Asianet Suvarna News Asianet Suvarna News

ಮದುವೆಯಲ್ಲಿ ಕನ್ಯಾದಾನ ಮಾಡುವುದೇಕೆ? ನಿಮಗಿದು ಗೊತ್ತೆ..?

 ವಿವಾಹದ ಸಂದರ್ಭದಲ್ಲಿ ಮಾಡುವ  ಕನ್ಯಾದಾನಕ್ಕೆ ವಿಶೇಷವಾದ ಪ್ರಾಮುಖ್ಯತೆ ಇದೆ. ದಾನಗಳಲ್ಲಿ ಶ್ರೇಷ್ಠವಾದ ದಾನ ಕನ್ಯಾದಾನವೆಂದು ಶಾಸ್ತ್ರ ಉಲ್ಲೇಖಿಸುತ್ತದೆ. ಕನ್ಯಾದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುವುದಲ್ಲದೆ, ಮೋಕ್ಷ ದೊರಕುತ್ತದೆ. ಹಾಗಾಗಿ ಕನ್ಯಾದಾನ ಎಂದರೇನು ಮತ್ತು ಅದರ ಮಹತ್ವವೇನು ಎಂಬುದನ್ನು ತಿಳಿಯೋಣ...

Importance of Kanyadaan in Marriage...
Author
Bangalore, First Published May 17, 2022, 5:00 PM IST

ಹಿಂದೂ ಧರ್ಮದಲ್ಲಿ ವಿವಾಹದ (Marriage) ಸಮಯದಲ್ಲಿ ಅನೇಕ ಶಾಸ್ತ್ರಗಳನ್ನು ಆಚರಿಸಲಾಗುತ್ತದೆ. ಈ ಎಲ್ಲಾ ಶಾಸ್ತ್ರಗಳಿಗೆ ಅದರದ್ದೇ ಆದ ಮಹತ್ವವಿದೆ (Importance). ಮದುವೆಯಲ್ಲಿ ವರ (Groom) ಕಾಶಿ ಯಾತ್ರೆಗೆ ತೆರಳುವ ಸಮಯದಲ್ಲಿ ವಧುವಿನ (Bride) ಸೋದರಮಾವ, ವರನು ಕಾಶೀಯಾತ್ರೆಗೆ ಹೋಗದಂತೆ ತಡೆದು ವಧುವನ್ನು ವಿವಾಹವಾಗುವಂತೆ ಕೋರುವುದು. ಅದಕ್ಕೆ ವರನು ವಿವಾಹವಾಗುವುದಾಗಿ ಒಪ್ಪಿಗೆ ಸೂಚಿಸುವುದು. ಆನಂತರದಲ್ಲಿ ಮದುವೆ ಶಾಸ್ತ್ರಗಳು ಮುಂದುವರೆಯುತ್ತವೆ. ಹಾಗೆ ಮಾಡುವ  ಶಾಸ್ತ್ರಗಳಲ್ಲಿ ಕನ್ಯಾದಾನವೂ (Kanyadaana) ಸಹ ಒಂದಾಗಿದೆ. ಹಾಗಾದರೆ ಕನ್ಯಾದಾನದ ಮಹತ್ವ ಮತ್ತು ವಿಶೇಷತೆಗಳ ಬಗ್ಗೆ ತಿಳಿಯೋಣ...

ವಿವಾಹದ ಆಚರಣೆಯಲ್ಲಿ ಅನೇಕ ಸಂಪ್ರದಾಯಗಳಿರುತ್ತವೆ. ಧರ್ಮ (Religion), ಜಾತಿ (Cast) ಮತ್ತು ಆಯಾ  ಪ್ರದೇಶಗಳಿಗೆ (Place) ಅನುಗುಣವಾಗಿ ಮದುವೆಯ ಶಾಸ್ತ್ರಗಳು ಭಿನ್ನವಾಗಿರುತ್ತವೆ (Differs). ಆದರೂ ಕನ್ಯಾದಾನ ಮಾಡಿ ವಧುವನ್ನು ವರನಿಗೆ ಒಪ್ಪಿಸುವುದು ಎಲ್ಲಾ ಸಂಪ್ರದಾಯದಲ್ಲೂ ಇರುತ್ತದೆ. ಅದೇ ಕನ್ಯಾದಾನ ಮತ್ತು ಅದರ ಮಹತ್ವವನ್ನು ಶಾಸ್ತ್ರ ಪುರಾಣಗಳಲ್ಲೂ ಉಲ್ಲೇಖಿಸಿದ್ದಾರೆ. ಹಾಗಾದರೆ ಕನ್ಯಾದಾನದ ನಿಜವಾದ ಅರ್ಥವೇನೆಂದು ತಿಳಿದುಕೊಳ್ಳೋಣ..
ವಧುವಿನ ತಂದೆ - ತಾಯಿ, ಆಕೆಯ ಕೈಯನ್ನು ವರನ ಕೈಗೆ ಒಪ್ಪಿಸುವುದು. ನಂತರ ವರ ತನ್ನ ಕೈಯಿಂದ ವಧುವಿನ  ಕೈ ಹಿಡಿದುಕೊಂಡು  ಆಕೆಗೆ ಸಂಬಂಧಿಸಿದ ಎಲ್ಲಾ ಜವಾಬ್ದಾರಿಗಳನ್ನು (Responsibilities) ಸರಿಯಾಗಿ ನಿಭಾಯಿಸುವುದಾಗಿ ಸಂಕಲ್ಪ ಮಾಡುವುದೇ ಕನ್ಯಾದಾನ ವಾಗಿದೆ. 

ಇದನ್ನು ಓದಿ : Vastu Tips: ಯಶಸ್ಸು - ಹಣಕ್ಕಾಗಿ ಈ ದಿಕ್ಕಲ್ಲಿ ನಿದ್ರಿಸಿ

ಕನ್ಯಾದಾನ ವಿಧಾನ ಹೀಗಿದೆ (Procedure) :
ಬ್ರಾಹ್ಮ ವಿವಾಹದ ಅನುಸಾರವಾಗಿ ಒಂದು ಕಂಚಿನ ಪಾತ್ರೆಯ ಮೇಲೆ ವಧುವಿನ ಬಲಗೈ ಇಡಲಾಗುತ್ತದೆ ಅದರ ಮೇಲೆ ವರನ ಬಲಗೈ ಮತ್ತು ನಂತರ ಅವರಿಬ್ಬರ ಕೈ ಮೇಲೆ ವಧುವಿನ ತಂದೆಯು ತನ್ನ ಬಲಗೈ ಇಟ್ಟುಕೊಳ್ಳುತ್ತಾನೆ, ಅದರ ಮೇಲೆ ಮೊದಲೇ ಅಭಿಮಂತ್ರಿಸಿ ಬಿಟ್ಟ ಕಲಶದ ನೀರನ್ನು ಆತನ ಧರ್ಮಪತ್ನಿ ಧಾರೆಯಾಗಿ ಕೈಮೇಲೆ ಬಿಡುತ್ತಾಳೆ . ಆ ಕಲಶದ ನೀರು ಅವರೆಲ್ಲರ ಕೈಗೆ ತಾಗಿ ಕಂಚಿನ ಪಾತ್ರೆಗೆ ಬೀಳುತ್ತದೆ. ಇದಕ್ಕೆ ಕನ್ಯಾದಾನ ಅಥವಾ ಧಾರೆ ಎರೆಯುವುದು ಎಂದು ಹೇಳುತ್ತಾರೆ. ಈ ವಿಧಿಯ ಅನುಸಾರ ವಧುವಿನ ಪಿತನು, ಧರ್ಮ, ಅರ್ಥ, ಕಾಮ ಮತ್ತು ಮೋಕ್ಷದ ಮಾರ್ಗದಲ್ಲಿ ಸಹಧರ್ಮಿಣಿಯಾಗಿ ಮಗಳನ್ನು ಜವಾಬ್ದಾರಿಯುತವಾಗಿ ನಡೆಸಿಕೊಳ್ಳುವಂತೆ ಕೋರಿ ವರನಿಗೆ ಒಪ್ಪಿಸುವ ಸಂಪ್ರದಾಯ ಇದಾಗಿದೆ.

ಈ ಸಂಪ್ರದಾಯ (Ritual) ಆರಂಭವಾಗಿದ್ದು ಹೀಗೆ : 
ಶಾಸ್ತ್ರಗಳ ಅನುಸಾರ ಕನ್ಯಾದಾನ ಪರಂಪರೆಯನ್ನು ಪ್ರಜಾಪತಿ ದಕ್ಷ (Daksha) ಆರಂಭಿಸಿದರೆಂದು ಹೇಳಲಾಗುತ್ತದೆ. ತನ್ನ 27 ಕನ್ಯೆಯರನ್ನು ಚಂದ್ರ (Moon) ದೇವನಿಗೆ ವಿವಾಹ ಮಾಡಿಕೊಡುವ ಸಂದರ್ಭದಲ್ಲಿ ಕನ್ಯಾದಾನ ವಿಧಿಯ ಆರಂಭವಾಯಿತು ಎಂದು  ಹೇಳಲಾಗುತ್ತದೆ. ಅದೇ 27  ಕನ್ಯೆಯರೇ ಇಪ್ಪತ್ತೇಳು ನಕ್ಷತ್ರಗಳೆಂದು (Stars) ಹೇಳಲಾಗುತ್ತದೆ. ಅಂದಿನಿಂದ ಕನ್ಯಾದಾನ ಪರಂಪರೆ ಆರಂಭವಾಯಿತು ಎಂದು ಶಾಸ್ತ್ರ ಹೇಳುತ್ತದೆ. 

ಇದನ್ನು ಓದಿ : Vastu Tips: ಆರ್ಥಿಕ ಮುಗ್ಗಟ್ಟು, ಪ್ರಗತಿ ಕಾಣದಿರಲು ಇವೇ ಕಾರಣ!

ದಾನಗಳಲ್ಲಿ ಶ್ರೇಷ್ಠದಾನ ಕನ್ಯಾದಾನ : ಶಾಸ್ತ್ರಗಳಲ್ಲಿ ಹೇಳುವ ಪ್ರಕಾರ ದಾನಗಳಲ್ಲೇ (Donate) ಅತ್ಯಂತ ಶ್ರೇಷ್ಠವಾದ ದಾನ ಕನ್ಯಾದಾನವಾಗಿದೆ. ಕನ್ಯಾದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುವುದಲ್ಲದೆ, ಮೋಕ್ಷ ದೊರಕುತ್ತದೆ. ಇದು ತಂದೆ ತಾಯಿಯರ ತ್ಯಾಗವನ್ನು (Scarifies) ಮತ್ತು ಭಾವನೆಗಳನ್ನು ತೋರಿಸುತ್ತದೆ. ಹೆತ್ತು, ಪೋಷಿಸಿ ಬೆಳೆಸಿದ ಮಗಳನ್ನು ಇನ್ನೊಬ್ಬರ ಮನೆ ಬೆಳಗಲು ಕಳಿಸುವ ಈ ತ್ಯಾಗಕ್ಕೆ ಸರಿಸಾಟಿ ದೇವರೇ ಇಲ್ಲ ಎನ್ನುವ  ಕಾರಣಕ್ಕೆ ಕನ್ಯಾದಾನವನ್ನು ದಾನಗಳಲ್ಲಿ ಶ್ರೇಷ್ಠದಾನ ಎಂದು ಉಲ್ಲೇಖಿಸಿದ್ದಾರೆ. ಹಾಗಾಗಿ ಕನ್ಯಾದಾನ ಮಾಡುವುದು ಪುಣ್ಯದ ಕಾರ್ಯವೆಂದು ಪುರಾಣಗಳ ಸಮಯದಿಂದ ಇಂದಿನ ವರೆಗೂ ಪ್ರಚಲಿತದಲ್ಲಿರುವ ಮಾತಾಗಿದೆ. ಈ ಮೂಲಕ ಹೆಣ್ಣಿಗೆ (Women) ಸಮ್ಮಾನವು ದೊರಕುತ್ತದೆ. ಹೆಣ್ಣಿನ ತಂದೆ ತಾಯಿಗಳಿಗೂ ಗೌರವಾದರಗಳು (Respect) ಲಭಿಸುತ್ತವೆ. 

Follow Us:
Download App:
  • android
  • ios