Asianet Suvarna News Asianet Suvarna News

ಯಾವ ರಾಶಿಯ ಹುಡುಗಿಯರು ತಮ್ಮ ಸಂಗಾತಿಯಿಂದ ಏನ್ ಬಚ್ಚಿಡ್ತಾರೆ ನೋಡಿ..

ಪ್ರತಿ ಜನ್ಮರಾಶಿ ಚಿಹ್ನೆಯ ವ್ಯಕ್ತಿಗಳಿಗೂ ಅವರದೇ ಸ್ವಭಾವ ಇರುವುದರಿಂದ, ಅವರದೇ ಆದ ಗುಟ್ಟುಗಳೂ ಇರುವುದು ಸಹಜ. ನಿಮ್ಮ ಸಂಗಾತಿಯ ಜನ್ಮರಾಶಿ ಯಾವುದು ಅಂತ ಗೊತ್ತಿದ್ದರೆ, ಆಕೆ ನಿಮ್ಮಿಂದ ಬಚ್ಚಿಡುತ್ತಿರುವ ಸಂಗತಿ ಏನು ಎಂಬುದು ಕೂಡ ನಿಮಗೆ ಗೊತ್ತಾಗಬಹುದು. ಅದ್ಯಾವುದು ಅಂತ ಇಲ್ಲಿ ನೋಡಿ.

Secrets girls want to hide from spouse according to zodiac skr
Author
First Published Jan 22, 2023, 4:07 PM IST

ಹುಡುಗಿಯರು ಗುಟ್ಟಿನ ಮೊಟ್ಟೆಗಳು ಎಂಬುದು ಪೂರ್ತಿ ಸುಳ್ಳೇನಲ್ಲ. ಎಷ್ಟೇ ಪ್ರೇಮಿಸಿದರೂ, ಮದುವೆಯಾಗಿ ಸಂಸಾರ ಮಾಡಿದರೂ ಕೆಲವು ಸೀಕ್ರೆಟ್‌ಗಳನ್ನು ಇವರ ತಮ್ಮೊಳಗೇ ಬಚ್ಚಿಟ್ಟುಕೊಂಡಿರುತ್ತಾರೆ. ಇದಕ್ಕೆ ಅವರದೇ ಆದ ಕಾರಣಗಳೂ ಅವರಿಗೆ ಇರುತ್ತವೆ ಎಂಬುದು ನಿಜ. ಜನ್ಮರಾಶಿಗೂ ಭಾವನೆಗಳಿಗೂ ಮುಚ್ಚಿಟ್ಟ ರಹಸ್ಯಗಳಿಗೂ ಸಂಬಂಧವಿದೆ. ಪ್ರತಿ ಜನ್ಮರಾಶಿ ಚಿಹ್ನೆಯ ವ್ಯಕ್ತಿಗಳಿಗೂ ಅವರದೇ ಸ್ವಭಾವ ಇರುವುದರಿಂದ, ಅವರದೇ ಆದ ಗುಟ್ಟುಗಳೂ ಇರುವುದು ಸಹಜ. ನಿಮ್ಮ ಸಂಗಾತಿಯ ಜನ್ಮರಾಶಿ ಯಾವುದು ಅಂತ ಗೊತ್ತಿದ್ದರೆ, ಆಕೆ ನಿಮ್ಮಿಂದ ಬಚ್ಚಿಡುತ್ತಿರುವ ಸಂಗತಿ ಏನು ಎಂಬುದು ಕೂಡ ನಿಮಗೆ ಗೊತ್ತಾಗಬಹುದು. ಅದು ಇಲ್ಲಿದೆ.  
ಮೇಷ ರಾಶಿ (Aries) 
ಇವರು ತುಂಬಾ ಆತ್ಮವಿಶ್ವಾಸ ಇದೆ ಎಂದು ತೋರಿಸಿಕೊಳ್ಳುತ್ತಾರಾದರೂ, ಒಳಗೊಳಗೇ ಕೆಲವು ಸಂಗತಿಗಳ ಮೇಲೆ ಹೆದರಿಕೆ ಹೊಂದಿರುತ್ತಾರೆ. ತಮ್ಮ ಸಂಗಾತಿ ಬೇರೊಬ್ಬಳ ಹಿಂದೆ ಹೋಗಬಹುದು ಎಂಬ ಆತಂಕವನ್ನು ಮನಸ್ಸಿನಲ್ಲಿ ಅಡಗಿಸಿ ಇಟ್ಟುಕೊಂಡಿರುತ್ತಾರೆ. ಹೊರನೋಟಕ್ಕೆ ಬಾಯ್‌ಫ್ರೆಂಡ್ ಮೇಲೆ ಸಂಪೂರ್ಣ ನಂಬಿಕೆ ಹೊಂದಿದವರಂತೆ ತೋರಿಸಿಕೊಳ್ಳುತ್ತಾರೆ.  
  
ವೃಷಭ ರಾಶಿ (Taurus)
ನಿಮಗಿಂತ ಪೂರ್ವದಲ್ಲಿ ಇವರಿಗೆ ಹಲವು ಪ್ರೇಮ ಪ್ರಕರಣ ಇದ್ದಿರಬಹುದು, ಆದರೆ ಅವುಗಳನ್ನು ಎಂದಿಗೂ ನಿಮ್ಮ ಮುಂದೆ ಬಿಚ್ಚಿಡುವುದಿಲ್ಲ. ಈ ಹಿಂದೆ ಯಾರೋ ಅವರ ಹೃದಯವನ್ನು ಚೂರು ಚೂರು ಮಾಡಿದ್ದರೂ, ಅದರ ಕಿಂಚಿತ್ ಕಲೆಯೂ ಕಾಣದಂತೆ ನಿಮ್ಮ ಮುಂದೆ ನಟಿಸುವುದರಲ್ಲಿ ಇವರು ನಿಷ್ಣಾತರಾಗಿರುತ್ತಾರೆ. ಹಾಗಂತೆ ಈ ರಾಶಿಯ ಎಲ್ಲರಿಗೂ ಮಾಜಿ ಬಾಯ್‌ಫ್ರೆಂಡ್ ಇರುತ್ತಾರೆ ಎಂದರ್ಥವಲ್ಲ. 

Name astro: ಈ ಹೆಸರಿನ ಹುಡುಗಿಯರು ಅದೃಷ್ಟದ ಬೆಡಗಿಯರು

ಮಿಥುನ ರಾಶಿ (Gemini)
ಇವರು ತಮಗಿರುವ ಬಡತನ, ಆರ್ಥಿಕ ಸಂಕಷ್ಟವನ್ನು ಎಂದೂ ಯಾರಲ್ಲಿಯೂ ಹೇಳಿಕೊಳ್ಳುವುದಿಲ್ಲ. ಮದುವೆಯಾಗಲಿರುವ ಹುಡುಗನ ಮುಂದೆ ಕೂಡಾ ಈಕೆ ಖರ್ಚು ಮಾಡುವುದರಲ್ಲಿ ಬಿಂದಾಸ್ ಎಂದು ತೋರಿಸಿಕೊಳ್ಳುತ್ತಿರುತ್ತಾಳೆ. ಆದರೆ ಅದಕ್ಕಾಗಿ ಸಾಲ ಮಾಡಬೇಕಾಗುತ್ತದೆ. ತನ್ನ ದೀನತೆಯ ಅರಿವು ಬಾರದಂತೆ ದಿಲ್ದಾರ್ ಆಗಿರಲು ಯತ್ನಿಸುತ್ತಾರೆ. 
  
ಕಟಕ ರಾಶಿ (cancer)
ಅವಮಾನಗಳನ್ನು ನುಂಗಿಕೊಂಡಿರುತ್ತಾರೆ. ಬಾಲ್ಯದಿಂದಲೂ ಹಲವು ಅವಮಾನಗಳನ್ನು ಸಹಿಸಿದ್ದರೂ ಅದನ್ನು ಎಂದಿಗೂ ತೋರಗೊಡುವುದಿಲ್ಲ. ತೋರಿಸಿದರೆ ಅದು ಮತ್ತಷ್ಟು ಅವಮಾನಕ್ಕೆ ಕಾರಣವಾಗಬಹುದು ಎಂದು ಹಲ್ಲು ಕಚ್ಚಿ ಸಹಿಸಿಕೊಂಡಿರುತ್ತಾರೆ. ಇವರ ಆತ್ಮವಿಶ್ವಾಸದ ಹಿಂದೆ ಹಲವಾರು ಅವಮಾನ, ನೋವು, ಯಾತನೆಗಳಿರುತ್ತವೆ.  
   
ಸಿಂಹ ರಾಶಿ (leo)
ಇವರು ಲೈಂಗಿಕವಾಗಿ ಸ್ವಲ್ಪ ಸಾಹಸಿಗಳು. ಕೆಲವು ಸಾಹಸಗಳನ್ನು ಮಾಡಿರಬಹುದು. ಆದರೆ ಎಂದೂ ಅದನ್ನು ಭಾವಿ ಗೆಳೆಯನಲ್ಲಿ ಹೇಳಿಕೊಳ್ಳುವುದಿಲ್ಲ. ಹಾಗಂತ ಹಾಲಿ ಗೆಳೆಯನಿಗೆ ವಂಚನೆ ಮಾಡುತ್ತಾರೆ ಅಂತಲ್ಲ. ಹಳೆಯ ಕತೆಗಳೆಲ್ಲಾ ಈಗೇಕೆ ಎಂದು ತೇಲಿಸಿಬಿಡುತ್ತಾರೆ. ಎಂದೂ ರಹಸ್ಯ ಬಿಟ್ಟುಕೊಡುವುದಿಲ್ಲ. 

Venus transit: ಇಂದು ಕುಂಭಕ್ಕೆ ಶುಕ್ರ ಪ್ರವೇಶ, 3 ರಾಶಿಗಳಿಗೆ ಶುರು ಶುಭದಿನ

ಕನ್ಯಾ ರಾಶಿ (Virgo)
ಇವರು ತಮಗಿರುವ ಕಾಯಿಲೆಗಳನ್ನು ಬಚ್ಚಿಟ್ಟುಕೊಳ್ಳುತ್ತಾರೆ. ಯಾವುದೇ ದೈಹಿಕ- ಮಾನಸಿಕ ಸಮಸ್ಯೆ ಕಾಣಿಸಿಕೊಂಡರೂ ಬಡಪೆಟ್ಟಿಗೆ ಅದನ್ನು ಯಾರಿಗೂ ಹೇಳುವುದಿಲ್ಲ. ಅದು ಮಿತಿ ಮೀರಿದಾಗ ಮಾತ್ರವೇ ಹೇಳುತ್ತಾರೆ. ಹೀಗಾಗಿ ಇವರ ಆರೋಗ್ಯವನ್ನು ಪದೇ ಪದೇ ವಿಚಾರಿಸಿಕೊಳ್ಳಬೇಕಾಗುತ್ತದೆ.
  
ತುಲಾ ರಾಶಿ (Libra)
ಇವರು ಇತರರ ಸಾಧನೆಗಳ ಬಗ್ಗೆ ಹೊಟ್ಟೆಕಿಚ್ಚನ್ನು ಮುಚ್ಚಿಟ್ಟುಕೊಂಡಿರುತ್ತಾರೆ. ತಮ್ಮಿಂದ ಸಾಧಿಸಲು ಆಗಲಿಲ್ಲ ಎಂದು ಕೊರಗಬಹುದು. ಆದರೆ ಅದನ್ನು ತೋರಿಸಿಕೊಳ್ಳುವುದಿಲ್ಲ. ಮತ್ಸರವನ್ನು ಹೊಟ್ಟೆಯೊಳಗೆ ಇಟ್ಟುಕೊಂಡು ನಿಮ್ಮನ್ನು ಗಮನಿಸುತ್ತಾ ಇರುತ್ತಾರೆ. ಕೆಟ್ಟದು ಮಾಡುತ್ತಾರೆಂದಲ್ಲ, ಎಚ್ಚರವಾಗಿರುವುದು ಸೂಕ್ತ ಅಷ್ಟೆ. 

ವೃಶ್ಚಿಕ ರಾಶಿ (scorpio)
ಇವರು ಸಿಟ್ಟು ಹಾಗೂ ಅಸಮಾಧಾನವನ್ನು ಹೊಟ್ಟೆಯೊಳಗೆ ಇಟ್ಟುಕೊಂಡು ಮೇಲೆ ನಗುತ್ತ ಇರುತ್ತಾರೆ. ಆದರೆ ಹೊಟ್ಟೆಯೊಳಗೆ ರಾಶಿಯಾಗುತ್ತಾ ಹೋದ ಸಿಟ್ಟು ಎಂದಾದರೂ ಹೊರಗೆ ಬರಲೇಬೇಕಲ್ಲವೆ? ಹಾಗೆ ಇದ್ದಕ್ಕಿದ್ದಂತೆ ಅದು ಮೇಲೆದ್ದು ಬರುವಾಗ ನೀವು ಗಾಬರಿಯಾಗಬಹುದು. 
  
ಧನು ರಾಶಿ (Sagittarius)
ತಮ್ಮ ನೆಗೆಟಿವ್‌ ಭಾವನೆಗಳನ್ನು ಇವರು ಹೊರಗೆ ತೋರಿಸಿಕೊಳ್ಳುವುದಿಲ್ಲ. ಅದರಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ಎದುರಿಸಲು ಅವರು ಸಿದ್ಧರಾಗಿರುವುದಿಲ್ಲ. ತಮ್ಮ ವ್ಯಕ್ತಿತ್ವವೇ ನೆಗೆಟಿವ್‌ ಎನಿಸಿಕೊಳ್ಳಬಹುದು ಎಂಬ ಆತಂಕ ಅವರಲ್ಲಿ ಇರುತ್ತದೆ. ಹಾಗಾಗಿ ತಾವು ತುಂಬಾ ಪಾಸಿಟಿವ್ ಎಂಬಂತೆ ತೋರಿಸಿಕೊಳ್ಳುತ್ತಾರೆ.  

ಶನಿಯ ಕ್ರೂರದೃಷ್ಟಿಗೆ ತುತ್ತಾಗದಂತೆ ಯಾವ ಹರಳು ಧರಿಸಬೇಕು? ಜನ್ಮರಾಶಿಗೆ ತಕ್ಕಂತೆ ನೋಡಿ
  
ಮಕರ ರಾಶಿ (capricorn)
ಇವರು ಕೆಲವರನ್ನು ಶತಾಯಗತಾಯ ದ್ವೇಷಿಸಬಹುದು. ಆದರೆ ಎಂದೆಂದೂ ಈ ದ್ವೇಷಭಾವನೆ ಸಂಬಂಧಪಟ್ಟವರ ಗಮನಕ್ಕೆ ಬಾರದೇ ಇರುವಂತೆಯೇ ವರ್ತಿಸಬಹುದು. ಹೀಗಾಗಿ ಅವರಲ್ಲಿ ನಿಮ್ಮ ಬಗ್ಗೆ ಪ್ರೀತಿಯಿದೆಯೋ, ದ್ವೇಷವಿದೆಯೋ ಎಂದು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಕೆಲವರ ಮೇಲೆ ಇವರಿಗಿರುವ ದ್ವೇಷ ಅವರು ಸತ್ತರೂ ಹೊರಬರದು.  

ಕುಂಭ ರಾಶಿ (Aquarius)
ತಮ್ಮ ಶೋಕವನ್ನು ಇವರು ಸದಾ ಮುಚ್ಚಿಟ್ಟುಕೊಂಡಿರುತ್ತಾರೆ. ಶೋಕವನ್ನು ಮೂಟೆಕಟ್ಟಿ ತಮ್ಮ ಮನದ ಕತ್ತಲೆ ಕೋಣೆಗಳೊಳಕ್ಕೆ ಎಸೆದು ಬೀಗ ಜಡಿದು ಬಿಟ್ಟಿರುತ್ತಾರೆ. ಏಕಾಂತದಲ್ಲಿ, ಏಕಾಂಗಿಯಾಗಿರುವಾಗ ಮಾತ್ರ ಆ ಶೋಕದ ಭೂತಗಳು ಅವರನ್ನು ಕಾಡುತ್ತವೆ. ತುಂಬಾ ಆಪ್ತರಲ್ಲಿ ಕೂಡ ಇದನ್ನು ಹೇಳಿಕೊಳ್ಳುವುದಿಲ್ಲ. 
  
ಮೀನ ರಾಶಿ (Pisces)
ತಮ್ಮ ದೇಹದ ಬಗ್ಗೆ ಇವರಿಗೆ ಕೀಳರಿಮೆಯಿರುತ್ತದೆ. ಆದರೆ ಅದನ್ನು ತೋರಿಸಿಕೊಳ್ಳುವುದಿಲ್ಲ. ಹಾಗೆಯೇ ಆಹಾರಾಭ್ಯಾಸದ ಗುಟ್ಟನ್ನು ಇವರು ಬಿಟ್ಟುಕೊಡುವುದಿಲ್ಲ. ತನ್ನ ಆಹಾರದ ರೀತಿನೀತಿ ಹೇಳಿದರೆ ಹಾಸ್ಯಾಸ್ಪದ ಆಗಬಹುದು ಎಂಬ ಅಳುಕು ಇವರನ್ನು ಕಾಡುತ್ತಿರುತ್ತದೆ. ಹೀಗಾಗಿ ಅದನ್ನು ಹೇಳಿಕೊಳ್ಳುವುದಿಲ್ಲ. 


 

Follow Us:
Download App:
  • android
  • ios