ಜಾಬ್ ಪ್ರಾಬ್ಲಂ ಆಗ್ತಿದ್ರೆ ಅದಕ್ಕೆ ಈ ಗ್ರಹಗಳೇ ಕಾರಣ..

ಜಾತಕದಲ್ಲಿ ಗ್ರಹಗಳ ಸ್ಥಿತಿ ಉತ್ತಮವಾಗಿದ್ದರೆ ವೃತ್ತಿ ಬದುಕು ಚೆನ್ನಾಗಿರುತ್ತದೆ. ಯಾವ್ಯಾವ ಗ್ರಹಗಳು ಹೇಗಿರುತ್ತವೆ ಎನ್ನುವುದರ ಆಧಾರದ ಮೇಲೆ ವ್ಯಕ್ತಿಯ ಕೆಲಸ ಕಾರ್ಯಗಳು ಅವಲಂಬಿತವಾಗಿರುತ್ತದೆ. ಹಾಗಾಗಿ ಯಾವ್ಯಾವ ಗ್ರಹಗಳು ಯಾವ ಮನೆಯಲ್ಲಿ ಸ್ಥಿತವಾಗಿರುತ್ತದೆ ಎನ್ನುವುದು ವ್ಯಕ್ತಿಯ ಭವಿಷ್ಯವನ್ನು ಆಧರಿಸುತ್ತವೆ. ಹಾಗಾಗಿ ವೃತ್ತಿ ಬದುಕಿನಲ್ಲಿ  ಗ್ರಹಗಳ ಪಾತ್ರವನ್ನು ತಿಳಿಯೋಣ.
 

Which Planet is Responsible for Career

ಜೀವನ(Life) ನಿರ್ವಹಣೆಗೆ ಕೆಲಸ ಅಂತ ಒಂದಿರ್ಲೇಬೇಕು. ಜಾಬ್ ವಿಷಯದಲ್ಲಿ ತೊಂದರೆಗಳು ಎದುರಾದಾಗ ಜೀವನವೇ ಸಾಕು ಎಂದೆನಿಸುತ್ತದೆ. ಕೆಲಸವಿದ್ದರೂ ಅದರಲ್ಲಿ ಹಲವಾರು ತೊಂದರೆ, ತಾಪತ್ರಯಗಳು ಎದುರಾಗುತ್ತಿದ್ದರೆ, ಇಲ್ಲವೇ ಕೆಲಸಕ್ಕಾಗಿ ಎಷ್ಟೇ ಅಲೆದರೂ ಕೆಲಸ ಸಿಗದಿರುವುದು ಮತ್ತು ಅರ್ಹತೆ ಇದ್ದೂ ಯಾವುದೇ ಪ್ರೊಮೋಷನ್‌ಗಳು ಸಿಗುತ್ತಿಲ್ಲವೆಂದಾದರೆ ಅದಕ್ಕೆ ಗ್ರಹಗತಿಗಳೇ ಕಾರಣವಾಗಿರುತ್ತವೆ. ಜಾತಕದಲ್ಲಿ ಗ್ರಹಗಳ ಸ್ಥಿತಿ ಚೆನ್ನಾಗಿದೆ ಎಂದಾದರೆ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಅಂದುಕೊಂಡ ಕೆಲಸ, ಪ್ರೊಮೋಷನ್ ಎಲ್ಲವೂ ಲಭಿಸುತ್ತದೆ. ಅದೇ ಗ್ರಹಗಳ ಸ್ಥಿತಿ ಅಷ್ಟಾಗಿ ಚೆನ್ನಾಗಿಲ್ಲವೆಂದಾದರೆ ಅದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಅದಕ್ಕಾಗಿ ಜಾತಕದಲ್ಲಿ ಯಾವ ಗ್ರಹಗಳ ಸ್ಥಿತಿ ಚೆನ್ನಾಗಿದೆ ಎಂಬುದನ್ನು ತಿಳಿದುಕೊಂಡು ಅದಕ್ಕೆ ಆಗಿಬರುವ ವೃತ್ತಿಕ್ಷೇತ್ರವನ್ನು ಆಯ್ದುಕೊಂಡರೆ ಉತ್ತಮ. ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹ ಮತ್ತು ವ್ಯಕ್ತಿಯ ವೃತ್ತಿ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳೋಣ....

ಕೆಲಸದ ಜ್ಞಾನಕ್ಕೆ ಗುರು ಗ್ರಹ (Jupiter)
ಕೆಲಸ ದೊರಕಿದರೂ ಅದರ ಬಗ್ಗೆ ಯಾವುದೇ ರೀತಿಯ ತಿಳಿವಳಿಕೆ ಇಲ್ಲವೆಂದಾದರೆ ಅದಕ್ಕೆ ಗುರುಗ್ರಹದ ಸ್ಥಿತಿಯು ಕಾರಣವಾಗಿರುತ್ತದೆ. ಜಾತಕದಲ್ಲಿ ಗುರುಗ್ರಹವು ಉಚ್ಛ ಸ್ಥಾನದಲ್ಲಿದ್ದು, ಜತೆಗೆ ಶುಭಗ್ರಹಗಳ ಪ್ರಭಾವಕ್ಕೆ ಒಳಗಾದಾಗ ಅಂಥವರು ತಮ್ಮ ಕ್ಷೇತ್ರಗಳ ಬಗ್ಗೆ ಉತ್ತಮ ಜ್ಞಾನವನ್ನು (Knowledge) ಹೊಂದಿರುತ್ತಾರೆ. ಒಂದು ವೇಳೆ ಗುರು ನೀಚ ಸ್ಥಾನದಲ್ಲಿದ್ದರೆ ಅಥವಾ ಅಶುಭ ಗ್ರಹಗಳ ಪ್ರಭಾವಕ್ಕೊಳಗಾಗಿದ್ದರೆ ಅಂತಹ ವ್ಯಕ್ತಿಯು ತನ್ನ ಕಾರ್ಯಕ್ಷೇತ್ರದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಎಲ್ಲ ಗ್ರಹಗಳಿಗೆ ಹೋಲಿಸಿದಲ್ಲಿ ಗುರುಗ್ರಹವನ್ನು ಜ್ಞಾನಕಾರಕ ಎಂದು ಕರೆಯಲಾಗುತ್ತದೆ. ಜತೆಗೆ ನೆನಪಿನ ಶಕ್ತಿಯನ್ನು (Memory power) ಮತ್ತಷ್ಟು ಹೆಚ್ಚಿಸುವುದರಲ್ಲಿಯೂ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ಕೆಲಸದ ಬಗ್ಗೆ ತಿಳಿಯುವುದು ಕಷ್ಟವಾಗುತ್ತಿದೆ ಎಂದೆನಿಸಿದರೆ ಅದಕ್ಕೆ ಗುರುಗ್ರಹ ಕಾರಣವಾಗಿರುತ್ತದೆ. ಗುರುಗ್ರಹಕ್ಕೆ ಸಂಬಂಧಿಸಿದಂತೆ ಪರಿಹಾರವನ್ನು (Solution) ಮಾಡಿಕೊಳ್ಳಬೇಕಾಗುತ್ತದೆ.

ಶನಿ ಕೃಪೆ ಬೇಕೇ ಬೇಕು (Saturn)
ಜಾತಕದಲ್ಲಿ ಶನಿಗ್ರಹದ ಸ್ಥಿತಿಯ ಆಧಾರದ ಮೇಲೆ ವೃತ್ತಿ ಭವಿಷ್ಯ (Job future) ಅಡಗಿರುತ್ತದೆ. ಜಾತಕದಲ್ಲಿ ಶನಿ ಗ್ರಹವು ಜಾತಕದ ಹತ್ತನೇ ಮನೆಯಲ್ಲಿ ಸ್ಥಿತವಾಗಿದ್ದರೆ ಕೆಲಸದ ಒತ್ತಡ (Stress) ಹೆಚ್ಚುತ್ತದೆ. ಅಷ್ಟೇ ಅಲ್ಲದೆ ಹೆಚ್ಚಿನ ಕೆಲಸವು ಸಹ ಹೆಗಲೇರುತ್ತದೆ. ಇದರಿಂದ ಕೆಲಸವೇ ಬೇಡ ಎನ್ನುವ ಮನಸ್ಥಿತಿಗೆ ತಲುಪುವಂತಾಗುತ್ತದೆ. ಜವಾಬ್ದಾರಿ (Responsibility) ನಿಭಾಯಿಸಲು ಮನಸ್ಸು ಹಿಂಜರಿಯುತ್ತದೆ. ಹಾಗಾಗಿ ಜೀವನದಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಅದೇ ಶನಿ ಗ್ರಹದ ಸ್ಥಿತಿ ಬಲವಾಗಿದ್ದರೆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. 
 
ಇದನ್ನು ಓದಿ : ಮದುವೆಯಲ್ಲಿ ಕನ್ಯಾದಾನ ಮಡುವುದೇಕೆ? ನಿಮಗಿದು ಗೊತ್ತೆ..?

ಜಾತಕದ ಹತ್ತನೇ ಮನೆ ಮತ್ತು ಶನಿ
ಕೆಲಸದಲ್ಲಿ ದಕ್ಷತೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬೇಕೇಂದರೆ ವ್ಯಕ್ತಿಯ ಜಾತಕದ ಹತ್ತನೇ ಮನೆಯಲ್ಲಿರುವ ಗ್ರಹ ಮತ್ತು ಶನಿ ಗ್ರಹದ (Planet) ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಕೆಲಸದಲ್ಲಿ ಉತ್ತಮವಾಗಿದ್ದು, ಶಿಸ್ತುಬದ್ಧವಾಗಿ ಕೆಲಸ ನಿರ್ವಹಿಸುತ್ತಿದ್ದಾರೆಂದರೆ ಅದಕ್ಕೆ ಸೂರ್ಯ ಗ್ರಹವೇ ಕಾರಣವಾಗಿರುತ್ತದೆ. ಕೆಲಸ ಕಾರ್ಯದಲ್ಲಿ ಶಿಸ್ತು ಮತ್ತು ಸಾಮರ್ಥ್ಯದ ಬಗ್ಗೆ ತಿಳಿಯಬೇಕೇಂದರೆ ಅದಕ್ಕೆ ಸೂರ್ಯ (Sun) ಮತ್ತು ಶನಿ ಗ್ರಹಗಳು ಬಲವಾಗಿರಬೇಕು. ಜಾತಕದಲ್ಲಿ ಶನಿ ಗ್ರಹವು ಬಲವಾಗಿದ್ದರೆ ಮಾತ್ರ ಅಂದುಕೊಂಡ ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳ್ಳುತ್ತದೆ.

ಬಾಂಧವ್ಯಕ್ಕೆ ಚಂದ್ರ ಮತ್ತು ಶುಕ್ರ (Moon and Venus)
ಕೆಲಸಕ್ಕೆ ಬೇಕಾದ ಅರ್ಹತೆ ಮತ್ತು ಸಾಮರ್ಥ್ಯವನ್ನು ಹೊಂದಿದ್ದರೂ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವುದು ಸಹ ಅಗತ್ಯವಾಗಿರುತ್ತದೆ. ಜಾತಕದಲ್ಲಿ (Horoscope) ಚಂದ್ರ ಮತ್ತು ಶುಕ್ರ ಗ್ರಹ ಉಚ್ಛ ಸ್ಥಾನದಲ್ಲಿದ್ದರೆ ವೃತ್ತಿಗೆ ಸಂಬಂಧಿಸಿದಂತೆ ಎಲ್ಲವೂ ಶುಭವಾಗುತ್ತದೆ. ಅಷ್ಟೇ ಅಲ್ಲದೆ ಕೆಲಸದ ಬಗ್ಗೆ ಅಷ್ಟಾಗಿ ತಿಳಿದುಕೊಳ್ಳದಿದ್ದರೂ ಸಹ ವೃತ್ತಿಯಲ್ಲಿ ಯಶಸ್ಸು ಸಿಗುತ್ತದೆ. ಜೊತೆಗಿರುವವರೊಂದಿಗೆ ಬಾಂಧವ್ಯ ಉತ್ತಮವಾಗಿರುತ್ತದೆ. ಚಂದ್ರ ಗ್ರಹದ ಮೇಲೆ ಅಶುಭ ಪ್ರಭಾವ ಉಂಟಾದಾಗ ಮಾತ್ರ ಈ ಎಲ್ಲಾ ಗುಣಗಳಿಗೂ ಚ್ಯುತಿ ಬರುವ ಸಾಧ್ಯತೆ ಇರುತ್ತದೆ.
 
ಡಿಜಿಟಲ್ ಜಗತ್ತಿಗೆ ಮಂಗಳ ಮತ್ತು ಶನಿ ಕೃಪೆ ಅಗತ್ಯ (Mars)
ಇಂದಿನ ದಿನಗಳಲ್ಲಿ ಎಲ್ಲದೂ ಡಿಜಿಟಲೀಕರಣವಾಗಿದೆ. ಹಾಗಾಗಿ ತಂತ್ರಜ್ಞಾನದ ಬಗ್ಗೆ ಅರಿವು ಹೊಂದಿರುವುದು ಅತ್ಯಗತ್ಯ. ಜಾತಕದಲ್ಲಿ ಮಂಗಳ ಮತ್ತು ಶನಿಯ ಪರಸ್ಪರ ಸ್ಥಾನ ಹೇಗಿದೆ ಎಂಬುದನ್ನು ತಿಳಿಯುವುದು ಅವಶ್ಯಕವಾಗಿರುತ್ತದೆ. ಇವುಗಳ ಸಂಬಂಧ ಚೆನ್ನಾಗಿದ್ದರೆ ತಂತ್ರಜ್ಞಾನದ (Technology) ಬಗ್ಗೆ ತಿಳಿವಳಿಕೆ ಚೆನ್ನಾಗಿರುತ್ತದೆ. ಹೀಗಾಗಿ ಮಂಗಳ-ಕೇತು-ಶನಿ ಗ್ರಹಗಳಲ್ಲಿ ಯಾವುದಾದರೂ ಎರಡು ಗ್ರಹಗಳ ಸಂಬಂಧ ಉತ್ತಮವಾಗಿದ್ದರೆ ತಂತ್ರಜ್ಞಾನದ ಜ್ಞಾನ ಉತ್ತಮವಾಗಿರುತ್ತದೆ.
 
ಇದನ್ನು ಓದಿ : Vastu Tips: ಯಶಸ್ಸು - ಹಣಕ್ಕಾಗಿ ಈ ದಿಕ್ಕಲ್ಲಿ ನಿದ್ರಿಸಿ

ಬುಧನಿಂದ ಉತ್ತಮ ವಾಕ್ಚಾತುರ್ಯ (Mercury)
ಜಾತಕದಲ್ಲಿ ಬುಧಗ್ರಹದ ಸ್ಥಿತಿ ಚೆನ್ನಾಗಿದ್ದರೆ ವ್ಯಾಪಾರ ವ್ಯವಹಾರದಲ್ಲಿ ಸಫಲತೆ ದೊರಕುತ್ತದೆ. ಉಳಿದೆಲ್ಲಾ ಗ್ರಹಗಳ ಜೊತೆಗಿನ ಸಂಬಂಧ ಉತ್ತಮವಾಗಿದ್ದರೆ ಅಂಥವರ ವಾಕ್ಚಾತುರ್ಯ (Talkative) ಚೆನ್ನಾಗಿರುತ್ತದೆ. ಅಷ್ಟೇ ಅಲ್ಲದೇ ಈ ಗ್ರಹಕ್ಕೆ ಸಂಬಂಧಿಸಿದ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ಸಿಗುತ್ತದೆ.

Latest Videos
Follow Us:
Download App:
  • android
  • ios