ಯೋಗಿಯೇ ಈ ದೇಶದ ಮುಂದಿನ ಬಲಿಷ್ಠ ಪ್ರಧಾನಿ; ಅನಿರುಧ್ ಮಿಶ್ರಾ ಭವಿಷ್ಯ!
ಖ್ಯಾತ ಜ್ಯೋತಿಷಿ ಅನಿರುದ್ಧ ಕುಮಾರ್ ಮಿಶ್ರಾ ಅವರು ಯೋಗಿ ಆದಿತ್ಯನಾಥ್ ಭಾರತದ ಮುಂದಿನ ಪ್ರಧಾನಿಯಾಗುವ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಈ ಹಿಂದೆ ರಾಮಮಂದಿರ ನಿರ್ಮಾಣ ವರ್ಷದ ಬಗ್ಗೆ, ಮಹಾ ತೀರ್ಪಿನ ಬಗ್ಗೆ ಸರಿಯಾಗಿ ಭವಿಷ್ಯ ನುಡಿದಿದ್ದ ಜ್ಯೋತಿಷಿಯಿಂದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿಷಯದಲ್ಲಿ ಮಹಾ ಭವಿಷ್ಯವೊಂದು ಹೊರಬಿದ್ದಿದೆ.
'ಭಾರತದಿಂದ ಒಬ್ಬ ಸನ್ಯಾಸಿ ದೀರ್ಘಕಾಲದವರೆಗೆ ಭಾರತಕ್ಕೆ ಸೇವೆ ಸಲ್ಲಿಸುತ್ತಾನೆ ಮತ್ತು ಅವರ ಅಧಿಕಾರಾವಧಿಯಲ್ಲಿ, ಯಾರೂ ಭಾರತವನ್ನು ಎದುರು ಹಾಕಿಕೊಳ್ಳುವ ಧೈರ್ಯ ತೋರುವುದಿಲ್ಲ'
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಫೋಟೋ ಹಾಕಿ ಹೀಗೆ ಟ್ವೀಟ್ ಮಾಡಿದ್ದಾರೆ ಜ್ಯೋತಿಷಿ ಅನಿರುದ್ ಕುಮಾರ್ ಮಿಶ್ರಾ.
ಇವರು ವಾರದ ಹಿಂದಷ್ಟೇ ಅಂದರೆ ಆಗಸ್ಟ್ 27ರಂದು ಕೂಡಾ ಇದೇ ವಿಷಯವಾಗಿ ಟ್ವೀಟ್ ಮಾಡಿದ್ದರು. ಅಂದು- 'ಯೋಗಿಯು ಈ ದೇಶದ ಪ್ರಧಾನ ಮಂತ್ರಿಯಾದ ಬಳಿಕ ಭಾರತದ ಸಂವಿಧಾನ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತದೆ. ಆಗ ಅವರನ್ನು ಜಗತ್ತಿನಾದ್ಯಂತ ಅತ್ಯಂತ ಬಲಾಢ್ಯ ನಾಯಕ ಎಂದು ಗೌರವಿಸಲಾಗುತ್ತದೆ' ಎಂದು ಮಿಶ್ರಾ ಟ್ವೀಟ್ ಮಾಡಿದ್ದರು.
Weekly Love Horoscope: ಎರಡು ರಾಶಿಗಳ ಪ್ರೇಮಜೀವನದಲ್ಲಿ ಸಂದಿಗ್ಧತೆ, ಮತ್ತೆರಡರ ಜೀವನದಲ್ಲಿ ಚಿಮ್ಮುವ ಪ್ರೀತಿಯ ಒರತೆ
ಯೋಗಿ ಅವರು ಭವಿಷ್ಯದಲ್ಲಿ ಪ್ರಧಾನಿಯಾಗುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಮಧ್ಯೆಯೇ, ಯೋಗಿ ಪ್ರಧಾನಿಯಾಗಿ ಬಲಾಢ್ಯರಾಗಿ ಬೆಳೆಯುವ ಬಗ್ಗೆ ಮಿಶ್ರಾ ಖಚಿತವಾಗಿ ಪದೇ ಪದೇ ಹೇಳುತ್ತಿದ್ದಾರೆ. ಹಾಗಾದರೆ ಈ ಜ್ಯೋತಿಷಿ ಇದುವರೆಗೂ ಹೇಳಿದ್ದೆಲ್ಲ ನಿಜವಾಗಿದೆಯೇ?
ಇವರು ನುಡಿಯುವ ಭವಿಷ್ಯ ಬಹುತೇಕ ನಿಜ ಆಗುತ್ತದೆ. ಅಯೋಧ್ಯೆ ವಿವಾದದ ವಿಚಾರದಲ್ಲಿ ಇವರು ಎರಡು ವರ್ಷಗಳ ಹಿಂದೆ ನುಡಿದ ಭವಿಷ್ಯ ನಿಜವಾಗಿ ಅಚ್ಚರಿ ಮೂಡಿಸಿತ್ತು. ನವೆಂಬರ್ 15, 2017ರಲ್ಲೇ ರಾಮಮಂದಿರ ನಿರ್ಮಾಣದ ಬಗ್ಗೆ ಈ ಅನಿರುದ್ ಭವಿಷ್ಯ ನುಡಿದಿದ್ದರು. ರಾಮಮಂದಿರ ನಿರ್ಮಾಣ ಆರಂಭವಾಗಲು ಎರಡು ವರ್ಷ ಮೂರು ತಿಂಗಳು ಉಳಿದುಕೊಂಡಿದೆ ಎಂದಿದ್ದರು. ಆಗ ಪ್ರಕರಣವಿನ್ನೂ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿ ಇತ್ತು. ಹಾಗಿದ್ದೂ ಅದು ಸತ್ಯವಾಯಿತು. ಇದಕ್ಕೂ ಮುನ್ನ ಪ್ರಮುಖವಾಗಿ 2019ರಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದರು. ಅದೂ ಕೂಡಾ ನಿಜವಾಯಿತು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಅನಿರುದ್ಧ ಸ್ಪಷ್ಟವಾಗಿ ಹೇಳಿದ್ದರು. ಇವೆಲ್ಲವೂ ನಿಜವಾಗಿದ್ದರಿಂದ ಅನಿರುದ್ ಹೇಳುವ ಭವಿಷ್ಯದ ಮಾತುಗಳ ಬಗ್ಗೆ ಜನರಲ್ಲಿ ಕುತೂಹಲ ಕೆರಳಿದೆ.
ಇದೀಗ ಅನಿರುದ್ಧ ಕುಮಾರ್ ಮಿಶ್ರಾ ಟ್ವೀಟ್ ಮಾಡಿದ್ದು, A monk from India will serve India for a long time and in his tenure, no one will risk an aggression with India ಎಂದು ಹೇಳಿ ಯೋಗಿ ಆದಿತ್ಯನಾಥ್ ಅವರ ಫೋಟೋ ಹಾಕಿದ್ದಾರೆ.
ಎಲ್ಲರಿಗಿಂತ ಹೆಚ್ಚು ಸ್ವಾರ್ಥ, ನೀಚತನ ಈ ರಾಶಿಯವರಲ್ಲಿ.. they are MEAN
ಈ ಟ್ವೀಟ್‌ಗೆ ಹಲವು ಬಗೆಯ ಪ್ರತಿಕ್ರಿಯೆಗಳು ಬಂದಿದ್ದು, ಕೆಲವರು ಈಗಾಗ್ಲೇ ಸನ್ಯಾಸಿಯೇ ಅಲ್ಲವೇ ದೇಶದ ಪ್ರಧಾನಿಯಾಗಿರುವುದು ಎಂದಿದ್ದರೆ ಮತ್ತೆ ಕೆಲವರು ಆ ಸನ್ಯಾಸಿ ರಾಮ್ದೇವ್ ಇರಬಹುದಾ ಎಂದು ತಮಾಷೆ ಮಾಡಿದ್ದಾರೆ. ಮತ್ತೂ ಕೆಲವರು ಈ ಸಂದರ್ಭಕ್ಕಾಗಿ ಎದುರು ನೋಡುವುದಾಗಿ ಹೇಳಿದ್ದಾರೆ. ಕೆಲ ಸೋಷ್ಯಲ್ ಮೀಡಿಯಾ ಬಳಕೆದಾರರು ಮಾತ್ರ ಇವರು ಹೀಗೆ ಹೇಳಿದ್ದಾರೆಂದರೆ ಅದು ಖಂಡಿತಾ ಆಗುವುದಿಲ್ಲ ಎಂದಿದ್ದಾರೆ.
ಈ ಭವಿಷ್ಯ ಸುಳ್ಳಾಗಿತ್ತು..
ಅನಿರುದ್ ಹೇಳಿದ್ದ ಸಾಕಷ್ಟು ಭವಿಷ್ಯಗಳು ನಿಜವಾಗಿದ್ದರೂ ಚಂದ್ರಯಾನದ ವಿಷಯದಲ್ಲಿ ಅವರು ಹೇಳಿದ್ದ ಭವಿಷ್ಯ ಮಾತ್ರ ಸುಳ್ಳಾಗಿತ್ತು. ಚಂದ್ರಯಾನ-2 ಯೋಜನೆಯ ಹಿನ್ನಡೆಯಿಂದಾಗಿ ಇಡೀ ದೇಶ ಬೇಜಾರಿನಲ್ಲದ್ದ ಸಂದರ್ಭ ಮಿಶ್ರಾ ಅವರು ವಿಕ್ರಂ ಮೂನ್ ಲ್ಯಾಂಡರ್ ಸೆ.20ಕ್ಕೆ ಮತ್ತೆ ಸಂಪರ್ಕಕ್ಕೆ ಸಿಗಲಿದೆ ಎಂದು ಹೇಳಿದ್ದರು, ಆದರೆ ಅದು ನಿಜವಾಗಲಿಲ್ಲ.