ಮುಗಿಯುತ್ತದೆ?
ಪಂಚಾಂಗದ ಪ್ರಕಾರ, ಮಿಥುನ ಮತ್ತು ತುಲಾ ರಾಶಿಗಳ ಮೇಲೆ ನಡೆಯುತ್ತಿರುವ ಶನಿಯ ಧೈಯಾ ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಜನವರಿ 17, 2023ರವರೆಗೆ ಶನಿಯ ಧೈಯಾ ಅವರ ಮೇಲೆ ಇರುತ್ತದೆ. ಇದಾದ ನಂತರ ಶನಿದೇವನು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸುವನು, ಆಗ ಧನು ರಾಶಿಯವರು ಶನಿಯ ಸಾಡೇ ಸತಿಯಿಂದ ಮುಕ್ತಿ ಹೊಂದುತ್ತಾರೆ ಮತ್ತು ಮೀನ ರಾಶಿಗೆ ಸಾಡೇ ಸಾತಿ ಪ್ರಾರಂಭವಾಗುತ್ತದೆ.