Asianet Suvarna News Asianet Suvarna News

ಶನಿಯ ಕ್ರೂರದೃಷ್ಟಿಗೆ ತುತ್ತಾಗದಂತೆ ಯಾವ ಹರಳು ಧರಿಸಬೇಕು? ಜನ್ಮರಾಶಿಗೆ ತಕ್ಕಂತೆ ನೋಡಿ

ಶನಿಯ ಕ್ರೂರದೃಷ್ಟಿಗೆ ತುತ್ತಾಗಿ ತುಂಬಾ ಜನ ನಲುಗುತ್ತಾರೆ. ಸಾಡೇಸಾತ್‌ ಅಲ್ಲದೆಯೂ ಪಂಚಮ, ಅಷ್ಟಮ ಹೀಗೆಲ್ಲ ಶನಿಕಾಟವಿದೆ. ಆದರೆ ನಿಮ್ಮ ಜನ್ಮರಾಶಿಗೆ ಸೂಕ್ತ ಹರಳು ಧರಿಸುವುದರಿಂದ ಶನಿಯ ವಕ್ರದೃಷ್ಟಿಯಿಂದ ಸ್ವಲ್ಪವಾದರೂ ಪಾರಾಗಬಹುದು. ಅದ್ಯಾವುದು?

Crystal should be worn to avoid the cruel eye of Saturn
Author
First Published Jan 18, 2023, 1:07 PM IST

ಕೆಲವರು ಜನ್ಮರಾಶಿಗೆ ಅನುಗುಣವಾಗಿ ಅದೃಷ್ಟ ರತ್ನವನ್ನು ಸೂಚಿಸುತ್ತಾರೆ. ಇನ್ನೂ ಕೆಲವರು ಜಾತಕದಲ್ಲಿ ಯಾವ ಗ್ರಹದ ಪ್ರಭಾವ ಚೆನ್ನಾಗಿಲ್ಲವೋ ಅದು ಚೆನ್ನಾಗಿ ಆಗಬೇಕು ಎಂದು ಆ ನಿರ್ದಿಷ್ಟ ಗ್ರಹದ ರತ್ನವನ್ನು ಸೂಚಿಸುತ್ತಾರೆ. ಅದೇ ರೀತಿ ಕೆಲವು ನಿರ್ದಿಷ್ಟ ದಶೆ ನಡೆಯುವಾಗ ಆ ಗ್ರಹದ ಕ್ರೂರ ಪ್ರಭಾವ ಬೀರದಿರಲಿ ಎಂದು ಆ ರತ್ನ ಧಾರಣೆ ಮಾಡುವಂತೆ ಸೂಚಿಸುತ್ತಾರೆ. ಇನ್ನು ಜಾತಕದಲ್ಲಿ ಯಾವ ಗ್ರಹವು ಉತ್ತಮವಾಗಿರುತ್ತದೋ ಅದರ ಪ್ರಭಾವ ಮತ್ತೂ ಚೆನ್ನಾಗಿರಲಿ ಎಂದು ರತ್ನ ಧಾರಣೆ ಮಾಡಲು ಸೂಚಿಸುತ್ತಾರೆ. ನಾವೀಗ ಶನಿಯು ವಕ್ರದೃಷ್ಟಿ ಬೀರುತ್ತಿದ್ದಾಗ ಅದನ್ನು ತಂಪು ಮಾಡಲು ಜನ್ಮರಾಶಿಗೆ (Birth Sign) ಅನುಗುಣವಾಗಿ ಯಾವ ರತ್ನಧಾರಣೆ ಮಾಡಬೇಕು ಎಂಬ ಬಗ್ಗೆ ತಿಳಿಯೋಣ.

ಮೇಷ- ವೃಶ್ಚಿಕ
ಈ ಎರಡೂ ರಾಶಿಯವರಿಗೆ ಕುಜ ಅಧಿಪತಿ. ಇವರು ಹವಳ (Coral) ಧರಿಸಿದರೆ ಉತ್ತಮ. ಇನ್ನು ಹವಳವನ್ನು ಬೆಳ್ಳಿಯಲ್ಲಿ ಧರಿಸಿದರೆ ಉತ್ತಮ ಫಲ. ತ್ರಿಕೋಣದ ಆಕಾರದಲ್ಲಿ ಹವಳವಿರಬೇಕು. ಆ ವ್ಯಕ್ತಿಯ ದೇಹದ ತೂಕದ ಹತ್ತನೇ ಒಂದು ಭಾಗದಷ್ಟು ತೂಕವಾದರೂ ಅ ರತ್ನ ಇರಬೇಕು ಎಂಬುದು ತಜ್ಞರ ಅಭಿಮತ. ಉದಾಹರಣೆಗೆ ಅರವತ್ತು ಕೇಜಿ ತೂಕದ ವ್ಯಕ್ತಿ, ತೂಕದ ಹತ್ತನೇ ಒಂದು ಭಾಗ. ಅಂದರೆ ಆರು ಕ್ಯಾರೆಟ್ ತೂಕದ ಹವಳವನ್ನು ಧರಿಸಿದರೆ ಉತ್ತಮ ಫಲ ನೀಡುತ್ತದೆ. ಮಂಗಳವಾರದಂದು ಉಂಗುರ ಧಾರಣೆ ಮಾಡಬೇಕು.

ವೃಷಭ- ತುಲಾ
ಈ ಎರಡೂ ರಾಶಿಯವರಿಗೆ ಶುಕ್ರ ಅಧಿಪತಿ. ಆದ್ದರಿಂದ ವಜ್ರವನ್ನು (Diamond) ಧರಿಸಬಹುದು. ಉಂಗುರ ಬೆರಳಿಗೆ ಚಿನ್ನ (Gold) ಅಥವಾ ಪ್ಲಾಟಿನಂನಲ್ಲಿ (Platinum) ಮಾಡಿಸಿ ಧರಿಸಬಹುದು. ವಜ್ರದ ಮೂಲೆಗಳು ನಿಖರವಾಗಿರಬೇಕು. ಮೊಂಡಾಗಿ ಇರಬಾರದು. ಅದರ ಮೇಲೆ ಯಾವುದೇ ಕಲೆ ಇರಬಾರದು. ಶುಕ್ರವಾರದಂದೇ ಉಂಗುರ ಧಾರಣೆ ಮಾಡಬೇಕು.

ಈ 6 ರಾಶಿಗಳು ಮನಸ್ಸು ಮಾಡಿದರೆ ಶತಕೋಟ್ಯಧಿಪತಿಗಳಾಗುವುದು ಕನಸಿನ ಮಾತಲ್ಲ!

ಮಿಥುನ- ಕನ್ಯಾ
ಈ ಎರಡೂ ರಾಶಿಗೂ ಬುಧ ಅಧಿಪತಿ. ಇವರು ಕಿರುಬೆರಳಲ್ಲಿ ಪಚ್ಚೆ (Emerald) ಧರಿಸಬಹುದು. ನೆನಪಿಡಿ, ಕಿರು ಬೆರಳಲ್ಲಿ ಧರಿಸಿದರೆ ಉತ್ತಮ ಫಲ. ಬುಧವಾರದಂದು (Wednesday) ಧರಿಸಬೇಕು. ಕೆಲವರು ಪಚ್ಚೆ ಎಂದು ಹಸಿರು ಬಣ್ಣದ ಕಲ್ಲನ್ನೆಲ್ಲ ನೀಡುತ್ತಾರೆ. ಸರಿಯಾಗಿ ಸರ್ಟಿಫೈಡ್‌ ಮಾಡಿದ ರತ್ನಗಳನ್ನೇ ತಂದು ಧರಿಸುವುದು, ಜೆಮ್‌ಸ್ಟೋನ್‌ ತಜ್ಞರ (Gem Stone Expert) ಬಳಿ ಮೌಲ್ಯಮಾಪನ ಮಾಡಿಸುವುದು ವಿಹಿತ.

ಕಟಕ

ಈ ರಾಶಿಗೆ ಚಂದ್ರ ಅಧಿಪತಿ. ಮುತ್ತನ್ನು ತೋರು ಬೆರಳಲ್ಲಿ ಧರಿಸಿದರೆ ಉತ್ತಮ. ಚಂದ್ರ ಮನಸ್ಸಿನ ಕಾರಕ. ಮುತ್ತಿನ ಗುಣ ತಂಪು. ಚಂದ್ರನ ಗುಣವೂ ತಂಪದಾರೂ, ಅಮಾವಾಸ್ಯೆ ಹುಣ್ಣೆಮಗಳಂದು ಕ್ಷೋಭೆಯನ್ನು ಉಂಟಮಾಡುತ್ತಾನೆ. ಆಗ ಮುತ್ತು ನಿಮ್ಮನ್ನು ನಿರಾಳವಾಗಿ ಇಡುತ್ತದೆ. ಸೋಮವಾರದಂದು ಧಾರಣೆ ಮಾಡಬೇಕು.

ಸಿಂಹ

ಈ ರಾಶಿಗೆ ರವಿ ಕಾರಕ. ಸ್ಟಾರ್ ರೂಬಿ ರತ್ನ ಧರಿಸಿದರೆ ಉತ್ತಮ. ಭಾನುವಾರದಂದು ಉಂಗುರ ಬೆರಳಿಗೆ ಈ ರತ್ನವನ್ನು ಧರಿಸಬೇಕು. ರೂಬಿಯು ರವಿಯಿಂದ ಉಂಟಾಗುವ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.

ಧನು- ಮೀನ

ಈ ಎರಡೂ ರಾಶಿಗೆ ಗುರು ಅಧಿಪತಿ. ಕನಕ ಪುಷ್ಯರಾಗ ಧಾರಣೆ ಮಾಡಬಹುದು. ಗುರುವಾರದಂದು ತೋರು ಬೆರಳಿಗೆ ಉಂಗುರ ಧರಿಸಬೇಕು. ಗುರುವು ಜ್ಞಾನದ ಅಧಿಪತಿ. ಕನಕ ಪುಷ್ಯರಾಗವು ಜ್ಞಾನಪ್ರಚೋದಕ ಹಾಗೂ ಧರಿಸಿದಾಗ ನರವ್ಯೂಹವನ್ನು ಸ್ಪಂದಿಸಿ ಮೆದುಳಿನಲ್ಲಿ ಸಂವೇದನೆಯನ್ನು ಉಂಟುಮಾಡುತ್ತದೆ.

Daily Horoscope: ಅತ್ತೆ ಸೊಸೆ ಜಗಳದಲ್ಲಿ ಮೀನದ ನೆಮ್ಮದಿ ಭಂಗ

ಮಕರ- ಕುಂಭ

ಈ ಎರಡೂ ರಾಶಿಗೆ ಶನಿ ಅಧಿಪತಿ. ನೀಲ ಧರಿಸಬಹುದು. ಶನಿವಾರದಂದು ಮಧ್ಯದ ಬೆರಳಿಗೆ ಈ ಉಂಗುರ ಧಾರಣೆ ಮಾಡಬೇಕು. ಬೆಳ್ಳಿಯಲ್ಲಿ ಧರಿಸಿದರೆ ಉತ್ತಮ. ಈ ರತ್ನವನ್ನು ಧರಿಸಲು ಕೆಲವು ಕ್ರಮವಿದೆ. ನೀಲಿ ರತ್ನವನ್ನು ಕಪ್ಪು ಬಟ್ಟೆಯಲ್ಲಿ ಸುತ್ತಿಟ್ಟು, ಎಳ್ಳಿನಲ್ಲಿಟ್ಟು ಪೂಜಿಸಿ ನಂತರ ಧರಿಸಬೇಕು. ಹೀಗೆ ಇತರ ರತ್ನಗಳಿಗೂ ಬೇರೆ ಕ್ರಮವಿದೆ. ಅದನ್ನು ಜ್ಞಾನಿಗಳಿಂದ ತಿಳಿಯಬೇಕು.

Follow Us:
Download App:
  • android
  • ios