Vastu Tips: ಯಶಸ್ಸು - ಹಣಕ್ಕಾಗಿ ಈ ದಿಕ್ಕಲ್ಲಿ ನಿದ್ರಿಸಿ
ವಾಸ್ತು ಶಾಸ್ತ್ರದಲ್ಲಿ ದಿಕ್ಕಿಗೆ ವಿಶೇಷವಾದ ಮಹತ್ವವಿದೆ. ಹಾಗೆಯೇ ಮಲಗುವ ದಿಕ್ಕು ಅತ್ಯಂತ ಮುಖ್ಯವಾಗುತ್ತದೆ. ಯಾವ ದಿಕ್ಕಿನಲ್ಲಿ ಮಲಗುತ್ತೇವೆಯೋ ಅದರ ಪರಿಣಾಮ ನಮ್ಮ ಜೀವನದ ಮೇಲಾಗುತ್ತದೆ. ಹಾಗಾಗಿ ಮಲಗುವ ದಿಕ್ಕಿನ ಬಗ್ಗೆ ಶಾಸ್ತ್ರದಲ್ಲಿ ವಿವರವಾಗಿ ತಿಳಿಸಿದ್ದಾರೆ. ಹಾಗಾಗಿ ಯಾವ ದಿಕ್ಕಿನಲ್ಲಿ ಮಲಗಿದರೆ ಏನು ಪ್ರಯೋಜನ ಎಂಬುದರ ಬಗ್ಗೆ ತಿಳಿಯೋಣ...
ಆರೋಗ್ಯ (Health) ಚೆನ್ನಾಗಿರಬೇಕೆಂದರೆ ನಿದ್ರೆ (Sleep) ಸರಿಯಾಗಿರಬೇಕು. ಶಾಸ್ತ್ರ ಹೇಳುವ ಪ್ರಕಾರ ಜೀವನ (Life) ಕ್ರಮದಲ್ಲಿ ನಿದ್ರೆಗೆ ವಿಶೇಷ ಮಹತ್ವವಿದೆ. ನೆಮ್ಮದಿ ಜೀವನಕ್ಕೆ ನಿದ್ದೆ ಬಹುಮುಖ್ಯ. ಜ್ಯೋತಿಷ್ಯ ಶಾಸ್ತ್ರದ (Astrology)
ಅನುಸಾರ ನಾವು ಮಲಗುವ ದಿಕ್ಕು ಸಹ ಅತ್ಯಂತ ಮುಖ್ಯಪಾತ್ರವನ್ನು ವಹಿಸುತ್ತದೆ. ಆರ್ಥಿಕತೆಯ (Economy) ಏಳಿಗೆಗೂ ನಿದ್ರಿಸುವ ದಿಕ್ಕಿಗೂ ಸಂಬಂಧವಿದ್ದು, ಈ ನಿಟ್ಟಿನಲ್ಲಿ ಜಾಗರೂಕರಾಗಿರುವುದು ಉತ್ತಮ. ಹಾಗಾಗಿ ನಿದ್ರಿಸುವ ದಿಕ್ಕಿನ ಬಗ್ಗೆ ಶಾಸ್ತ್ರ ಏನನ್ನು ಹೇಳುತ್ತದೆ ಎಂಬುದನ್ನು ತಿಳಿಯೋಣ...
ಜ್ಯೋತಿಷ್ಯ ಮತ್ತು ವಾಸ್ತು (Vastu) ಶಾಸ್ತ್ರದಲ್ಲಿ ದಿಕ್ಕಿಗೆ ವಿಶೇಷ ಮಹತ್ವವಿದೆ. ಮನೆ ನಿರ್ಮಾಣದ ಸಮಯದಲ್ಲೂ ದಿಕ್ಕಿನ್ನು ವಿಶೇಷವಾಗಿ ಪರಿಗಣಿಸಿ, ಆಯಾ ದಿಕ್ಕಿನ ಅಧಿದೇವತೆಗಳಿಗೆ ಸರಿ ಹೊಂದುವಂತೆ ಮುಖ್ಯ ದ್ವಾರ (Main door), ಅಡುಗೆ ಮನೆ, ಸ್ನಾನ ಗೃಹ, ಮಲಗುವ ಕೋಣೆ ಹೀಗೆ ಎಲ್ಲದನ್ನೂ ನಿರ್ಮಿಸಲಾಗುತ್ತದೆ. ಹಾಗೆಯೇ ನಿದ್ರಿಸುವ ದಿಕ್ಕು ಸಹ ಜೀವನದ ಅಭಿವೃದ್ಧಿಯ ಒಂದು ಭಾಗವೆಂದೇ ಹೇಳಲಾಗುತ್ತದೆ. ಹಾಗಾದರೆ ಯಾವ ದಿಕ್ಕಿಗೆ (Direction) ತಲೆ ಹಾಕಿ ಮಲಗಿದರೆ ಏನು ಪ್ರಯೋಜನ ಎಂಬುದನ್ನು ತಿಳಿಯೋಣ...
ಪೂರ್ವ ಒಳ್ಳೇದು (East)
ಸೂರ್ಯ ಉದಯಿಸುವ ದಿಕ್ಕು ಪೂರ್ವ. ಹಾಗಾಗಿ ಪೂರ್ವ ದಿಕ್ಕು ಎಲ್ಲದಕ್ಕೂ ಶುಭವೆಂದೇ ಹೇಳಲಾಗುತ್ತದೆ. ಹಾಗಾಗಿ ಮನೆಯ ಮುಖ್ಯ ದ್ವಾರ ಪೂರ್ವ ದಿಕ್ಕಿಗಿರಬೇಕೆಂದು ಶಾಸ್ತ್ರ ಹೇಳುತ್ತದೆ. ಸೂರ್ಯನ ಬೆಳಗಿನ ಕಿರಣಗಳು ನೇರವಾಗಿ ಮನೆಯೊಳಗೆ ಬರುವುದರಿಂದ ನೆಗೆಟಿವ್ ಎನರ್ಜಿ ನಾಶವಾಗಿ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ. ಮಲಗುವಾಗ ಸಹ ಪೂರ್ವ ದಿಕ್ಕಿಗೆ ತಲೆ ಹಾಕಿದರೆ ಉತ್ತಮವೆಂದು ಹೇಳಲಾಗುತ್ತದೆ. ಇದರಿಂದ ಸ್ಮರಣ ಶಕ್ತಿ ಮತ್ತು ಏಕಾಗ್ರತೆ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಮಕ್ಕಳಿಗೆ ಓದಿದ ವಿಷಯಗಳು ಚೆನ್ನಾಗಿ ನೆನಪಿನಲ್ಲಿ (Memory) ಉಳಿಯಲು ಈ ದಿಕ್ಕು ಸಹಾಯಕವಾಗುತ್ತದೆ. ಹಾಗಾಗಿ ಪೂರ್ವಕ್ಕೆ ತಲೆಹಾಕಿ ಮಲಗಿದರೆ ಹೆಚ್ಚು ಶುಭ.
ಪಶ್ಚಿಮಕ್ಕೆ ಯಶಸ್ಸು (West)
ಪಶ್ಚಿಮ ದಿಕ್ಕಿನಲ್ಲಿ ತಲೆ ಹಾಕಿ ಮಲಗಿದರೆ ಉತ್ತಮವೆಂದು ಶಾಸ್ತ್ರ ಹೇಳುತ್ತದೆ. ಆರ್ಥಿಕವಾಗಿ ಒಳ್ಳೆಯದಾಗಬೇಕೆಂದರೆ ಪಶ್ಚಿಮ ದಿಕ್ಕಿಗೆ ತಲೆ ಹಾಕಿ ನಿದ್ರಿಸಬೇಕೆಂದು ಹೇಳಲಾಗುತ್ತದೆ. ಈ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ಎಲ್ಲ ಕ್ಷೇತ್ರಗಳಲ್ಲೂ ಲಾಭ ಸಿಗುತ್ತದೆ. ಅಷ್ಟೇ ಅಲ್ಲದೆ ಆರ್ಥಿಕತೆಯಲ್ಲಿ ಏಳಿಗೆ ಉಂಟಾಗುತ್ತದೆ. ಯಶಸ್ಸು (Success) ನಿಮ್ಮದಾಗಬೇಕೆಂದರೆ ಪಶ್ಚಿಮಕ್ಕೆ ಮಲಗುವುದು ಶುಭವೆಂದು ಹೇಳಲಾಗುತ್ತದೆ. ಕೀರ್ತಿ ಮತ್ತು ಪ್ರಶಂಸೆ (Appreciation) ಪಡೆಯಲು ಈ ದಿಕ್ಕು ಉತ್ತಮವೆಂದು ಹೇಳಲಾಗುತ್ತದೆ.
ಇದನ್ನು ಓದಿ : Vastu Tips: ಆರ್ಥಿಕ ಮುಗ್ಗಟ್ಟು, ಪ್ರಗತಿ ಕಾಣದಿರಲು ಇವೇ ಕಾರಣ!
ಉತ್ತರ ದಿಕ್ಕು ಹೀಗಂತೆ (North)
ಉತ್ತರಕ್ಕೆ ತಲೆಹಾಕಿ ಮಲಗಬಾರದೆಂಬ ಮಾತಿದೆ. ಆದರೂ, ವಾಸ್ತು ಶಾಸ್ತ್ರ ಹೇಳುವ ಪ್ರಕಾರ ಉತ್ತರ ದಿಕ್ಕನ್ನು ಬಹಳ ಶುಭವೆಂದು ಹೇಳಲಾಗುತ್ತದೆ. ಆರೋಗ್ಯದ ವಿಚಾರವಾಗಿ ನೋಡುವುದಾದರೆ ಈ ದಿಕ್ಕು ಅಷ್ಟೊಂದು ಶುಭವಲ್ಲವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಧನಹಾನಿಯಾಗುತ್ತದೆ ಎಂದು ಸಹ ಹೇಳಲಾಗುತ್ತದೆ. ಅನಾರೋಗ್ಯ (Illness) ಸಮಸ್ಯೆ ತೀವ್ರವಾಗಿ ಕಾಡುವುದರಿಂದ ಧನನಷ್ಟ ಉಂಟಾಗುತ್ತದೆ. ಹಾಗಾಗಿ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದು ಅಷ್ಟೊಂದು ಶುಭವಲ್ಲವೆಂದು ಹೇಳಲಾಗುತ್ತದೆ.
ದಕ್ಷಿಣ ಲಾಭ (South)
ದಕ್ಕಿಣ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಲಾಭವೆಂದು (Profit) ಹೇಳಲಾಗುತ್ತದೆ. ಹಾಗಾಗಿ ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗಬಹುದೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ದಕ್ಕಿಣ ದಿಕ್ಕಿಗೆ ಮಲಗುವದರಿಂದ ನಕಾರಾತ್ಮಕ (Negative energy) ವಿಚಾರಗಳು ತಲೆಗೆ ಬರುವುದಿಲ್ಲ. ಸಕಾರಾತ್ಮಕತೆ ಹೆಚ್ಚಲಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ. ಅಷ್ಟೇ ಅಲ್ಲದೇ ಮನೆಯಲ್ಲಿ ಸುಖ – ಶಾಂತಿ ನೆಲೆಸಿರುತ್ತದೆ ಮತ್ತು ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲವೆಂದು ಹೇಳಲಾಗುತ್ತದೆ.
ಇದನ್ನು ಓದಿ : Sun transit : ಸೂರ್ಯ ಗ್ರಹ ರಾಶಿ ಪರಿವರ್ತನೆ ಈ ರಾಶಿಗಳಿಗೆ ಸುಯೋಗ
ಮಲಗುವ ನಿಯಮ ಹೀಗಿದೆ (Sleeping Direction)
- ಮುರಿದ ಮಂಚವನ್ನು ಬಳಸಬಾರದು, ಹಾಸಿಗೆ ಹರಿದಿದ್ದರೆ, ಹೊದಿಕೆ ಕೊಳಕಾಗಿದ್ದರೆ ಅದನ್ನು ಸಹ ಬಳಸಬಾರದು. ಅಷ್ಟೇ ಅಲ್ಲದೆ, ಎಂಜಲು ಬಾಯಿಯಲ್ಲಿ ಸಹ ಮಲಗಬಾರದು.
- ಯಾವುದೇ ಕಾರಣಕ್ಕೂ ಮೈಮೇಲೆ ಬಟ್ಟೆ ಇಲ್ಲದೆ ಮಲಗಬಾರದು.
- ಬ್ರಹ್ಮವೈವರ್ಥ ಪುರಾಣದ ಪ್ರಕಾರ, ಸೂರ್ಯೋದಯದ ನಂತರ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಮಲಗಬಾರದು. ಇದರಿಂದ ರೋಗ ಹೆಚ್ಚಾಗಲಿದೆ.